ಭಾರತದ ಹೇವಿ ವೇಯ್ಟ್ ವೇಟ್ ಲಿಫ್ಟರ್ ಲವ್ ಪ್ರೀತ್ ಸಿಂಗ್ ಅವರು 2026ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ದಾಖಲೆಯ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಾನೆ.
ವೃತ್ತಿ ಜೀವನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಲವ್ ಪ್ರೀತ್ ಸಿಂಗ್ ಸ್ನ್ಯಾಚ್ನಲ್ಲಿ 176 ಕೆಜಿ ಹಾಗೂ ಜರ್ಕ್ನಲ್ಲಿ 212 ಕೆಜಿ ಸೇರಿದಂತೆ ಒಟ್ಟು 389 ಕೆಜಿ ಭಾರ ಎತ್ತುವ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದಾನೆ. ಆದ್ರೆ ಕೇವಲ ಒಂದೇ ಒಂದು ಕೆಜಿ ಅಂತರದಿಂದ ಚಿನ್ನದ ಪದಕ ಕೈತಪ್ಪಿ ಹೋಯ್ತು. ನ್ಯೂಜಿಲೆಂಡ್ನ ಡೇವಿಡ್ ಆಂಡ್ರ್ಯೂ ಲಿಟಿ 389 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ನಗೆ ಬೀರಿದ್ದಾನೆ. ಇದರೊಂದಿಗೆ ಭಾರತದ ವೇಟ್ ಲಿಫ್ಟಿಂಗ್ ವಿಭಾಗ ಒಟ್ಟು ಎಂಟು ಪದಕದೊಂದಿಗೆ ಸ್ಪರ್ಧೆಯನ್ನು ಅಂತ್ಯಗೊಳಿಸಿದೆ.
ಇನ್ನು ಅಥ್ಲೆಟಿಕ್ಸ್ನಲ್ಲಿ ಭಾರತ ಸೀಮಾ ಕಂಚಿನ ಪದಕ ಗೆದ್ದುಕೊಂಡಿದ್ದಾಳೆ. ಕೊನೆಯ ಮೂರು ಎಸೆತಗಳನ್ನು ಪೌಲ್ ಮಾಡಿದ್ದ ಸೀಮಾ, 58.65 ಮೀಟರ್ ದೂರ ಎಸೆದು ಮೂರನೇ ಸ್ಥಾನ ಪಡೆದುಕೊಂಡಿದ್ದಾಳೆ.
ಕಳೆದ ವರ್ಷ ತಾಯ್ತನದ ನಂತರ ಮತ್ತೆ ಸ್ಪರ್ಧೆಗೆ ಇಳಿದಿದ್ದ ಸೀಮಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಳು. ಆದ್ರೂ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾಳೆ. 27ರ ಹರೆಯದ ಸೀಮಾ ಪಿಎಚ್ಡಿ ಪದವಿ ಕೂಡ ಪಡೆಯುತ್ತಿದ್ದಾಳೆ.








