ಚುನಾವಣೆಗಳಲ್ಲಿ ಹಣ ಪಡೆದು ಮತ ಚಲಾಯಿಸುವ ಪ್ರವೃತ್ತಿಯನ್ನು ಜನರು ಮೊದಲು ನಿಲ್ಲಿಸಬೇಕು ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಕರೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಆರಂಭದಲ್ಲಿ ದೇಶದಲ್ಲಿ ಕೇವಲ 23% ಜನರು ಮಾತ್ರ ಸುಶಿಕ್ಷಿತರಿದ್ದರು. ಈಗ ಆ ಪ್ರಮಾಣ 80%ಕ್ಕೆ ಏರಿದ್ದರೂ, ಭ್ರಷ್ಟಾಚಾರ ಮತ್ತು ಲಂಚಗುಳಿತನ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಭ್ರಷ್ಟರು ನಮ್ಮಲ್ಲೂ ಇದ್ದಾರೆ, ನಿಮ್ಮಲ್ಲೂ ಇದ್ದಾರೆ. ಯಾವುದೇ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ. ಆದರೆ, ಜನರು ಹಣ ಪಡೆದು ಮತ ಹಾಕುವುದನ್ನು ನಿಲ್ಲಿಸಿದರೆ ಭ್ರಷ್ಟಾಚಾರವನ್ನು ಕಡಿಮೆ ಮಾಡುವಲ್ಲಿ ಅದು ದೊಡ್ಡ ಹೆಜ್ಜೆಯಾಗುತ್ತದೆ ಎಂದು ಅವರು ಹೇಳಿದರು.
ಮತದಾರರು ಹಣದ ಆಮಿಷಕ್ಕೆ ಒಳಗಾಗದೆ ಜಾಗೃತಿಯಿಂದ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದು ಅವರು ಕರೆ ನೀಡಿದರು.








