ಬೆಂಗಳೂರು: ನಿಮಗೆ ಸಾಲು ಸಾಲು ರಜೆಗಳು ಸಿಕ್ಕಾಗ ಪ್ರವಾಸಕ್ಕೆ ಹೋಗುವ ಅಭ್ಯಾಸ ಇದೆಯಾ? ಹಾಗಾದರೆ ಇಲ್ಲೊಂದು ಸಿಹಿಸುದ್ದಿ ಇದೆ. ಪ್ರಮುಖ ಟ್ರಾವೆಲ್ ಪ್ಲಾಟ್ಫಾರ್ಮ್ ಮೇಕ್ ಮೈ ಟ್ರಿಪ್ ಮತ್ತು ಭಾರತದ ಪ್ರತಿಷ್ಠಿತ ಆಕ್ಸಿಸ್ ಬ್ಯಾಂಕ್ ಒಂದಾಗಿ ಪ್ರವಾಸಿಗರಿಗೆ ಭರ್ಜರಿ ಆಫರ್ಗಳನ್ನು ಘೋಷಿಸಿವೆ.
ಮಾರ್ಚ್ 2027ರವರೆಗೆ ಬರಲಿರುವ ಪ್ರಮುಖ ಸರಣಿ ರಜೆಗಳ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ನೀಡಲು ಈ ಎರಡು ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ.
ಏಕೆ ಈ ಹೊಸ ಆಫರ್?
ಇತ್ತೀಚಿನ ದಿನಗಳಲ್ಲಿ ಜನರು ವರ್ಷಕ್ಕೊಮ್ಮೆ ಮಾತ್ರ ಪ್ರವಾಸ ಮಾಡುವ ಬದಲು ಸರಣಿ ರಜೆಗಳು ಸಿಕ್ಕಾಗಲೆಲ್ಲಾ ಸಣ್ಣ ಪುಟ್ಟ ಟ್ರಿಪ್ಗಳಿಗೆ ಹೋಗುವುದನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಪ್ರವಾಸಿಗರ ಈ ಹೊಸ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು, ಅವರ ಪ್ರವಾಸವನ್ನು ಮತ್ತಷ್ಟು ಲಾಭದಾಯಕವಾಗಿಸಲು ಈ ‘ಲಾಂಗ್ ವೀಕೆಂಡ್’ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಇಲ್ಲಿದೆ ಆಫರ್ನ ಪ್ರಮುಖ ಹೈಲೈಟ್ಸ್
ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಮೇಕ್ ಮೈ ಟ್ರಿಪ್ ಪ್ಲಾಟ್ಫಾರ್ಮ್ನಲ್ಲಿ ಬುಕ್ ಮಾಡುವ ಗ್ರಾಹಕರಿಗೆ ಈ ಕೆಳಗಿನ ರಿಯಾಯಿತಿಗಳು ಲಭ್ಯವಿವೆ.
* ದೇಶೀಯ ವಿಮಾನಯಾನ : ಶೇ. 10ರಷ್ಟು ತಕ್ಷಣದ ರಿಯಾಯಿತಿ (ಗರಿಷ್ಠ 1,800 ರೂ.ವರೆಗೆ).
* ದೇಶೀಯ ಹೋಟೆಲ್ಗಳು : ಶೇ. 15ರಷ್ಟು ತಕ್ಷಣದ ರಿಯಾಯಿತಿ (ಗರಿಷ್ಠ 5,000 ರೂ.ವರೆಗೆ).
* ಹಾಲಿಡೇ ಪ್ಯಾಕೇಜ್ಗಳು : ಮೇಕ್ ಮೈ ಟ್ರಿಪ್ನಲ್ಲಿರುವ ಹಾಲಿಡೇ ಆಫರ್ಗಳ ಜೊತೆಗೆ ಹೆಚ್ಚುವರಿಯಾಗಿ ಶೇ. 5ರಷ್ಟು (ಗರಿಷ್ಠ 20,000 ರೂ.ವರೆಗೆ) ಇನ್ಸ್ಟಂಟ್ ರಿಯಾಯಿತಿ.
ಇಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ವಿಮಾನಗಳು, ಹೋಟೆಲ್ಗಳು, ಬಸ್, ಕ್ಯಾಬ್ ಹಾಗೂ ಪ್ರವಾಸಿ ತಾಣಗಳ ಟಿಕೆಟ್ ಬುಕ್ಕಿಂಗ್ ಮೇಲೂ ಆಕರ್ಷಕ ರಿಯಾಯಿತಿಗಳು ಸಿಗಲಿವೆ.
ಯಾವೆಲ್ಲಾ ಸರಣಿ ರಜೆಗಳಿಗಿದೆ ಈ ಆಫರ್?
ಮುಂದಿನ ದಿನಗಳಲ್ಲಿ ಬರುವ ಈ ಕೆಳಗಿನ ಹಬ್ಬ ಮತ್ತು ರಜೆಗಳಂದು ನೀವು ರಿಯಾಯಿತಿ ದರದಲ್ಲಿ ಪ್ರವಾಸ ಮಾಡಬಹುದು:
* ಗಾಂಧಿ ಜಯಂತಿ: ಅಕ್ಟೋಬರ್ 2 ರಿಂದ 4
* ದಸರಾ: ಅಕ್ಟೋಬರ್ 18 ರಿಂದ 20
* ದೀಪಾವಳಿ: ನವೆಂಬರ್ 7 ರಿಂದ 9
* ಕ್ರಿಸ್ಮಸ್: ಡಿಸೆಂಬರ್ 25 ರಿಂದ 27
* ಹೊಸ ವರ್ಷ: ಜನವರಿ 1 ರಿಂದ 3
* ಗಣರಾಜ್ಯೋತ್ಸವ: ಜನವರಿ 24 ರಿಂದ 26
* ಹೋಳಿ: ಮಾರ್ಚ್ 20 ರಿಂದ 22
* ಗುಡ್ ಫ್ರೈಡೇ: ಮಾರ್ಚ್ 26 ರಿಂದ 28
ಈ ಒಪ್ಪಂದದ ಹಿಂದಿನ ಕಾರಣವನ್ನು ವಿವರಿಸಿರುವ ಮೇಕ್ ಮೈ ಟ್ರಿಪ್ನ ಸಿಒಒ ರಾಜ್ ರಿಷಿ ಸಿಂಗ್, “ಗ್ರಾಹಕರು ಪ್ರವಾಸದ ನಿರ್ಧಾರ ಮಾಡುವ ಸರಿಯಾದ ಸಮಯದಲ್ಲೇ ಅವರಿಗೆ ಉತ್ತಮ ಮೌಲ್ಯವನ್ನು ಒದಗಿಸುವುದು ನಮ್ಮ ಉದ್ದೇಶ. ಆಕ್ಸಿಸ್ ಬ್ಯಾಂಕ್ ಜೊತೆಗಿನ ಈ ಪಾಲುದಾರಿಕೆ ಅದನ್ನೇ ಮಾಡಲಿದೆ,” ಎಂದಿದ್ದಾರೆ.
ಆಕ್ಸಿಸ್ ಬ್ಯಾಂಕ್ನ ಗ್ರೂಪ್ ಹೆಡ್ ವಿನಿತ್ ಬಜಾಜ್ ಅವರು, “ನಮ್ಮ ಗ್ರಾಹಕರು ತಮ್ಮ ಖರ್ಚುಗಳಿಗೆ ತಕ್ಕ ಪ್ರತಿಫಲವನ್ನು ನಿರೀಕ್ಷಿಸುತ್ತಾರೆ. ಸರಣಿ ರಜೆಗಳಲ್ಲಿ ಪ್ರವಾಸ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದ್ದು, ನಮ್ಮ ಕ್ರೆಡಿಟ್ ಕಾರ್ಡ್ದಾರರಿಗೆ ಈ ಆಫರ್ನಿಂದ ಹೆಚ್ಚಿನ ಅನುಕೂಲವಾಗಲಿದೆ,” ಎಂದು ತಿಳಿಸಿದ್ದಾರೆ.
ಆಫರ್ ಪಡೆಯುವುದು ಹೇಗೆ?
ಪ್ರತಿ ಲಾಂಗ್ ವೀಕೆಂಡ್ಗೂ ಮುಂಚಿತವಾಗಿ ಮೇಕ್ ಮೈ ಟ್ರಿಪ್ ಆ್ಯಪ್ ಮತ್ತು ವೆಬ್ಸೈಟ್ನಲ್ಲಿ ಪ್ರತ್ಯೇಕ ಬುಕ್ಕಿಂಗ್ ವಿಂಡೋ ತೆರೆಯಲಾಗುತ್ತದೆ. ಪೇಮೆಂಟ್ ಮಾಡುವಾಗ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಈ ರಿಯಾಯಿತಿಗಳನ್ನು ನಿಮ್ಮದಾಗಿಸಿಕೊಳ್ಳಬಹುದು







