ADVERTISEMENT
Tuesday, July 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಐಸ್‌ಕ್ರೀಮ್ ತಿನ್ನುವ ಆಸೆ..ಪುಟ್ಟ ಬಾಲಕಿಯ ಎಡಗಾಲನ್ನು ಕಿತ್ತುಕೊಂಡ ಯಮದೂತ ಲಾರಿ.. ಸಾವನ್ನೇ ಗೆದ್ದ ಹುಡುಗಿಗೆ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ.

admin by admin
July 28, 2026
in Newsbeat, Sports, ಕ್ರೀಡೆ
shilpa-shaila-commonwealth-games-bronze-medal-karnataka-para-athlete

shilpa-shaila-commonwealth-games-bronze-medal-karnataka-para-athlete

Share on FacebookShare on TwitterShare on WhatsappShare on Telegram

ಐಸ್‌ಕ್ರೀಮ್ ತಿನ್ನುವ ಆಸೆ..ಪುಟ್ಟ ಬಾಲಕಿಯ ಎಡಗಾಲನ್ನು ಕಿತ್ತುಕೊಂಡ ಯಮದೂತ ಲಾರಿ.. ಸಾವನ್ನೇ ಗೆದ್ದ ಹುಡುಗಿಗೆ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ..ಗ್ಲಾಸ್ಗೋ ಪೋಡಿಯಂನಲ್ಲಿ ಕರುನಾಡಿನ ರೈತನ ಮಗಳ ಕೋಲ್ಮಿಂಚು..!

ಆಕೆಯ ಮುಖದಲ್ಲಿ ಮೂಡಿದ್ದವು ವರ್ಣನೆಗೆ ನಿಲುಕದ ಭಾವತರಂಗಗಳು. ಪದಕದ ಮೆಟ್ಟಿಲೇರಿದಾಗ ಆಕೆಯ ಕಣ್ಣಂಚಿನಲ್ಲಿ ಧಾರೆಯಾಗಿ ಸುರಿಯುತ್ತಿತ್ತು ಆನಂದಬಾಷ್ಪ. ಕೊರಳಿಗೆ ಹಾರವಾಗಿ ಮಿನುಗುತ್ತಿತ್ತು ಆಕೆ ಗೆದ್ದ ಕಂಚಿನ ಪದಕ. ಆಕೆಯ ಹೆಗಲಿನ ಮೇಲೆ ಕಂಗೊಳಿಸುತ್ತಿತ್ತು ಭಾರತದ ರಾಷ್ಟ್ರ ಧ್ವಜ. ಇವು ಕರುನಾಡಿನ ರೈತನ ಮಗಳು ಕಾಮನ್‍ವೆಲ್ತ್ ಗೇಮ್ಸ್ ನ ಪೋಡಿಯಂ ಮೇಲೆ ನಿಂತಾಗ ಕಂಡ ಅದ್ಭುತ ಕ್ಷಣಗಳು.

Related posts

vaastu-shastra-directions-brahmasthana-guidelines

Astro- ವಾಸ್ತು ಶಾಸ್ತ್ರದ ಪ್ರಾಮಾಣಿಕ ದಿಕ್ಕು ನಿರ್ದೇಶನಗಳು ಹೀಗಿವೆ ನೋಡಿ..!

July 28, 2026
guru-purnima-2026-gajakesari-yoga-rashi-bhavishya

Astro- 2026ರ ಗುರು ಪೂರ್ಣಿಮೆಯಂದು ಗಜಕೇಸರಿ ಯೋಗ ಸಿಗಲಿದೆ..ಈ 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?

July 28, 2026

ಹೌದು, ಆ ಕ್ಷಣವನ್ನು ವರ್ಣಿಸಲು ಅಸಾಧ್ಯ. ಯಾಕಂದ್ರೆ ಅದು ವರ್ಣಮಾಲೆಗಳಿಗೂ ನಿಲುಕದ ಸಂತೋಷದ ಸಮಯ. ಸ್ವತಃ ಅನುಭವಿಸಿದವರಿಗೂ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದ ಅಪರೂಪದ ಘಳಿಗೆ. ಇಂತಹ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದವಳು ನಮ್ಮ ಕರ್ನಾಟಕದ ಹೆಮ್ಮೆಯ ಹುಡುಗಿ.

ಆಕೆಯ ಹೆಸರು – ಶಿಲ್ಪಾ ಶೈಲಾ.
ಹುಟ್ಟೂರು – ಮೈಸೂರು ಜಿಲ್ಲೆಯ ಕೆ.ಆರ್.ನಗರದ ಕಂಚಿಗರ ಕೊಪ್ಪಲು ಗ್ರಾಮ.
ಗ್ಲಾಸ್ಗೋ ಕಾಮನ್‍ವೆಲ್ಸ್ ಗೇಮ್ಸ್ ನ ಪ್ಯಾರಾ ಅಥ್ಲೇಟಿಕ್ಸ್‍ನ ಮಹಿಳೆಯರ ಎಫ್-57 ವಿಭಾಗದ ಶಾಟ್‍ಪುಟ್‍ನಲ್ಲಿ ಕಂಚು ಗೆದ್ದ ಅಥ್ಲೀಟ್.

ಹಾಗೇ ನೋಡಿದ್ರೆ ನಿಯಮಾನುಸಾರವಾಗಿಯೇ ಶಿಲ್ಪಾ ಶೈಲಾಗೆ ಒಲಿದಿರುವ ಕಂಚಿನ ಪದಕ. 7.26 ಮೀಟರ್ ದೂರ ಎಸೆದು ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಳು. ಆದ್ರೆ ನೈಜಿರಿಯಾದ ಯುಚರಿಯಾ ಇಯಾಜಿ ಸ್ಪರ್ಧೆಯಲ್ಲಿ ಅನರ್ಹಗೊಂಡಿದ್ದರಿಂದ ಶಿಲ್ಪಾಗೆ ಕಂಚಿನ ಪದಕ ಲಭಿಸಿತ್ತು.

ಐಸ್‍ಕ್ರೀಮ್ ಆಸೆ.. ಎಡಗಾಲನ್ನೇ ಕಿತ್ತುಕೊಂಡ ಯಮದೂತ ಲಾರಿ..!

ನಾಲ್ಕನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಶಿಲ್ಪಾ ಎಡಗಾಲನ್ನು ಕಳೆದುಕೊಂಡಿದ್ದಳು. ಆದ್ರೂ ಎದೆಗುಂದಲಿಲ್ಲ. ಛಲ ಬಿಡಲಿಲ್ಲ. ಕೃತಕ ಕಾಲಿನ ಸಹಾಯದಿಂದ ಆತ್ಮವಿಶ್ವಾಸದಿಂದಲೇ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಿದ್ದಳು. ಓದಿನಲ್ಲೂ ಬುದ್ಧಿವಂತೆಯಾಗಿದ್ದ ಶೈಲಾ ಡಬಲ್ ಡಿಗ್ರಿಯನ್ನು ಪಡೆದುಕೊಂಡಿದ್ದಾಳೆ. ಅಲ್ಲದೆ ಮೈಸೂರಿನಲ್ಲಿ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದಳು.

ಆರಂಭದಲ್ಲಿ ಸಿಟ್ಟಿಂಗ್ ವಾಲಿಬಾಲ್ ಆಡುತ್ತಿದ್ದ ಶಿಲ್ಪಾ, ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಳು. ಬಳಿಕ ಕೋಚ್‍ಗಳ ಸಲಹೆಯಂತೆ ಶಾಟ್‍ಪುಟ್, ಜಾವೆಲಿನ್, ಡಿಸ್ಕಸ್ ತ್ರೋ ಕಡೆಗೆ ಗಮನ ಹರಿಸಿದ್ದಳು. ಹೆಚ್ಚಿನ ತರಬೇತಿಗಾಗಿ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಳು. ಹಾಗೇ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ಯಾರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದುಕೊಂಡಿದ್ದಳು. ಇದೀಗ ಚೊಚ್ಚಲ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ನಗೆ ಬೀರಿದ್ದಾಳೆ.

“ನನ್ನ ಖುಷಿಗೆ ಇತಿಮಿತಿಯೇ ಇಲ್ಲ. ನನಗೆ ಹೇಗೆ ಅನ್ನಿಸುತ್ತಿದೆ ಎಂಬುದನ್ನು ವರ್ಣಿಸಲು ಸಾಧ್ಯವಿಲ್ಲ. ಇದು ನನ್ನ ಮೊದಲ ಕಾಮನ್‍ವೆಲ್ತ್ ಗೇಮ್ಸ್.. ಮೊದಲ ಸ್ಪರ್ಧೆಯಲ್ಲಿ ಕಂಚಿನ ಪದಕ ಸಿಕ್ಕಿದೆ. ಈ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಶಿಲ್ಪಾ ಭಾವುಕಳಾಗಿ ಹೇಳಿದ್ದಾಳೆ.

ನನಗೆ ಸಹಕರಿಸಿದ ಹಾಗೂ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಪ್ಯಾರಾ ಕ್ರೀಡೆಗೆ ಪರಿಚಯಿಸಿ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿದ್ದು ಸ್ನೇಹಿತೆ ಗೀತಾ. ಅವಳ ಬೆಂಬಲ, ಪ್ರೋತ್ಸಾಹಕ್ಕೆ ಚಿರಋಣಿಯಾಗಿದ್ದೇನೆ. ಇನ್ನು, ಸÀತ್ಯಪಾಲ್ ಸರ್ ನನಗೆ ಬಹಳಷ್ಟು ಸಹಾಯ ಮಾಡಿದ್ದಾರೆ. ಹಾಗೇ ತರಬೇತುದಾರರಾದ ಎಸ್.ಡಿ.ಈಶನ್ ಸರ್, ರಾಘವೇಂದ್ರ ಸರ್ ಹಾಗೂ ಮುಖ್ಯ ತರಬೇತುದಾರರಾದ ಸತ್ಯನಾರಾಯಣ ಸರ್, ಪುಷ್ಪಾ ಮೇಡಮ್ ಅವರ ಮಾರ್ಗದರ್ಶನ, ಪ್ರೇರಣೆ, ಸ್ಪೂರ್ತಿ ನೀಡಿರುವುದನ್ನು ಮರೆಯಲು ಸಾಧ್ಯವಿಲ್ಲ ಅಂತಾಳೆ ಶಿಲ್ಪಾ ಶೈಲಾ.

“ಅದು 1993. ಅಂಗಡಿಯಿಂದ ಐಸ್ ಕ್ರೀಮ್ ಪಡೆದು ಮನೆಯ ಕಡೆಗೆ ಓಡುತ್ತಿದ್ದಾಗ, ಯಮದೂತನಂತೆ ಬಂದ ಲಾರಿಯೊಂದು ಆಕೆಯ ಎಡಗಾಲನ್ನು ಜಖಂಗೊಳಿಸಿತ್ತು.
ಕಾಲನ್ನು ಕಳೆದುಕೊಂಡ ನಂತರ ಆಕೆ ಪಡುತ್ತಿದ್ದ ನೋವು, ವೇದನೆಯನ್ನು ನಮ್ಮ ಕಣ್ಣಿಂದ ನೋಡಲು ಆಗುತ್ತಿರಲಿಲ್ಲ. ನಾಲ್ಕೈದು ವರ್ಷದ ಪುಟಾಣಿ ಬಾಲೆ ಆ ನೋವನ್ನು ಹೇಗೆ ಸಹಿಸಿಕೊಂಡಿತ್ತೋ ಗೊತ್ತಿಲ್ಲ. ಕೆಲವೊಂದು ಬಾರಿ ಅನ್ನಿಸುತ್ತಿತ್ತು. ಈ ನರಕಯಾತನೆ ಅನುಭವಿಸುವ ಬದಲು ಸಾ****ತ್ತಿದ್ದರೆ ಒಳ್ಳೆಯದಿತ್ತು ಅಂತ. ನಾವು ರೈತರು. ಆಕೆಯ ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಕಷ್ಟು ಪರದಾಟ ನಡೆಸಿದ್ದೇವು. ಅಲ್ಲದೆ ಶಾಲೆಗೆ ಎತ್ತಿಕೊಂಡು ಹೋಗುತ್ತಿದ್ದೇವು. ಅವಳ ಸಂಕಟ ಮನಸ್ಸಿಗೆ ಘಾಸಿಯನ್ನುಂಟು ಮಾಡುತ್ತಿತ್ತು. ಆದರೆ ಅವಳು ನಮಗೆ ಯಾವತ್ತೂ ಭಾರ ಆಗಿರಲಿಲ್ಲ. ಹಠಮಾರಿಯಾಗಿದ್ದ ಶಿಲ್ಪಾ ತುಂಬಾ ಧೈರ್ಯವಂತೆ. ತಾನು ಅಂದುಕೊಂಡಿರುವುದನ್ನು ಸಾಧಿಸುವ ಛಲ ಆಕೆಯಲ್ಲಿತ್ತು. ಹಾಗಾಗಿಯೇ ಇವತ್ತು ಅವಳು ಈ ಮಟ್ಟಕ್ಕೆ ಏರಿದ್ದಾಳೆ” ಅಂತ ಹೆಮ್ಮೆಯಿಂದ ಹೇಳ್ತಾರೆ ಶಿಲ್ಪಾ ತಾಯಿ ಶಾಂತ.

ಇನ್ನು ಶಿಲ್ಪಾ ಕೃತಕ ಕಾಲಿನ ನೆರವಿನಿಂದ ಅಭ್ಯಾಸ ನಡೆಸುತ್ತಿದ್ದಾಳೆ. ಎಡಗಾಲಿಗೆ ಶಕ್ತಿ ನೀಡುತ್ತಿರುವುದು ಜೈಪುರ ಫುಟ್. ಸಾಮಾನ್ಯವಾಗಿ ಪ್ಯಾರ ಅಥ್ಲೀಟ್‍ಗಳು ದುಬಾರಿ ಮೊತ್ತದ ಕೃತಕ ಕಾಲುಗಳನ್ನು ಬಳಸಿಕೊಂಡು ಸ್ಪರ್ಧೆ ಮಾಡುತ್ತಾರೆ. ಆದ್ರೆ ಆರ್ಥಿಕ ತೊಂದರೆಯಿಂದ ಶಿಲ್ಪಾಗೆ ಯಾವುದೇ ರೀತಿ ಅತ್ಯಾಧುನಿಕ ಮಾದರಿಯ ಸೌಲಭ್ಯಗಳು ಸಿಗಲಿಲ್ಲ. ಗುಣಮಟ್ಟದ ಕೃತಕ ಕಾಲನ್ನ ಪಡೆಯಲು ಸಾಧ್ಯವಾಗಲಿಲ್ಲ. ಆದ್ರೆ ಇವತ್ತು ಜೈಪುರ ಫುಟ್‍ನಲ್ಲೇ ಅಂತಾರಾಷ್ಟ್ರೀಯ ಸ್ಪರ್ಧಿಯಾಗಿ ಹಲವು ಪದಕಗಳನ್ನು ಗೆದ್ದಿದ್ದಾಳೆ.

ಒಟ್ಟಿನಲ್ಲಿ ಶಿಲ್ಪಾ ಶೈಲಾ ಅವರ ನೈಜ ಕಥೆ ಕೇವಲ ಕಂಚಿನ ಪದಕದ ಕಥೆಯಲ್ಲ. ಸಾವು -ನೋವನ್ನು ಗೆದ್ದ ಹೋರಾಟದ ಕಥೆ. ರೈತನ ಮಗಳಾಗಿ, ಶಿಕ್ಷಕಿಯಾಗಿ, ಪ್ಯಾರಾ ಅಥ್ಲೀಟ್ ಆಗಿ ತನ್ನ ಬದುಕನ್ನು ತಾನೇ ರೂಪಿಸಿಕೊಂಡ ಗಟ್ಟಿಗಿತ್ತಿಯ ಕಥೆ. ಕಾಲು ಕಳೆದುಕೊಂಡರೂ ಕನಸುಗಳನ್ನು ಕಳೆದುಕೊಳ್ಳಲಿಲ್ಲ. ಸೌಲಭ್ಯಗಳು ಇಲ್ಲದಿದ್ರೂ ಸಾಧಿಸುವ ಹಠ, ಛಲವನ್ನು ಕೈಬಿಡಲಿಲ್ಲ. ಶಿಲ್ಪಾ ಸಾಧನೆಗೆ ಒಂದು ಸಲಾಂ..!

ಸನತ್ ರೈ.

Tags: #saakshatv#sanathrai#ShilpaShaila #KarnatakaPride #ಕರುನಾಡಿನಹೆಮ್ಮೆ #ParaAthlete #CommonwealthGames #NeverGiveUp #ರೈತನಮಗಳಸಾಧನೆ #Inspiration #DreamsHaveNoLimits
ShareTweetSendShare
Join us on:

Related Posts

vaastu-shastra-directions-brahmasthana-guidelines

Astro- ವಾಸ್ತು ಶಾಸ್ತ್ರದ ಪ್ರಾಮಾಣಿಕ ದಿಕ್ಕು ನಿರ್ದೇಶನಗಳು ಹೀಗಿವೆ ನೋಡಿ..!

by admin
July 28, 2026
0

ವಾಸ್ತು ಶಾಸ್ತ್ರ –  ದಿಕ್ಕು ನಿರ್ದೇಶನಗಳು, ಬ್ರಹ್ಮಸ್ಥಾನ (ಮಧ್ಯಭಾಗ) ತಟಸ್ಥ ಶಕ್ತಿಯ ಕೇಂದ್ರ (Neutral Energy Zone) ಮನೆಯ ಮಧ್ಯಭಾಗವನ್ನು ತೆರವು ಮತ್ತು ಸ್ವಚ್ಛವಾಗಿಡುವುದು ಉತ್ತಮ. ಶ್ರೀ ಕ್ಷೇತ್ರ...

guru-purnima-2026-gajakesari-yoga-rashi-bhavishya

Astro- 2026ರ ಗುರು ಪೂರ್ಣಿಮೆಯಂದು ಗಜಕೇಸರಿ ಯೋಗ ಸಿಗಲಿದೆ..ಈ 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?

by admin
July 28, 2026
0

ಬುಧವಾರ ಜುಲೈ 29ರಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎನ್ನಲಾಗುವುದು ಈ ಮಂಗಳಕರ ದಿನ ಜ್ಯೋತಿಷ್ಯದಲ್ಲಿ ತುಂಬಾ ವಿಶೇಷವಾಗಿದೆ. ಯಾಕೆಂದರೆ ಈ...

rishikanta-singh-commonwealth-games-silver-medal-journey

Rishikantha singh – ಪಾತ್ರೆ ತೊಳೆಯುತ್ತಿದ್ದ ಕೈಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನ ಬೆಳ್ಳಿಯ ಪದಕ..! ಢಾಬಾದಿಂದ ಗ್ಲಾಸ್ಗೋ ಪೋಡಿಯಂ ತನಕದ ರೋಚಕ ಜರ್ನಿ..!

by admin
July 28, 2026
0

ಪಾತ್ರೆ ತೊಳೆಯುತ್ತಿದ್ದ ಕೈಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನ ಬೆಳ್ಳಿಯ ಪದಕ..! ಢಾಬಾದಿಂದ ಗ್ಲಾಸ್ಗೋ ಪೋಡಿಯಂ ತನಕದ ರೋಚಕ ಜರ್ನಿ..! ಅವನು ಶಾಲೆಗೆ ಹೋಗಿ ಓದಿದ್ದು ಬರೀ 8ನೇ...

‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್‌ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ

‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್‌ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ

by Shwetha
July 28, 2026
0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಜಕೀಯ ನಿವೃತ್ತಿಯ ಸುಳಿವು ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ನಲ್ಲಿ ಈ ಕುರಿತು ಚರ್ಚೆಗಳು ಜೋರಾಗಿವೆ. ಈ...

ಸಿ.ಟಿ. ರವಿ ವಿರುದ್ಧದ FIR ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ

ಸಿ.ಟಿ. ರವಿ ವಿರುದ್ಧದ FIR ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ

by Shwetha
July 28, 2026
0

ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ದಾಖಲಾಗಿದ್ದ FIR ಅನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram