ADVERTISEMENT
Wednesday, July 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಬೆಂಗಳೂರು

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

Shwetha by Shwetha
July 1, 2026
in ಬೆಂಗಳೂರು, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕರ ತೆರಿಗೆ ಹಣದ ಸದುಪಯೋಗದ ಕುರಿತು ನಡೆದ ಜಿಬಿಎ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಪೂರ್ವ ಸಿದ್ಧತೆ ಮತ್ತು ನಿಖರ ಅಂಕಿಅಂಶಗಳಿಲ್ಲದೆ ಸಭೆಗೆ ಬಂದಿದ್ದ ಅಧಿಕಾರಿಗಳ ನಡೆ ಸಚಿವರ ಕೆಂಗಣ್ಣಿಗೆ ಗುರಿಯಾಗಿದೆ.

ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು! ಅಧಿಕಾರಿಗಳ ಲೆಕ್ಕಕ್ಕೆ ಸಚಿವರು ಶಾಕ್

Related posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ

July 1, 2026
ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

July 1, 2026

ಕಳೆದ 20 ವರ್ಷಗಳಿಂದ ಸಾವಿರಾರು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ ಎಂದು ಅಧಿಕಾರಿಗಳು ವರದಿ ನೀಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಬೀದಿ ನಾಯಿಗಳ ಸಂಖ್ಯೆ ಮಾತ್ರ ಕಿಂಚಿತ್ತೂ ಕಡಿಮೆಯಾಗುತ್ತಿಲ್ಲ. ಅಧಿಕಾರಿಗಳು ನೀಡಿದ ಅಂಕಿಅಂಶಗಳ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ ಲಕ್ಷಾಂತರ ನಾಯಿಗಳಿಗೆ ಆಪರೇಷನ್ ಮಾಡಲಾಗಿದೆ. 2016 ರಿಂದ 2023ರ ಅವಧಿಯಲ್ಲೇ 3.33 ಲಕ್ಷ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ 2023ರ ಸರ್ವೆ ಪ್ರಕಾರ ನಗರದಲ್ಲಿ ಇರುವುದೇ 2.79 ಲಕ್ಷ ನಾಯಿಗಳು!

ಇರುವ ನಾಯಿಗಳ ಸಂಖ್ಯೆಗಿಂತ ಮಾಡಿರುವ ಚಿಕಿತ್ಸೆಗಳ ಸಂಖ್ಯೆಯೇ ಹೆಚ್ಚಿದೆ ಎನ್ನುವ ಅಧಿಕಾರಿಗಳ ಅಸಂಬದ್ಧ ಲೆಕ್ಕಾಚಾರ ಕೇಳಿ ಸಚಿವರು ದಂಗಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ 42 ಕೋಟಿ ರೂಪಾಯಿ ಜನರ ತೆರಿಗೆ ಹಣ ಈ ಯೋಜನೆಗಾಗಿ ಖರ್ಚಾಗಿದೆ. ಹಣ ವ್ಯಯವಾಗುತ್ತಿದ್ದರೂ ನಾಯಿಗಳ ಸಂತಾನ ಮಾತ್ರ ವೃದ್ಧಿಯಾಗುತ್ತಿರುವುದಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಕಿವಿಯಲ್ಲಿ ದಾಸವಾಳ ಇದೆಯೇ?

ಅಧಿಕಾರಿಗಳು ನೀಡಿದ ತರ್ಕವಿಲ್ಲದ ಮತ್ತು ಗೊಂದಲದ ಉತ್ತರಗಳನ್ನು ಕೇಳಿ ಸಿಟ್ಟಾದ ಸಚಿವರು, ನಾನೇನು ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕುಳಿತಿದ್ದೇನಾ? ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ. ಪಶುಸಂಗೋಪನೆ ಇಲಾಖೆಯಲ್ಲಿ 19 ಜನ ಹಿರಿಯ ಅಧಿಕಾರಿಗಳಿದ್ದರೂ ಸಚಿವರ ಸಭೆಗೆ ಬರುವಾಗ ಕನಿಷ್ಠ ಡಾಟಾ ಇಲ್ಲದೆ ಬರಿಗೈನಲ್ಲಿ ಬಂದಿರುವುದು ಎಷ್ಟು ಸರಿ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ನೆಟ್ಟ ಗಿಡಗಳು ಎಲ್ಲಿ ಹೋದವು? 20 ಲಕ್ಷ ನೆಟ್ಟರೆ ಇರುವುದು ಕೇವಲ 9 ಲಕ್ಷ!

ಕೇವಲ ನಾಯಿಗಳ ವಿಚಾರ ಮಾತ್ರವಲ್ಲದೆ, ನಗರದಲ್ಲಿ ಗಿಡ ನೆಡುವ ಯೋಜನೆಯಲ್ಲೂ ಭಾರೀ ವ್ಯತ್ಯಾಸ ಕಂಡುಬಂದಿದೆ. 2008 ರಿಂದ ಈವರೆಗೆ 20 ಲಕ್ಷ ಗಿಡಗಳನ್ನು ನೆಡಲಾಗಿದೆ ಎಂದು ಅಧಿಕಾರಿಗಳು ದಾಖಲೆ ನೀಡಿದ್ದಾರೆ. ಆದರೆ ಮರಗಣತಿಯಲ್ಲಿ ಕೇವಲ 9 ಲಕ್ಷ ಮರಗಳು ಮಾತ್ರ ಇವೆ ಎಂದು ಅವರೇ ಹೇಳುತ್ತಿದ್ದಾರೆ. ಹಾಗಾದರೆ ಬಾಕಿ 11 ಲಕ್ಷ ಗಿಡಗಳು ಏನಾದವು? ಎಂದು ಸಚಿವರು ಪ್ರಶ್ನಿಸಿದ್ದಾರೆ.

ಒಂದು ಗಿಡ ನೆಟ್ಟು ಅದನ್ನು ಬೆಳೆಸಲು 2,300 ರಿಂದ 3,300 ರೂಪಾಯಿಗಳವರೆಗೆ ಖರ್ಚು ಮಾಡಲಾಗುತ್ತಿದೆ. ಗುಂಡಿ ತೆಗೆಯಲು, ನೀರು ಹಾಕಲು ಮತ್ತು ಟ್ರೀ ಗಾರ್ಡ್ ಹಾಕಲು ಅಪಾರ ಪ್ರಮಾಣದ ಹಣ ವ್ಯಯಿಸುತ್ತಿದ್ದರೂ, ಕಣ್ಣಿಗೆ ಕಾಣುವಂತೆ ಗಿಡಗಳು ಬೆಳೆಯದಿರುವುದು ಭ್ರಷ್ಟಾಚಾರದ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ನನ್ನ ಸ್ವಂತ ಕ್ಷೇತ್ರದಲ್ಲಿಯೇ ಇಂತಹ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ಯವೈಖರಿ ಬದಲಿಸಿಕೊಳ್ಳಲು ಖಡಕ್ ಎಚ್ಚರಿಕೆ

ಸಂತಾನಹರಣ ಚಿಕಿತ್ಸೆಯ ವೇಗವನ್ನು ಕೂಡಲೇ ದ್ವಿಗುಣಗೊಳಿಸಬೇಕು ಮತ್ತು ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಚಿವರು ಆದೇಶಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಕೊರತೆ ಇದ್ದರೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಿ ಅಥವಾ ನುರಿತ ಸಂಸ್ಥೆಗಳ ನೆರವು ಪಡೆಯಿರಿ ಎಂದು ಸೂಚಿಸಿದ್ದಾರೆ. ಜನರ ತೆರಿಗೆ ಹಣ ಪೋಲಾಗುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ಅವರು ಅಂತಿಮ ಎಚ್ಚರಿಕೆ ನೀಡಿದ್ದಾರೆ.

ShareTweetSendShare
Join us on:

Related Posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ

by Shwetha
July 1, 2026
0

ಮಾದಕ ವಸ್ತುಗಳ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಈಗ ಹೊಸ ಸಂಕಲ್ಪ ಮಾಡಿದೆ. 2028ರ ವೇಳೆಗೆ ಕರ್ನಾಟಕವನ್ನು ಸಂಪೂರ್ಣ ನಶೆ ಮುಕ್ತ ರಾಜ್ಯವನ್ನಾಗಿ ಮಾಡುವ ದೃಢ...

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

by Shwetha
July 1, 2026
0

ರಾಜ್ಯಾದ್ಯಂತ ಇಂದು SIR ಅಭಿಯಾನ ಆರಂಭವಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ನಿವಾಸದಿಂದಲೇ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಧಿಕಾರಿಗಳಿಂದ ಗಣತಿ ನಮೂನೆ...

ಚಪ್ಪಲಿ ಎಸೆದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಪ್ರದೀಪ್ ಈಶ್ವರ್ : ಕಣ್ಣೀರು ಹಾಕಿದ ಶಾಸಕನಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

ಚಪ್ಪಲಿ ಎಸೆದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಪ್ರದೀಪ್ ಈಶ್ವರ್ : ಕಣ್ಣೀರು ಹಾಕಿದ ಶಾಸಕನಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

by Shwetha
July 1, 2026
0

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ನಡೆದ ಚಪ್ಪಲಿ ಎಸೆತ ಪ್ರಕರಣ ಈಗ ರಾಜಕೀಯವಾಗಿ ಭಾರೀ ಸಂಚಲನ ಮೂಡಿಸಿದೆ. ಈ ಹೀನಾಯ ಘಟನೆಯಿಂದ ಮನನೊಂದ ಪ್ರದೀಪ್...

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನನ್ನ ಪಾತ್ರವಿಲ್ಲ ಎಂದ ಚಂಪತ್ ರೈ

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನನ್ನ ಪಾತ್ರವಿಲ್ಲ ಎಂದ ಚಂಪತ್ ರೈ

by Shwetha
July 1, 2026
0

ಚಂಪತ್ ರೈ ಅವರು ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಟಿನ್ನು ಯಾದವ್ ಹೀಗೆ...

ಜುಲೈ 1ರಿಂದ ವಾಣಿಜ್ಯ, ಕೈಗಾರಿಕಾ LPG ಸಿಲಿಂಡರ್ ದರ ಏರಿಕೆ

ಜುಲೈ 1ರಿಂದ ವಾಣಿಜ್ಯ, ಕೈಗಾರಿಕಾ LPG ಸಿಲಿಂಡರ್ ದರ ಏರಿಕೆ

by Shwetha
July 1, 2026
0

ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆಯ LPG ಸಿಲಿಂಡರ್‌ಗಳ ದರವನ್ನು ಹೆಚ್ಚಿಸಲು ನಿರ್ಧರಿಸಿವೆ. ಹೊಸ ದರಗಳು ಜುಲೈ 1ರಿಂದ ಜಾರಿಗೆ ಬರಲಿವೆ. ಹೊಸ ಪರಿಷ್ಕರಣೆಯ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram