ADVERTISEMENT
Tuesday, September 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಮರ್ಯಾದೆ ಮರೆತ ನಾಯಕರ ಬೀದಿ ರಂಪಾಟ:ಲೇ ಚಂಚಲಗುಡ ಕೈದಿ ನಂಬರ್ 697 ಜೈಲಿನಲ್ಲಿ ಮುದ್ದೆ ಮುರಿದವನು ನೀನು ಎಂದು ರೆಡ್ಡಿ ವಿರುದ್ಧ ತಂಗಡಗಿ ಆಕ್ರೋಶ

Shwetha by Shwetha
September 8, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಕೊಪ್ಪಳ: ರಾಜ್ಯ ರಾಜಕಾರಣದಲ್ಲಿ ಸಭ್ಯತೆಯ ಗೆರೆಗಳು ಅಳಿಸಿ ಹೋಗುತ್ತಿವೆಯೇ ಎಂಬ ಸಂಶಯ ಮೂಡುವಂತೆ ಇಬ್ಬರು ಜನಪ್ರತಿನಿಧಿಗಳ ನಡುವಿನ ಜಗಳ ಈಗ ಬೀದಿ ರಂಪಾಟಕ್ಕೆ ಸಾಕ್ಷಿಯಾಗಿದೆ. ಗಣಿ ಧಣಿ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಸಚಿವ ಶಿವರಾಜ್ ತಂಗಡಗಿ ನಡುವಿನ ವಾಕ್ಸಮರ ಈಗ ವೈಯಕ್ತಿಕ ನಿಂದನೆಯ ಹಂತಕ್ಕೆ ತಲುಪಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಯ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಅವರು ತಂಗಡಗಿ ವಿರುದ್ಧ ನೀಡಿದ್ದ ಏಕವಚನದ ವಾಗ್ದಾಳಿ, ಈಗ ಅದಕ್ಕಿಂತಲೂ ಭೀಕರವಾದ ಪ್ರತಿರೋಧಕ್ಕೆ ಕಾರಣವಾಗಿದೆ. ಮೊದಲ ಬಾರಿಗೆ ಸಚಿವನನ್ನಾಗಿ ಮಾಡಲು ನಿನ್ನನ್ನು ಹೆಲಿಕಾಪ್ಟರ್ ನಲ್ಲಿ ಕರೆದುಕೊಂಡು ಹೋಗಿದ್ದು ನಾನು, ಚೀಲದಲ್ಲಿ ಹಣ ಕೊಟ್ಟಿದ್ದು ನಾನು ಎಂದು ರೆಡ್ಡಿ ಹರಿಹಾಯ್ದಿದ್ದರು. ಇದಕ್ಕೆ ಸಚಿವ ತಂಗಡಗಿ ಅಷ್ಟೇ ಹರಿತವಾಗಿ ಉತ್ತರ ನೀಡಿದ್ದಾರೆ.

Related posts

ಕೈ ಪಾಳಯದಲ್ಲಿ ಬಂಗಲೆಗಾಗಿ ಬೀದಿ ರಂಪಾಟ: ಹಿರಿಯ ನಾಯಕ ಮಹದೇವಪ್ಪ ಮನೆಯಲ್ಲಿದ್ದಾಗಲೇ ಜೆಸಿಬಿ ನುಗ್ಗಿಸಿದ ಭೈರತಿ ಸುರೇಶ್-ಪಾಪ ಅವರಿಗೆ ತುಂಬಾ ಆತುರವಿರಬಹುದು ಎಂದ ಮಹದೇವಪ್ಪ

ಕೈ ಪಾಳಯದಲ್ಲಿ ಬಂಗಲೆಗಾಗಿ ಬೀದಿ ರಂಪಾಟ: ಹಿರಿಯ ನಾಯಕ ಮಹದೇವಪ್ಪ ಮನೆಯಲ್ಲಿದ್ದಾಗಲೇ ಜೆಸಿಬಿ ನುಗ್ಗಿಸಿದ ಭೈರತಿ ಸುರೇಶ್-ಪಾಪ ಅವರಿಗೆ ತುಂಬಾ ಆತುರವಿರಬಹುದು ಎಂದ ಮಹದೇವಪ್ಪ

September 8, 2026
NICE ಪರಿಹಾರ ನಿವೇಶನ ವಿವಾದ: ಸರ್ಕಾರದ ನಿರ್ಧಾರಕ್ಕೆ ದೇವೇಗೌಡರ ಪ್ರಶ್ನೆಗಳ ಸುರಿಮಳೆ

NICE ಪರಿಹಾರ ನಿವೇಶನ ವಿವಾದ: ಸರ್ಕಾರದ ನಿರ್ಧಾರಕ್ಕೆ ದೇವೇಗೌಡರ ಪ್ರಶ್ನೆಗಳ ಸುರಿಮಳೆ

September 8, 2026

ಜೈಲಿನಲ್ಲಿ ಮುದ್ದೆ ಮುರಿದವನು ನೀನು ತಂಗಡಗಿ ಆಕ್ರೋಶ

ಜನಾರ್ದನ ರೆಡ್ಡಿ ಅವರ ಲೇ ತಮ್ಮಾ ಎಂಬ ಸಂಬೋಧನೆಗೆ ಕೆಂಡಾಮಂಡಲವಾಗಿರುವ ಶಿವರಾಜ್ ತಂಗಡಗಿ, ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಬರೆಯುವ ಮೂಲಕ ರೆಡ್ಡಿ ಅವರ ಇತಿಹಾಸವನ್ನು ಕೆದಕಿದ್ದಾರೆ. ಲೇ ಜನಾರ್ದನ ರೆಡ್ಡಿ, ಲೇ ಚಂಚಲಗುಡ ಕೈದಿ ನಂಬರ್ 697, ಜೈಲಿನಲ್ಲಿ ಮುದ್ದೆ ಮುರಿದ ಗಣಿ ಲೂಟಿಕೋರ ಎಂದು ಕರೆಯುವ ಮೂಲಕ ತಂಗಡಗಿ ನೇರ ದಾಳಿ ನಡೆಸಿದ್ದಾರೆ. ನನಗೂ ಲೇ ಎನ್ನಲು ಬರುತ್ತದೆ, ಆದರೆ ಸಂಸ್ಕಾರ ಅಡ್ಡಿ ಬರುತ್ತಿದೆ ಎಂದು ಹೇಳುತ್ತಲೇ ರೆಡ್ಡಿ ಅವರ ವ್ಯಕ್ತಿತ್ವವನ್ನು ಹರಾಜು ಹಾಕಿದ್ದಾರೆ.

ತಾಕತ್ತಿದ್ದರೆ ರಾಜೀನಾಮೆ ಕೊಟ್ಟು ಬಾ ಬಹಿರಂಗ ಸವಾಲು

ಕೇವಲ ಮಾತಿನಲ್ಲೇ ನಿಲ್ಲದ ತಂಗಡಗಿ, ಜನಾರ್ದನ ರೆಡ್ಡಿ ಅವರಿಗೆ ಬಹಿರಂಗ ಸವಾಲು ಎಸೆದಿದ್ದಾರೆ. ನಿನಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದು ಗಂಗಾವತಿಯಲ್ಲಿ ನನ್ನ ವಿರುದ್ಧ ಉಪ ಚುನಾವಣೆ ಎದುರಿಸು. ನೀನು ರಾಜೀನಾಮೆ ನೀಡಿದ 24 ಗಂಟೆಯೊಳಗೆ ನಾನೂ ರಾಜೀನಾಮೆ ನೀಡುತ್ತೇನೆ. ಜನಾದೇಶ ಲೂಟಿಕೋರನಿಗೋ ಅಥವಾ ಜನಸೇವಕನಿಗೋ ಎಂಬುದು ಅಲ್ಲೇ ತೀರ್ಮಾನವಾಗಲಿ ಎಂದು ಪಂಥಾಹ್ವಾನ ನೀಡಿದ್ದಾರೆ.

ನನ್ನ ಬೆಂಬಲದ ಭಿಕ್ಷೆಯಿಂದ ನೀವು ಮಂತ್ರಿಗಳಾಗಿದ್ದು

ಹಳೆಯ ನೆನಪುಗಳನ್ನು ಮೆಲುಕು ಹಾಕಿರುವ ಸಚಿವ ತಂಗಡಗಿ, ನಾನು ಪಕ್ಷೇತರನಾಗಿ ಗೆದ್ದಾಗ ನನ್ನ ಬೆಂಬಲ ಕೋರಿ ನನ್ನ ಮನೆ ಮುಂದೆ ಕಾದು ಕುಳಿತಿದ್ದು ನಿನ್ನ ಪಟಾಲಂ. ಅಂದು ತಮ್ಮುಡು ತಮ್ಮುಡು ಎಂದು ಗೋಗರೆದು ನನ್ನ ಬೆಂಬಲ ಪಡೆದು ನೀವಿಬ್ಬರು ಅಣ್ಣ ತಮ್ಮಂದಿರು ಮಂತ್ರಿಗಳಾದಿರಿ. ಅದು ನನ್ನ ಕ್ಷೇತ್ರದ ಜನ ನೀಡಿದ ಭಿಕ್ಷೆ ಎಂದು ಕುಟುಕಿದ್ದಾರೆ. ಗಣಿ ಲೂಟಿಯ ಅಹಂಕಾರ ನಿನ್ನ ನೆತ್ತಿಗೇರಿದೆ, ಕೃಷ್ಣ ಜನ್ಮಾಷ್ಟಮಿಯ ದಿನ ನಿನ್ನನ್ನು ಕೃಷ್ಣ ಜನ್ಮಸ್ಥಾನಕ್ಕೆ ಅಂದರೆ ಜೈಲಿಗೆ ಕಳಿಸಿದ್ದು ನೆನಪಿದೆಯೇ ಎಂದು ವ್ಯಂಗ್ಯವಾಡಿದ್ದಾರೆ.

ಕೊಪ್ಪಳ ಜಿಲ್ಲೆಯ ಇಬ್ಬರು ಪ್ರಭಾವಿ ನಾಯಕರ ನಡುವಿನ ಈ ವಾರ್ ಈಗ ರಾಜ್ಯ ರಾಜಕಾರಣದ ಗಮನ ಸೆಳೆದಿದೆ. ಅಭಿವೃದ್ಧಿ ವಿಚಾರಗಳನ್ನು ಬಿಟ್ಟು ಪರಸ್ಪರ ಕೈದಿ, ಲೂಟಿಕೋರ ಎಂಬ ಹಣೆಪಟ್ಟಿ ಹಚ್ಚಿಕೊಳ್ಳುತ್ತಿರುವುದು ಮತದಾರರಲ್ಲಿ ಅಸಮಾಧಾನ ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ಬದ್ಧ ವೈರಿಗಳ ಕಾಳಗ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ShareTweetSendShare
Join us on:

Related Posts

ಕೈ ಪಾಳಯದಲ್ಲಿ ಬಂಗಲೆಗಾಗಿ ಬೀದಿ ರಂಪಾಟ: ಹಿರಿಯ ನಾಯಕ ಮಹದೇವಪ್ಪ ಮನೆಯಲ್ಲಿದ್ದಾಗಲೇ ಜೆಸಿಬಿ ನುಗ್ಗಿಸಿದ ಭೈರತಿ ಸುರೇಶ್-ಪಾಪ ಅವರಿಗೆ ತುಂಬಾ ಆತುರವಿರಬಹುದು ಎಂದ ಮಹದೇವಪ್ಪ

ಕೈ ಪಾಳಯದಲ್ಲಿ ಬಂಗಲೆಗಾಗಿ ಬೀದಿ ರಂಪಾಟ: ಹಿರಿಯ ನಾಯಕ ಮಹದೇವಪ್ಪ ಮನೆಯಲ್ಲಿದ್ದಾಗಲೇ ಜೆಸಿಬಿ ನುಗ್ಗಿಸಿದ ಭೈರತಿ ಸುರೇಶ್-ಪಾಪ ಅವರಿಗೆ ತುಂಬಾ ಆತುರವಿರಬಹುದು ಎಂದ ಮಹದೇವಪ್ಪ

by Shwetha
September 8, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯುವುದು ಸಾಮಾನ್ಯ. ಆದರೆ ಈಗ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಭಾವಿ ನಾಯಕರ ನಡುವೆ ಸರ್ಕಾರಿ ಬಂಗಲೆಗಾಗಿ ಜಂಗೀ ಕುಸ್ತಿ...

NICE ಪರಿಹಾರ ನಿವೇಶನ ವಿವಾದ: ಸರ್ಕಾರದ ನಿರ್ಧಾರಕ್ಕೆ ದೇವೇಗೌಡರ ಪ್ರಶ್ನೆಗಳ ಸುರಿಮಳೆ

NICE ಪರಿಹಾರ ನಿವೇಶನ ವಿವಾದ: ಸರ್ಕಾರದ ನಿರ್ಧಾರಕ್ಕೆ ದೇವೇಗೌಡರ ಪ್ರಶ್ನೆಗಳ ಸುರಿಮಳೆ

by Shwetha
September 8, 2026
0

ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನಿವೇಶನ ಹಂಚಿಕೆ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರ ಇದೀಗ ರಾಜಕೀಯ ಹಾಗೂ ಕಾನೂನು ಚರ್ಚೆಗೆ...

108 ಆಂಬುಲೆನ್ಸ್ ನೌಕರರ ಪ್ರತಿಭಟನೆ: 15 ದಿನದಲ್ಲಿ ಬೇಡಿಕೆ ಈಡೇರಿಸದಿದ್ದರೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ

108 ಆಂಬುಲೆನ್ಸ್ ನೌಕರರ ಪ್ರತಿಭಟನೆ: 15 ದಿನದಲ್ಲಿ ಬೇಡಿಕೆ ಈಡೇರಿಸದಿದ್ದರೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ

by Shwetha
September 8, 2026
0

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ 108 ಆಂಬುಲೆನ್ಸ್ ಸೇವೆಯ ಸಿಬ್ಬಂದಿ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ನೌಕರರು, 15...

ಅಂಬೇಡ್ಕರ್ ಬಗ್ಗೆ ನೀಚ ಮಾತು ಸಂವಿಧಾನ ಬರೆಯುವಾಗ ಮದ್ಯ ಸೇವಿಸಿದ್ದಿರಾ ಎಂದು ಪ್ರಶ್ನಿಸಿದ ವ್ಯಕ್ತಿಯ ವಿರುದ್ಧ ಜ‌ನಾಕ್ರೋಶ

ಅಂಬೇಡ್ಕರ್ ಬಗ್ಗೆ ನೀಚ ಮಾತು ಸಂವಿಧಾನ ಬರೆಯುವಾಗ ಮದ್ಯ ಸೇವಿಸಿದ್ದಿರಾ ಎಂದು ಪ್ರಶ್ನಿಸಿದ ವ್ಯಕ್ತಿಯ ವಿರುದ್ಧ ಜ‌ನಾಕ್ರೋಶ

by Shwetha
September 8, 2026
0

ಮಂಡ್ಯ: ಭಾರತ ಸಂವಿಧಾನದ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೀಳಾಗಿ ಮಾತನಾಡಿರುವ ವಿಡಿಯೋವೊಂದು ಈಗ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ....

ಬೆಂಗಳೂರಿನಲ್ಲಿ ಕಾಫಿ-ಟೀ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ

ಬೆಂಗಳೂರಿನಲ್ಲಿ ಕಾಫಿ-ಟೀ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ

by Shwetha
September 8, 2026
0

ದಿನನಿತ್ಯದ ಜೀವನದ ಅವಿಭಾಜ್ಯ ಭಾಗವಾಗಿರುವ ಕಾಫಿ ಮತ್ತು ಟೀ ಪ್ರಿಯರಿಗೆ ಇದೀಗ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಸಕ್ಕರೆ ಮತ್ತು ಬೆಲ್ಲದ ಬೆಲೆಯಲ್ಲಿ ಇತ್ತೀಚೆಗೆ ಏರಿಳಿತ ಕಂಡುಬಂದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram