ಬೆಂಗಳೂರು: ಕರ್ನಾಟಕದಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಸೈಕಲ್ ತುಳಿದು ಬಿಜೆಪಿಯನ್ನು ಕಟ್ಟಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ 78ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜನ್ಮ ದಿನದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿಗೆ ಯಡಿಯೂರಪ್ಪ ಅವರ ಕೊಡುಗೆಯನ್ನು ಸ್ಮರಿಸಿದರು.
ಯಡಿಯೂರಪ್ಪ ಒಬ್ಬ ರೈತ ಕುಟುಂಬದಿಂದ ಬಂದವರು. ಅವರ ಕಠಿಣ ಪರಿಶ್ರಮದಿಂದ ಈ ಮಟ್ಟಕ್ಕೆ ಬೆಳೆದು ಬಂದಿದ್ದಾರೆ. ಅವರ ರಾಜಕೀಯ ಪ್ರಾರಂಭದ ಜೀವನದಲ್ಲಿ ಸೈಕಲ್ ತುಳಿದು ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನ ಕಟ್ಟಿದ್ದಾರೆ. ಅವರು ಹುಟ್ಟು ಹೋರಾಟಗಾರ. ಎಲ್ಲರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರೆ ಯಡಿಯೂರಪ್ಪ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರಿಂದ ಅವರಿಗೆ ರೈತರ ಮೇಲಿರುವ ಪ್ರೀತಿ, ಗೌರವ ತಿಳಿದು ಬರುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ರು.
ಎಐ ಶಿಕ್ಷಣಕ್ಕೆ ಒತ್ತು ನೀಡಲು ಗೂಗಲ್ ಕ್ಲೌಡ್ ಜೊತೆ ಒಪ್ಪಂದ, ಯುಪಿಇಎಸ್ ಕ್ಯಾಂಪಸ್ನಲ್ಲಿ ಅದ್ದೂರಿ ‘ಜೆಮಿನಿ ಡೇ’ ಆಚರಣೆ
ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಹೆಸರಾಂತ ಯುಪಿಇಎಸ್ ವಿಶ್ವವಿದ್ಯಾಲಯವು ಗೂಗಲ್ ಕ್ಲೌಡ್ ಜೊತೆಗಿನ ತನ್ನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಿದೆ. ಇದರ ಅಂಗವಾಗಿ...








