ಚಂಡೀಗಡ: ರಾಜಸ್ಥಾನದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೀಳಿಸಲು ಸಂಚು ರೂಪಿಸಿದ ಆರೋಪದ ಮೇರೆಗೆ ಬಂಡಾಯ ನಾಯಕ ಸಚಿನ್ ಪೈಲಟ್ ಆಪ್ತ ಶಾಸಕರಿಗಾಗಿ ಪೊಲೀಸರು ಹರ್ಯಾಣದಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ.
ವಿಶೇಷ ತನಿಖೆ ತಂಡದ ಮುಖ್ಯಸ್ಥ ವಿಕಾಸ್ ಶರ್ಮಾ ನೇತೃತ್ವದ ಪೊಲೀಸರ ತಂಡ ಹರಿಯಾಣ ರಾಜ್ಯದ ಮನೆಸಾರ್‍ನಲ್ಲಿರುವ ಎರಡು ರೆಸಾರ್ಟ್‍ಗಳನ್ನು ಜಾಲಾಡಿದ್ದಾರೆ.
ಈ ರೆಸಾರ್ಟ್‍ಗಳಲ್ಲಿ ಸಚಿನ್ ಪೈಲಟ್‍ರ ಆಪ್ತ 18 ಬಂಡಾಯ ಶಾಸಕರು ತಂಗಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಆದರೆ ದಾಳಿ ವೇಳೆ ಯಾವೊಬ್ಬ ಬಂಡಾಯ ಶಾಸಕರೂ ಪತ್ತೆಯಾಗಿಲ್ಲ. ಹರಿಯಾಣ ಪೊಲೀಸರು ತನಿಖೆಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ರಾಜಸ್ಥಾನ ಪೊಲೀಸರು ಬರಿಗೈಲಿ ವಾಪಾಸ್ಸಾಗಿದ್ದಾರೆ ಎನ್ನಲಾಗಿದೆ.
ಶಾಸಕ ಭನಾವರ್ ಲಾಲ್ ಶರ್ಮಾ ವಿರುದ್ಧ ವಾರೆಂಟ್ ಜಾರಿ ಆಗಿತ್ತು. ವಾರೆಂಟ್‍ನೊಂದಿಗೆ ತೆರಳಿದ್ದ ರಾಜಸ್ಥಾನ ಪೊಲೀಸರು ಹರ್ಯಾಣದ ಮನೆಸಾರ್ ಪ್ರವೇಶಿಸಲು ಹರಸಾಹಸ ನಡೆಸಿದ್ದರು. ಒಂದು ಗಂಟೆ ಬಳಿಕ ಒಪ್ಪಿಗೆ ಸಿಕ್ಕರೂ ಯಾರೊಬ್ಬರೂ ಪತ್ತೆಯಾಗಿಲ್ಲ ಎನ್ನಲಾಗಿದೆ.
ರಾಜಸ್ಥಾನ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ್ಯ ನಡೆಸಿದೆ ಎಂದು ಆರೋಪಿಸಿ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಅಡಿಯೋ ಬಿಡುಗಡೆ ಮಾಡಿದ್ದರು. ಬಿಜೆಪಿ ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡಿದೆ ಎಂಬ ಆರೋಪದಡಿ ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೈಲಟ್ ಆಪ್ತ ಶಾಸಕರ ವಿರುದ್ಧ ವಾರೆಂಟ್ ಜಾರಿ ಮಾಡಲಾಗಿತ್ತು.
ಶುಂಠಿ ಟೀಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು
ಚಳಿಗಾಲದಲ್ಲಿ, ದೊಡ್ಡ ಪ್ರಮಾಣದಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ, ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ, ಹಲವಾರು ಜನರು ಜ್ವರ, ಕೆಮ್ಮು, ಕಫ, ಮತ್ತು ಇತರ ರೋಗಗಳಿಗೆ...