ADVERTISEMENT
Saturday, September 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ವಂತಾರಾ ಆಡಳಿತ ಮಂಡಳಿಗೆ ಕರ್ನಾಟಕದ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸುಭಾಷ್ ಕೆ. ಮಲ್ಕೇಡೆ ನೇಮಕ

admin by admin
September 5, 2026
in National, Newsbeat, Uncategorized, ದೇಶ - ವಿದೇಶ
vantara-governing-board-subhash-k-malkhede-appointed

vantara-governing-board-subhash-k-malkhede-appointed

Share on FacebookShare on TwitterShare on WhatsappShare on Telegram

 

ಜಾಮ್‌ನಗರ (ಭಾರತ), ಸೆಪ್ಟೆಂಬರ್ 04, 2026: ರಿಲಯನ್ಸ್‌ ಇಂಡಸ್ಟ್ರೀಸ್‌ ಆರಂಭಿಸಿರುವ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾಗಿರುವ ವಂತಾರಾ ಸಂಸ್ಥೆಯ ನೂತನ ಆಡಳಿತ ಮಂಡಳಿಯನ್ನು ಘೋಷಿಸಲಾಗಿದ್ದು, ಕರ್ನಾಟಕದ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸುಭಾಷ್‌ ಮಲ್ಕೇಡೆ ಸೇರಿದಂತೆ ಐವರು ಸದಸ್ಯರಾಗಿ ನೇಮಕವಾಗಿದ್ದಾರೆ.

Related posts

java-yezdi-enter-gaming-world-isgl-2026-esports-tournament

ಗೇಮಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಜಾವಾ, ಯೆಜ್ಡಿ; ಇ-ಸ್ಪೋರ್ಟ್ಸ್ ಟೂರ್ನಿಯಲ್ಲಿ ಕ್ಲಾಸಿಕ್ ಬೈಕ್‌ಗಳ ದರ್ಬಾರ್!

September 5, 2026
bizd-cup-media-cricket-tournament-bengaluru-gkvk-ground-zameer-ahmed-khan

ಜಿಕೆವಿಕೆ ಮೈದಾನದಲ್ಲಿ ಬಿಝಡ್ ಕಪ್ ಮೀಡಿಯಾ ಕ್ರಿಕೆಟ್ ಹಬ್ಬ: ಜಮೀರ್ ಅಹ್ಮದ್ ಖಾನ್‌ರಿಂದ ಚಾಲನೆ

September 5, 2026

ಈ ಮಂಡಳಿಯು ವಂತಾರಾದ ಸಂರಕ್ಷಣೆ, ರಕ್ಷಣೆ ಮತ್ತು ಅನುಸರಣಾ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ವನ್ಯಜೀವಿಗಳನ್ನು ಆಮದು ಮಾಡಿಕೊಳ್ಳುವ ಭವಿಷ್ಯದ ಅರ್ಜಿಗಳ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಮತ್ತು ಮುಂದಿನ ಐದು ವರ್ಷಗಳು ಹಾಗೂ ಅದರಾಚೆಗಿನ ವಂತಾರಾದ ಯೋಜನೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ.

ಸುಭಾಷ್ ಕೆ. ಮಲ್ಕೇಡೆಯವರು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ನಿವೃತ್ತ ಹಿರಿಯ ಅಧಿಕಾರಿ ಹಾಗೂ ಕರ್ನಾಟಕದ ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಆಗಿದ್ದಾರೆ. ಇವರು ವನ್ಯಜೀವಿ ಸಂರಕ್ಷಣೆ, ಸಂರಕ್ಷಿತ ಪ್ರದೇಶಗಳು, ಅಳಿವಿನಂಚಿನಲ್ಲಿರುವ ಜಾತಿಗಳ ನಿರ್ವಹಣೆ, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ ಮತ್ತು ಕಾನೂನು ಜಾರಿಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಇತರ ಸದಸ್ಯರಾಗಿ ನ್ಯಾಯಮೂರ್ತಿ ಕೃಷ್ಣ ಮುರಾರಿ, ಕ್ರೇಗ್ ಹೂವರ್, ಗ್ರೆಟಾ ಎಫ್. ಲೋರಿ, ಡಾ. ಕುಶಾಲ್‌ ಕನ್ವಾರ್ ಶರ್ಮಾ ನೇಮಕವಾಗಿದ್ದಾರೆ. ಸ್ವತಂತ್ರ ಅಧ್ಯಕ್ಷರಾಗಿ ಜಾನ್ ಇ. ಸ್ಕ್ಯಾನ್‌ಲಾನ್ ಎಒ ನೇಮಕವಾಗಿದ್ದಾರೆ.

ಆಡಳಿತ ಮಂಡಳಿಯ ಅಧ್ಯಕ್ಷರಾದ ಜಾನ್ ಸ್ಕ್ಯಾನ್‌ಲಾನ್ ಮಾತನಾಡಿ: “ವಂತಾರಾದ ಭವಿಷ್ಯದ ಯೋಜನೆಗಳನ್ನು ರೂಪಿಸುವಲ್ಲಿ ಮತ್ತು ಇತ್ತೀಚೆಗೆ ಘೋಷಿಸಲಾದ ಬದಲಾವಣೆಗಳನ್ನು ದೈನಂದಿನ ಕಾರ್ಯಾಚರಣೆಗಳಲ್ಲಿ ಅಳವಡಿಸಿಕೊಳ್ಳುವುದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಪ್ರಮುಖ ಪಾತ್ರ ವಹಿಸುತ್ತದೆ ” ಎಂದರು.

ವಂತಾರಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (CEO) ವಿವಾನ್ ಕರಾಣಿ ಮಾತನಾಡಿ : “ ವಂತಾರಾದಲ್ಲಿ ವೈಜ್ಞಾನಿಕವಾಗಿ ವನ್ಯಜೀವಿ ಸಂರಕ್ಷಣೆಯನ್ನು ನಾವು ಮುನ್ನಡೆಸುತ್ತಿದ್ದೇವೆ. ಆದ್ದರಿಂದ ವಂತಾರಾದ ಚಟುವಟಿಕೆಗಳನ್ನು ಉನ್ನತ ದರ್ಜೆಯಲ್ಲಿ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಆಡಳಿತ ಮಂಡಳಿಯ ಸದಸ್ಯರನ್ನು ನಾನು ಸ್ವಾಗತಿಸುತ್ತೇನೆ ” ಎಂದರು. ಆಡಳಿತ ಮಂಡಳಿಯು ವಂತಾರಾದ ಉನ್ನತ ಆಡಳಿತ ಮಂಡಳಿಯಾಗಿದೆ. ಇದು ವಂತಾರಾದ ಸಂರಕ್ಷಣೆ, ರಕ್ಷಣೆ ಮತ್ತು ಪುನರ್ವಸತಿ ಕಾರ್ಯಗಳು, ಭಾರತೀಯ ಕಾನೂನು, ಸಿಐಟಿಇಎಸ್ ಮತ್ತು ಇತರ ಅಂತರರಾಷ್ಟ್ರೀಯ ಒಪ್ಪಂದಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡುವ ಒಟ್ಟು ಜವಾಬ್ದಾರಿಯನ್ನು ಹೊಂದಿದೆ.

Tags: #Vantara #SubhashKMalkhede #IFSOfficer #WildlifeConservation #RelianceIndustries #WildlifeProtection #WildlifeRehabilitation #Karnataka #Jamnagar #VantaraGoverningBoard #saakshatv
ShareTweetSendShare
Join us on:

Related Posts

java-yezdi-enter-gaming-world-isgl-2026-esports-tournament

ಗೇಮಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಜಾವಾ, ಯೆಜ್ಡಿ; ಇ-ಸ್ಪೋರ್ಟ್ಸ್ ಟೂರ್ನಿಯಲ್ಲಿ ಕ್ಲಾಸಿಕ್ ಬೈಕ್‌ಗಳ ದರ್ಬಾರ್!

by admin
September 5, 2026
0

ಬೆಂಗಳೂರು: ಬೈಕ್ ರೈಡಿಂಗ್ ಮತ್ತು ವಿಡಿಯೋ ಗೇಮಿಂಗ್... ಇವೆರಡೂ ಇಂದಿನ ಯುವಜನತೆಯ ಅಚ್ಚುಮೆಚ್ಚಿನ ಹವ್ಯಾಸಗಳು. ಇದೀಗ ಈ ಎರಡು ವಿಭಿನ್ನ ಲೋಕಗಳನ್ನು ಒಂದೇ ವೇದಿಕೆಯಲ್ಲಿ ತರಲು 'ಕ್ಲಾಸಿಕ್...

bizd-cup-media-cricket-tournament-bengaluru-gkvk-ground-zameer-ahmed-khan

ಜಿಕೆವಿಕೆ ಮೈದಾನದಲ್ಲಿ ಬಿಝಡ್ ಕಪ್ ಮೀಡಿಯಾ ಕ್ರಿಕೆಟ್ ಹಬ್ಬ: ಜಮೀರ್ ಅಹ್ಮದ್ ಖಾನ್‌ರಿಂದ ಚಾಲನೆ

by admin
September 5, 2026
0

ಬೆಂಗಳೂರು: ಬೆಂಗಳೂರಿನ ಜಿಕೆವಿಕೆ ಮೈದಾನದಲ್ಲಿ 9 ಡ್ರಿಮ್ಸ್‌ ಸಂಸ್ಥೆ ಆಯೋಜಿಸಿರು ಬಿಝಡ್‌ ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿಗೆ ವಸತಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರು ಚಾಲನೆ...

ಧ್ವನಿ ಎತ್ತದಿದ್ದರೆ ಮೂಲೆಗೆ ಕೂರಿಸ್ತಾರೆ: ಡಿಕೆಶಿ ಸಂಪುಟದಲ್ಲಿ ಮಹಿಳೆಯರ ನಿರ್ಲಕ್ಷ್ಯಕ್ಕೆ ಮಾಜಿ ಸಚಿವೆ ಮೋಟಮ್ಮ ಆಕ್ರೋಶ

ಧ್ವನಿ ಎತ್ತದಿದ್ದರೆ ಮೂಲೆಗೆ ಕೂರಿಸ್ತಾರೆ: ಡಿಕೆಶಿ ಸಂಪುಟದಲ್ಲಿ ಮಹಿಳೆಯರ ನಿರ್ಲಕ್ಷ್ಯಕ್ಕೆ ಮಾಜಿ ಸಚಿವೆ ಮೋಟಮ್ಮ ಆಕ್ರೋಶ

by Shwetha
September 5, 2026
0

ಮೂಡಿಗೆರೆ: ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡದ ವಿಚಾರವಾಗಿ ಹಿರಿಯ ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರು ಮುಖ್ಯಮಂತ್ರಿ ಡಿ.ಕೆ....

ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಸಂಸ್ಥೆಯ ಬಾಕಿ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್

ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಸಂಸ್ಥೆಯ ಬಾಕಿ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್

by Shwetha
September 5, 2026
0

ಉದ್ಯೋಗಿಗೆ ಪಾವತಿಸಬೇಕಾದ ಗ್ರಾಚ್ಯುಟಿ ಮೊತ್ತದಿಂದ ಸಂಸ್ಥೆಗೆ ಬರಬೇಕಿರುವ ಬಾಕಿ ಅಥವಾ ಬಡ್ಡಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಸ್ಥೆಗೆ ಯಾವುದೇ ಕಾನೂನುಬದ್ಧ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ...

ದೇಶದ ಆಂತರಿಕ ಭದ್ರತೆಗೆ ದಿಮಾಗಿ ನಕ್ಸಲಿಸಂನಿಂದ ಗಂಡಾಂತರ: ಜಾಗೃತಿಗೆ ಚಕ್ರವರ್ತಿ ಸೂಲಿಬೆಲೆ ಕರೆ

ದೇಶದ ಆಂತರಿಕ ಭದ್ರತೆಗೆ ದಿಮಾಗಿ ನಕ್ಸಲಿಸಂನಿಂದ ಗಂಡಾಂತರ: ಜಾಗೃತಿಗೆ ಚಕ್ರವರ್ತಿ ಸೂಲಿಬೆಲೆ ಕರೆ

by Shwetha
September 5, 2026
0

ಬೆಂಗಳೂರು: ಶಸ್ತ್ರಸಜ್ಜಿತ ನಕ್ಸಲಿಸಂ ಗಿಂತಲೂ ಇಂದು ದೇಶವನ್ನು ಒಳಗಿನಿಂದಲೇ ನಶಿಸುವಂತೆ ಮಾಡುತ್ತಿರುವ ಬೌದ್ಧಿಕ ಅಥವಾ ದಿಮಾಗಿ ನಕ್ಸಲಿಸಂ ಅತ್ಯಂತ ಅಪಾಯಕಾರಿಯಾಗಿದೆ. ಈ ಅದೃಶ್ಯ ಶತ್ರುಗಳ ವಿರುದ್ಧ ಸಮಾಜದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram