ADVERTISEMENT
Tuesday, July 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ನಾನು ಮಾತನಾಡುತ್ತಿರುವುದು 28ರ ಹರೆಯದವರ ಬಗ್ಗೆ 56 ವರ್ಷದ ಯುವಕನ ಬಗ್ಗೆ ಅಲ್ಲ ಸಂಸತ್ ಅಧಿವೇಶನಕ್ಕೂ ಮುನ್ನ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಪರೋಕ್ಷ ಟಾಂಗ್

Shwetha by Shwetha
July 21, 2026
in ದೇಶ - ವಿದೇಶ, National, Newsbeat, Politics, ರಾಜಕೀಯ
Share on FacebookShare on TwitterShare on WhatsappShare on Telegram

ಭಾರತದ ಯುವ ವಿಜ್ಞಾನಿಗಳು ಮತ್ತು ಸ್ಟಾರ್ಟ್ ಅಪ್ ಸಾಧಕರನ್ನು ಕೊಂಡಾಡುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಯುವಶಕ್ತಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತಲೇ ಕಾಂಗ್ರೆಸ್ ನಾಯಕರಿಗೆ ವ್ಯಂಗ್ಯದ ಬಾಣ ಬಿಟ್ಟಿದ್ದಾರೆ.

ನಾನು 56 ವರ್ಷದ ಯುವಕನ ಬಗ್ಗೆ ಮಾತನಾಡುತ್ತಿಲ್ಲ

Related posts

ಬಡವರ ಪಿಂಚಣಿಗೆ ಕತ್ತರಿ ಹಾಕಿ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ: ಭಾರತ್ ಜೋಡೋ ಸಂಘ ಸ್ಥಾಪನೆ ಹಿಂದಿನ ಅಸಲಿ ಬಣ್ಣ ಬಯಲು ಮಾಡಿದ್ರ ಆರ್ ಅಶೋಕ್!?

ಅಕ್ರಮ ವಲಸಿಗರಿಗೆ ದಾಖಲೆ ಸೃಷ್ಟಿಸುವ ಹುನ್ನಾರವೇ ಮನೆ ಬಾಗಿಲಿಗೆ ಪ್ರಮಾಣಪತ್ರ ನೀಡುವ ಸರ್ಕಾರದ ಆತುರವೇಕೆ :ರಾಜ್ಯದ ಭದ್ರತೆ ಮತ್ತು ಕನ್ನಡಿಗರ ಹಿತಾಸಕ್ತಿ ಬಲಿ ಕೊಡಬೇಡಿ-ಆರ್ ಅಶೋಕ್

July 21, 2026
ಕನ್ನಡದಲ್ಲೇ ತೀರ್ಪು ಪ್ರಕಟಿಸಿದ ಹೈಕೋರ್ಟ್

ಬಿಡದಿ ಟೌನ್‌ಶಿಪ್ ವಿರುದ್ಧದ ಪಿಐಎಲ್ ವಜಾ ಮಾಡಿದ ಹೈಕೋರ್ಟ್

July 21, 2026

ಬಾಹ್ಯಾಕಾಶ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿರುವ ಸ್ಕೈರೂಟ್ ಏರೋಸ್ಪೇಸ್ ತಂಡದ ಸಾಧನೆಯನ್ನು ಸ್ಮರಿಸಿದ ಪ್ರಧಾನಿ ಮೋದಿ, ಈ ಸ್ಟಾರ್ಟ್ ಅಪ್ ನಲ್ಲಿ ಕೆಲಸ ಮಾಡುವವರ ಸರಾಸರಿ ವಯಸ್ಸು ಕೇವಲ 28 ವರ್ಷಗಳು. ಇಂತಹ ಹದಿಹರೆಯದ ಯುವಕರು ಇಂದು ಬಾಹ್ಯಾಕಾಶದಲ್ಲಿ ಭಾರತದ ಬಾವುಟ ಹಾರಿಸುತ್ತಿದ್ದಾರೆ. ನಾನು ಇಲ್ಲಿ ಯಾವುದೇ 56 ವರ್ಷದ ಯುವಕನ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ದೇಶಕ್ಕೆ ಕೀರ್ತಿ ತರುತ್ತಿರುವ 28 ವರ್ಷದ ನಿಜವಾದ ಯುವ ಸಾಧಕರ ಬಗ್ಗೆ ಹೇಳುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಅವರ ಹೆಸರನ್ನು ಎತ್ತದೆಯೇ ಪರೋಕ್ಷವಾಗಿ ಲೇವಡಿ ಮಾಡಿದರು.

ಸತ್ಯ ಇರುವ ಕಡೆ ಗದ್ದಲಕ್ಕೆ ಜಾಗವಿಲ್ಲ

ಸಂಸತ್ ಕಲಾಪದ ಬಗ್ಗೆ ಮಾತನಾಡಿದ ಮೋದಿ, ಎಲ್ಲಿ ಸತ್ಯ ಮತ್ತು ತರ್ಕಗಳು ಇರುತ್ತವೆಯೋ ಅಲ್ಲಿ ಅನಗತ್ಯವಾಗಿ ಗದ್ದಲ ಮಾಡುವ ಅಥವಾ ಕಿರುಚಾಡುವ ಅಗತ್ಯವಿರುವುದಿಲ್ಲ. ಸಂಸತ್ತಿನಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿರಬೇಕು. ಗಂಭೀರವಾದ ಚರ್ಚೆಗಳು ಸತ್ಯದ ಆಧಾರದ ಮೇಲೆ ನಡೆಯಬೇಕು ಎಂದು ವಿರೋಧ ಪಕ್ಷಗಳಿಗೆ ಕಿವಿಮಾತು ಹೇಳಿದರು. ಕಳೆದ ವರ್ಷ ಭಾರತೀಯ ಪ್ರಜೆಯೊಬ್ಬರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದು ಮತ್ತು ಖಾಸಗಿ ವಲಯದ ಯುವಕರು ಬಾಹ್ಯಾಕಾಶಕ್ಕೆ ಹೊಸ ಹಾರಾಟ ನಡೆಸುತ್ತಿರುವುದು ದೇಶದ ದೊಡ್ಡ ಯಶಸ್ಸು ಎಂದು ಅವರು ಬಣ್ಣಿಸಿದರು.

ಜಾಗತಿಕ ಮಟ್ಟದಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಭಾರತದ ಇಂಧನ ಆಮದಿನ ಮೇಲೆ ದೊಡ್ಡ ಸವಾಲುಗಳನ್ನು ಸೃಷ್ಟಿಸಿವೆ. ಇಷ್ಟೆಲ್ಲಾ ಬಿಕ್ಕಟ್ಟುಗಳ ನಡುವೆಯೂ ಭಾರತದ ಆರ್ಥಿಕತೆಯು ಶೇಕಡಾ 7.7 ರಷ್ಟು ಬೆಳವಣಿಗೆಯ ದರವನ್ನು ದಾಖಲಿಸಿರುವುದು ಗಮನಾರ್ಹ ಸಂಗತಿ ಎಂದು ಮೋದಿ ತಿಳಿಸಿದರು. ಮುಂಗಾರು ಮಳೆ ಹೇಗೆ ಭೂಮಿಗೆ ಸಮೃದ್ಧಿ ತರುತ್ತದೆಯೋ, ಹಾಗೆಯೇ ಈ ಮುಂಗಾರು ಅಧಿವೇಶನವು ದೇಶದ ಕಲ್ಯಾಣಕ್ಕಾಗಿ ಮತ್ತು ಜನರ ಹಿತದೃಷ್ಟಿಯಿಂದ ಹೆಚ್ಚು ಉತ್ಪಾದಕವಾಗಿ ನಡೆಯಲಿ ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿದರು. ಪ್ರತಿಯೊಬ್ಬ ಸಂಸದರು ಚರ್ಚೆಗಳಲ್ಲಿ ಪೂರ್ಣ ಹೃದಯದಿಂದ ಭಾಗವಹಿಸುವಂತೆ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ShareTweetSendShare
Join us on:

Related Posts

ಬಡವರ ಪಿಂಚಣಿಗೆ ಕತ್ತರಿ ಹಾಕಿ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ: ಭಾರತ್ ಜೋಡೋ ಸಂಘ ಸ್ಥಾಪನೆ ಹಿಂದಿನ ಅಸಲಿ ಬಣ್ಣ ಬಯಲು ಮಾಡಿದ್ರ ಆರ್ ಅಶೋಕ್!?

ಅಕ್ರಮ ವಲಸಿಗರಿಗೆ ದಾಖಲೆ ಸೃಷ್ಟಿಸುವ ಹುನ್ನಾರವೇ ಮನೆ ಬಾಗಿಲಿಗೆ ಪ್ರಮಾಣಪತ್ರ ನೀಡುವ ಸರ್ಕಾರದ ಆತುರವೇಕೆ :ರಾಜ್ಯದ ಭದ್ರತೆ ಮತ್ತು ಕನ್ನಡಿಗರ ಹಿತಾಸಕ್ತಿ ಬಲಿ ಕೊಡಬೇಡಿ-ಆರ್ ಅಶೋಕ್

by Shwetha
July 21, 2026
0

ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮನೆ ಬಾಗಿಲಿಗೆ ಜಾತಿ ಪ್ರಮಾಣ ಪತ್ರ ಹಾಗೂ ಶಾಶ್ವತ ನಿವಾಸಿ ಪ್ರಮಾಣಪತ್ರ ವಿತರಣೆ ಯೋಜನೆಯು ಸಂವಿಧಾನ ವಿರೋಧಿ ಎಂದು ವಿರೋಧ...

ಕನ್ನಡದಲ್ಲೇ ತೀರ್ಪು ಪ್ರಕಟಿಸಿದ ಹೈಕೋರ್ಟ್

ಬಿಡದಿ ಟೌನ್‌ಶಿಪ್ ವಿರುದ್ಧದ ಪಿಐಎಲ್ ವಜಾ ಮಾಡಿದ ಹೈಕೋರ್ಟ್

by Shwetha
July 21, 2026
0

ಬಿಡದಿ ಟೌನ್‌ಶಿಪ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ ಈ...

ಪ್ರತಿಭಟನೆಯಿಂದ ಏನು ಸಾಧಿಸುತ್ತೀರಾ ಸಂಸತ್ ಚಲೋ ಹೆಸರಲ್ಲಿ ಗಲಾಟೆ ಮಾಡುತ್ತಿರುವವರಿಗೆ ಹೇಮಾ ಮಾಲಿನಿ ಪ್ರಶ್ನೆ

ಪ್ರತಿಭಟನೆಯಿಂದ ಏನು ಸಾಧಿಸುತ್ತೀರಾ ಸಂಸತ್ ಚಲೋ ಹೆಸರಲ್ಲಿ ಗಲಾಟೆ ಮಾಡುತ್ತಿರುವವರಿಗೆ ಹೇಮಾ ಮಾಲಿನಿ ಪ್ರಶ್ನೆ

by Shwetha
July 21, 2026
0

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದಂತೆಯೇ ದೆಹಲಿಯ ಬೀದಿಗಳಲ್ಲಿ ಪ್ರತಿಭಟನೆಯ ಕಾವು ಜೋರಾಗಿದೆ. ಕಾಕ್ರೋಚ್ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಸಂಸದ್ ಚಲೋ ಪಾದಯಾತ್ರೆ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಪ್ರತಿಭಟನಾಕಾರರು...

ಹೋಂಸ್ಟೇ ನೋಂದಣಿ ಕಡ್ಡಾಯ; ನಿಯಮ ಉಲ್ಲಂಘಿಸಿದರೆ ಮಾನ್ಯತೆ ರದ್ದು

ಹೋಂಸ್ಟೇ ನೋಂದಣಿ ಕಡ್ಡಾಯ; ನಿಯಮ ಉಲ್ಲಂಘಿಸಿದರೆ ಮಾನ್ಯತೆ ರದ್ದು

by Shwetha
July 21, 2026
0

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ. ಈವರೆಗೆ 500ಕ್ಕೂ ಹೆಚ್ಚು ಹೋಂಸ್ಟೇ ಮಾಲೀಕರು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದು,...

ರಾಜ್ಯದಲ್ಲಿ ಮುಂದಿನ 7 ದಿನ ಭಾರೀ ಮಳೆ ಸಾಧ್ಯತೆ

ರಾಜ್ಯದಲ್ಲಿ ಮುಂದಿನ 7 ದಿನ ಭಾರೀ ಮಳೆ ಸಾಧ್ಯತೆ

by Shwetha
July 21, 2026
0

ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ಏಳು ದಿನಗಳವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram