ರಾಧೆಯ ಜೊತೆಗೆ ಗೋಪಿಕೆಯರ ಹೃದಯ ಕದ್ದ ತುಂಟ ಕಳ್ಳ, ಕೊಳಲನ್ನ ಊದುತ್ತಾ ಬೃಂದಾವನವನ್ನೇ ತನ್ನ ಮೋಹಕ ನಗುವಿನಿಂದ ಗೆದ್ದ ಯಶೋಧಾ ಪುತ್ರ, ಅಧರ್ಮಿ ಕಂಸನ ವಧೆಗಾಗಿ ದೇವಕಿಯ ೮ನೇ ಪುತ್ರನಾಗಿ ಭೂಲೋಕತದಲ್ಲಿ ಅವತರಿಸಿದ ಸಾಕ್ಷಾತ್ ವಿಷ್ಣವಿನ ಅವತಾರವೇ ದ್ವಾರಕಾಧೀಶ ಶ್ರೀ ಕೃಷ್ಣ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧೆಕೃಷ್ಣ ಧಾರವಾಹಿಯಲ್ಲಿ ಕೃಷ್ಣನಾಗಿ ಮೋಡಿ ಮಾಡುತ್ತಿರುವ ರಾಧೆಯ ಮನದರಸ ಈ ಕಳ್ಳ ಕೃಷ್ಣನ ನಗುವಿಗೆ ಸೋಲದ ಮನಸಿಲ್ಲ. ಇಂತಹ ಶ್ರೀಕೃಷ್ಣನ ಪಾತ್ರಕ್ಕೆ ಜೀವ ತುಂಬಿ ಜನರ ಮನದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಗೋಪಿಕೆಯರ ಲೋಲ ಶ್ರೀ ಕೃಷ್ಣನ ನಿಜವಾದ ಹೆಸರು, ಇವರ LIFESTYLE ಇದೆಲ್ಲಾ ತಿಳಿದುಕೊಳ್ಳುವ ಕ್ಯೂರಿಯಾಸಿಟಿ ಎಲ್ಲರಿಗೂ ಇದ್ದೇ ಇರುತ್ತೆ.
ಬಾಲ್ಯ ಮತ್ತು ವಿದ್ಯಾಭ್ಯಾಸ
ಶ್ರೀಕೃಷ್ಣನಾಗಿ ಮಿಂಚುತ್ತಿರುವ ಕನ್ಹಯ್ಯನ ನಿಜವಾದ ಹೆಸರು ಸುಮೇಧ್ ಮುದಗಳ್ಕರ್ ..!
ಸುಮೇಧ್ ಅವರ ನಿಕ್ ನೇಮ್ : ಸುಮಾ, ಬೀಟ್ ಕಿಂಗ್
ಮೂಲತಹ ಮಹಾರಾಷ್ಟ್ರದವಾರದ ಸುಮೇಧ್ ಅವರು ಜನಿಸಿದ್ದು ನವೆಂಬರ್ -2-1996ರಲ್ಲಿ.
ಇವರ ತಂದೆ ವಸುದೇವ ಮುದಗಳ್ಕರ್ , ತಾಯಿ ವಸಂತಿ ಮುದಗಳ್ಕರ್
ಸಹೋದರರು : ಸಾಂಕೇತ್ ಮುದಗಳ್ಕರ್, ಸಮೀರನ್ ಮುದಗಳ್ಕರ್
ಮಹಾರಾಷ್ಟ್ರ ಇನ್ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ ಪುಣೆಯಲ್ಲಿ ಪದವಿ ಪಡೆದುಕೊಂಡಿದ್ದಾರೆ.
ಕೆರಿಯರ್
ಬೇಸಿಕಲಿ ಡ್ಯಾನ್ಸರ್ ಆಗಿರುವ ಸುಮೇಧ್ ಬಾಲ್ಯದಿಂದಲೇ ತಮ್ಮ ಡ್ಯಾನ್ಸ್ ಟಾಲೆಂಟ್ ನಿಂದ ಪ್ರಸಿದ್ಧಿ ಪಡೆದಿದ್ದರು. 2013ರಲ್ಲಿ ಡ್ಯಾನ್ಸ್ ಮಹಾರಾಷ್ಟ್ರ ಡ್ಯಾನ್ಸ್ ಶೋನಲ್ಲಿ ಸುಮೇಧ್ ಭಾಗವಹಿಸಿದ್ದರು. 2014ರಲ್ಲಿ ದಿಲ್ ದೋಸ್ತಿ ಡ್ಯಾನ್ಸ್ ನ ಟಿವಿ ಶೋ ಮೂಲಕ ಕಿರುತೆಗೆ ಮೊದಲ ಬಾರಿಗೆ ಎಂಟ್ರಿಕೊಟ್ರು. 2015ರಿಂದ 2016ರವರೆಗೂ ಚಕ್ರವರ್ತಿ ಅಶೋಕ ಸಾಮ್ರಾಟ್ ನಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡ ಸುಮೇಧ್ ಇದಾದ ಬಳಿಕ 2018ರಲ್ಲಿ ಪ್ರಾರಂಭವಾದ ರಾಧಾಕೃಷ್ಣ ಧಾರವಾಹಿಯಲ್ಲಿ ಕೃಷ್ಣನಾಗಿ ಮಿಂಚುತಿದ್ದು, ಅತ್ಯಂತ ಜನಪ್ರಿಯ ಪಡೆದು ಎಲ್ಲರ ಮನೆಮಾತಾಗಿದ್ದಾರೆ. ತಮ್ಮ ತುಂಟಾಟ, ರಾಧಾ ಜೊತೆಗಿನ ಕಿತ್ತಾಟ ಜನರ ಮನಗೆದ್ದಿದೆ ಎನ್ನುವುದರಲ್ಲಿ ಡೌಟೇ ಇಲ್ಲ. ಪ್ರಸ್ತುತ ಹಿರಿಯರಿಂದ ಕಿರಿಯವರೆಗೂ ರಾಧಾಕೃಷ್ಣ ಎಲ್ಲರ ಫೇವರೇಟ್ ಆಗಿದೆ. ರಾಧಾ ಕೃಷ್ಣರ ಪ್ರೇಮಗಾಥೆ ಸೂರ್ಯ ಚಂದ್ರರಿರುವವರೆಗೂ ಎಲ್ಲರಿಗೂ ಮಾದರಿಯಾಗಿ ಉಳಿದಿದೆ. ಇದರ ಹೊರತಾಗಿ ನಚ್ ಬಲಿಯೇ ಅಲ್ಲಿ ವಿಶೇಷ ಸಂಚಿಕೆಯೊಂದರಲ್ಲಿ ಕೃಷ್ಣನಾಗಿ ಕಾಣಿಸಿಕೊಂಡು ಕಾರ್ಯಕ್ರಮಕ್ಕೆ ಜೀವಕಳೆ ತುಂಬಿದ್ದರು.
ಕಿರುತೆರೆಯಲ್ಲಿ ಭಾರೀ ಸಕ್ಸಸ್ ಕಂಡಿರುವ ಸುಮೇಧ್ ಕೆಲ ಮರಾಠಿ ಸಿನೆಮಾಗಳಲ್ಲೂ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದಾರೆ. ವೆಂಟಿಲೇಟರ್, ಮಂಝಾ, ಬಕೆಟ್ ಲಿಸ್ಟ್ ನಂತಹ ಚಿತ್ರಗಳಲ್ಲೂ ಮುಖ್ಯಭೂಮಿಕೆ ನಿಭಾಯಿಸಿ ಪ್ರಸಿದ್ಧಿ ಪಡೆದಿದ್ದಾರೆ.
ಅವಾರ್ಡ್ಸ್ ಅಂಡ್ ನಾಮಿನೇಷನ್
ಜನರ ಫೇವರೇಟ್ ON SCREEN ಕಪಲ್ ಆಗಿರುವ ರಾಧಾಕೃಷ್ಣ ಇದೇ ಕ್ಯಾಟಗರಿಯಲ್ಲೇ 2018ರಲ್ಲಿ ಇಂಡಿಯನ್ ಟೆಲಿ ಅವಾರ್ಡ್ ಗೆ ಹಕ್ಕುದಾರರಾಗಿದ್ರು. ತನ್ನ ಕೃಷ್ಣನ ಪಾತ್ರಕ್ಕೆ ಮತ್ತೆ 2019ರಲ್ಲಿ ಗೋಲ್ಡ್ ಅವಾರ್ಡ್ಸ್ನಲ್ಲಿ ಬೆಸ್ಟ್ ಆಕ್ಟರ್ ಡೆಬ್ಯೂಟ್ ಪ್ರಶಸ್ತಿ ಪಡೆದರು. ಅದೇ ವರ್ಷದಲ್ಲೇ ಆಶಿಯನ್ ಅಕಾಡೆಮಿ ಕ್ರಿಯೇಟಿವ್ ಈವೆಂಟ್ ನಲ್ಲಿ ಕೃಷ್ಣನ ಪಾತ್ರಕ್ಕೆ ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದರು. ಇದಷ್ಟೇ ಅಲ್ಲದೇ ರಾದಾಕೃಷ್ಣದಲ್ಲಿ ಜೋಡಿಯಾಗಿ ಮೊಡಿ ಮಾಡಿರುವ ಈ ಜೋಡಿಗೆ ಮೋಸ್ಟ್ ಪಾಪ್ಯುಲರ್ ಜೋಡಿ ಅವಾರ್ಡ್ ಸಹ ಒಲಿದು ಬಂದಿತ್ತು. 
ರೇಡಿಯೋ ಚಿಟಿ ಸಿನೆ ಅವಾರ್ಡ್ಸ್ನಲ್ಲಿ ಸುಮೇಧ್ ೩ ಪ್ರಶಸ್ತಿಗಳನ್ನ ಗೆದ್ದಿದ್ದಾರೆ. ಬೆಸ್ಟ್ ಆಕ್ಟರ್, ಬೆಸ್ಟ್ ಮೇಲ್ ಡೆಬ್ಯೂಟ್ ಹಾಗೂ ಬೆಸ್ಟ್ ವಿಲನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 2017ರಲ್ಲಿ ಮಾಂಝಾದ ತಮ್ಮ ಅಭಿನಯಕ್ಕಾಗಿ ಸುಮೇಧ್ ಫೇವರೇಟ್ ಡೆಬ್ಯೂಟ್ ಆಕ್ಟರ್ ಅವಾರ್ಡ್ಗೆ ನಾಮಿನೇಟ್ ಆಗಿದ್ದರು. ಇದಲ್ಲದೆ 2018ರಲ್ಲಿ ಸಂಸ್ಕೃತಿ ಕಲಾರ‍್ಪದಲ್ಲಿ ಮಾಂಝಾ ಚಿತ್ರಕ್ಕೆ ಬೆಸ್ಟ್ ಆಕ್ಟರ್ ಅವಾರ್ಡ್ ಗೆ ಮತ್ತೆ ನಾಮಿನೇಟ್ ಆಗಿದ್ರು. ಎಬಿಪಿ ಟಿಲಿವಿಷನ್ ಈವೆಂಟ್ ನಲ್ಲಿ ಪ್ರೇಸ್ ಫೇಸ್ ಅವಾರ್ಡ್ಗೂ ನಾಮಿನೇಟ್ ಆಗಿದ್ದರು.
v








