ADVERTISEMENT
Tuesday, August 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಾಲು ಸಾಲು ರಜೆಗಳಲ್ಲಿ ಪ್ರವಾಸಕ್ಕೆ ಹೊರಟವರಿಗೆ ಗುಡ್‌ ನ್ಯೂಸ್‌, ಮೇಕ್ ಮೈ ಟ್ರಿಪ್ – ಆಕ್ಸಿಸ್ ಬ್ಯಾಂಕ್‌ನಿಂದ ಭರ್ಜರಿ ಆಫರ್!

admin by admin
August 25, 2026
in Newsbeat, State, Uncategorized, ರಾಜ್ಯ
saakshatv.com/makemytrip-axis-bank-partner-long-weekend-travel-offers

saakshatv.com/makemytrip-axis-bank-partner-long-weekend-travel-offers

Share on FacebookShare on TwitterShare on WhatsappShare on Telegram

ಬೆಂಗಳೂರು: ನಿಮಗೆ ಸಾಲು ಸಾಲು ರಜೆಗಳು ಸಿಕ್ಕಾಗ ಪ್ರವಾಸಕ್ಕೆ ಹೋಗುವ ಅಭ್ಯಾಸ ಇದೆಯಾ? ಹಾಗಾದರೆ ಇಲ್ಲೊಂದು ಸಿಹಿಸುದ್ದಿ ಇದೆ. ಪ್ರಮುಖ ಟ್ರಾವೆಲ್ ಪ್ಲಾಟ್‌ಫಾರ್ಮ್ ಮೇಕ್ ಮೈ ಟ್ರಿಪ್ ಮತ್ತು ಭಾರತದ ಪ್ರತಿಷ್ಠಿತ ಆಕ್ಸಿಸ್ ಬ್ಯಾಂಕ್ ಒಂದಾಗಿ ಪ್ರವಾಸಿಗರಿಗೆ ಭರ್ಜರಿ ಆಫರ್‌ಗಳನ್ನು ಘೋಷಿಸಿವೆ.

ಮಾರ್ಚ್ 2027ರವರೆಗೆ ಬರಲಿರುವ ಪ್ರಮುಖ ಸರಣಿ ರಜೆಗಳ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ನೀಡಲು ಈ ಎರಡು ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ.

Related posts

indonesia-partners-with-vantara-for-wildlife-health-and-conservation

ಸಂಚಾರಿ ಆಸ್ಪತ್ರೆಗಳ ನಿರ್ಮಾಣ, ಉನ್ನತೀಕರಿಸಿದ ಆನೆ ಆಸ್ಪತ್ರೆ, ತರಬೇತಿ ಕೇಂದ್ರಗಳ ಸ್ಥಾಪನೆ ಇಂಡೋನೇಷ್ಯಾ ಅರಣ್ಯ ಸಚಿವ ರಾಜಾ ಜುಲಿ ಆಂಟೋನಿ ಘೋಷಣೆ

August 25, 2026
swiggy-launches-multilingual-ivr-partner-helpdesk-kannada

ಕನ್ನಡದಲ್ಲೇ ಸಹಾಯವಾಣಿ, ಸ್ವಿಗ್ಗಿಯಿಂದ ಹೋಟೆಲ್ ಮಾಲೀಕರಿಗೆ ಮತ್ತೊಂದು ಮಹತ್ವದ ಸೇವೆ ಆರಂಭ

August 25, 2026

ಏಕೆ ಈ ಹೊಸ ಆಫರ್?

ಇತ್ತೀಚಿನ ದಿನಗಳಲ್ಲಿ ಜನರು ವರ್ಷಕ್ಕೊಮ್ಮೆ ಮಾತ್ರ ಪ್ರವಾಸ ಮಾಡುವ ಬದಲು ಸರಣಿ ರಜೆಗಳು ಸಿಕ್ಕಾಗಲೆಲ್ಲಾ ಸಣ್ಣ ಪುಟ್ಟ ಟ್ರಿಪ್‌ಗಳಿಗೆ ಹೋಗುವುದನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಪ್ರವಾಸಿಗರ ಈ ಹೊಸ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು, ಅವರ ಪ್ರವಾಸವನ್ನು ಮತ್ತಷ್ಟು ಲಾಭದಾಯಕವಾಗಿಸಲು ಈ ‘ಲಾಂಗ್ ವೀಕೆಂಡ್’ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಇಲ್ಲಿದೆ ಆಫರ್‌ನ ಪ್ರಮುಖ ಹೈಲೈಟ್ಸ್

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಮೇಕ್ ಮೈ ಟ್ರಿಪ್ ಪ್ಲಾಟ್‌ಫಾರ್ಮ್‌ನಲ್ಲಿ ಬುಕ್ ಮಾಡುವ ಗ್ರಾಹಕರಿಗೆ ಈ ಕೆಳಗಿನ ರಿಯಾಯಿತಿಗಳು ಲಭ್ಯವಿವೆ.

* ದೇಶೀಯ ವಿಮಾನಯಾನ : ಶೇ. 10ರಷ್ಟು ತಕ್ಷಣದ ರಿಯಾಯಿತಿ (ಗರಿಷ್ಠ 1,800 ರೂ.ವರೆಗೆ).
* ದೇಶೀಯ ಹೋಟೆಲ್‌ಗಳು : ಶೇ. 15ರಷ್ಟು ತಕ್ಷಣದ ರಿಯಾಯಿತಿ (ಗರಿಷ್ಠ 5,000 ರೂ.ವರೆಗೆ).
* ಹಾಲಿಡೇ ಪ್ಯಾಕೇಜ್‌ಗಳು : ಮೇಕ್ ಮೈ ಟ್ರಿಪ್‌ನಲ್ಲಿರುವ ಹಾಲಿಡೇ ಆಫರ್‌ಗಳ ಜೊತೆಗೆ ಹೆಚ್ಚುವರಿಯಾಗಿ ಶೇ. 5ರಷ್ಟು (ಗರಿಷ್ಠ 20,000 ರೂ.ವರೆಗೆ) ಇನ್‌ಸ್ಟಂಟ್ ರಿಯಾಯಿತಿ.

ಇಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ವಿಮಾನಗಳು, ಹೋಟೆಲ್‌ಗಳು, ಬಸ್, ಕ್ಯಾಬ್ ಹಾಗೂ ಪ್ರವಾಸಿ ತಾಣಗಳ ಟಿಕೆಟ್ ಬುಕ್ಕಿಂಗ್ ಮೇಲೂ ಆಕರ್ಷಕ ರಿಯಾಯಿತಿಗಳು ಸಿಗಲಿವೆ.

ಯಾವೆಲ್ಲಾ ಸರಣಿ ರಜೆಗಳಿಗಿದೆ ಈ ಆಫರ್?

ಮುಂದಿನ ದಿನಗಳಲ್ಲಿ ಬರುವ ಈ ಕೆಳಗಿನ ಹಬ್ಬ ಮತ್ತು ರಜೆಗಳಂದು ನೀವು ರಿಯಾಯಿತಿ ದರದಲ್ಲಿ ಪ್ರವಾಸ ಮಾಡಬಹುದು:
* ಗಾಂಧಿ ಜಯಂತಿ: ಅಕ್ಟೋಬರ್ 2 ರಿಂದ 4
* ದಸರಾ: ಅಕ್ಟೋಬರ್ 18 ರಿಂದ 20
* ದೀಪಾವಳಿ: ನವೆಂಬರ್ 7 ರಿಂದ 9
* ಕ್ರಿಸ್‌ಮಸ್: ಡಿಸೆಂಬರ್ 25 ರಿಂದ 27
* ಹೊಸ ವರ್ಷ: ಜನವರಿ 1 ರಿಂದ 3
* ಗಣರಾಜ್ಯೋತ್ಸವ: ಜನವರಿ 24 ರಿಂದ 26
* ಹೋಳಿ: ಮಾರ್ಚ್ 20 ರಿಂದ 22
* ಗುಡ್ ಫ್ರೈಡೇ: ಮಾರ್ಚ್ 26 ರಿಂದ 28

ಈ ಒಪ್ಪಂದದ ಹಿಂದಿನ ಕಾರಣವನ್ನು ವಿವರಿಸಿರುವ ಮೇಕ್ ಮೈ ಟ್ರಿಪ್‌ನ ಸಿಒಒ ರಾಜ್ ರಿಷಿ ಸಿಂಗ್, “ಗ್ರಾಹಕರು ಪ್ರವಾಸದ ನಿರ್ಧಾರ ಮಾಡುವ ಸರಿಯಾದ ಸಮಯದಲ್ಲೇ ಅವರಿಗೆ ಉತ್ತಮ ಮೌಲ್ಯವನ್ನು ಒದಗಿಸುವುದು ನಮ್ಮ ಉದ್ದೇಶ. ಆಕ್ಸಿಸ್ ಬ್ಯಾಂಕ್ ಜೊತೆಗಿನ ಈ ಪಾಲುದಾರಿಕೆ ಅದನ್ನೇ ಮಾಡಲಿದೆ,” ಎಂದಿದ್ದಾರೆ.

ಆಕ್ಸಿಸ್ ಬ್ಯಾಂಕ್‌ನ ಗ್ರೂಪ್ ಹೆಡ್ ವಿನಿತ್ ಬಜಾಜ್ ಅವರು, “ನಮ್ಮ ಗ್ರಾಹಕರು ತಮ್ಮ ಖರ್ಚುಗಳಿಗೆ ತಕ್ಕ ಪ್ರತಿಫಲವನ್ನು ನಿರೀಕ್ಷಿಸುತ್ತಾರೆ. ಸರಣಿ ರಜೆಗಳಲ್ಲಿ ಪ್ರವಾಸ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದ್ದು, ನಮ್ಮ ಕ್ರೆಡಿಟ್ ಕಾರ್ಡ್‌ದಾರರಿಗೆ ಈ ಆಫರ್‌ನಿಂದ ಹೆಚ್ಚಿನ ಅನುಕೂಲವಾಗಲಿದೆ,” ಎಂದು ತಿಳಿಸಿದ್ದಾರೆ.

ಆಫರ್ ಪಡೆಯುವುದು ಹೇಗೆ?

ಪ್ರತಿ ಲಾಂಗ್ ವೀಕೆಂಡ್‌ಗೂ ಮುಂಚಿತವಾಗಿ ಮೇಕ್ ಮೈ ಟ್ರಿಪ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ಬುಕ್ಕಿಂಗ್ ವಿಂಡೋ ತೆರೆಯಲಾಗುತ್ತದೆ. ಪೇಮೆಂಟ್ ಮಾಡುವಾಗ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಈ ರಿಯಾಯಿತಿಗಳನ್ನು ನಿಮ್ಮದಾಗಿಸಿಕೊಳ್ಳಬಹುದು

Tags: #MakeMyTrip #AxisBank #TravelOffers #LongWeekend #HolidayDeals #SaakshaTV
ShareTweetSendShare
Join us on:

Related Posts

indonesia-partners-with-vantara-for-wildlife-health-and-conservation

ಸಂಚಾರಿ ಆಸ್ಪತ್ರೆಗಳ ನಿರ್ಮಾಣ, ಉನ್ನತೀಕರಿಸಿದ ಆನೆ ಆಸ್ಪತ್ರೆ, ತರಬೇತಿ ಕೇಂದ್ರಗಳ ಸ್ಥಾಪನೆ ಇಂಡೋನೇಷ್ಯಾ ಅರಣ್ಯ ಸಚಿವ ರಾಜಾ ಜುಲಿ ಆಂಟೋನಿ ಘೋಷಣೆ

by admin
August 25, 2026
0

  ಜಕಾರ್ತಾ, 2026: ವಂತರಾ ಸಂಸ್ಥೆಯ ಸಹಯೋಗದೊಂದಿಗೆ  ವನ್ಯಜೀವಿಗಳ ಆರೋಗ್ಯ ಮತ್ತು ಸ್ಥಳದಲ್ಲೇ  ಸಂರಕ್ಷಣಾ ಉಪಕ್ರಮಗಳನ್ನು ಆರಂಭಿಸುವುದಾಗಿ ಇಂಡೋನೇಷ್ಯಾದ ಅರಣ್ಯ ಸಚಿವ ರಾಜಾ ಜುಲಿ ಆಂಟೋನಿ ಘೋಷಿಸಿದ್ದಾರೆ. ಆರಂಭಿಕ ಹಂತದಲ್ಲಿ ಸಾಮರ್ಥ್ಯ ವೃದ್ಧಿ ತರಬೇತಿಗಳು,  ಸಂಚಾರಿ ಆಸ್ಪತ್ರೆಗಳು ಮತ್ತು ಉನ್ನತೀಕರಿಸಲಾದ ವೇ ಕಂಬಾಸ್ ಆನೆ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಇಂಡೋನೇಷ್ಯಾದ ಅರಣ್ಯ ಸಚಿವರಾದ ರಾಜಾ ಜುಲಿ ಆಂಟೋನಿ ಅವರು ಜಕಾರ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಇಂಡೋನೇಷ್ಯಾದ ವನ್ಯಜೀವಿ ಆರೋಗ್ಯ ಮತ್ತು ಸ್ಥಳದಲ್ಲೇ ಸಂರಕ್ಷಣಾ ಪ್ರಯತ್ನಗಳ ಪ್ರಮುಖ ವಿಸ್ತರಣೆಯನ್ನು ಇಂದು ಅಧಿಕೃತವಾಗಿ ಘೋಷಿಸಿದರು. ಈ ಕಾರ್ಯಕ್ರಮಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಂತ್ ಅಂಬಾನಿ ಅವರು ಸ್ಥಾಪಿಸಿರುವ ವಿಶ್ವದ ಬೃಹತ್ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ 'ವಂತರಾ' ಹಾಗೂ ಇಂಡೋನೇಷ್ಯಾದ ಹೆಸರಾಂತ ವನ್ಯಜೀವಿ ಸಂಸ್ಥೆಯಾದ 'ಪಿಟಿ ಫೌನಾ ಲ್ಯಾಂಡ್ ಗ್ರೂಪ್'  ಸಹಯೋಗ ನೀಡುತ್ತಿವೆ ಎಂದರು. ಸಚಿವ ರಾಜಾ ಜುಲಿ ಆಂಟೋನಿ ಮಾತನಾಡುತ್ತಾ, “ವನ್ಯಜೀವಿ ಸಂರಕ್ಷಣೆ ಎಂಬುದು ಅಂತಿಮವಾಗಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ವನ್ಯಜೀವಿಗಳಿಗೆ ಯಾವಾಗ ಮತ್ತು ಎಲ್ಲೇ ಅಗತ್ಯವಿದ್ದರೂ ಅವುಗಳನ್ನು ನೋಡಿಕೊಳ್ಳಲು ಅಗತ್ಯವಿರುವ ಸೌಲಭ್ಯಗಳು, ಪರಿಣತಿ ಮತ್ತು ಸಂಪನ್ಮೂಲಗಳು ಇಂಡೋನೇಷ್ಯಾದಲ್ಲಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಈ ಪಾಲುದಾರಿಕೆಯ ಮೂಲಕ ನಮ್ಮ ಸ್ವಂತ ವನ್ಯಜೀವಿ ಆರೋಗ್ಯ ಮತ್ತು ಸಂರಕ್ಷಣಾ ಮೂಲಸೌಕರ್ಯವನ್ನು ನಾವು ಬಲಪಡಿಸುತ್ತಿದ್ದೇವೆ. ವಂತರಾ ತನ್ನ ಅನುಭವ, ಪರಿಣತಿ ಮತ್ತು ಸಂಪನ್ಮೂಲಗಳ ಮೂಲಕ ನಮಗೆ ಬೆಂಬಲ ನೀಡುತ್ತಿದೆ. ಈ ಸಹಕಾರದಡಿಯಲ್ಲಿ ಬರುವ ಎಲ್ಲಾ ಸೌಲಭ್ಯಗಳು ಮತ್ತು ಕಾರ್ಯಕ್ರಮಗಳನ್ನು ಇಂಡೋನೇಷ್ಯಾ ಸರ್ಕಾರದ ಹಾಗೂ ಸಂಬಂಧಿತ ಪ್ರಾಧಿಕಾರಗಳೇ ಸ್ವಂತವಾಗಿ ಹೊಂದಿದ್ದು, ನಿರ್ವಹಿಸಿ ಮುನ್ನಡೆಸಲಿವೆ. ಇದು ಮುಂಬರುವ ಪೀಳಿಗೆಗಳಿಗಾಗಿ ಇಂಡೋನೇಷ್ಯಾದ ಸಂರಕ್ಷಣಾ ಪ್ರಾಮುಖ್ಯತೆಗಳು ಮತ್ತು ನಮ್ಮ ವನ್ಯಜೀವಿಗಳ ಸೇವೆಗೆ ಮೀಸಲಿರುವುದನ್ನು ಇದು ಖಚಿತಪಡಿಸುತ್ತದೆ” ಎಂದರು. ವಂತರಾದ ಸಿಇಒ ವಿವಾನ್ ಕರಾನಿ ಮಾತನಾಡಿ, “ಇಂಡೋನೇಷ್ಯಾ ಸರ್ಕಾರದೊಂದಿಗೆ ಕೆಲಸ ಮಾಡಲು ಮತ್ತು ದೇಶದ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳಿಗೆ ಕೊಡುಗೆ ನೀಡಲು ನಮಗೆ ಸಿಕ್ಕಿರುವ ಈ ಅವಕಾಶ ಹಾಗೂ ವಿಶ್ವಾಸಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಇಂಡೋನೇಷ್ಯಾವು ವಿಶ್ವದ ಅತ್ಯಂತ ಅಸಾಧಾರಣ ಜೀವವೈವಿಧ್ಯತೆಯನ್ನು ಹೊಂದಿರುವ ನಾಡಾಗಿದೆ. ಈ ಪ್ರಾಕೃತಿಕ ಪರಂಪರೆಯನ್ನು ಭವಿಷ್ಯದ ಪೀಳಿಗೆಗಾಗಿ ರಕ್ಷಿಸುವಲ್ಲಿ ಇಂಡೋನೇಷ್ಯಾಕ್ಕೆ ಬೆಂಬಲ ನೀಡುವುದು ವಂತರಾಗೆ ದೊರೆತ ಸೌಭಾಗ್ಯವಾಗಿದೆ. ವಂತರಾ ಸಂಸ್ಥೆಯು ವನ್ಯಜೀವಿ ಆರೋಗ್ಯ, ಪಶುವೈದ್ಯಕೀಯ ಆರೈಕೆ, ಪ್ರಾಣಿ ಸಾಕಣೆ ಮತ್ತು ಸಂರಕ್ಷಣೆ ಕ್ಷೇತ್ರಗಳಲ್ಲಿ ಆಳವಾದ ಪರಿಣತಿಯನ್ನು ಅಭಿವೃದ್ಧಿಪಡಿಸಿದ್ದು, ಆ ಅನುಭವವನ್ನು ಇಂಡೋನೇಷ್ಯಾ ಜೊತೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಅಲ್ಲದೆ, ಈ ದೇಶದ ದೀರ್ಘಕಾಲದ ಸಂರಕ್ಷಣಾ ಅನುಭವದಿಂದ ಕಲಿಯಲು ನಾವು ಎದುರು ನೋಡುತ್ತಿದ್ದೇವೆ. ಅತ್ಯಂತ ಮುಖ್ಯವಾಗಿ, ಈ ಪಾಲುದಾರಿಕೆಯು ವನ್ಯಜೀವಿಗಳಿಗೆ ಪ್ರಾಯೋಗಿಕ ಹಾಗೂ ಶಾಶ್ವತವಾದ ಪ್ರಯೋಜನವನ್ನು ತಂದುಕೊಡಬೇಕೆಂಬುದು ನಮ್ಮ ಆಶಯವಾಗಿದೆ” ಎಂದು ತಿಳಿಸಿದರು. ಫೌನಾ ಲ್ಯಾಂಡ್‌ನ ಸಿಇಒ ಡ್ಯಾನಿ ಗುನಾಲನ್ ಮಾತನಾಡಿ, “ಇಂಡೋನೇಷ್ಯಾದಲ್ಲಿ ಅಸಾಧಾರಣ ವನ್ಯಜೀವಿ ಮತ್ತು ಜೀವವೈವಿಧ್ಯತೆಯ ಸಂಪತ್ತಿದೆ. ಈ ಪ್ರಾಕೃತಿಕ ಪರಂಪರೆಯನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂಡೋನೇಷ್ಯಾ ಸರ್ಕಾರ ಮತ್ತು ವಂತರಾದೊಂದಿಗೆ ಜತೆಗೂಡಿ ಕೆಲಸ ಮಾಡಲು ನಾವು ಹರ್ಷಿಸುತ್ತೇವೆ. ನಮ್ಮೆಲ್ಲರ ಅನುಭವ ಮತ್ತು ಪರಿಣತಿಯನ್ನು ಒಟ್ಟುಗೂಡಿಸಿ ದೇಶಾದ್ಯಂತ ವನ್ಯಜೀವಿಗಳ ಆರೋಗ್ಯ ಹಾಗೂ ಆರೈಕೆಯನ್ನು ಬಲಪಡಿಸಲು ಇದು ಸಹಕಾರಿಯಾಗಿದೆ. ಈ ಪಾಲುದಾರಿಕೆಯು ಸ್ಥಳೀಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ವನ್ಯಜೀವಿಗಳಿಗೆ ಲಭ್ಯವಿರುವ ಮೂಲಸೌಕರ್ಯವನ್ನು ಬಲಪಡಿಸುತ್ತದೆ ಮತ್ತು ಅತ್ಯಂತ ಮುಖ್ಯವಾಗಿ ಪ್ರಾಣಿಗಳಿಗೆ ಹಾಗೂ ಅವುಗಳನ್ನು ರಕ್ಷಿಸಲು ಶ್ರಮಿಸುತ್ತಿರುವ ಜನರಿಗೆ ನಿಜವಾದ ಹಾಗೂ ಶಾಶ್ವತವಾದ ವ್ಯತ್ಯಾಸವನ್ನು ತರುತ್ತದೆ ಎಂದು ನಾವು ನಂಬುತ್ತೇವೆ” ಎಂದರು. ಈ ಕಾರ್ಯಕ್ರಮವು ಇಂಡೋನೇಷ್ಯಾದ ವನ್ಯಜೀವಿ ಆರೋಗ್ಯ ಮೂಲಸೌಕರ್ಯ ಮತ್ತು ಕ್ಷೇತ್ರ ಸಾಮರ್ಥ್ಯಗಳನ್ನು ಬಲಪಡಿಸಲಿದ್ದು, ಇಂಡೋನೇಷ್ಯಾದ ಪ್ರಾಧಿಕಾರಗಳ ನೇತೃತ್ವದ ಕಾರ್ಯಕ್ರಮಗಳಿಗೆ ವಂತರಾ ವಿಶೇಷ ಪಶುವೈದ್ಯಕೀಯ ಪರಿಣತಿ, ತಾಂತ್ರಿಕ ಬೆಂಬಲ, ಮೂಲಸೌಕರ್ಯ ನೆರವು ಮತ್ತು ಸಾಮರ್ಥ್ಯ ವೃದ್ಧಿ ತರಬೇತಿಗಳನ್ನು ಒದಗಿಸಲಿದೆ. ಘೋಷಿಸಲಾದ  ಉಪಕ್ರಮಗಳು: ಆನೆ ಪಾಲಕರು, ಪಶುವೈದ್ಯರು ಮತ್ತು ಇಂಡೋನೇಷ್ಯಾದಲ್ಲಿ ವನ್ಯಜೀವಿ ನಿರ್ವಹಣೆಯಲ್ಲಿ ತೊಡಗಿರುವ ಇತರ ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ ತರಬೇತಿಗಳು. ಇಂಡೋನೇಷ್ಯಾಾದಾದ್ಯಂತ ಕಾಡುಪ್ರಾಣಿಗಳ ಅಗತ್ಯಗಳನ್ನು ಸ್ಥಳದಲ್ಲೇ  ಪೂರೈಸಲು " 10 ಸಂಚಾರಿ  ಆಸ್ಪತ್ರೆಗಳು'. ವೇ ಕಂಬಾಸ್ ಆನೆ ಆಸ್ಪತ್ರೆಯನ್ನು ಅತ್ಯಾಧುನಿಕ ಉಪಕರಣಗಳು, ಸಲಕರಣೆಗಳು ಮತ್ತು ತಂತ್ರಜ್ಞಾನಗಳೊಂದಿಗೆ 'ಆನೆ ಚಿಕಿತ್ಸಾ ಮತ್ತು ಆರೈಕೆ ಕೇಂದ್ರ'ವಾಗಿ  ಉನ್ನತೀಕರಿಸುವುದು. ಈ ನವೀಕರಿಸಿದ ಆಸ್ಪತ್ರೆಯು ಮಾನವನ ಆರೈಕೆಯಲ್ಲಿರುವ 62 ಸುಮಾತ್ರ ಆನೆಗಳಿಗೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸುಮಾರು 100 ಕಾಡು ಸುಮಾತ್ರಾ ಆನೆಗಳಿಗೆ ರಕ್ಷಣೆ ನೀಡಲಿದೆ. ಈ ಉಪಕ್ರಮಗಳು ಇಂಡೋನೇಷ್ಯಾ ಸರ್ಕಾರ ಮತ್ತು ವಂತರಾ ನಡುವಿನ  ವಿಶಾಲ ಸಹಕಾರ ಒಪ್ಪಂದದ ಒಂದು ಭಾಗವಾಗಿದ್ದು, ಇದು ವನ್ಯಜೀವಿ ಆರೋಗ್ಯ, ಪ್ರಾಣಿ ಕಲ್ಯಾಣ ಮತ್ತು ಸಂರಕ್ಷಣೆಯಾದ್ಯಂತ ಸಹಕಾರಕ್ಕೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಈ ಒಡಂಬಡಿಕೆಯಡಿಯಲ್ಲಿ, ಇಂಡೋನೇಷ್ಯಾದ ರಾಷ್ಟ್ರೀಯ ಸಂರಕ್ಷಣಾ ಪ್ರಾಮುಖ್ಯತೆಗಳಿಗೆ ಅನುಗುಣವಾಗಿ ಉಭಯ ಪಕ್ಷಗಳು ಸಹಕಾರದ ಪ್ರಾಥಮಿಕ ಕ್ಷೇತ್ರಗಳನ್ನು ಗುರುತಿಸಿವೆ. ವಂತರಾ ತನ್ನ ಪಶುವೈದ್ಯಕೀಯ, ಪ್ರಾಣಿ ಆರೈಕೆ ಮತ್ತು ಸಂರಕ್ಷಣಾ ಪರಿಣತಿ, ತಾಂತ್ರಿಕ ಸಾಮರ್ಥ್ಯಗಳು, ಮೂಲಸೌಕರ್ಯ ಬೆಂಬಲ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಕೊಡುಗೆಯಾಗಿ ನೀಡಲಿದ್ದು, ಇಂಡೋನೇಷ್ಯಾ ಸರ್ಕಾರ, ಸಂಬಂಧಿತ ರಾಷ್ಟ್ರೀಯ ಸಂಸ್ಥೆಗಳು ಮತ್ತು ಫೌನಾ ಲ್ಯಾಂಡ್‌ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದೆ.

swiggy-launches-multilingual-ivr-partner-helpdesk-kannada

ಕನ್ನಡದಲ್ಲೇ ಸಹಾಯವಾಣಿ, ಸ್ವಿಗ್ಗಿಯಿಂದ ಹೋಟೆಲ್ ಮಾಲೀಕರಿಗೆ ಮತ್ತೊಂದು ಮಹತ್ವದ ಸೇವೆ ಆರಂಭ

by admin
August 25, 2026
0

ಬೆಂಗಳೂರು: ಭಾರತದ ಜನಪ್ರಿಯ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ಜೊತೆ ಕೈಜೋಡಿಸಿರುವ ರೆಸ್ಟೋರೆಂಟ್ ಪಾಲುದಾರರ ಅನುಕೂಲಕ್ಕಾಗಿ ಹೊಸದೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಹೋಟೆಲ್ ಮಾಲೀಕರ ಸಮಸ್ಯೆಗಳಿಗೆ...

raksha-bandhan-2026-premium-silver-rakhi-sales-surge-instamart

ರಕ್ಷಾಬಂಧನ 2026: ಪ್ರೀಮಿಯಂ, ಬೆಳ್ಳಿ ರಾಖಿಗಳಿಗೆ ಮುಗಿಬಿದ್ದ ಜನ; ಮಾರಾಟ ಬರೋಬ್ಬರಿ 20 ಪಟ್ಟು ಏರಿಕೆ!

by admin
August 25, 2026
0

ರಕ್ಷಾಬಂಧನ 2026: ಪ್ರೀಮಿಯಂ, ಬೆಳ್ಳಿ ರಾಖಿಗಳಿಗೆ ಮುಗಿಬಿದ್ದ ಜನ; ಮಾರಾಟ ಬರೋಬ್ಬರಿ 20 ಪಟ್ಟು ಏರಿಕೆ! ಬೆಂಗಳೂರು: ರಕ್ಷಾಬಂಧನ ಹಬ್ಬ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಶುರುವಾಗಿದೆ....

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

by Shwetha
August 25, 2026
0

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ. ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್‌ನಲ್ಲಿ SIR-2026,...

ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

by Shwetha
August 25, 2026
0

ಹಾಸನ: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರ ಆಡಳಿತ ವೈಖರಿ ಮತ್ತು ನಡವಳಿಕೆ ವಿರುದ್ಧ ಮಾಜಿ ಸಚಿವ ಹಾಗೂ ಹಾಸನ ಶಾಸಕ ಹೆಚ್.ಡಿ. ರೇವಣ್ಣ ಅವರು ಯುದ್ಧ ಸಾರಿದ್ದಾರೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram