ರಾಜ್ಯಾದ್ಯಂತ ಇಂದು SIR ಅಭಿಯಾನ ಆರಂಭವಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ನಿವಾಸದಿಂದಲೇ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಧಿಕಾರಿಗಳಿಂದ ಗಣತಿ ನಮೂನೆ (Enumeration Form) ಪಡೆದು ಅದನ್ನು ಭರ್ತಿ ಮಾಡುವ ಮೂಲಕ ಸಿಎಂ ಅಭಿಯಾನವನ್ನು ಆರಂಭಿಸಿದರು. ಈ ಮೂಲಕ ರಾಜ್ಯದ ಮತದಾರರು ಸಹ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಮುಖ್ಯಮಂತ್ರಿಯವರ ಹೆಸರು ಅವರ ತವರು ಕ್ಷೇತ್ರವಾದ ಕನಕಪುರದ ದೊಡ್ಡಾಲಹಳ್ಳಿ ಗ್ರಾಮದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಯಶವಂತ್ ಗುರುಕರ್ ಉಪಸ್ಥಿತರಿದ್ದು, SIR ಪ್ರಕ್ರಿಯೆ ಕುರಿತು ಅಗತ್ಯ ಮಾಹಿತಿ ನೀಡಿದರು.
ರಾಜ್ಯಾದ್ಯಂತ ನಡೆಯುತ್ತಿರುವ ಈ ಅಭಿಯಾನದ ಉದ್ದೇಶ ಮತದಾರರ ಮಾಹಿತಿಯನ್ನು ನವೀಕರಿಸಿ, ಮತದಾರರ ಪಟ್ಟಿಯನ್ನು ಹೆಚ್ಚು ನಿಖರ ಮತ್ತು ಪಾರದರ್ಶಕವಾಗಿಸುವುದಾಗಿದೆ. ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಿ ಗಣತಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡುವಂತೆ ಸರ್ಕಾರ ಮನವಿ ಮಾಡಿದೆ.








