ಕ್ರೊವೇಶಿಯಾ..!
ಜಗತ್ತಿನ ಒಂದು ಪುಟ್ಟ ರಾಷ್ಟ್ರ. ಅಂದಾಜು 42 -43 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ದೇಶ. ಆದ್ರೆ ಈ ದೇಶಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವೂ ಇದೆ.
35 ವರ್ಷಗಳ ಹಿಂದೆಯಷ್ಟೇ ಸ್ವಾತಂತ್ರ್ಯವನ್ನು ಪಡೆದುಕೊಂಡ ಕ್ರೊವೇಶಿಯಾ ಇಂದು ಫುಟ್‍ಬಾಲ್ ಜಗತನ್ನೇ ಬೆಚ್ಚಿಬೀಳಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಅದ್ರಲ್ಲೂ 2018ರ ರಷ್ಯಾ ಫಿಫಾ ವಿಶ್ವಕಪ್ ಫೈನಲ್‍ನಲ್ಲಿ ರನ್ನರ್ ಅಪ್ ಆಗಿ ವಿಶ್ವದ ಬಲಿಷ್ಠ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಒಂದು ಕಾಲದಲ್ಲಿ ಇಂಗ್ಲೀಷರಿಂದಲೇ ಫುಟ್‍ಬಾಲ್ ಆಟವನ್ನು ಕಲಿತ ಕ್ರೊವೇಶಿಯಾ, ಇಂದು ಇಂಗ್ಲೀಷರಿಗೆ ಫುಟ್‍ಬಾಲ್ ಪಾಠವನ್ನು ಹೇಳಿಕೊಡುವ ಮಟ್ಟಿಗೆ ಬೆಳೆದಿದೆ. 1873ರಲ್ಲಿ ಕ್ರೊವೇಶಿಯಾದ ಕಾರ್ಖಾನೆಗಳಲ್ಲಿ ಇಂಗ್ಲೀಷ್ ವಲಸಿಗರು ಕೆಲಸ ಮಾಡುತ್ತಿದ್ದರು. ಆಗ ಬಿಡುವಿನ ವೇಳೆಯಲ್ಲಿ ಇಂಗ್ಲೀಷ್ ವಲಸಿಗರು ಆಡುತ್ತಿದ್ದ ಕಾಲ್ಚೆಂಡಿನ ಆಟವನ್ನು ಕ್ರೊವೇಶಿಯಾ ಜನ ಅಚ್ಚರಿಯಿಂದ ನೋಡುತ್ತಿದ್ದರು.
ಆಂಗ್ಲರು ಆಡುತ್ತಿದ್ದ ರೀತಿಯನ್ನು ನೋಡ್ಕೊಂಡು ತಾವು ಕೂಡ ಫುಟ್‍ಬಾಲ್ ಆಟವನ್ನು ಕಲಿತುಕೊಂಡ್ರು. ಹಾಗೇ 1907ರಲ್ಲಿ ಸ್ಥಳಿಯ ಫುಟ್‍ಬಾಲ್ ಕ್ಲಬ್‍ಗಳು ಕೂಡ ಹುಟ್ಟಿಕೊಂಡವು. ಆದ್ರೆ ಕ್ರೊವೇಶಿಯಾಗೆ ರಾಷ್ಟ್ರೀಯ ತಂಡವಾಗಿ ಆಡಲು ಮಾತ್ರ ಅವಕಾಶಗಳು ಸಿಗಲಿಲ್ಲ.
ಯಾಕಂದ್ರೆ ಆಗ ಕ್ರೊವೇಶಿಯಾ ಯುಗೋಸ್ಲೋವಿಯಾ ಅಂಗ ದೇಶವಾಗಿತ್ತು.
1919ರಿಂದ 1939ರವರೆಗೆ ಕ್ರೊವೇಶಿಯಾ ಫುಟ್‍ಬಾಲ್ ಆಟಗಾರರು ಯುಗೋಸ್ಲೋವಿಯಾ ದೇಶವನ್ನು ಪ್ರತಿನಿಧಿಸುತ್ತಿದ್ದರು. ಬಳಿಕ ಎರಡನೇ ಮಹಾಯುದ್ಧದ ವೇಳೆ ರಾಜಕೀಯ ಬಿಕ್ಕಟ್ಟಿನಿಂದ ಪ್ರತ್ಯೇಕವಾಗಿ ತಂಡವಾಗಿ ಆಡಿದ್ರೂ ಫಿಫಾ ಮಾನ್ಯತೆ ಮಾತ್ರ ಪಡೆದುಕೊಂಡಿರಲಿಲ್ಲ. 1939ರಿಂದ 1945ರವರೆಗೆ ಕ್ರೊವೇಶಿಯಾ ತಂಡ ಸ್ವಿಜರ್‍ಲೆಂಡ್, ಹಂಗೇರಿ ತಂಡಗಳ ವಿರುದ್ಧ ಸೌರ್ಹಾರ್ದಯುತ ಪಂದ್ಯಗಳನ್ನು ಆಡುತ್ತಿತ್ತು. ಈ ನಡುವೆ 1941ರಲ್ಲಿ ಫಿಫಾ ಸದಸ್ಯತ್ವವನ್ನು ಕೂಡ ಪಡೆದುಕೊಂಡಿತ್ತು. ಅಲ್ಲದೆ ಫಿಫಾ ಸದಸ್ಯತ್ವ ಪಡೆದುಕೊಂಡಿದ್ದ ತಂಡಗಳ ವಿರುದ್ಧ ಪಂದ್ಯಗಳನ್ನು ಕೂಡ ಕ್ರೊವೇಶಿಯಾ ಆಡುತ್ತಿತ್ತು.
ಆದ್ರೆ ಎರಡನೇ ಮಹಾಯುದ್ಧದ ನಂತರ ಕ್ರೊವೇಶಿಯಾ ಸೋಷಿಯಲಿಸ್ಟ್ ಫೆಡರಲ್ ರಿಪಬ್ಲಿಕ್ ಆಫ್ ಯುಗೋಸ್ಲೋವಿಂiÀiವಾಗಿ ಮಾರ್ಪಟ್ಟಿತ್ತು. ಆದ್ರೂ ಕ್ರೊವೇಶಿಯಾ ಆಟಗಾರರು ಯುಗೋಸ್ಲೋವಿಯಾ ತಂಡವನ್ನು ಪ್ರತಿನಿಧಿಸಬೇಕಾಗುತ್ತಿತ್ತು. ಏತನ್ಮಧ್ಯೆ 1950ರಿಂದ 1956ರವರೆಗೆ ಕ್ರೊವೇಶಿಯಾ ತಂಡ ಇಂಡೋನೇಷ್ಯಾ ವಿರುದ್ಧ ಆಗಾಗ ಪಂದ್ಯಗಳನ್ನು ಆಡುತ್ತಿತ್ತು. ಆದ್ರೆ ಪ್ರತಿಷ್ಠಿತ ಟೂರ್ನಿಗಳಾದ ಒಲಿಂಪಿಕ್ಸ್, ಫಿಫಾ ವಿಶ್ವಕಪ್, ಯೂರೋಪಿಯನ್ ಚಾಂಪಿಯನ್‍ಷಿಪ್‍ಗಳಲ್ಲಿ ಕ್ರೊವೇಶಿಯಾ ಆಟಗಾರರು ಯುಗೋಸ್ಲೋವಿಯಾ ತಂಡದ ಪರ ಕಣಕ್ಕಿಳಿಯುತ್ತಿದ್ದರು.
ಬಳಿಕ 1991ರಲ್ಲಿ ಕ್ರೊವೇಶಿಯಾ ಸ್ವಾತಂತ್ರ್ಯವನ್ನು ಪಡೆದುಕೊಂಡಿತ್ತು. ಹಾಗಾಗಿ ಕ್ರೊವೇಶಿಯಾ ಫುಟ್‍ಬಾಲ್ ಸಂಸ್ಥೆಯು 1991ರಲ್ಲಿ ಅಧಿಕೃತವಾಗಿ ಆರಂಭವಾಯಿತ್ತು. ಅಷ್ಟೇ ಅಲ್ಲ, 1993ರಲ್ಲಿ ಫಿಫಾ ಮತ್ತು ಯುಇಎಫ್‍ಎ ಮಾನ್ಯತೆಯನ್ನು ಪಡೆದುಕೊಂಡಿತ್ತು. ಪ್ರತಿಭಾವಂತ ಆಟಗಾರರ ದಂಡೇ ಕ್ರೊವೇಶಿಯಾ ತಂಡದಲ್ಲಿದ್ದರು. ಇದ್ರಿಂದ 1996ರಲ್ಲಿ ಯೂರೋ ಕಪ್ ಟೂರ್ನಿಗೆ ಕ್ರೊವೇಶಿಯಾ ತಂಡ ಎಂಟ್ರಿಯಾಯ್ತು. ಹೀಗೆ ಕ್ರೊವೇಶಿಯಾ ತಂಡದ ಅದ್ಭುತ ಪ್ರದರ್ಶನದಿಂದ ಫಿಫಾ ವಿಶ್ವಕಪ್ ಟೂರ್ನಿಗೂ ಅರ್ಹತೆ ಪಡೆದುಕೊಳ್ಳಲು ಯಶಸ್ವಿಯಾಯ್ತು.
1998ರ ಫ್ರಾನ್ಸ್ ವಿಶ್ವಕಪ್‍ಗೆ ಕ್ರೊವೇಶಿಯಾ ತಂಡ ಅರ್ಹತೆ ಪಡೆದುಕೊಂಡಿತ್ತು. ಚೊಚ್ಚಲ ಟೂರ್ನಿಯಲ್ಲಿ ಮಿಂಚಿನ ಆಟವಾಡಿದ ಕ್ರೊವೇಶಿಯಾ ಸೆಮಿಫೈನಲ್ ಕೂಡ ಪ್ರವೇಶಿಸಿತ್ತು. ಆದ್ರೆ ಸೆಮಿಫೈನನಲ್ಲಿ ಫ್ರಾನ್ಸ್ ವಿರುದ್ಧ 2-1ರಿಂದ ಸೋಲು ಅನುಭವಿಸಿತ್ತು. ಆದ್ರೆ ನೆದಲೆರ್‍ಂಡ್ ತಂಡವನ್ನು ಮಣಿಸಿ ಮೂರನೇ ಸ್ಥಾನ ಪಡೆದುಕೊಂಡಿತ್ತು. ನಂತರ ವಿಶ್ವಫುಟ್‍ಬಾಲ್‍ನಲ್ಲಿ ಛಾಫು ಮೂಡಿಸಿದ್ರೂ ಕ್ರೊವೇಶಿಯಾ, 2002 ಮತ್ತು 2006, 2014ರ ಫಿಫಾ ವಿಶ್ವಕಪ್‍ಗಳಲ್ಲಿ ಲೀಗ್ ಹಂತಕ್ಕೆ ತನ್ನ ಹೋರಾಟವನ್ನು ಅಂತ್ಯಗೊಳಿಸಿತ್ತು. ಕಳೆದ 28 ವರ್ಷಗಳ ಆರು ವಿಶ್ವಕಪ್‍ಗಳಲ್ಲಿ ಐದು ವಿಶ್ವಕಪ್ ಟೂರ್ನಿಗಳಲ್ಲಿ ಕ್ರೊವೇಶಿಯಾ ಆಡಿದೆ. 2010ರ ದಕ್ಷಿಣ ಆಫ್ರಿಕಾ ಫಿಫಾ ವಿಶ್ವಕಪ್‍ಗೆ ಮಾತ್ರ ಅರ್ಹತೆ ಪಡೆದುಕೊಂಡಿರಲಿಲ್ಲ. ಒಟ್ಟು ಒಂದು ಬಾರಿ ರನ್ನರ್ ಅಪ್, ಎರಡು ಬಾರಿ ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಇನ್ನೊಂದೆಡೆ, ಫಿಫಾ ವಿಶ್ವಕಪ್, ಯೂರೋ ಕಪ್ ಹೀಗೆ ಪ್ರತಿಷ್ಠಿತ ಟೂರ್ನಿಗಳಲ್ಲಿ ಬಲಿಷ್ಠ ತಂಡಗಳಿಗೆ ಆಘಾತ ನೀಡಿರುವ ಹೆಗ್ಗಳಿಕೆ ಕೂಡ ಕ್ರೊವೇಶಿಯಾ ತಂಡಕ್ಕಿದೆ. 2018ರ ರಷ್ಯಾ ಫಿಫಾ ವಿಶ್ವಕಪ್‍ನಲ್ಲಿ ಕ್ರೊವೇಶಿಯಾ ಬಲಿಷ್ಠ ಅಜೆರ್‍ಂಟಿನಾ ತಂಡಕ್ಕೂ ಸೋಲಿನ ರುಚಿ ತೋರಿಸಿದ್ದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ.
ಆದ್ರೆ 2026ರ ಫಿಫಾ ವಿಶ್ವಕಪ್‍ನಲ್ಲಿ ಮತ್ತೆ ಲೂಕಾ ಮ್ಯಾಡ್ರಿಕ್‍ನಂತಹ ಸರ್ವಶ್ರೇಷ್ಠ ಆಟಗಾರನ ಸಾರಥ್ಯದಲ್ಲಿ ನಾಕೌಟ್ ಹಂತದಲ್ಲಿ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ. ಪೋರ್ಚ್‍ಗಲ್ ವಿರುದ್ದ 2-1 ಅಂತರದಿಂದ ಸೋತು ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸುವ ಆಸೆ ಕೂಡ ಕಮರಿ ಹೋಯ್ತು. ಈ ಮೂಲಕ ಲೂಕಾ ಮ್ಯಾಡ್ರಿಕ್‍ನ ಕನಸು ಕೂಡ ಭಗ್ನಗೊಂಡಿತ್ತು. ಈ ಸೋಲಿನೊಂದಿಗೆ ಲೂಕಾ ಮ್ಯಾಡ್ರಿಕ್ ತನ್ನ ವರ್ಣರಂಜಿತ ವೃತ್ತಿಬದುಕಿನ ಫಿಫಾ ವಿಶ್ವಕಪ್‍ಗೆ ವಿದಾಯ ಹೇಳಿದ.
ಏನೇ ಆದ್ರೂ ಕ್ರೊವೇಶಿಯಾದ ಫುಟ್‍ಬಾಲ್ ಜರ್ನಿಯನ್ನು ನೋಡಿದಾಗ ಅಬ್ಬಾ ಅನ್ಸುತ್ತೆ. ಸುಮಾರು ನೂರು ವರ್ಷಗಳಿಂದ ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡುವ ಅರ್ಹತೆ ಇದ್ರೂ ಅವಕಾಶಗಳು ಮಾತ್ರ ಇರಲಿಲ್ಲ. ಇದೀಗ 35 ವರ್ಷಗಳಿಂದ ತನ್ನದೇ ಆದ ಅಸ್ತಿತ್ವವನ್ನು ಪಡೆದುಕೊಂಡಿರುವ ಕ್ರೊವೇಶಿಯಾ ಜನರ ಫುಟ್‍ಬಾಲ್ ಪ್ರೀತಿಗೊಂದು ಸಲಾಂ..
ಸನತ್ ರೈ
saakshatv.com








