ಕೇಂದ್ರ ಸರ್ಕಾರವು 2030ರ ವೇಳೆಗೆ ಭಾರತವನ್ನು ಮಲೇರಿಯಾ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದೆ ಎಂದು ತಿಳಿಸಿದೆ.
ಕೇಂದ್ರದ ಮಾಹಿತಿಯ ಪ್ರಕಾರ, 2015ರಿಂದ 2023ರ ಅವಧಿಯಲ್ಲಿ ದೇಶದಲ್ಲಿ ಮಲೇರಿಯಾ ಪ್ರಕರಣಗಳು ಶೇ.80.5ರಷ್ಟು ಹಾಗೂ ಮಲೇರಿಯಾದಿಂದಾಗುವ ಸಾವುಗಳು ಶೇ.78.3ರಷ್ಟು ಕಡಿಮೆಯಾಗಿವೆ.
ಈ ಪ್ರಗತಿಯನ್ನು ಪರಿಗಣಿಸಿ, ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಹೆಚ್ಚಿನ ಹೊರೆಯಿಂದ ಹೆಚ್ಚಿನ ಪರಿಣಾಮ ಬೀರುವ’ (High Burden to High Impact – HBHI) ದೇಶಗಳ ಪಟ್ಟಿಯಿಂದ ಹೊರಗಿಟ್ಟಿದೆ.
ಮಲೇರಿಯಾ ನಿಯಂತ್ರಣ, ತಡೆಗಟ್ಟುವಿಕೆ, ಸಮಯೋಚಿತ ಚಿಕಿತ್ಸೆ ಹಾಗೂ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳ ಮೂಲಕ 2030ರೊಳಗೆ ಮಲೇರಿಯಾ ನಿರ್ಮೂಲನೆ ಸಾಧಿಸುವ ಗುರಿಯತ್ತ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.







