ADVERTISEMENT
Sunday, September 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಇದು ಗ್ಯಾರಂಟಿ ಸರಕಾರವಲ್ಲ ಜಾಹೀರಾತು ಸರಕಾರ:ಬಡವರ ರೇಷನ್ ಕಾರ್ಡ್ ಗೆ ಕನ್ನ ಹಾಕಿದ ಕಾಂಗ್ರೆಸ್-DK ಸರಕಾರದ ಬುಡ ಅಲ್ಲಾಡಿಸಿದ ವಿಜಯೇಂದ್ರ!

Shwetha by Shwetha
September 6, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ರಾಜ್ಯದ ಕಾಂಗ್ರೆಸ್ ಸರಕಾರ ಕೇವಲ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುತ್ತಿದ್ದು, ಇದು ಗ್ಯಾರಂಟಿ ಸರಕಾರವಲ್ಲ ಬದಲಿಗೆ ಬರೀ ಜಾಹೀರಾತು ಸರಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತೀವ್ರವಾಗಿ ಟೀಕಿಸಿದ್ದಾರೆ.

ಬಳ್ಳಾರಿ ಚಲೋ ಪಾದಯಾತ್ರೆಯ ಅಂಗವಾಗಿ ಕಾರಟಗಿಯ ಎಪಿಎಂಸಿ ಯಾರ್ಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂಭಕರ್ಣನ ನಿದ್ರೆಯಲ್ಲಿರುವ ಮುಖ್ಯಮಂತ್ರಿಗಳು ಮತ್ತು ಸರಕಾರವನ್ನು ಬಡಿದೆಬ್ಬಿಸಲು ಬಿಜೆಪಿ ಈ ಹೋರಾಟ ಹಮ್ಮಿಕೊಂಡಿದೆ ಎಂದು ಹೇಳಿದರು.

Related posts

ರಾಜ್ಯಕ್ಕೆ ಮುಂಗಾರು ಮಳೆ ಕೈಕೊಡಲಿದೆ,ಅನ್ನ ನೀರಿಗಾಗಿ ಹಾಹಾಕಾರ ತಪ್ಪಿದ್ದಲ್ಲ,ಬಂಡೆ ಒಡೆಯುವ ಮಾನವನ ದುರಾಸೆಯೇ ಅನಾಹುತಕ್ಕೆ ಮೂಲ:ಕೋಡಿಮಠ ಶ್ರೀಗಳಿಂದ ಮತ್ತೊಂದು ಸ್ಫೋಟಕ ಭವಿಷ್ಯ

ರಾಜ್ಯಕ್ಕೆ ಮುಂಗಾರು ಮಳೆ ಕೈಕೊಡಲಿದೆ,ಅನ್ನ ನೀರಿಗಾಗಿ ಹಾಹಾಕಾರ ತಪ್ಪಿದ್ದಲ್ಲ,ಬಂಡೆ ಒಡೆಯುವ ಮಾನವನ ದುರಾಸೆಯೇ ಅನಾಹುತಕ್ಕೆ ಮೂಲ:ಕೋಡಿಮಠ ಶ್ರೀಗಳಿಂದ ಮತ್ತೊಂದು ಸ್ಫೋಟಕ ಭವಿಷ್ಯ

September 6, 2026
ಮತದಾರರ ಪಟ್ಟಿ ಪರಿಷ್ಕರಣೆ ತಂದ ಅಪರೂಪದ ಪುನರ್ಮಿಲನ: 35 ವರ್ಷಗಳ ಬಳಿಕ ಒಂದಾದ ಅಣ್ಣ-ತಮ್ಮ

ಮತದಾರರ ಪಟ್ಟಿ ಪರಿಷ್ಕರಣೆ ತಂದ ಅಪರೂಪದ ಪುನರ್ಮಿಲನ: 35 ವರ್ಷಗಳ ಬಳಿಕ ಒಂದಾದ ಅಣ್ಣ-ತಮ್ಮ

September 6, 2026

ಗೃಹಲಕ್ಷ್ಮಿ ಯೋಜನೆಯಲ್ಲಿ 5 ಸಾವಿರ ಕೋಟಿ ಹಗರಣದ ಆರೋಪ

ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಸುಮಾರು 5 ಸಾವಿರ ಕೋಟಿ ರೂಪಾಯಿಗಳ ಬೃಹತ್ ಹಗರಣ ನಡೆದಿದೆ ಎಂದು ವಿಜಯೇಂದ್ರ ಗಂಭೀರ ಆರೋಪ ಮಾಡಿದರು. ಈ ಬಗ್ಗೆ ಮಹಾಲೇಖಪಾಲರ ವರದಿಯಲ್ಲೂ ಉಲ್ಲೇಖವಿದ್ದರೂ ಸಿಎಂ ಆಗಲಿ ಅಥವಾ ಸಂಬಂಧಪಟ್ಟ ಸಚಿವರಾಗಲಿ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಗ್ಯಾರಂಟಿ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಅವರಿಗೆ ಸಂಪುಟ ದರ್ಜೆ ನೀಡಿ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಇಷ್ಟೆಲ್ಲಾ ಅವ್ಯವಹಾರ ನಡೆಯುತ್ತಿದ್ದರೂ ಸಮಿತಿ ಅಧ್ಯಕ್ಷರು ಏನು ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಗ್ರಾಮೀಣ ಸಾರಿಗೆ ಅಸ್ತವ್ಯಸ್ತ ಮತ್ತು ಸೈಕಲ್ ವಿತರಣೆ ಸ್ಥಗಿತ

ಶಕ್ತಿ ಯೋಜನೆಯ ಬಗ್ಗೆ ಸರಕಾರ ಭಾರಿ ಪ್ರಚಾರ ಪಡೆಯುತ್ತಿದೆ. ಆದರೆ ವಾಸ್ತವದಲ್ಲಿ ಗ್ರಾಮೀಣ ಭಾಗಗಳಲ್ಲಿ ಸರಿಯಾದ ಬಸ್ ವ್ಯವಸ್ಥೆಯೇ ಇಲ್ಲ. ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸಿಗದೆ ತೊಂದರೆಯಾಗುತ್ತಿದೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಸೈಕಲ್ ಯೋಜನೆಯನ್ನೂ ಈ ಸರಕಾರ ನಿಲ್ಲಿಸಿದೆ. ಕೆಂಪು ಬಸ್‌ಗಳಲ್ಲಿ ಪ್ರಯಾಣಿಕರಿಲ್ಲದೆ ನಿಗಮಗಳು ನಷ್ಟ ಅನುಭವಿಸುತ್ತಿವೆ ಎಂದು ಅವರು ದೂರಿದರು.

ಅನ್ನಭಾಗ್ಯದ ಹೆಸರಲ್ಲಿ ರೇಷನ್ ಕಾರ್ಡ್ ರದ್ದು

ಅನ್ನಭಾಗ್ಯ ಯೋಜನೆಯ ಮೂಲಕ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್, ಅದನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಲಕ್ಷಾಂತರ ಬಡವರ ಪಡಿತರ ಚೀಟಿಯನ್ನು ರದ್ದು ಮಾಡುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಕೇಂದ್ರ ಸರಕಾರ ಉಚಿತವಾಗಿ ನೀಡುತ್ತಿರುವ ಅಕ್ಕಿಯ ಮೇಲೆ ಈ ಸರಕಾರ ರಾಜಕೀಯ ಮಾಡುತ್ತಿದೆ ಎಂದು ವಿಜಯೇಂದ್ರ ಕಿಡಿಕಾರಿದರು.

ರೈತರ ಸಾಲ ಮನ್ನಾಕ್ಕೆ ಆಗ್ರಹ

ಸರಕಾರ ಕೇವಲ ಆಕಾಶದಲ್ಲಿ ನಕ್ಷತ್ರ ತೋರಿಸುವ ಕೆಲಸ ಬಿಟ್ಟು ಹೊಣೆಗಾರಿಕೆಯಿಂದ ನಡೆದುಕೊಳ್ಳಲಿ. ಸಹಕಾರ ಸಂಘಗಳಲ್ಲಿರುವ ರೈತರ ಸಾಲವನ್ನು ರಾಜ್ಯ ಸರಕಾರವೇ ತಕ್ಷಣ ಮನ್ನಾ ಮಾಡಬೇಕು. ಪ್ರತಿಯೊಂದಕ್ಕೂ ಕೇಂದ್ರದ ಕಡೆ ಬೆರಳು ತೋರಿಸುವುದನ್ನು ಬಿಟ್ಟು, ಇಷ್ಟು ದೊಡ್ಡ ಸಂಖ್ಯಾಬಲವಿರುವ ಸರಕಾರ ರೈತರ ನೆರವಿಗೆ ಧಾವಿಸಲಿ ಎಂದು ಅವರು ಆಗ್ರಹಿಸಿದರು.

ಪಾದಯಾತ್ರೆಗೆ ಸಿಕ್ಕ ಯಶಸ್ಸು

ನಮ್ಮ ಪಾದಯಾತ್ರೆ ಈಗ ಕೇವಲ ಒಂದು ಪಕ್ಷದ ಹೋರಾಟವಾಗಿ ಉಳಿದಿಲ್ಲ, ಅದು ಜನಾಂದೋಲನವಾಗಿ ಮಾರ್ಪಟ್ಟಿದೆ. ಈ ಯಶಸ್ಸನ್ನು ನೋಡಿ ಮುಖ್ಯಮಂತ್ರಿಗಳು ಹತಾಶರಾಗಿದ್ದಾರೆ. ಎಂದೂ ಹಸಿರು ಶಾಲು ಧರಿಸದ ಡಿಕೆ, ಈಗ ನಮ್ಮ ಪಾದಯಾತ್ರೆಯ ಭಯದಿಂದ ಹಸಿರು ಶಾಲು ತೊಟ್ಟು ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ನಮ್ಮ ಹೋರಾಟಕ್ಕೆ ಸಂದ ಮೊದಲ ಜಯ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ShareTweetSendShare
Join us on:

Related Posts

ರಾಜ್ಯಕ್ಕೆ ಮುಂಗಾರು ಮಳೆ ಕೈಕೊಡಲಿದೆ,ಅನ್ನ ನೀರಿಗಾಗಿ ಹಾಹಾಕಾರ ತಪ್ಪಿದ್ದಲ್ಲ,ಬಂಡೆ ಒಡೆಯುವ ಮಾನವನ ದುರಾಸೆಯೇ ಅನಾಹುತಕ್ಕೆ ಮೂಲ:ಕೋಡಿಮಠ ಶ್ರೀಗಳಿಂದ ಮತ್ತೊಂದು ಸ್ಫೋಟಕ ಭವಿಷ್ಯ

ರಾಜ್ಯಕ್ಕೆ ಮುಂಗಾರು ಮಳೆ ಕೈಕೊಡಲಿದೆ,ಅನ್ನ ನೀರಿಗಾಗಿ ಹಾಹಾಕಾರ ತಪ್ಪಿದ್ದಲ್ಲ,ಬಂಡೆ ಒಡೆಯುವ ಮಾನವನ ದುರಾಸೆಯೇ ಅನಾಹುತಕ್ಕೆ ಮೂಲ:ಕೋಡಿಮಠ ಶ್ರೀಗಳಿಂದ ಮತ್ತೊಂದು ಸ್ಫೋಟಕ ಭವಿಷ್ಯ

by Shwetha
September 6, 2026
0

ಬೆಂಗಳೂರು: ತಮ್ಮ ನಿಖರ ಭವಿಷ್ಯವಾಣಿಗಳಿಂದಲೇ ನಾಡಿನಾದ್ಯಂತ ಸಂಚಲನ ಮೂಡಿಸುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಇದೀಗ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಮುಂದಿನ...

ಮತದಾರರ ಪಟ್ಟಿ ಪರಿಷ್ಕರಣೆ ತಂದ ಅಪರೂಪದ ಪುನರ್ಮಿಲನ: 35 ವರ್ಷಗಳ ಬಳಿಕ ಒಂದಾದ ಅಣ್ಣ-ತಮ್ಮ

ಮತದಾರರ ಪಟ್ಟಿ ಪರಿಷ್ಕರಣೆ ತಂದ ಅಪರೂಪದ ಪುನರ್ಮಿಲನ: 35 ವರ್ಷಗಳ ಬಳಿಕ ಒಂದಾದ ಅಣ್ಣ-ತಮ್ಮ

by Shwetha
September 6, 2026
0

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಸಾಮಾನ್ಯವಾಗಿ ಮತದಾರರ ಮಾಹಿತಿಯನ್ನು ನವೀಕರಿಸುವ ಆಡಳಿತಾತ್ಮಕ ಕಾರ್ಯ. ಆದರೆ, ಇದೇ ಪ್ರಕ್ರಿಯೆ ಮೂರೂವರೆ...

‘ಪ್ರಜಾಸೇವೆ’ ಅಭಿಯಾನಕ್ಕೆ ಚಾಲನೆ: ಶಿಕ್ಷಕರಿಗೆ ‘Tr’ ಗೌರವ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7 ಮೀಸಲಾತಿ

‘ಪ್ರಜಾಸೇವೆ’ ಅಭಿಯಾನಕ್ಕೆ ಚಾಲನೆ: ಶಿಕ್ಷಕರಿಗೆ ‘Tr’ ಗೌರವ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7 ಮೀಸಲಾತಿ

by Shwetha
September 6, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಜಾಸೇವೆ’ ನೂತನ ಅಭಿಯಾನಕ್ಕೆ ಜಿಲ್ಲೆಯ ಕೂಡ್ಲಗಿಯಲ್ಲಿ ಚಾಲನೆ ದೊರೆತಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿಕ್ಷಣ, ಸಾಮಾಜಿಕ ನ್ಯಾಯ ಹಾಗೂ ಜನಸೇವೆಗೆ...

ನಾಯಿ ಸಾಕಲು ರಿಜಿಸ್ಟ್ರೇಶನ್ ಬೇಕು, ನೂರು ವರ್ಷದ ಆರೆಸ್ಸೆಸ್ ಗೆ ಬೇಡವೇ? ಸಚಿವ ಶಿವರಾಜ ತಂಗಡಗಿ ಪ್ರಶ್ನೆ

ಭ್ರಷ್ಟಾಚಾರದ ಪಿತಾಮಹರನ್ನು ಕಂಕುಳಲ್ಲಿಟ್ಟುಕೊಂಡು ನೀತಿ ಪಾಠ ಮಾಡಬೇಡಿ:ಪೋಕ್ಸೋ ಕೇಸ್ ಪರಾಕ್ರಮಿಯ ಪುತ್ರನಿಗೆ ನಮ್ಮ ಬಗ್ಗೆ ಮಾತನಾಡಲು ಯೋಗ್ಯತೆಯಿಲ್ಲ ಎಂದ ಸಚಿವ ತಂಗಡಗಿ

by Shwetha
September 6, 2026
0

ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆರೋಪಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ವಿಜಯೇಂದ್ರ ಅವರ...

ದಿನ ಭವಿಷ್ಯ (02-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (06-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
September 6, 2026
0

ದಿನ ಭವಿಷ್ಯ: 06-09-2026 ಮೇಷ ರಾಶಿ (Aries) ಇಂದು ನಿಮಗೆ ಅತ್ಯುತ್ಸಾಹದ ದಿನ. ಸೂರ್ಯನ ಪ್ರಭಾವದಿಂದಾಗಿ ನಿಮ್ಮ ನಾಯಕತ್ವದ ಗುಣಗಳು ಮುನ್ನೆಲೆಗೆ ಬರಲಿವೆ. ವೃತ್ತಿ ಕ್ಷೇತ್ರದಲ್ಲಿ ನೀವು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram