ADVERTISEMENT
Monday, September 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಭ್ರಷ್ಟಾಚಾರದ ಪಿತಾಮಹರನ್ನು ಕಂಕುಳಲ್ಲಿಟ್ಟುಕೊಂಡು ನೀತಿ ಪಾಠ ಮಾಡಬೇಡಿ:ಪೋಕ್ಸೋ ಕೇಸ್ ಪರಾಕ್ರಮಿಯ ಪುತ್ರನಿಗೆ ನಮ್ಮ ಬಗ್ಗೆ ಮಾತನಾಡಲು ಯೋಗ್ಯತೆಯಿಲ್ಲ ಎಂದ ಸಚಿವ ತಂಗಡಗಿ

Shwetha by Shwetha
September 6, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆರೋಪಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ವಿಜಯೇಂದ್ರ ಅವರ ಭಾಷಣಗಳು ಅವಿವೇಕತನದಿಂದ ಕೂಡಿದ್ದು, ಅತ್ಯಂತ ಕೀಳುಮಟ್ಟದಲ್ಲಿವೆ ಎಂದು ಸಚಿವರು ಕಿಡಿಕಾರಿದ್ದಾರೆ.

ಸಂಸ್ಕಾರದ ಪಾಠ

Related posts

ಚಾಮುಂಡೇಶ್ವರಿಯಲ್ಲಿ ಪಕ್ಷ ಮುಖ್ಯವಲ್ಲ ನಾನು ಮುಖ್ಯ ಎಂದ ಟಿ ದೇವೇಗೌಡ:ನಾನು ಏಕಾಂಗಿಯಲ್ಲ ನನ್ನ ಹಿಂದೆ ಜನರಿದ್ದಾರೆ- ಕುಮಾರಸ್ವಾಮಿಗೆ ಹಳೆ ಇತಿಹಾಸ ನೆನಪಿಸಿದ ಜಿಟಿಡಿ

ಚಾಮುಂಡೇಶ್ವರಿಯಲ್ಲಿ ಪಕ್ಷ ಮುಖ್ಯವಲ್ಲ ನಾನು ಮುಖ್ಯ ಎಂದ ಟಿ ದೇವೇಗೌಡ:ನಾನು ಏಕಾಂಗಿಯಲ್ಲ ನನ್ನ ಹಿಂದೆ ಜನರಿದ್ದಾರೆ- ಕುಮಾರಸ್ವಾಮಿಗೆ ಹಳೆ ಇತಿಹಾಸ ನೆನಪಿಸಿದ ಜಿಟಿಡಿ

September 7, 2026
ವಂದೇ ಮಾತರಂ ಹಾಡಲು 3 ನಿಮಿಷ ಸಮಯವಿಲ್ಲವೇ? ದೇಶದ ಸಂವಿಧಾನಕ್ಕಿಂತ ಗಾಂಧಿ ಕುಟುಂಬವೇ ದೊಡ್ಡದೇ? ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅನುರಾಗ್ ಠಾಕೂರ್

ವಂದೇ ಮಾತರಂ ಹಾಡಲು 3 ನಿಮಿಷ ಸಮಯವಿಲ್ಲವೇ? ದೇಶದ ಸಂವಿಧಾನಕ್ಕಿಂತ ಗಾಂಧಿ ಕುಟುಂಬವೇ ದೊಡ್ಡದೇ? ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅನುರಾಗ್ ಠಾಕೂರ್

September 7, 2026

ತಮ್ಮ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದ ವಿಜಯೇಂದ್ರ ಅವರಿಗೆ ಸಂಸ್ಕಾರದ ಪಾಠ ಮಾಡಿರುವ ಸಚಿವ ತಂಗಡಗಿ, ರಾಜಕೀಯ ಅನುಭವ, ವಯಸ್ಸು ಮತ್ತು ಜನಸೇವೆಯಲ್ಲಿ ನಾನು ನಿಮಗಿಂತ ಹಿರಿಯ. ಹಿರಿಯರಿಗೆ ಗೌರವ ಕೊಡದಿದ್ದರೆ ನೀವು ದೊಡ್ಡವರಾಗುವುದಿಲ್ಲ, ಅದು ನಿಮ್ಮ ದಡ್ಡತನವನ್ನು ತೋರಿಸುತ್ತದೆ. ನನಗೂ ನಿಮಗಿಂತ ಕೀಳು ಭಾಷೆಯಲ್ಲಿ ಮಾತನಾಡಲು ಬರುತ್ತದೆ, ಆದರೆ ನನಗಿರುವ ಸಂಸ್ಕಾರ ಅದಕ್ಕೆ ಅಡ್ಡಿಪಡಿಸುತ್ತದೆ ಎಂದು ತಿರುಗೇಟು ನೀಡಿದರು. ವಿಜಯೇಂದ್ರ ಅವರ ಈ ಬೊಬ್ಬೆಗಳು ಅಲುಗಾಡುತ್ತಿರುವ ತಮ್ಮ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಸ್ಮಶಾನ ರೋದನೆ ಎಂದು ಲೇವಡಿ ಮಾಡಿದರು.

ರೈತರಿಗೆ ನೀರು ಹರಿಸುವ ವಿಚಾರದಲ್ಲಿ ವಿಜಯೇಂದ್ರ ಮಾಡಿರುವ ಟೀಕೆಗೆ ಉತ್ತರಿಸಿದ ಸಚಿವರು, ಸಂಕಷ್ಟದ ಕಾಲದಲ್ಲೂ ರೈತರ ಹಿತ ಕಾಯುವ ಕೆಲಸವನ್ನು ನಾವು ಮಾಡಿದ್ದೇವೆ. ಕೇಂದ್ರ ಸರಕಾರ 2023ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5,300 ಕೋಟಿ ರೂಪಾಯಿ ಅನುದಾನವನ್ನು ಈವರೆಗೂ ಏಕೆ ಬಿಡುಗಡೆ ಮಾಡಿಸಿಲ್ಲ? ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹದಾಯಿ ಯೋಜನೆ ಜಾರಿ ಮಾಡುತ್ತೇವೆ ಎಂದಿದ್ದ ನಿಮ್ಮ ತಂದೆಯವರ ಮಾತು ಏನಾಯಿತು? ಮೊದಲು ಕೇಂದ್ರದಿಂದ ಅನುದಾನ ಮತ್ತು ಅನುಮತಿ ತರುವ ಧೈರ್ಯ ತೋರಿಸಿ ಎಂದು ಸವಾಲು ಹಾಕಿದರು.

ಬಿಜೆಪಿ ಅವಧಿಯ ಸಾಲು ಸಾಲು ಹಗರಣಗಳನ್ನು ನೆನಪಿಸಿದ ಸಚಿವರು, ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋದ ಇತಿಹಾಸ ನಿಮ್ಮ ತಂದೆಯವರದ್ದು. ಡಿ-ನೋಟಿಫಿಕೇಷನ್, ಪ್ರೇರಣಾ ಟ್ರಸ್ಟ್, ಗಣಿ ಲೂಟಿ, ಅಶೋಕ್ ಅವರ ಭೂ ಹಗರಣ, ಚಿಲುಮೆ ಹಗರಣ ಹೀಗೆ ಭ್ರಷ್ಟಾಚಾರದ ಪಿತಾಮಹರನ್ನು ಪಕ್ಕದಲ್ಲಿ ಇಟ್ಟುಕೊಂಡು ನೀವು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಜನರಿಗೆ ವಾಕರಿಕೆ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಬಡವರ ಮತ್ತು ರೈತರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ನಾಯಕರು ಈಗ ಮಾಡುತ್ತಿರುವ ಪಾದಯಾತ್ರೆ ಕೇವಲ ನಾಟಕ ಎಂದು ತಂಗಡಗಿ ಲೇವಡಿ ಮಾಡಿದರು. ವಿಧಾನಸಭೆಯಲ್ಲಿ ಬರಗಾಲದ ಬಗ್ಗೆ ಚರ್ಚೆ ನಡೆಸಲು ಯೋಗ್ಯತೆ ಇಲ್ಲದವರು ಈಗ ರಸ್ತೆಯಲ್ಲಿ ನಿಂತು ಹಾರಾಟ ಮಾಡುತ್ತಿದ್ದಾರೆ. ನೀವು ಮಾಡುತ್ತಿರುವ ಈ ಹೋರಾಟ ಜನಪರ ಹೋರಾಟವಲ್ಲ, ಬದಲಿಗೆ ಮಜಾ ಭಾರತ ಅಥವಾ ಕಾಮಿಡಿ ಕಿಲಾಡಿಗಳು ಶೋನ ಮತ್ತೊಂದು ಎಪಿಸೋಡ್‌ನಂತಿದೆ ಎಂದು ವ್ಯಂಗ್ಯವಾಡಿದರು.

ಬಿವೈ ವಿಜಯೇಂದ್ರ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಗುಡುಗಿದ್ದಾರೆ.

ShareTweetSendShare
Join us on:

Related Posts

ಚಾಮುಂಡೇಶ್ವರಿಯಲ್ಲಿ ಪಕ್ಷ ಮುಖ್ಯವಲ್ಲ ನಾನು ಮುಖ್ಯ ಎಂದ ಟಿ ದೇವೇಗೌಡ:ನಾನು ಏಕಾಂಗಿಯಲ್ಲ ನನ್ನ ಹಿಂದೆ ಜನರಿದ್ದಾರೆ- ಕುಮಾರಸ್ವಾಮಿಗೆ ಹಳೆ ಇತಿಹಾಸ ನೆನಪಿಸಿದ ಜಿಟಿಡಿ

ಚಾಮುಂಡೇಶ್ವರಿಯಲ್ಲಿ ಪಕ್ಷ ಮುಖ್ಯವಲ್ಲ ನಾನು ಮುಖ್ಯ ಎಂದ ಟಿ ದೇವೇಗೌಡ:ನಾನು ಏಕಾಂಗಿಯಲ್ಲ ನನ್ನ ಹಿಂದೆ ಜನರಿದ್ದಾರೆ- ಕುಮಾರಸ್ವಾಮಿಗೆ ಹಳೆ ಇತಿಹಾಸ ನೆನಪಿಸಿದ ಜಿಟಿಡಿ

by Shwetha
September 7, 2026
0

ಮೈಸೂರು: ಜೆಡಿಎಸ್ ಹಿರಿಯ ಶಾಸಕ ಜಿ ಟಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ....

ವಂದೇ ಮಾತರಂ ಹಾಡಲು 3 ನಿಮಿಷ ಸಮಯವಿಲ್ಲವೇ? ದೇಶದ ಸಂವಿಧಾನಕ್ಕಿಂತ ಗಾಂಧಿ ಕುಟುಂಬವೇ ದೊಡ್ಡದೇ? ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅನುರಾಗ್ ಠಾಕೂರ್

ವಂದೇ ಮಾತರಂ ಹಾಡಲು 3 ನಿಮಿಷ ಸಮಯವಿಲ್ಲವೇ? ದೇಶದ ಸಂವಿಧಾನಕ್ಕಿಂತ ಗಾಂಧಿ ಕುಟುಂಬವೇ ದೊಡ್ಡದೇ? ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅನುರಾಗ್ ಠಾಕೂರ್

by Shwetha
September 7, 2026
0

ಇಂದೋರ್: ರಾಷ್ಟ್ರಗೀತೆ ಮತ್ತು ಸಂವಿಧಾನದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಅನುಸರಿಸುತ್ತಿರುವ ಧೋರಣೆಯನ್ನು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅನುರಾಗ್ ಠಾಕೂರ್ ತೀವ್ರವಾಗಿ ತರಾಟೆಗೆ...

ನನ್ನ ಎದೆಯಲ್ಲಿ ರಾಮನೂ ಇದ್ದಾನೆ ಸಿದ್ದರಾಮಯ್ಯನವರೂ ಇದ್ದಾರೆ:ಮುಂದಿನ ಮುಖ್ಯಮಂತ್ರಿಯೂ ಸಿದ್ದರಾಮಯ್ಯ-ಪ್ರದೀಪ್ ಈಶ್ವರ್

ನನ್ನ ಎದೆಯಲ್ಲಿ ರಾಮನೂ ಇದ್ದಾನೆ ಸಿದ್ದರಾಮಯ್ಯನವರೂ ಇದ್ದಾರೆ:ಮುಂದಿನ ಮುಖ್ಯಮಂತ್ರಿಯೂ ಸಿದ್ದರಾಮಯ್ಯ-ಪ್ರದೀಪ್ ಈಶ್ವರ್

by Shwetha
September 7, 2026
0

ಬೆಂಗಳೂರು: ರಾಜಧಾನಿಯ ಅರಮನೆ ಮೈದಾನದಲ್ಲಿ ನಡೆದ ಹಿಂದುಳಿದ ಜಾತಿಗಳ ಬೃಹತ್ ಜನಜಾಗೃತಿ ಸಮಾವೇಶವು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ...

ಸಿದ್ದರಾಮಯ್ಯ ಅವರಂತಹ ಅಪರೂಪದ ನಾಯಕ ಸಿಗಲು ಅಸಾಧ್ಯ: ಅಹಿಂದ ಹೋರಾಟವೇ ನಮ್ಮ ಶಕ್ತಿ, ಸಿದ್ದರಾಮಯ್ಯ ಹಾದಿಯೇ ನಮಗೆ ಸ್ಫೂರ್ತಿ-ಪರಮೇಶ್ವರ್ ಖಡಕ್ ಸಂದೇಶ

ಸಿದ್ದರಾಮಯ್ಯ ಅವರಂತಹ ಅಪರೂಪದ ನಾಯಕ ಸಿಗಲು ಅಸಾಧ್ಯ: ಅಹಿಂದ ಹೋರಾಟವೇ ನಮ್ಮ ಶಕ್ತಿ, ಸಿದ್ದರಾಮಯ್ಯ ಹಾದಿಯೇ ನಮಗೆ ಸ್ಫೂರ್ತಿ-ಪರಮೇಶ್ವರ್ ಖಡಕ್ ಸಂದೇಶ

by Shwetha
September 7, 2026
0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಮತ್ತು ರಾಜ್ಯದ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆಗಳನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿದ್ದರಾಮಯ್ಯ...

ಪಾಕಿಸ್ತಾನದ ನೆಲಕ್ಕೆ ನುಗ್ಗಿ ಹೊಡೆಯುವ ಶಕ್ತಿ ಭಾರತಕ್ಕಿದೆ: ದೆಹಲಿಯಲ್ಲಿ ಮೋದಿ ಗುಡುಗು

ಪಾಕಿಸ್ತಾನದ ನೆಲಕ್ಕೆ ನುಗ್ಗಿ ಹೊಡೆಯುವ ಶಕ್ತಿ ಭಾರತಕ್ಕಿದೆ: ದೆಹಲಿಯಲ್ಲಿ ಮೋದಿ ಗುಡುಗು

by Shwetha
September 7, 2026
0

ನವದೆಹಲಿ: ಭಾರತದ ವಿರುದ್ಧ ಯಾವುದೇ ದುಸ್ಸಾಹಸಕ್ಕೆ ಮುಂದಾದರೆ ನೆರೆ ರಾಷ್ಟ್ರದ ಗಡಿಯೊಳಗೆ ನುಗ್ಗಿ ಸದೆಬಡಿಯಲು ನಮ್ಮ ಸಶಸ್ತ್ರ ಪಡೆಗಳು ಸನ್ನದ್ಧವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram