ADVERTISEMENT
Tuesday, November 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹಿಂದೂಗಳಿಗೆ ಬೆದರಿಕೆ ಹಾಕುವ ಕಾಂಗ್ರೆಸ್‌, ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

admin by admin
September 16, 2026
in Newsbeat, State, Uncategorized, ರಾಜ್ಯ
r-ashoka-congress-hindus-ganeshotsava-maddur

r-ashoka-congress-hindus-ganeshotsava-maddur

Share on FacebookShare on TwitterShare on WhatsappShare on Telegram

ಹಿಂದೂಗಳಿಗೆ ಬೆದರಿಕೆ ಹಾಕುವ ಕಾಂಗ್ರೆಸ್‌, ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಾರೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಂಗಳೂರು/ಮದ್ದೂರು : ಕಾಂಗ್ರೆಸ್‌ ಸರ್ಕಾರ ಹಿಂದೂಗಳ ಗಣೇಶೋತ್ಸವಕ್ಕೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು. ತಾಕತ್ತಿದ್ದರೆ ಹಿಂದೂಗಳನ್ನು ಕರೆದು ಎಚ್ಚರಿಕೆ ನೀಡಿದಂತೆಯೇ ಮುಸ್ಲಿಮರಿಗೂ ಎಚ್ಚರಿಕೆ ನೀಡಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಸವಾಲೆಸೆದರು.

Related posts

ಪುತ್ರನ ಪಟ್ಟ ಉಳಿಸಿಕೊಳ್ಳಲು ದೇವೇಗೌಡರ ಮೊರೆ ಹೋದ ಯಡಿಯೂರಪ್ಪ: ಮುಂದಿನ ಹತ್ತು ವರ್ಷ ಸಿಎಂ ಆಕಾಂಕ್ಷಿಯಲ್ಲ ಎಂದು ವಿಜಯೇಂದ್ರ ಘೋಷಿಸಲಿ-ಇಂದು ಒಂದಾಗಿದ್ದೇವೆ ಎನ್ನುವ ಬಿಎಸ್‌ವೈ ಮತ್ತು ದೇವೇಗೌಡರು ನಾಳೆ ಕಚ್ಚಾಡುವುದು ಖಚಿತ ಎಂದ ಯತ್ನಾಳ್

ಪುತ್ರನ ಪಟ್ಟ ಉಳಿಸಿಕೊಳ್ಳಲು ದೇವೇಗೌಡರ ಮೊರೆ ಹೋದ ಯಡಿಯೂರಪ್ಪ: ಮುಂದಿನ ಹತ್ತು ವರ್ಷ ಸಿಎಂ ಆಕಾಂಕ್ಷಿಯಲ್ಲ ಎಂದು ವಿಜಯೇಂದ್ರ ಘೋಷಿಸಲಿ-ಇಂದು ಒಂದಾಗಿದ್ದೇವೆ ಎನ್ನುವ ಬಿಎಸ್‌ವೈ ಮತ್ತು ದೇವೇಗೌಡರು ನಾಳೆ ಕಚ್ಚಾಡುವುದು ಖಚಿತ ಎಂದ ಯತ್ನಾಳ್

November 3, 2026
SIR ಪಟ್ಟಿಯ ಕುರಿತು ಅಂತಿಮ ನಿರ್ಧಾರ ಇನ್ನೂ ಬಾಕಿ: ಮುಖ್ಯಮಂತ್ರಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

SIR ಪಟ್ಟಿಯ ಕುರಿತು ಅಂತಿಮ ನಿರ್ಧಾರ ಇನ್ನೂ ಬಾಕಿ: ಮುಖ್ಯಮಂತ್ರಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

November 3, 2026

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಎಂದು ನಾನು ಭಾವಿಸಿದ್ದು, ಅವರೊಬ್ಬ ದೊಡ್ಡ ನಾಯಕರಾಗಿರಬೇಕು ಎಂದು ನಿರೀಕ್ಷೆ ಮಾಡಿದ್ದೆ. ಆದರೆ ಅವರು ಗ್ರಾಮದ ಇನ್ಸ್‌ಪೆಕ್ಟರ್‌ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ. ಪೊಲೀಸರು ಜನರಿಗೆ ಧಮಕಿ ಹಾಕಬೇಕಾಗುತ್ತದೆ ಎಂದಿದ್ದಾರೆ. ದಲಿತರ ಮೇಲೆ ಹಲ್ಲೆ ಮಾಡಿದ, ಹೆಣ್ಣುಮಗಳ ಬದುಕು ಹಾಳು ಮಾಡಿ ಚರಿತ್ರೆ ಇರುವ ಟಿ.ನರಸೀಪುರ ಠಾಣೆಯ ಇನ್ಸ್‌ಪೆಕ್ಟರ್‌ ಪರವಾಗಿ ಮಾತಾಡುತ್ತಾರೆ ಎಂದರೆ ಮುಖ್ಯಮಂತ್ರಿ ಯಾವ ಮಟ್ಟಕ್ಕೆ ಹೋಗಿದ್ದಾರೆ? ನಾನಾದರೂ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹೋಗಿದ್ದೇನೆ. ಹಿಂದೂಗಳಿಗೆ ಆ ರೀತಿಯ ಸಂದೇಶ ನೀಡಿದರೆ ಎಲ್ಲ ಪೊಲೀಸ್‌ ಠಾಣೆಗಳಲ್ಲೂ ಹೀಗೆಯೇ ನಡೆಯುತ್ತದೆ. ಕ್ರಿಮಿನಲ್‌ ಹಿನ್ನೆಲೆ ಇರುವ ಪೊಲೀಸ್‌ ಅಧಿಕಾರಿಯನ್ನು ಮುಖ್ಯಮಂತ್ರಿಯೇ ಸಮರ್ಥಿಸುತ್ತಾರೆ ಎಂದರು.

ಬಿಜೆಪಿ ನಾಯಕರ ಎದೆ ಸೀಳಿದರೆ ಆಂಜನೇಯನೋ ಶ್ರೀರಾಮನೋ ಕಾಣುತ್ತಾನೆ. ಆದರೆ ಕಾಂಗ್ರೆಸ್‌ ನಾಯಕರ ಎದೆ ಸೀಳಿದರೆ ಅಲ್ಲಾ ಮಾತ್ರ ಕಾಣುತ್ತಾನೆ. ಪಾಕಿಸ್ತಾನ, ಬಾಂಗ್ಲಾ ಸೃಷ್ಟಿ ಮಾಡಿದ್ದು, ಜಮ್ಮು ಕಾಶ್ಮೀರವನ್ನು ಪ್ರತ್ಯೇಕ ಮಾಡಿದ್ದೇ ಕಾಂಗ್ರೆಸ್‌. ಆದ್ದರಿಂದ ನಮಗೆ ದೇಶಭಕ್ತಿಯ ಪಾಠ ಮಾಡಬೇಕಿಲ್ಲ. ಆರ್‌ಎಸ್‌ಎಸ್‌ ಪಥ ಸಂಚಲನ ತಡೆಯಲು ಕಾನೂನು ತರಲಾಗಿದೆ. ಹಾಗೆಯೇ, ಮಸೀದಿಗಳ ಮುಂಭಾಗ ಯಾರೂ ಮೆರವಣಿಗೆ ಮಾಡಬಾರದೆಂದು ಆದೇಶ ಮಾಡಲಿ. ಜೊತೆಗೆ ಮುಸ್ಲಿಮರು ಹಿಂದೂ ದೇವಾಲಯ, ಜೈನ ದೇವಾಲಯಗಳ ಮುಂದೆ ಹೋಗಬಾರದೆಂದು ಕಾನೂನು ಮಾಡಲಿ. ಸರ್ಕಾರಕ್ಕೆ ತಾಕತ್ತಿದ್ದರೆ, ಮದ್ದೂರಲ್ಲಿ ಕಲ್ಲು ತೂರಾಟ ಮಾಡಿದವರನ್ನು ಕರೆಸಿ ನಿಮಗೆ ಗ್ರಹಚಾರ ಬಿಡಿಸುತ್ತೇನೆಂದು ಹೇಳಬೇಕಿತ್ತು. ಮತಕ್ಕಾಗಿ ಒನ್‌ ಸೈಡ್‌ ಆಗುವುದು ಬೇಡ. ಮದ್ದೂರಲ್ಲಿ ಕಲ್ಲು ಹೊಡೆದವರು ಬೇರೆಯವರು. ಆದರೆ ಹಿಂದು ಮುಖಂಡರಿಗೆ ಈಗ ನೋಟಿಸ್‌ ನೀಡಲಾಗಿದೆ. ನಾನು ಮದ್ದೂರಿಗೆ ಹೋಗಿ ಬೆಂಬಲ ನೀಡುತ್ತೇನೆ. ಹಿಂದೂಗಳಿಗೆ ಅಪಮಾನ ಕಡೆಗಳಿಗೆ ಹೋಗಿ ನಾನು ಬೆಂಬಲ ನೀಡುತ್ತೇನೆ.

ಸಿಎಂ ಡಿ.ಕೆ.ಶಿವಕುಮಾರ್‌ ಅವರು ಕುಮಾರಸ್ವಾಮಿಯರವ ದಾಖಲೆಗಳನ್ನು ಇಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದು ವೈಯಕ್ತಿಕ ವಿಚಾರಕ್ಕೆ ಹೋಗಿದೆ. ಕುಮಾರಸ್ವಾಮಿ ಅವರ ಬಳಿ ದಾಖಲೆಗಳಿವೆ. ಕಾಂಗ್ರೆಸ್‌ನವರು ಭಯೋತ್ಪಾದಕನನ್ನು ಬ್ರದರ್‌ ಎಂದರು. ಕಾಶ್ಮೀರದಲ್ಲಿ ಉಗ್ರವಾದಿಗಳೊಂದಿಗೆ ಸಂಪರ್ಕ ಇಟ್ಟುಕೊಂಡ ಉಮರ್‌ ಖಾಲಿದ್‌ನನ್ನು ರಾಷ್ಟ್ರೀಯವಾದಿ ಎಂದಿದ್ದಾರೆ. ಇದು ನಕಲಿ ಕಾಂಗ್ರೆಸ್‌. ಇದರಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಇಲ್ಲ, ಇದು ಸೋನಿಯಾ ಗಾಂಧಿಯವರ ಇಟಲಿ ಕಾಂಗ್ರೆಸ್‌ ಎಂದರು.

ಮದ್ದೂರಿಯಲ್ಲಿ ಭಾಗಿ

ಮದ್ದೂರಿನಲ್ಲಿ ಗಣೇಶೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ವರ್ಷ ಹಿಂದೂಗಳ ಮೇಲೆ ಬೆದರಿಕೆ ಹಾಕಲಾಗಿತ್ತು. ಆಗ ಪ್ರತಿ ವರ್ಷ ಬರುತ್ತೇವೆಂದು ಹಿಂದೂ ಕಾರ್ಯಕರ್ತರಿಗೆ ಭರವಸೆ ನೀಡಿದ್ದು, ಈಗ ಇಲ್ಲಿಗೆ ಭೇಟಿ ನೀಡಿದ್ದೇವೆ. ಈ ತಾಲಿಬಾನ್‌ ಸರ್ಕಾರ ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿದೆ. ಟಿ.ನರಸೀಪುರದ ಘಟನೆ ಸಣ್ಣದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಎಲ್ಲೇ ಹಿಂದೂಗಳಿಗೆ ನೋವಾದರೂ ನಾವು ಅಲ್ಲಿಗೆ ಹೋಗುತ್ತೇವೆ. ಅಲ್ಲಿನ ಇನ್ಸ್‌ಪೆಕ್ಟರ್‌ ಸಂಘಟನೆಗಳವರ ಜೊತೆ ಅವಾಚ್ಯವಾಗಿ ಮಾತಾಡಿದ್ದಾರೆ. ಹಿಂದೂಗಳು ಮಾತ್ರ ಮಸೀದಿ ಮುಂದೆ ಹೋಗಬಾರದು. ಆದರೆ ಮುಸ್ಲಿಮರು ಮಾತ್ರ ಮಸೀದಿಯಲ್ಲಿ ಇಡೀ ವರ್ಷ ಆಜಾನ್‌ ಕೂಗಬಹುದು. ಮುಖ್ಯಮಂತ್ರಿಗಳು ನದಿಯಲ್ಲಿ ಮುಳುಗಿ ನಾಮ ಹಾಕಿದರೆ ಅದನ್ನು ಯಾರೂ ನಂಬಲ್ಲ. ನಿಜವಾದ ಹಿಂದೂ ಆಗಿದ್ದರೆ, ಪೊಲೀಸರ ವಿರುದ್ಧ ಕಠಿಣ ಕ್ರಮ ವಹಿಸಬೇಕಿತ್ತು. ಈ ಕಪಟ ಹಿಂದುತ್ವವನ್ನು ಯಾರೂ ನಂಬಲ್ಲ ಎಂದರು.

ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನೋಡುವುದು ಕಾಂಗ್ರೆಸ್‌ನ ರಕ್ತದಲ್ಲೇ ಇದೆ. ಟಿ.ನರಸೀಪುರದ ಠಾಣೆಯ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಿಮಿನಲ್‌ ಕೇಸ್‌ಗಳಿವೆ. ಹಿಂದೂ ಪರಂಪರೆ ನಮಗೆ ಚೆನ್ನಾಗಿ ಗೊತ್ತಿದೆ ಎಂದರು.

ಪೊಲೀಸರ ಗಣೇಶೋತ್ಸವ

ಕಾಂಗ್ರೆಸ್‌ನ ನಿಯಮಗಳನ್ನು ನೋಡಿದರೆ ಬ್ರಿಟಿಷರೇ ವಾಸಿ ಎನ್ನಿಸುತ್ತದೆ. ಗಣೇಶೋತ್ಸವಕ್ಕೆ ಆ ಮಟ್ಟಿಗಿನ ನಿರ್ಬಂಧಗಳನ್ನು ಹೇರಿದ್ದಾರೆ. ಇದನ್ನು ಹಿಂದೂಗಳ ಗಣೇಶೋತ್ಸವ ಎನ್ನಲಾಗುವುದಿಲ್ಲ. ಇದನ್ನು ಪೊಲೀಸರ ಗಣೇಶೋತ್ಸವ ಎನ್ನಬೇಕಾಗುತ್ತದೆ. ಹಿಂದೂಗಳನ್ನೇ ಕರೆದು ಬೆದರಿಕೆ ಹಾಕುತ್ತಾರೆ. ಆದರೆ ರಸ್ತೆಯಲ್ಲೇ ಕೂರುವ ಮುಸ್ಲಿಮರನ್ನು ಕರೆದು ಎಚ್ಚರಿಕೆ ನೀಡುವುದಿಲ್ಲ. ಚುನಾವಣೆ ಬಂದಾಗ ಹಿಂದೂ ಆಗುವ ಕಾಂಗ್ರೆಸ್ಸಿಗರು ನಂತರ ಮುಸ್ಲಿಮರಾಗಿ ಬದಲಾಗುತ್ತಾರೆ ಎಂದರು.

ಮಸೀದಿಯಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಆಜಾನ್‌ ಕೂಗುತ್ತಾರೆ. ಇಷ್ಟೇ ಡೆಸಿಬಲ್‌ ಇರಬೇಕೆಂದು ಕೋರ್ಟ್‌ ಆದೇಶವಿದ್ದರೂ ಅದನ್ನು ಸರ್ಕಾರ ಪಾಲಿಸಿಲ್ಲ. ಹೀಗೆ ಮಾಡಿಯೇ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ ಎಂದರು.

Tags: #ಆರ್‌ಅಶೋಕ #ಮದ್ದೂರು #ಗಣೇಶೋತ್ಸವ #ಹಿಂದೂಗಳು #ಕಾಂಗ್ರೆಸ್ #ಡಿಕೆಶಿವಕುಮಾರ್ #ಟಿನರಸೀಪುರ #ಕರ್ನಾಟಕರಾಜಕೀಯ #RAshoka #Maddur #Ganeshotsava #Hindus #Congress #DKShivakumar #TNarasipura #KarnatakaPolitics #saakshatv
ShareTweetSendShare
Join us on:

Related Posts

ಪುತ್ರನ ಪಟ್ಟ ಉಳಿಸಿಕೊಳ್ಳಲು ದೇವೇಗೌಡರ ಮೊರೆ ಹೋದ ಯಡಿಯೂರಪ್ಪ: ಮುಂದಿನ ಹತ್ತು ವರ್ಷ ಸಿಎಂ ಆಕಾಂಕ್ಷಿಯಲ್ಲ ಎಂದು ವಿಜಯೇಂದ್ರ ಘೋಷಿಸಲಿ-ಇಂದು ಒಂದಾಗಿದ್ದೇವೆ ಎನ್ನುವ ಬಿಎಸ್‌ವೈ ಮತ್ತು ದೇವೇಗೌಡರು ನಾಳೆ ಕಚ್ಚಾಡುವುದು ಖಚಿತ ಎಂದ ಯತ್ನಾಳ್

ಪುತ್ರನ ಪಟ್ಟ ಉಳಿಸಿಕೊಳ್ಳಲು ದೇವೇಗೌಡರ ಮೊರೆ ಹೋದ ಯಡಿಯೂರಪ್ಪ: ಮುಂದಿನ ಹತ್ತು ವರ್ಷ ಸಿಎಂ ಆಕಾಂಕ್ಷಿಯಲ್ಲ ಎಂದು ವಿಜಯೇಂದ್ರ ಘೋಷಿಸಲಿ-ಇಂದು ಒಂದಾಗಿದ್ದೇವೆ ಎನ್ನುವ ಬಿಎಸ್‌ವೈ ಮತ್ತು ದೇವೇಗೌಡರು ನಾಳೆ ಕಚ್ಚಾಡುವುದು ಖಚಿತ ಎಂದ ಯತ್ನಾಳ್

by Shwetha
November 3, 2026
0

ವಿಜಯಪುರ: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ...

SIR ಪಟ್ಟಿಯ ಕುರಿತು ಅಂತಿಮ ನಿರ್ಧಾರ ಇನ್ನೂ ಬಾಕಿ: ಮುಖ್ಯಮಂತ್ರಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

SIR ಪಟ್ಟಿಯ ಕುರಿತು ಅಂತಿಮ ನಿರ್ಧಾರ ಇನ್ನೂ ಬಾಕಿ: ಮುಖ್ಯಮಂತ್ರಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

by Shwetha
November 3, 2026
0

ಕರ್ನಾಟಕದಲ್ಲಿ ಬಹಳ ದಿನಗಳಿಂದ ಬಾಕಿ ಉಳಿದಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಸಿದ್ಧತೆ ನಡುವೆಯೇ ಮತದಾರರ ಪಟ್ಟಿ ವಿಚಾರ ಹೊಸ ಚರ್ಚೆಗೆ ಕಾರಣವಾಗಿದೆ. ಮುಂಬರುವ...

ಡ್ರಗ್ಸ್ ಪ್ರಕರಣಗಳನ್ನು ಬೆನ್ನಟ್ಟಿದ ಪೊಲೀಸರಿಗೆ ಶಾಕ್ ಮೇಲೆ ಶಾಕ್

ಸ್ಟಿಂಗ್ ಆಪರೇಷನ್ ಪ್ರಕರಣ: ಖಾಸಗಿ ಸುದ್ದಿ ವಾಹಿನಿ ಕಚೇರಿ ಮೇಲೆ CCB ಶೋಧ

by Shwetha
November 3, 2026
0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ವಿಡಿಯೋ ಮತ್ತು ಅದರ ಪ್ರಸಾರದ ಹಿಂದಿರುವ ಜಾಲದ ತನಿಖೆಯನ್ನು ಬೆಂಗಳೂರು ಅಪರಾಧ ವಿಭಾಗದ (CCB)...

ಸಂಚಾರ ನಿಯಮ ಉಲ್ಲಂಘಿಸುವವರಿಗೆ ಕಾದಿದೆ ಮಹಾ ಗಂಡಾಂತರ: ಫುಟ್‌ಪಾತ್ ಮತ್ತು ಒನ್‌ವೇನಲ್ಲಿ ಗಾಡಿ ಓಡಿಸಿದರೆ 10 ಸಾವಿರ ರೂಪಾಯಿ ದಂಡ

ಸಂಚಾರ ನಿಯಮ ಉಲ್ಲಂಘಿಸುವವರಿಗೆ ಕಾದಿದೆ ಮಹಾ ಗಂಡಾಂತರ: ಫುಟ್‌ಪಾತ್ ಮತ್ತು ಒನ್‌ವೇನಲ್ಲಿ ಗಾಡಿ ಓಡಿಸಿದರೆ 10 ಸಾವಿರ ರೂಪಾಯಿ ದಂಡ

by Shwetha
November 3, 2026
0

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು ಹಾಗೂ ಹದಗೆಟ್ಟಿರುವ ಸಂಚಾರ ವ್ಯವಸ್ಥೆಯನ್ನು ಸರಿದಾರಿಗೆ ತರಲು ಕರ್ನಾಟಕ ಸರ್ಕಾರವು ಹಿಂದೆಂದೂ ಕಾಣದಂತಹ ಕಠಿಣ...

ಪರ ವಿರೋಧದ ಚರ್ಚೆಯೇ ಇವರ ಅಸಲಿ ಬಂಡವಾಳ: ಪ್ರಧಾನಿ ಮೋದಿ ಹೆಸರನ್ನು ಬಳಸಿಕೊಂಡೇ ಶ್ರೀಮಂತನಾದ ಧ್ರುವ್ ರಾಠಿ

ಪರ ವಿರೋಧದ ಚರ್ಚೆಯೇ ಇವರ ಅಸಲಿ ಬಂಡವಾಳ: ಪ್ರಧಾನಿ ಮೋದಿ ಹೆಸರನ್ನು ಬಳಸಿಕೊಂಡೇ ಶ್ರೀಮಂತನಾದ ಧ್ರುವ್ ರಾಠಿ

by Shwetha
November 3, 2026
0

ನವದೆಹಲಿ: ಸಾಮಾಜಿಕ ಜಾಲತಾಣಗಳ ಜಗತ್ತಿನಲ್ಲಿಂದು ಯುಟ್ಯೂಬರ್ ಧ್ರುವ್ ರಾಠಿ ಅವರ ಹೆಸರು ಬಹುತೇಕ ಎಲ್ಲರಿಗೂ ಚಿರಪರಿಚಿತ. ರಾಜಕೀಯ ವಿಶ್ಲೇಷಣೆಯ ಹೆಸರಿನಲ್ಲಿ ಪ್ರತಿನಿತ್ಯ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram