ADVERTISEMENT
Sunday, August 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

‘ನಮ್ಮ ಕುಟುಂಬ ಕಾಪಾಡಿದ್ದು ಭಾರತೀಯ ಸೇನೆ, RSS ಅಲ್ಲ’: ಕಲಬುರಗಿಯಲ್ಲಿ ಇರೋದು ಪಟೇಲರ ಪ್ರತಿಮೆ, ಚಡ್ಡಿ ಹಾಕಿರೋರದ್ದಲ್ಲ -ಬಿಎಲ್ ಸಂತೋಷ್‌ಗೆ ಪ್ರಿಯಾಂಕ್ ಖರ್ಗೆ ರಿವರ್ಸ್ ಅಟ್ಯಾಕ್

Shwetha by Shwetha
August 16, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಆರ್‌ಎಸ್‌ಎಸ್ ನಡುವಿನ ಸಮರ ಈಗ ಮತ್ತಷ್ಟು ತೀವ್ರಗೊಂಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಇತಿಹಾಸ ಮತ್ತು ಹೈದರಾಬಾದ್ ಕರ್ನಾಟಕದ ವಿಮೋಚನೆಯ ವಿಷಯವನ್ನು ಇಟ್ಟುಕೊಂಡು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ ತಂಗಾಳಿಯಂತೆ ಶುರುವಾಗಿ ಈಗ ಬೆಂಕಿಯಂತೆ ಭುಗಿಲೆದ್ದಿದೆ.

ಖರ್ಗೆ ಕುಟುಂಬದ ಬಗ್ಗೆ ಬಿ.ಎಲ್. ಸಂತೋಷ್ ಹೇಳಿದ್ದೇನು?

Related posts

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

August 16, 2026
‘ಆರ್‌ಎಸ್‌ಎಸ್‌ ಇದುವರೆಗೆ ನೋಂದಣಿಯಾಗಿಲ್ಲ, ಮುಂದೆಯೂ ಮಾಡಲ್ಲ’: ‘ನೋಂದಣಿ ಮಾಡಿಕೊಂಡ ಸಂಸ್ಥೆಗಳು ಏನ್ ಮಾಡ್ತಿವೆ ಗೊತ್ತಿದೆ’- ಕಾಂಗ್ರೆಸ್ ಸರ್ಕಾರಕ್ಕೆ ಬಿ.ಎಲ್. ಸಂತೋಷ್‌ ಟಾಂಗ್

‘ಆರ್‌ಎಸ್‌ಎಸ್‌ ಇದುವರೆಗೆ ನೋಂದಣಿಯಾಗಿಲ್ಲ, ಮುಂದೆಯೂ ಮಾಡಲ್ಲ’: ‘ನೋಂದಣಿ ಮಾಡಿಕೊಂಡ ಸಂಸ್ಥೆಗಳು ಏನ್ ಮಾಡ್ತಿವೆ ಗೊತ್ತಿದೆ’- ಕಾಂಗ್ರೆಸ್ ಸರ್ಕಾರಕ್ಕೆ ಬಿ.ಎಲ್. ಸಂತೋಷ್‌ ಟಾಂಗ್

August 16, 2026

ಇತ್ತೀಚೆಗೆ ನಡೆದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಬಿ.ಎಲ್. ಸಂತೋಷ್, ಆರ್‌ಎಸ್‌ಎಸ್ ನೋಂದಣಿ ಆಗಿಲ್ಲ, ಮುಂದೆ ಮಾಡುವುದೂ ಇಲ್ಲ ಎಂದು ನೇರವಾಗಿ ಹೇಳಿದ್ದರು. ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡುವ ರಭಸದಲ್ಲಿ, ನಿಮ್ಮ ಕುಟುಂಬ ರಜಾಕರ ದಾಳಿಗೆ ಹೆದರಿ ಹುಟ್ಟು ಬಟ್ಟೆಯಲ್ಲಿ ಬೀದರ್‌ನಿಂದ ಕಲಬುರಗಿಗೆ ಓಡಿ ಬಂದು ಜೀವನ ಕಟ್ಟಿಕೊಂಡಿದೆ. ಆಗ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಓಡೋಡಿ ಬಂದಾಗ ಅವರನ್ನು ಮತ್ತು ಈ ಭಾಗದ ಹಿಂದೂಗಳನ್ನು ರಕ್ಷಿಸಿದ್ದು ಇದೇ ಆರ್‌ಎಸ್‌ಎಸ್. ಆಗ ನಿಮ್ಮ ಪೊಲೀಸರು ಬರಲಿಲ್ಲ, ರಾಜಕಾರಣಿಗಳು ಬರಲಿಲ್ಲ, ಆರ್‌ಎಸ್‌ಎಸ್ ಕಾರ್ಯಕರ್ತರು ರಸ್ತೆಯಲ್ಲಿ ನಿಂತು ಹೋರಾಡಿದ್ದರು ಎಂದು ಹೇಳಿಕೆ ನೀಡಿದ್ದರು.

ಇತಿಹಾಸವೇ ಗೊತ್ತಿಲ್ಲದ ಸಂತೋಷ್‌ಗೆ ಸಚಿವ ಪ್ರಿಯಾಂಕ್ ಸವಾಲ್

ಬಿ.ಎಲ್. ಸಂತೋಷ್ ಹೇಳಿಕೆಗೆ ಕಲಬುರಗಿಯಲ್ಲಿ ಅತ್ಯಂತ ಖಡಕ್ ಆಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಂತೋಷ್ ಅವರಿಗೆ ಇತಿಹಾಸದ ಕನಿಷ್ಠ ಜ್ಞಾನವೂ ಇಲ್ಲ ಎಂದು ಕಿಡಿಕಾರಿದ್ದಾರೆ. ನಮ್ಮ ಕುಟುಂಬವನ್ನು ರಕ್ಷಿಸಿದ್ದು ಆರ್‌ಎಸ್‌ಎಸ್ ಅಲ್ಲ, ಬದಲಿಗೆ ಭಾರತೀಯ ಸೇನೆ. ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲರು ಕೈಗೊಂಡ ‘ಆಪರೇಷನ್ ಪೋಲೋ’ ಸೇನಾ ಕಾರ್ಯಾಚರಣೆಯಿಂದಾಗಿ ಹೈದರಾಬಾದ್ ಕರ್ನಾಟಕ ರಜಾಕರ ಕಪಿಮುಷ್ಟಿಯಿಂದ ವಿಮೋಚನೆಗೊಂಡಿತು. ಕಲಬುರಗಿಯಲ್ಲಿ ಇಂದು ಇರುವುದು ಸರ್ದಾರ್ ಪಟೇಲರ ಪ್ರತಿಮೆಯೇ ಹೊರತು, ಯಾವನೋ ಚಡ್ಡಿ ಹಾಕಿಕೊಂಡು ನಿಂತಿರುವ ಪ್ರತಿಮೆಯಲ್ಲ ಎಂದು ಪ್ರಿಯಾಂಕ್ ಖರ್ಗೆ ನೇರ ವಾಗ್ದಾಳಿ ನಡೆಸಿದ್ದಾರೆ.

ನನಗೆ ಆರ್‌ಎಸ್‌ಎಸ್ ಭಯವಿಲ್ಲ, ಅವರಿಗೆ ‘ಪ್ರಿಯಾಂಕ್ ಫೋಬಿಯಾ’ ಇದೆ

ತಮಗೆ ಆರ್‌ಎಸ್‌ಎಸ್ ಎಂದರೆ ಭಯವಿಲ್ಲ ಎಂದಿರುವ ಪ್ರಿಯಾಂಕ್ ಖರ್ಗೆ, ಹೆದರಲು ಅವರೇನು ಎಂದು ಪ್ರಶ್ನಿಸಿದ್ದಾರೆ. ನನಗೆ ಆರ್‌ಎಸ್‌ಎಸ್ ಭಯವಿಲ್ಲ, ಬದಲಿಗೆ ಅವರಿಗೆ ‘ಪ್ರಿಯಾಂಕ್ ಫೋಬಿಯಾ’ ಕಾಡುತ್ತಿದೆ. ಸ್ವತಃ ಸಾವರ್ಕರ್ ಅವರಿಗೆ ‘ವೀರ್’ ಎಂಬ ಬಿರುದನ್ನು ಯಾರು ಕೊಟ್ಟರು ಎಂದು ಪ್ರಶ್ನಿಸಿದರೆ ಸಂಸತ್ತಿನಲ್ಲಿ ಇವತ್ತಿಗೂ ಇವರು ಬಾಯಿ ಬಿಡುವುದಿಲ್ಲ. ನಮ್ಮ ಬಗ್ಗೆ ಮಾತನಾಡುವ ಇವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕನಿಷ್ಠ ಐದು ಜನ ಆರ್‌ಎಸ್‌ಎಸ್ ನಾಯಕರ ಹೆಸರುಗಳನ್ನು ಹೇಳಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಯಾವ ಬಿಜೆಪಿ ನಾಯಕರ ಮಕ್ಕಳು ಶಾಖೆಗೆ ಹೋಗುತ್ತಾರೆ ತೋರಿಸಿ?

ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಟಾಂಗ್ ನೀಡಿರುವ ಸಚಿವರು, ಹೌದು, ನೀವು ಸಂಘವನ್ನು ಎಲ್ಲೂ ನೋಂದಣಿ ಮಾಡಿಕೊಂಡಿಲ್ಲ, ಹಾಗಾಗಿ ಕಾನೂನಾತ್ಮಕವಾಗಿ ಬ್ಯಾನ್ ಮಾಡಲು ಆಗಲ್ಲ. ನಿಮ್ಮದು ಸಾಂಸ್ಕೃತಿಕ ಸಂಘ ಎಂದು ಹೇಳಿಕೊಳ್ಳುತ್ತೀರಾ, ಆದರೆ ಪ್ರಶ್ನೆ ಮಾಡಿದರೆ ಮನೆ ಬಿಟ್ಟು ಹೊರಗೆ ಬರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತೀರಾ? ಇಷ್ಟೆಲ್ಲಾ ದೇಶಭಕ್ತಿ ಮಾತನಾಡುವ ಬಿಜೆಪಿ ನಾಯಕರಲ್ಲಿ ಯಾವ ನಾಯಕನ ಮಕ್ಕಳು ಫುಲ್ ಟೈಮ್ ಆರ್‌ಎಸ್‌ಎಸ್ ಶಾಖೆಗೆ ಹೋಗುತ್ತಾರೆ ಎಂಬುದನ್ನು ಮೊದಲು ತೋರಿಸಲಿ ಎಂದು ಪ್ರಶ್ನಿಸುವ ಮೂಲಕ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್ ಖರ್ಗೆ ತೀವ್ರ ಪ್ರಹಾರ ನಡೆಸಿದ್ದಾರೆ.

ShareTweetSendShare
Join us on:

Related Posts

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

by Shwetha
August 16, 2026
0

ಬೆಂಗಳೂರು: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ತೀವ್ರವಾಗಿ ಕುಸಿಯಲಾರಂಭಿಸಿದ್ದು, ಇಡೀ ದೇಶವೇ ಸಾಲು ಸಾಲು ಕಠಿಣ ಸಮಸ್ಯೆಗಳಿಂದ ತೊಂದರೆಗೆ ಸಿಲುಕಿದೆ...

‘ಆರ್‌ಎಸ್‌ಎಸ್‌ ಇದುವರೆಗೆ ನೋಂದಣಿಯಾಗಿಲ್ಲ, ಮುಂದೆಯೂ ಮಾಡಲ್ಲ’: ‘ನೋಂದಣಿ ಮಾಡಿಕೊಂಡ ಸಂಸ್ಥೆಗಳು ಏನ್ ಮಾಡ್ತಿವೆ ಗೊತ್ತಿದೆ’- ಕಾಂಗ್ರೆಸ್ ಸರ್ಕಾರಕ್ಕೆ ಬಿ.ಎಲ್. ಸಂತೋಷ್‌ ಟಾಂಗ್

‘ಆರ್‌ಎಸ್‌ಎಸ್‌ ಇದುವರೆಗೆ ನೋಂದಣಿಯಾಗಿಲ್ಲ, ಮುಂದೆಯೂ ಮಾಡಲ್ಲ’: ‘ನೋಂದಣಿ ಮಾಡಿಕೊಂಡ ಸಂಸ್ಥೆಗಳು ಏನ್ ಮಾಡ್ತಿವೆ ಗೊತ್ತಿದೆ’- ಕಾಂಗ್ರೆಸ್ ಸರ್ಕಾರಕ್ಕೆ ಬಿ.ಎಲ್. ಸಂತೋಷ್‌ ಟಾಂಗ್

by Shwetha
August 16, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಆರ್‌ಎಸ್‌ಎಸ್ ನಡುವೆ ಸೃಷ್ಟಿಯಾಗಿರುವ ರಾಜಕೀಯ ಸಂಘರ್ಷ ಈಗ ಮತ್ತಷ್ಟು ತೀವ್ರಗೊಂಡಿದೆ. ಆರ್‌ಎಸ್‌ಎಸ್‌...

ನಾನು ಹಿಂದೂಸ್ತಾನಿ, ನಾನು ಕನ್ನಡಿಗ – ನನ್ನ ದೇಶಪ್ರೇಮಕ್ಕೆ ಬಿಜೆಪಿಯ ಸರ್ಟಿಫಿಕೇಟ್ ಬೇಕಿಲ್ಲ: ಧ್ವಜಾರೋಹಣ ವಿವಾದಕ್ಕೆ ಜಮೀರ್ ತೆರೆ

ನಾನು ಹಿಂದೂಸ್ತಾನಿ, ನಾನು ಕನ್ನಡಿಗ – ನನ್ನ ದೇಶಪ್ರೇಮಕ್ಕೆ ಬಿಜೆಪಿಯ ಸರ್ಟಿಫಿಕೇಟ್ ಬೇಕಿಲ್ಲ: ಧ್ವಜಾರೋಹಣ ವಿವಾದಕ್ಕೆ ಜಮೀರ್ ತೆರೆ

by Shwetha
August 16, 2026
0

ಬೆಂಗಳೂರು: "ನಾನು ಹಿಂದೂಸ್ತಾನಿ, ನಾನು ಕನ್ನಡಿಗ. ದೇಶಾಭಿಮಾನ ಮತ್ತು ದೇಶಭಕ್ತಿಯನ್ನು ನಾವು ಬಿಜೆಪಿಯವರಿಂದ ಕಲಿಯಬೇಕಾದ ಅಗತ್ಯವಿಲ್ಲ" ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿಪಕ್ಷಗಳ ಟೀಕೆಗೆ...

‘ಧರ್ಮೇಂದ್ರ ಪ್ರಧಾನ್ ರನ್ನೇ ಕಿತ್ತು ಹಾಕಿದ್ದೇವೆ, ನೀನ್ಯಾವ ಲೆಕ್ಕ?’: ಖಾಕಿ ಪಡೆಗೆ ಧಮ್ಕಿ ಹಾಕಿದ  ಸಿಜೆಪಿ ನಾಯಕ ಆಶುತೋಷ್ ರಾಂಕಾ

‘ಧರ್ಮೇಂದ್ರ ಪ್ರಧಾನ್ ರನ್ನೇ ಕಿತ್ತು ಹಾಕಿದ್ದೇವೆ, ನೀನ್ಯಾವ ಲೆಕ್ಕ?’: ಖಾಕಿ ಪಡೆಗೆ ಧಮ್ಕಿ ಹಾಕಿದ ಸಿಜೆಪಿ ನಾಯಕ ಆಶುತೋಷ್ ರಾಂಕಾ

by Shwetha
August 16, 2026
0

ಜೈಪುರ: ಜರ್ಜರಿತಗೊಂಡಿದ್ದ ಸರ್ಕಾರಿ ಶಾಲೆಯ ಕಟ್ಟಡದ ಛಾವಣಿ ಕುಸಿದು ಬಿದ್ದಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳದಲ್ಲಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ತೀವ್ರ ಹೈಡ್ರಾಮಾ...

ದಿನ ಭವಿಷ್ಯ (12-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (16-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 16, 2026
0

ದಿನ ಭವಿಷ್ಯ: 16-08-2026. ಮೇಷ ರಾಶಿ ಇಂದು ನಿಮ್ಮಲ್ಲಿ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸ ತುಂಬಿರುತ್ತದೆ. ಉದ್ಯೋಗ ಮತ್ತು ಹಣಕಾಸು: ಕಚೇರಿಯಲ್ಲಿ ನಿಮ್ಮ ನಾಯಕತ್ವ ಗುಣಗಳನ್ನು ಮೇಲಧಿಕಾರಿಗಳು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram