ADVERTISEMENT
Tuesday, September 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಕೈ ಪಾಳಯದಲ್ಲಿ ಬಂಗಲೆಗಾಗಿ ಬೀದಿ ರಂಪಾಟ: ಹಿರಿಯ ನಾಯಕ ಮಹದೇವಪ್ಪ ಮನೆಯಲ್ಲಿದ್ದಾಗಲೇ ಜೆಸಿಬಿ ನುಗ್ಗಿಸಿದ ಭೈರತಿ ಸುರೇಶ್-ಪಾಪ ಅವರಿಗೆ ತುಂಬಾ ಆತುರವಿರಬಹುದು ಎಂದ ಮಹದೇವಪ್ಪ

Shwetha by Shwetha
September 8, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯುವುದು ಸಾಮಾನ್ಯ. ಆದರೆ ಈಗ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಭಾವಿ ನಾಯಕರ ನಡುವೆ ಸರ್ಕಾರಿ ಬಂಗಲೆಗಾಗಿ ಜಂಗೀ ಕುಸ್ತಿ ಶುರುವಾಗಿದೆ. ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಡಾ. ಎಚ್.ಸಿ. ಮಹದೇವಪ್ಪ ಮತ್ತು ಸಚಿವ ಭೈರತಿ ಸುರೇಶ್ ನಡುವಿನ ಈ ಬಂಗಲೆ ವಾರ್ ಈಗ ಬೀದಿಗೆ ಬಂದಿದ್ದು, ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.

ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಪ್ರದೇಶವಾದ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸ ಈಗ ವಿವಾದದ ಕೇಂದ್ರಬಿಂದು. ಈ ಮನೆಯಲ್ಲಿ ಸದ್ಯ ಹಿರಿಯ ನಾಯಕ ಡಾ. ಎಚ್.ಸಿ. ಮಹದೇವಪ್ಪ ವಾಸವಿದ್ದಾರೆ. ಆದರೆ ಇದೇ ಮನೆ ಈಗ ಸಚಿವ ಭೈರತಿ ಸುರೇಶ್ ಅವರಿಗೆ ಹಂಚಿಕೆಯಾಗಿದೆ. ನಿಯಮದ ಪ್ರಕಾರ ಮನೆ ಖಾಲಿ ಮಾಡಲು ಕಾಲಾವಕಾಶವಿದ್ದರೂ, ಭೈರತಿ ಸುರೇಶ್ ತೋರಿರುವ ಅತಿಯಾದ ಆತುರ ಮತ್ತು ವರ್ತನೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Related posts

ಮರ್ಯಾದೆ ಮರೆತ ನಾಯಕರ ಬೀದಿ ರಂಪಾಟ:ಲೇ ಚಂಚಲಗುಡ ಕೈದಿ ನಂಬರ್ 697 ಜೈಲಿನಲ್ಲಿ ಮುದ್ದೆ ಮುರಿದವನು ನೀನು ಎಂದು ರೆಡ್ಡಿ ವಿರುದ್ಧ ತಂಗಡಗಿ ಆಕ್ರೋಶ

ಮರ್ಯಾದೆ ಮರೆತ ನಾಯಕರ ಬೀದಿ ರಂಪಾಟ:ಲೇ ಚಂಚಲಗುಡ ಕೈದಿ ನಂಬರ್ 697 ಜೈಲಿನಲ್ಲಿ ಮುದ್ದೆ ಮುರಿದವನು ನೀನು ಎಂದು ರೆಡ್ಡಿ ವಿರುದ್ಧ ತಂಗಡಗಿ ಆಕ್ರೋಶ

September 8, 2026
NICE ಪರಿಹಾರ ನಿವೇಶನ ವಿವಾದ: ಸರ್ಕಾರದ ನಿರ್ಧಾರಕ್ಕೆ ದೇವೇಗೌಡರ ಪ್ರಶ್ನೆಗಳ ಸುರಿಮಳೆ

NICE ಪರಿಹಾರ ನಿವೇಶನ ವಿವಾದ: ಸರ್ಕಾರದ ನಿರ್ಧಾರಕ್ಕೆ ದೇವೇಗೌಡರ ಪ್ರಶ್ನೆಗಳ ಸುರಿಮಳೆ

September 8, 2026

ಮಹದೇವಪ್ಪ ಮನೆಯೊಳಗಿದ್ದಾಗಲೇ ನವೀಕರಣ

ಸೌಜನ್ಯದ ಮಿತಿಯನ್ನೂ ಮರೆತ ಸಚಿವ ಭೈರತಿ ಸುರೇಶ್, ಮಹದೇವಪ್ಪ ಅವರು ಇನ್ನೂ ಮನೆಯಲ್ಲೇ ವಾಸ್ತವ್ಯ ಹೂಡಿರುವಾಗಲೇ ಅಲ್ಲಿಗೆ ಪೇಂಟರ್ ಗಳನ್ನು ಕಳುಹಿಸಿ ಬಣ್ಣ ಬಳಿಯುವ ಕೆಲಸ ಆರಂಭಿಸಿದ್ದಾರೆ. ಅಷ್ಟಕ್ಕೇ ನಿಲ್ಲದ ಸಚಿವರ ಆತುರ, ಮಹದೇವಪ್ಪ ಅವರು ಸಾರ್ವಜನಿಕರನ್ನು ಭೇಟಿ ಮಾಡಲು ಬಳಸುತ್ತಿದ್ದ ಶೀಟ್ ನ ಶೆಡ್ ಅನ್ನು ಜೆಸಿಬಿ ಮೂಲಕ ನೆಲಸಮ ಮಾಡಿಸಿದೆ. ಹಿರಿಯ ನಾಯಕರೊಬ್ಬರು ಮನೆಯಲ್ಲಿದ್ದಾಗಲೇ ಈ ರೀತಿ ದರ್ಪ ಪ್ರದರ್ಶಿಸಿರುವುದು ಸ್ವತಃ ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಕೇವಲ ಎರಡು ದಿನದ ಗಡುವು: ಸಿಬ್ಬಂದಿಗೆ ಆವಾಜ್

ಮೂಲಗಳ ಪ್ರಕಾರ, ಸಚಿವ ಭೈರತಿ ಸುರೇಶ್ ಅವರು ಮಹದೇವಪ್ಪ ಅವರ ಮನೆಯ ಸಿಬ್ಬಂದಿಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಕೇವಲ ಎರಡು ದಿನಗಳಲ್ಲಿ ಮನೆಯನ್ನು ಸಂಪೂರ್ಣವಾಗಿ ಖಾಲಿ ಮಾಡಬೇಕು, ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಚಿವರು ಗುಡುಗಿದ್ದಾರೆ ಎನ್ನಲಾಗುತ್ತಿದ್ದು, ಇದು ಹಿರಿಯ ನಾಯಕನಿಗೆ ಮಾಡಿದ ಅಪಮಾನ ಎಂದು ಬಣ್ಣಿಸಲಾಗುತ್ತಿದೆ.

ಪಾಪ ಅವರಿಗೆ ಆತುರ ಇರಬಹುದು ಮಹದೇವಪ್ಪ ಮಾರ್ಮಿಕ ವ್ಯಂಗ್ಯ

ತಮ್ಮ ನಿವಾಸದ ಮೇಲೆ ನಡೆದ ಈ ಅನಿರೀಕ್ಷಿತ ದಾಳಿಯಿಂದ ಅತೀವ ಬೇಸರಗೊಂಡಿರುವ ಡಾ. ಎಚ್.ಸಿ. ಮಹದೇವಪ್ಪ, ಅತ್ಯಂತ ಸಂಯಮದಿಂದಲೇ ಭೈರತಿ ಸುರೇಶ್ ಅವರಿಗೆ ತಿರುಗೇಟು ನೀಡಿದ್ದಾರೆ. ಪಾಪ, ಅವರಿಗೆ ತುಂಬಾ ಕಷ್ಟವಿರಬಹುದು ಅಥವಾ ಈ ಮನೆಗೆ ಬರಲು ತುಂಬಾ ಆತುರವಿರಬಹುದು. ಅವರು ಸಚಿವರಾಗಿದ್ದಾರೆ, ಅವರ ಕೆಲಸಕ್ಕೆ ನಾನೇಕೆ ಅಡ್ಡಿಪಡಿಸಲಿ? ನಾನು ಬಾಡಿಗೆ ಮನೆ ಹುಡುಕುತ್ತಿದ್ದೇನೆ, ಸಿಕ್ಕ ತಕ್ಷಣ ಹೊರಡುತ್ತೇನೆ ಎಂದು ಹೇಳುವ ಮೂಲಕ ಭೈರತಿ ಸುರೇಶ್ ಅವರ ನಡೆಗೆ ಸಾರ್ವಜನಿಕವಾಗಿಯೇ ಚಾಟಿ ಬೀಸಿದ್ದಾರೆ.

ಒಟ್ಟಿನಲ್ಲಿ, ಒಂದೇ ಪಕ್ಷದ ಇಬ್ಬರು ಪ್ರಭಾವಿ ನಾಯಕರ ನಡುವಿನ ಈ ಬಂಗಲೆ ಜಗಳ ಈಗ ಹಾದಿ ರಂಪ ರಾದ್ಧಾಂತವಾಗಿ ಮಾರ್ಪಟ್ಟಿದೆ. ಹಿರಿಯರಿಗೆ ಗೌರವ ನೀಡುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿ ಮಾಯವಾಗುತ್ತಿದೆಯೇ ಎಂಬ ಪ್ರಶ್ನೆ ಈಗ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಸದ್ಯಕ್ಕೆ ಈ ಬಂಗಲೆ ವಾರ್ ಡಿಕೆಶಿ ಅವರ ಅಂಗಳಕ್ಕೆ ತಲುಪಿದ್ದು, ಮುಖ್ಯಮಂತ್ರಿಗಳು ಈ ಇಬ್ಬರು ಆಪ್ತರ ಜಗಳವನ್ನು ಹೇಗೆ ಶಮನ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ShareTweetSendShare
Join us on:

Related Posts

ಮರ್ಯಾದೆ ಮರೆತ ನಾಯಕರ ಬೀದಿ ರಂಪಾಟ:ಲೇ ಚಂಚಲಗುಡ ಕೈದಿ ನಂಬರ್ 697 ಜೈಲಿನಲ್ಲಿ ಮುದ್ದೆ ಮುರಿದವನು ನೀನು ಎಂದು ರೆಡ್ಡಿ ವಿರುದ್ಧ ತಂಗಡಗಿ ಆಕ್ರೋಶ

ಮರ್ಯಾದೆ ಮರೆತ ನಾಯಕರ ಬೀದಿ ರಂಪಾಟ:ಲೇ ಚಂಚಲಗುಡ ಕೈದಿ ನಂಬರ್ 697 ಜೈಲಿನಲ್ಲಿ ಮುದ್ದೆ ಮುರಿದವನು ನೀನು ಎಂದು ರೆಡ್ಡಿ ವಿರುದ್ಧ ತಂಗಡಗಿ ಆಕ್ರೋಶ

by Shwetha
September 8, 2026
0

ಕೊಪ್ಪಳ: ರಾಜ್ಯ ರಾಜಕಾರಣದಲ್ಲಿ ಸಭ್ಯತೆಯ ಗೆರೆಗಳು ಅಳಿಸಿ ಹೋಗುತ್ತಿವೆಯೇ ಎಂಬ ಸಂಶಯ ಮೂಡುವಂತೆ ಇಬ್ಬರು ಜನಪ್ರತಿನಿಧಿಗಳ ನಡುವಿನ ಜಗಳ ಈಗ ಬೀದಿ ರಂಪಾಟಕ್ಕೆ ಸಾಕ್ಷಿಯಾಗಿದೆ. ಗಣಿ ಧಣಿ,...

NICE ಪರಿಹಾರ ನಿವೇಶನ ವಿವಾದ: ಸರ್ಕಾರದ ನಿರ್ಧಾರಕ್ಕೆ ದೇವೇಗೌಡರ ಪ್ರಶ್ನೆಗಳ ಸುರಿಮಳೆ

NICE ಪರಿಹಾರ ನಿವೇಶನ ವಿವಾದ: ಸರ್ಕಾರದ ನಿರ್ಧಾರಕ್ಕೆ ದೇವೇಗೌಡರ ಪ್ರಶ್ನೆಗಳ ಸುರಿಮಳೆ

by Shwetha
September 8, 2026
0

ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನಿವೇಶನ ಹಂಚಿಕೆ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರ ಇದೀಗ ರಾಜಕೀಯ ಹಾಗೂ ಕಾನೂನು ಚರ್ಚೆಗೆ...

108 ಆಂಬುಲೆನ್ಸ್ ನೌಕರರ ಪ್ರತಿಭಟನೆ: 15 ದಿನದಲ್ಲಿ ಬೇಡಿಕೆ ಈಡೇರಿಸದಿದ್ದರೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ

108 ಆಂಬುಲೆನ್ಸ್ ನೌಕರರ ಪ್ರತಿಭಟನೆ: 15 ದಿನದಲ್ಲಿ ಬೇಡಿಕೆ ಈಡೇರಿಸದಿದ್ದರೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ

by Shwetha
September 8, 2026
0

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ 108 ಆಂಬುಲೆನ್ಸ್ ಸೇವೆಯ ಸಿಬ್ಬಂದಿ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ನೌಕರರು, 15...

ಅಂಬೇಡ್ಕರ್ ಬಗ್ಗೆ ನೀಚ ಮಾತು ಸಂವಿಧಾನ ಬರೆಯುವಾಗ ಮದ್ಯ ಸೇವಿಸಿದ್ದಿರಾ ಎಂದು ಪ್ರಶ್ನಿಸಿದ ವ್ಯಕ್ತಿಯ ವಿರುದ್ಧ ಜ‌ನಾಕ್ರೋಶ

ಅಂಬೇಡ್ಕರ್ ಬಗ್ಗೆ ನೀಚ ಮಾತು ಸಂವಿಧಾನ ಬರೆಯುವಾಗ ಮದ್ಯ ಸೇವಿಸಿದ್ದಿರಾ ಎಂದು ಪ್ರಶ್ನಿಸಿದ ವ್ಯಕ್ತಿಯ ವಿರುದ್ಧ ಜ‌ನಾಕ್ರೋಶ

by Shwetha
September 8, 2026
0

ಮಂಡ್ಯ: ಭಾರತ ಸಂವಿಧಾನದ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೀಳಾಗಿ ಮಾತನಾಡಿರುವ ವಿಡಿಯೋವೊಂದು ಈಗ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ....

ಬೆಂಗಳೂರಿನಲ್ಲಿ ಕಾಫಿ-ಟೀ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ

ಬೆಂಗಳೂರಿನಲ್ಲಿ ಕಾಫಿ-ಟೀ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ

by Shwetha
September 8, 2026
0

ದಿನನಿತ್ಯದ ಜೀವನದ ಅವಿಭಾಜ್ಯ ಭಾಗವಾಗಿರುವ ಕಾಫಿ ಮತ್ತು ಟೀ ಪ್ರಿಯರಿಗೆ ಇದೀಗ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಸಕ್ಕರೆ ಮತ್ತು ಬೆಲ್ಲದ ಬೆಲೆಯಲ್ಲಿ ಇತ್ತೀಚೆಗೆ ಏರಿಳಿತ ಕಂಡುಬಂದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram