ADVERTISEMENT
Tuesday, August 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಮಾಡುವುದು ಅನಾಚಾರ ಮನೆ ಮುಂದೆ ಬೃಂದಾವನ: ಹಿರಿಯ ನಾಯಕ ಖರ್ಗೆಗೆ ಗೌರವ ಕೊಡಿ ಎಂದು ಬಿಎಲ್ ಸಂತೋಷ್‌ಗೆ ಪ್ರದೀಪ್ ಈಶ್ವರ್ ಬುದ್ಧಿಮಾತು!

Shwetha by Shwetha
August 18, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಏಕವಚನ ಬಳಸಿ ಅನುಚಿತವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ವಿರುದ್ಧ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಆರ್ ಎಸ್ ಎಸ್ ನಾಯಕ ಬಿ ಎಲ್ ಸಂತೋಷ್ ಹಾಗೂ ಬಿಜೆಪಿ ನಾಯಕ ಸಿ ಟಿ ರವಿ ಅವರ ಬೇಜವಾಬ್ದಾರಿ ಹೇಳಿಕೆಗಳ ವಿರುದ್ಧ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಆರ್ ಎಸ್ ಎಸ್ ಸಂಘಟನೆಯ ಮೂಲಕ ಬೆಳೆದು ಬಂದಿರುವ 59 ವರ್ಷ ವಯಸ್ಸಿನ ಬಿ ಎಲ್ ಸಂತೋಷ್ ಅವರಿಗೆ ಕನಿಷ್ಠ ಸಂಸ್ಕಾರ ಮತ್ತು ಸಾಮಾನ್ಯ ಜ್ಞಾನವಿಲ್ಲವೇ ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದ್ದಾರೆ. ಒಮ್ಮೆ ಮಹಾತ್ಮ ಗಾಂಧೀಜಿಯವರು ಅಲಂಕರಿಸಿದ್ದ ಮಹೋನ್ನತ ಸ್ಥಾನದಲ್ಲಿ ಇಂದು ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದಾರೆ. ಅವರು ಈ ದೇಶದ ಹಿರಿಯ ರಾಜಕಾರಣಿ. ಅಂತಹ ಹಿರಿಯ ನಾಯಕರ ಬಗ್ಗೆ ಭಾಷಣ ಮಾಡುವಾಗ ಅವನು, ಅವನ ಅಪ್ಪ ಎಂದು ಏಕವಚನದಲ್ಲಿ ಹೀಯಾಳಿಸಿರುವುದು ಅತ್ಯಂತ ಕೀಳು ಮಟ್ಟದ ರಾಜಕಾರಣ. ಬಿ ಎಲ್ ಸಂತೋಷ್ ತಕ್ಷಣ ತಮ್ಮ ಮಾತಿನ ಧಾಟಿಯನ್ನು ತಿದ್ದಿಕೊಳ್ಳಬೇಕು ಮತ್ತು ಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ಸವಾಲು ಎಸೆದಿದ್ದಾರೆ.

Related posts

ಅಲ್ಲಾಹನ ಹೊರತು ಯಾರನ್ನೂ ಪೂಜಿಸಲ್ಲ, ಎದ್ದು ನಿಲ್ಲುತ್ತೇನೆ ಆದರೆ ವಂದೇ ಮಾತರಂ ಹಾಡುವುದಿಲ್ಲ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಾತ್ಮಕ ಹೇಳಿಕೆ

ಅಲ್ಲಾಹನ ಹೊರತು ಯಾರನ್ನೂ ಪೂಜಿಸಲ್ಲ, ಎದ್ದು ನಿಲ್ಲುತ್ತೇನೆ ಆದರೆ ವಂದೇ ಮಾತರಂ ಹಾಡುವುದಿಲ್ಲ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಾತ್ಮಕ ಹೇಳಿಕೆ

August 18, 2026
ಹನೂರು ಶೂಟೌಟ್ ಪ್ರಕರಣ ವಿಧಾನಸಭೆಯಲ್ಲಿ ಸದ್ದು; ‘ನಕಲಿ ಎನ್‌ಕೌಂಟರ್’ ಆರೋಪ

ಹನೂರು ಶೂಟೌಟ್ ಪ್ರಕರಣ ವಿಧಾನಸಭೆಯಲ್ಲಿ ಸದ್ದು; ‘ನಕಲಿ ಎನ್‌ಕೌಂಟರ್’ ಆರೋಪ

August 18, 2026

ಇದೇ ವೇಳೆ ಬಿಜೆಪಿ ನಾಯಕ ಸಿ ಟಿ ರವಿ ವಿರುದ್ಧವೂ ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದ ಶಾಸಕರು, ನಾನು ಇತ್ತೀಚೆಗೆ ಸಿ ಟಿ ರವಿ ಅವರ ಹೆಸರಿಗೆ ವಿರುದ್ಧಾರ್ಥಕ ಪದ ಯಾವುದು ಎಂದು ಗೂಗಲ್ ನಲ್ಲಿ ಹುಡಿಕಿದೆ. ಅದಕ್ಕೆ ಒಳ್ಳೆಯತನ ಎಂಬ ಉತ್ತರ ಸಿಕ್ಕಿತು. ಸಿ ಟಿ ರವಿ ಅವರಿಗೆ ಬಾಯಿಗೆ ಬಂದಂತೆ ಮಾತನಾಡುವುದೇ ಕಾಯಕವಾಗಿದೆ. ಅವರ ಸಂಸ್ಕೃತಿ ಮತ್ತು ಭಾಷೆಯ ಶೈಲಿಯನ್ನು ಇಡೀ ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಟೀಕಿಸಿದರು.

ಮತ್ತೊಂದೆಡೆ ಆರ್ ಎಸ್ ಎಸ್ ನೊಂದಣಿ ವಿಚಾರವಾಗಿ ಬಿ ಎಲ್ ಸಂತೋಷ್ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಪ್ರದೀಪ್ ಈಶ್ವರ್, ನಂಬಿಕೆಯಿಂದ ಆರ್ ಎಸ್ ಎಸ್ ನಡೆಸುತ್ತಿದ್ದೇವೆ, ನಮಗೆ ನೋಂದಣಿ ಅಗತ್ಯವಿಲ್ಲ ಎಂದು ಸಂತೋಷ್ ಹೇಳುತ್ತಾರೆ. ಹಾಗಾದರೆ ಇವರಿಗೆ ದೇಶದ ಸಂವಿಧಾನ, ಕಾನೂನು ಮತ್ತು ಆದಾಯ ತೆರಿಗೆ ಕಾಯ್ದೆಯ ಬಗ್ಗೆ ಕನಿಷ್ಠ ಗೌರವವಿಲ್ಲವೇ. ಮಾಡುತ್ತಿರುವುದೆಲ್ಲಾ ಅನಾಚಾರ, ಮನೆ ಮುಂದೆ ಮಾತ್ರ ಬೃಂದಾವನ ಎಂಬಂತೆ ಬಿಜೆಪಿಯವರ ನಡವಳಿಕೆ ಇದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ತಮ್ಮ ಮತ್ತು ಬಿ ಎಲ್ ಸಂತೋಷ್ ಅವರ ವಯಸ್ಸನ್ನು ಹೋಲಿಸಿದ ಶಾಸಕರು, ನನಗೆ ಈಗಷ್ಟೇ 40 ವರ್ಷ, ಸಂತೋಷ್ ಅವರಿಗೆ 58 ವರ್ಷಕ್ಕಿಂತ ಹೆಚ್ಚು. ವಯಸ್ಸಿನಲ್ಲಿ ಅವರು ನನಗಿಂತ ದೊಡ್ಡವರಾದ್ದರಿಂದ ನಾನು ಅವರನ್ನು ಈಗಲೂ ಸರ್ ಎಂದೇ ಗೌರವದಿಂದ ಕರೆಯುತ್ತಿದ್ದೇನೆ. ರಾಜಕೀಯ ಏನೇ ಇರಲಿ, ಹಿರಿಯ ನಾಯಕರಿಗೆ ಮತ್ತು ವೈಯಕ್ತಿಕ ವ್ಯಕ್ತಿತ್ವಕ್ಕೆ ಗೌರವ ನೀಡುವುದು ನಮ್ಮ ಸಂಸ್ಕೃತಿ. ಅದನ್ನು ಬಿಜೆಪಿಯ ನಾಯಕರು ಮೊದಲು ಮೈಗೂಡಿಸಿಕೊಳ್ಳಲಿ ಎಂದು ಪ್ರದೀಪ್ ಈಶ್ವರ್ ಸೀದಾ ಸಾದಾ ಬುದ್ಧಿವಾದ ಹೇಳಿದ್ದಾರೆ.

ShareTweetSendShare
Join us on:

Related Posts

ಅಲ್ಲಾಹನ ಹೊರತು ಯಾರನ್ನೂ ಪೂಜಿಸಲ್ಲ, ಎದ್ದು ನಿಲ್ಲುತ್ತೇನೆ ಆದರೆ ವಂದೇ ಮಾತರಂ ಹಾಡುವುದಿಲ್ಲ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಾತ್ಮಕ ಹೇಳಿಕೆ

ಅಲ್ಲಾಹನ ಹೊರತು ಯಾರನ್ನೂ ಪೂಜಿಸಲ್ಲ, ಎದ್ದು ನಿಲ್ಲುತ್ತೇನೆ ಆದರೆ ವಂದೇ ಮಾತರಂ ಹಾಡುವುದಿಲ್ಲ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಾತ್ಮಕ ಹೇಳಿಕೆ

by Shwetha
August 18, 2026
0

ನವದೆಹಲಿ: ಸ್ವಾತಂತ್ರ್ಯ ದಿನೋತ್ಸವದಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ಸೋನಿಯಾ ಗಾಂಧಿ ಅಡ್ಡಿಪಡಿಸಿದ್ದಾರೆ ಎಂಬ ಬಿಜೆಪಿ ಆರೋಪದ ಬೆನ್ನಲ್ಲೇ, ಕಾಂಗ್ರೆಸ್ ಸಂಸದ ಇಮ್ರಾನ್...

ಹನೂರು ಶೂಟೌಟ್ ಪ್ರಕರಣ ವಿಧಾನಸಭೆಯಲ್ಲಿ ಸದ್ದು; ‘ನಕಲಿ ಎನ್‌ಕೌಂಟರ್’ ಆರೋಪ

ಹನೂರು ಶೂಟೌಟ್ ಪ್ರಕರಣ ವಿಧಾನಸಭೆಯಲ್ಲಿ ಸದ್ದು; ‘ನಕಲಿ ಎನ್‌ಕೌಂಟರ್’ ಆರೋಪ

by Shwetha
August 18, 2026
0

ವಿಧಾನಸಭೆಯ ಸೋಮವಾರದ ಕಲಾಪ ಆರಂಭವಾಗುತ್ತಿದ್ದಂತೆ ಚಾಮರಾಜನಗರ ಜಿಲ್ಲೆಯ ಹನೂರು ಶೂಟೌಟ್ ಪ್ರಕರಣ ಪ್ರಮುಖ ಚರ್ಚೆಯ ವಿಷಯವಾಯಿತು. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸರ್ಕಾರದ ವಿರುದ್ಧ ಗಂಭೀರ...

ಸೊಳ್ಳೆ ಕಾಟಕ್ಕೆ ಕಂಗಾಲಾದ ದರ್ಶನ್: ನಿಯಮ ಮೀರಿ ಏನೂ ಮಾಡಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ ಡಿಜಿಪಿ ಅಲೋಕ್ ಕುಮಾರ್!

ಸೊಳ್ಳೆ ಕಾಟಕ್ಕೆ ಕಂಗಾಲಾದ ದರ್ಶನ್: ನಿಯಮ ಮೀರಿ ಏನೂ ಮಾಡಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ ಡಿಜಿಪಿ ಅಲೋಕ್ ಕುಮಾರ್!

by Shwetha
August 18, 2026
0

ಬೆಂಗಳೂರು: ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಈಗ ಜೈಲಿನಲ್ಲಿ ಹೊಸದೊಂದು...

ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ; ಪ್ರಜ್ವಲ್ ರೇವಣ್ಣಗೆ ಡಿಜಿಪಿ ಅಲೋಕ್ ಕುಮಾರ್ ತರಾಟೆ?

ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ; ಪ್ರಜ್ವಲ್ ರೇವಣ್ಣಗೆ ಡಿಜಿಪಿ ಅಲೋಕ್ ಕುಮಾರ್ ತರಾಟೆ?

by Shwetha
August 18, 2026
0

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಜೈಲು...

ದಿನ ಭವಿಷ್ಯ (12-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (18-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 18, 2026
0

ದಿನ ಭವಿಷ್ಯ: 18-08-2026. ಮೇಷ ರಾಶಿ ರಾಶ್ಯಾಧಿಪತಿಯಾದ ಕುಜನ ದಿನವಾದ್ದರಿಂದ ಇಂದು ನಿಮಗೆ ಅತ್ಯಂತ ಉತ್ಸಾಹದ ದಿನವಾಗಿರುತ್ತದೆ. ವೃತ್ತಿ ಮತ್ತು ಹಣಕಾಸು: ಉದ್ಯೋಗ ಸ್ಥಳದಲ್ಲಿ ನಿಮ್ಮ ನಿರ್ಧಾರಗಳಿಗೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram