ADVERTISEMENT
Wednesday, August 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ರಾತ್ರಿ ಎಲ್ಲಿ ಮಲಗಿದ್ರು ನಿಖಿಲ್ ಕುಮಾರಸ್ವಾಮಿ? ಜೆಡಿಎಸ್ ಪಾದಯಾತ್ರೆ ಜಾಲಿ ಟ್ರಿಪ್ ಎಂದ ಸಚಿವ ಬಾಲಕೃಷ್ಣ! 35 ಎಕರೆ ಜಮೀನಿನ ಸ್ಫೋಟಕ ರಹಸ್ಯ ಬಯಲು!

Shwetha by Shwetha
August 12, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಗ್ರೇಟರ್ ಬೆಂಗಳೂರು ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ನಡೆಸಿದ ಪಾದಯಾತ್ರೆಗೆ ಹೆಚ್ ಸಿ ಬಾಲಕೃಷ್ಣ ಖಡಕ್ ಕೌಂಟರ್. 24 ಗಂಟೆಯಲ್ಲಿ ಅಕೌಂಟ್‌ಗೆ ಹಣ ಹಾಕ್ತೀವಿ ಎಂದ ಸಚಿವ!

ರಾಮನಗರ: ಬಿಡದಿ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯನ್ನು ಸಚಿವ ಹೆಚ್.ಸಿ. ಬಾಲಕೃಷ್ಣ ತೀವ್ರವಾಗಿ ಲೇವಡಿ ಮಾಡಿದ್ದಾರೆ. ಅದು ಪಾದಯಾತ್ರೆಯಲ್ಲ, ಅದೊಂದು ಜಾಲಿ ಟ್ರಿಪ್. ಜೆಡಿಎಸ್ ನಾಯಕರು ಬರೀ ಡೌ ಮಾಡಿಕೊಂಡು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Related posts

ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಔಟ್! ನನ್ನ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ರೊಚ್ಚಿಗೆದ್ದ ನಟನ ಆಕ್ರೋಶ!

ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಔಟ್! ನನ್ನ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ರೊಚ್ಚಿಗೆದ್ದ ನಟನ ಆಕ್ರೋಶ!

August 12, 2026
ರೇಣುಕಾಸ್ವಾಮಿ ಕೊಲೆ ಕೇಸ್; ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ

ರೇಣುಕಾಸ್ವಾಮಿ ಕೊಲೆ ಕೇಸ್; ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ

August 12, 2026

ರಾಮನಗರ ತಾಲೂಕಿನ ಕರಲಮಂಗಲ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಾಲಕೃಷ್ಣ, ಪಾದಯಾತ್ರೆಯ ಗಾಂಭೀರ್ಯವನ್ನು ಪ್ರಶ್ನಿಸಿ ಕಟು ಮಾತುಗಳಲ್ಲಿ ವೀರೋಧ ವ್ಯಕ್ತಪಡಿಸಿದರು. ಬಡವರ ಹಾಗೂ ರೈತರ ಪರ ಎಂದು ಹೇಳಿಕೊಳ್ಳುವ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಮುಗಿದ ತಕ್ಷಣ ರಾತ್ರಿ ಎಲ್ಲಿ ಹೋಗಿ ಮಲಗಿದ್ದರು? ಬಡ ಕಾರ್ಯಕರ್ತರ ಜೊತೆ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿದಿರಾ? ಎಂದು ಸಚಿವರು ನೇರವಾಗಿ ಪ್ರಶ್ನಿಸಿದರು.

ದೇವೇಗೌಡರು ಮತ್ತು ಕುಮಾರಸ್ವಾಮಿ ಬಂದು ಮಗನಿಗೆ ಪಟ್ಟಾಭಿಷೇಕ ಮಾಡಿ ಹೋದರು. ವಿಪಕ್ಷ ನಾಯಕ ಆರ್. ಅಶೋಕ್ ಕಾಟಾಚಾರಕ್ಕೆ ಬಂದು ಐಕ್ಯತೆ ಪ್ರದರ್ಶಿಸಿ ಹೋದರು. ಬಸ್ಸಿನಲ್ಲಿ ಕಾಸು ಕೊಟ್ಟು ಜನರನ್ನು ಕರೆದುಕೊಂಡು ಬಂದಿದ್ದು ಪಾದಯಾತ್ರೆಯಾ ಎಂದು ಸಚಿವರು ಪ್ರಶ್ನೆಗಳ ಸುರಿಮಳೆಗರೆದರು.

ಕುಮಾರಸ್ವಾಮಿ ಕನಸಿನ ಕೂಸಿಗೆ ಈಗ ವಿರೋಧವೇಕೆ?

2006ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಟೌನ್‌ಶಿಪ್ ಯೋಜನೆಯನ್ನು ತಮ್ಮ ಕನಸಿನ ಕೂಸು ಎಂದು ಕರೆದಿದ್ದರು. ಆದರೆ ಈಗ ಅದೇ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಅವರ ಇಬ್ಬಂದಿ ನೀತಿಯನ್ನು ತೋರಿಸುತ್ತದೆ. ಒಬ್ಬ ರಾಜಕಾರಣಿಗೆ ನಡೆ ಮತ್ತು ನುಡಿ ಒಂದೇ ಆಗಿರಬೇಕು. ಅವಕಾಶಕ್ಕೆ ತಕ್ಕಂತೆ ಮಾತು ಬದಲಾಯಿಸುವ ಬಾಲಿಷ ಹೇಳಿಕೆಗಳನ್ನು ನಿಖಿಲ್ ಕುಮಾರಸ್ವಾಮಿ ತಕ್ಷಣ ನಿಲ್ಲಿಸಲಿ ಎಂದು ಸಚಿವರು ಎಚ್ಚರಿಸಿದರು.

ನಿಖಿಲ್ ಒಪ್ಪಿದರೆ 24 ಗಂಟೆಯಲ್ಲಿ ಕೋಟಿ ಕೋಟಿ ಹಣ!

ಸರ್ಕಾರದ ಬಳಿ ಹಣವಿಲ್ಲ ಎಂಬ ನಿಖಿಲ್ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಬಿಡದಿ ಭಾಗದಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರಿನಲ್ಲಿ 4 ಎಕರೆ ಹಾಗೂ ಅವರ ತಾಯಿ ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿ 31 ಎಕರೆ ಸೇರಿದಂತೆ ಒಟ್ಟು 35 ಎಕರೆ ಜಮೀನಿದೆ. ನಿಖಿಲ್ ಕುಮಾರಸ್ವಾಮಿ ಯೋಜನೆಗೆ ಸಮ್ಮತಿ ನೀಡಿದರೆ, ಕೇವಲ 24 ಗಂಟೆಯೊಳಗೆ ಅವರ ಬ್ಯಾಂಕ್ ಅಕೌಂಟ್‌ಗೆ ಕೋಟ್ಯಂತರ ರೂಪಾಯಿ ಜಮಾ ಮಾಡುತ್ತೇವೆ ಎಂದು ತೆರೆದ ಸವಾಲು ಎಸೆದರು.

35 ಎಕರೆ ದಲಿತರ ಜಮೀನು? ತನಿಖೆಯ ಬಾಂಬ್ ಸಿಡಿಸಿದ ಸಚಿವ!

ಇದೇ ವೇಳೆ ಕುಮಾರಸ್ವಾಮಿ ಕುಟುಂಬದ ಜಮೀನಿನ ಬಗ್ಗೆ ಗಂಭೀರ ಆರೋಪ ಮಾಡಿದ ಸಚಿವ ಬಾಲಕೃಷ್ಣ, ನಿಖಿಲ್ ಮತ್ತು ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿರುವ ಈ 35 ಎಕರೆ ಜಮೀನು ವಿವಾದದಲ್ಲಿದೆ. ಅದು ದಲಿತ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ಜಮೀನು ಎಂದು ದೂರು ಬಂದಿದೆ. ಈ ಜಮೀನಿಗೆ ಮೂಲ ಮಂಜೂರಾತಿ ಪತ್ರವೇ ಇಲ್ಲ. ಅದು ನಿಯಮಬಾಹಿರವಾಗಿ ಹೇಗೆ ಮಂಜೂರಾಯಿತು ಎಂಬುದರ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ತಿಳಿಸಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ShareTweetSendShare
Join us on:

Related Posts

ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಔಟ್! ನನ್ನ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ರೊಚ್ಚಿಗೆದ್ದ ನಟನ ಆಕ್ರೋಶ!

ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರೈ ಹೆಸರು ಔಟ್! ನನ್ನ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ರೊಚ್ಚಿಗೆದ್ದ ನಟನ ಆಕ್ರೋಶ!

by Shwetha
August 12, 2026
0

ಬೆಂಗಳೂರು: ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಾಂದ್ರಿತ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆಯೇ, ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಅವರಿಗೆ ಶಾಕ್ ಎದುರಾಗಿದೆ....

ರೇಣುಕಾಸ್ವಾಮಿ ಕೊಲೆ ಕೇಸ್; ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ

ರೇಣುಕಾಸ್ವಾಮಿ ಕೊಲೆ ಕೇಸ್; ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ

by Shwetha
August 12, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ 14ನೇ ಆರೋಪಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 59ನೇ CCH ನ್ಯಾಯಾಲಯ ಆಗಸ್ಟ್ 18ಕ್ಕೆ ಮುಂದೂಡಿದೆ....

ಸಚಿವರು ಕತ್ತೆ ಕಾಯಲು ಇದ್ದಾರೆಯೇ? ಇದು ಡಿ ಕೆ ಶಿವಕುಮಾರ್ ಗೂಂಡಾಗಿರಿ ಸರ್ಕಾರ: ನಾಗೇಂದ್ರ ರಾಜೀನಾಮೆ ಕೊಡದಿದ್ರೆ ಅಧಿವೇಶನ ನಡೆಯಲು ಬಿಡಲ್ಲ! ಆಡಳಿತ ಪಕ್ಷಕ್ಕೆ ಆರ್ ಅಶೋಕ್ ನೇರ ಎಚ್ಚರಿಕೆ!

ಸಚಿವರು ಕತ್ತೆ ಕಾಯಲು ಇದ್ದಾರೆಯೇ? ಇದು ಡಿ ಕೆ ಶಿವಕುಮಾರ್ ಗೂಂಡಾಗಿರಿ ಸರ್ಕಾರ: ನಾಗೇಂದ್ರ ರಾಜೀನಾಮೆ ಕೊಡದಿದ್ರೆ ಅಧಿವೇಶನ ನಡೆಯಲು ಬಿಡಲ್ಲ! ಆಡಳಿತ ಪಕ್ಷಕ್ಕೆ ಆರ್ ಅಶೋಕ್ ನೇರ ಎಚ್ಚರಿಕೆ!

by Shwetha
August 12, 2026
0

ವಾಲ್ಮೀಕಿ ನಿಗಮದ ನೂರಾರು ಕೋಟಿ ಹಣ ಲೂಟಿ ಮಾಡಿದ ಬಿ ನಾಗೇಂದ್ರ ರಾಜೀನಾಮೆಗೆ ಪಟ್ಟು. ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಎಚ್ಚರಿಕೆ!...

ಕರ್ನಾಟಕಕ್ಕೆ ಮತ್ತೆ ಶಾಕ್; ತಮಿಳುನಾಡಿಗೆ 12,000 ಕ್ಯೂಸೆಕ್ ನೀರು ಹರಿಸಲು CWRC ಆದೇಶ

ಕರ್ನಾಟಕಕ್ಕೆ ಮತ್ತೆ ಶಾಕ್; ತಮಿಳುನಾಡಿಗೆ 12,000 ಕ್ಯೂಸೆಕ್ ನೀರು ಹರಿಸಲು CWRC ಆದೇಶ

by Shwetha
August 12, 2026
0

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ನೀರು ಹರಿಸುವ ಕುರಿತು ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ, ಕರ್ನಾಟಕಕ್ಕೆ...

ದಿನ ಭವಿಷ್ಯ (12-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (12-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 12, 2026
0

ದಿನ ಭವಿಷ್ಯ: 12-08-2026. ಮೇಷ ರಾಶಿ ಇಂದು ನಿಮ್ಮಲ್ಲಿ ಅಗಾಧವಾದ ಉತ್ಸಾಹ ಮತ್ತು ಸಕಾರಾತ್ಮಕ ಶಕ್ತಿ ಇರಲಿದೆ. ಬುಧನ ಪ್ರಭಾವದಿಂದಾಗಿ ನಿಮ್ಮ ಆಲೋಚನಾ ಲಹರಿ ಅತ್ಯಂತ ಚುರುಕಾಗಿರುತ್ತದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram