ಬೆಂಗಳೂರು : ರಾಜ್ಯದಲ್ಲಿ ರಕ್ಕಸ ಕೊರೊನಾಸುರನ ಆರ್ಭಟ ಮುಂದುವರಿದಿದ್ದು, ಇಂದು ಒಂದೇ ದಿನ ಹೊಸದಾಗಿ 4,537 ಕೋವಿಡ್ ಕೇಸ್ ಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 59,652 ಕ್ಕೆ ಏರಿಕೆಯಾಗಿದೆ. ಇಂದು ಹೆಮ್ಮಾರಿ ಸೋಂಕಿಗೆ 93 ಮಂದಿ ಬಲಿಯಾಗಿದ್ದು, ರಾಜ್ಯದಲ್ಲಿ ಇದುವರೆಗೆ 1,240 ಜನರು ಸಾವನ್ನಪ್ಪಿದ್ದಾರೆ.
ಅಲ್ಲದೇ ಇಂದು 1018 ಜನ ಕೊರೊನಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯ ಕೊರೋನಾ ಸೋಂಕಿತರ ಸಂಖ್ಯೆ 36,631ಕ್ಕೆ ಬಂದು ನಿಂತಿದೆ.
ಇನ್ನು ಬೆಂಗಳೂರಿನಲ್ಲಿ ಇಂದು ಕೂಡ ಕೊರೊನಾ ಸ್ಫೋಟವಾಗಿದ್ದು, 2125 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 29,521 ಕ್ಕೆ ಏರಿಕೆಯಾಗಿದೆ. ಇಂದು 49 ಮಂದಿ ಸೋಂಕಿಗೆ ಮೃತಪಟ್ಟಿದ್ದು ಇದುವರೆಗೆ ಕೊರೊನಾ ಸೋಂಕಿನಿಂದ 631 ಜನ ಸಾವನ್ನಪ್ಪಿದ್ದಾರೆ. ಉಳಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಇಂದು 100 ಕ್ಕಿಂತ ಹೆಚ್ಚು ಕೇಸುಗಳು ದಾಖಲಾಗಿವೆ.