ADVERTISEMENT
Thursday, September 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ‘ಪುಟ್ಟಮಲ್ಲಿ’ ರಿಲೀಸ್‌, ಸೋಶಿಯಲ್‌ ಮೀಡಿಯಾದಲ್ಲಿ ಹವಾ; ಡಿಸೆಂಬರ್ 24ಕ್ಕೆ ಡಾಲಿ ಧನಂಜಯ ಸಿನಿಮಾ ರಿಲೀಸ್!

admin by admin
September 17, 2026
in Cinema, Newsbeat, Uncategorized, ಮನರಂಜನೆ
nna-from-mexico-puttamalli-song-released-dhananjaya-december-24-release

nna-from-mexico-puttamalli-song-released-dhananjaya-december-24-release

Share on FacebookShare on TwitterShare on WhatsappShare on Telegram

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಡಾಲಿ’ ಧನಂಜಯ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ನೂತನ ‘ಪುಟ್ಟಮಲ್ಲಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡು ಸದ್ಯ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹವಾ ಮಾಡುತ್ತಿದೆ. ರೆಟ್ರೋ ಶೈಲಿ ಹಾಗೂ ಆಧುನಿಕ ಟ್ರೆಂಡ್‌ಗಳ ಅದ್ಭುತ ಸಮ್ಮಿಲನವಾಗಿರುವ ಈ ಗೀತೆ ಇನ್‌ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಹಾಗೂ ಎಕ್ಸ್ (ಟ್ವಿಟರ್) ತಾಣಗಳಲ್ಲಿ #Puttamalli ಮತ್ತು #AnnaFromMexico ಹ್ಯಾಶ್‌ಟ್ಯಾಗ್‌ಗಳೊಂದಿಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.

ವಾಸೂಕಿ ವೈಭವ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸುಮಧುರ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕ ಸಂಜಿತ್ ಹೆಗ್ಡೆ ಕಂಠಸಿರಿಯಲ್ಲಿ ಹಾಡು ಅತ್ಯಂತ ಆಕರ್ಷಕವಾಗಿ ಹೊರಹೊಮ್ಮಿದೆ. ಕೇಳುಗರನ್ನು ತಕ್ಷಣವೇ ಗುಂಗಿಗೆ ಕೆಡವುವ ಈ ಟ್ರ್ಯಾಕ್‌ಗೆ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಈ ಗೀತೆಯು ಚಿತ್ರಕ್ಕೆ ದೊಡ್ಡ ಮಟ್ಟದ ಮೈಲೇಜ್ ತಂದುಕೊಟ್ಟಿದೆ.

Related posts

rocking-star-yash-body-transformation-for-toxic-movie-panipuri-kitty

‘ಟಾಕ್ಸಿಕ್’ ಚಿತ್ರಕ್ಕಾಗಿ ʻರಾಕಿಂಗ್ ಸ್ಟಾರ್ʼ ಯಶ್ ಭರ್ಜರಿ ಬಾಡಿ ಟ್ರಾನ್ಸ್‌ಫಾರ್ಮೇಷನ್

September 17, 2026
god-promise-movie-shooting-completed-soochan-shetty-november-release

‘ಗಾಡ್ ಪ್ರಾಮಿಸ್’ ಚಿತ್ರೀಕರಣ ಸಂಪೂರ್ಣ: ನವೆಂಬರ್‌ನಲ್ಲಿ ಬೆಳ್ಳಿಪರದೆಗೆ ಬರಲು ಸಜ್ಜಾದ ಸೂಚನ್ ಶೆಟ್ಟಿ ಸಿನಿಮಾ!

September 17, 2026

ಶಂಕರ್ ಗುರು ನಿರ್ದೇಶನದ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರವು ಸಾಹಸ, ಹಾಸ್ಯ ಹಾಗೂ ಸಂಪೂರ್ಣ ಕೌಟುಂಬಿಕ ಮನರಂಜನೆಯ ಅಂಶಗಳನ್ನು ಒಳಗೊಂಡಿದೆ. ಕ್ರಿಸ್‌ಮಸ್ ಪ್ರಯುಕ್ತ ಡಿಸೆಂಬರ್ 24ರಂದು ಚಿತ್ರವನ್ನು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ. ಈ ಹಾಡಿನ ಮೂಲಕ ಸದ್ದು ಮಾಡಿರುವ ಚಿತ್ರತಂಡ, ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಚಿತ್ರದ ಮಾಸ್ ಬೀಟ್‌ಗಳ ಹಾಡುಗಳನ್ನು ಹೊರತರಲು ಸಿದ್ಧತೆ ನಡೆಸಿದೆ.

ದಿ ರಾಯಲ ಸ್ಟುಡಿಯೋಸ್ ಹಾಗೂ ಐರಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚನ್ನರಾಜ್ ಬಿ. ಹಟ್ಟಿಹೊಳಿ, ಮೃಣಾಲ್, ಸತ್ಯ ರಾಯಲ ಮತ್ತು ಜಾನ್ವಿ ರಾಯಲ ಜಂಟಿಯಾಗಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಧನಂಜಯ ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಸಾಥ್ ನೀಡಿದ್ದು, ಉಮಾಶ್ರೀ, ರಂಗಾಯಣ ರಘು, ನಾಗಭೂಷಣ್, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು ಹಾಗೂ ಹುಲಿ ಕಾರ್ತಿಕ್ ಪ್ರಮುಖ ತಾರಾಗಣದಲ್ಲಿದ್ದಾರೆ. ಎ.ಜೆ. ಶೆಟ್ಟಿ ಮತ್ತು ಎಸ್.ಕೆ. ರಾವ್ ಛಾಯಾಗ್ರಹಣ, ಪ್ರಶಾಂತ್ ರಾಜಪ್ಪ ಸಂಭಾಷಣೆ ಹಾಗೂ ಅಜಯ್ ಕುಮಾರ್ ಮತ್ತು ನಿರಂಜನ್ ದೇವರಮನೆ ಅವರ ಸಂಕಲನ ಈ ಚಿತ್ರಕ್ಕಿದೆ. ಸ್ಯಾಂಡಲ್‌ವುಡ್‌ನಲ್ಲಿ ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

Tags: #AnnaFromMexico #Puttamalli #Dhananjaya #ReeshmaNanayaa #ShankarGuru #VasukiVaibhav #SanjithHegde #Sandalwood#saakshatv
ShareTweetSendShare
Join us on:

Related Posts

rocking-star-yash-body-transformation-for-toxic-movie-panipuri-kitty

‘ಟಾಕ್ಸಿಕ್’ ಚಿತ್ರಕ್ಕಾಗಿ ʻರಾಕಿಂಗ್ ಸ್ಟಾರ್ʼ ಯಶ್ ಭರ್ಜರಿ ಬಾಡಿ ಟ್ರಾನ್ಸ್‌ಫಾರ್ಮೇಷನ್

by admin
September 17, 2026
0

ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಿಂದೆಂದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಭರ್ಜರಿಯಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದರು. ಯಶ್ ಅವರ ಈ ಸಾಲಿಡ್...

god-promise-movie-shooting-completed-soochan-shetty-november-release

‘ಗಾಡ್ ಪ್ರಾಮಿಸ್’ ಚಿತ್ರೀಕರಣ ಸಂಪೂರ್ಣ: ನವೆಂಬರ್‌ನಲ್ಲಿ ಬೆಳ್ಳಿಪರದೆಗೆ ಬರಲು ಸಜ್ಜಾದ ಸೂಚನ್ ಶೆಟ್ಟಿ ಸಿನಿಮಾ!

by admin
September 17, 2026
0

ಬೆಂಗಳೂರು: ಶೀರ್ಷಿಕೆಯ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಅಪಾರ ಕುತೂಹಲ ಕೆರಳಿಸಿರುವ ಯುವ ಪ್ರತಿಭೆ ಸೂಚನ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಗಾಡ್ ಪ್ರಾಮಿಸ್’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ...

dr-shivarajkumar-abhishan-jeevinth-picasso-movie-first-look-released

ಡಾ. ಶಿವರಾಜ್‌ಕುಮಾರ್ ಮತ್ತು ಅಭಿಶನ್ ಜೀವಿಂತ್ ಚಿತ್ರಕ್ಕೆ ‘ಪಿಕಾಸೊ’ ಟೈಟಲ್! ಫಸ್ಟ್ ಲುಕ್ ರಿಲೀಸ್‌ ಮಾಡಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ

by admin
September 17, 2026
0

ಚೆನ್ನೈ: ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಡಾ. ಶಿವರಾಜ್‌ಕುಮಾರ್ ಮತ್ತು ಯೂಥ್‌ ಸೆನ್ಸೇಷನ್ ಅಭಿಶನ್ ಜೀವಿಂತ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅಧಿಕೃತವಾಗಿ ಬಿಡುಗಡೆಯಾಗಿದ್ದು,...

dr-vishnuvardhan-amrutha-mahotsava-grand-rally-half-kilometer-flag-bengaluru

ವಿಷ್ಣು ಸೇನಾನಿಗಳಿಂದ ಅದ್ಧೂರಿ ಅಮೃತ ಮಹೋತ್ಸವ

by admin
September 17, 2026
0

ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜದೊಂದಿಗೆ ಮಹಾ ಮೆರವಣಿಗೆ ಸೆಪ್ಟೆಂಬರ್ 27ರಂದು ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ 18 ಗಂಟೆಗಳ ಸಂಭ್ರಮ ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ,...

seetha-circle-sri-krishnan-mane-kalle-beeja-lyrical-song-released

ಗಮನ ಸೆಳೆಯುತ್ತಿರುವ ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’: ‘ಕಳ್ಳೇ ಬೀಜ ಕಿತ್ತುಕೊಂಡ್ ಹೋದ್ಲು’ ಲಿರಿಕಲ್ ಹಾಡು ರಿಲೀಸ್‌!

by admin
September 17, 2026
0

ಗಮನ ಸೆಳೆಯುತ್ತಿರುವ ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’: ‘ಕಳ್ಳೇ ಬೀಜ ಕಿತ್ತುಕೊಂಡ್ ಹೋದ್ಲು’ ಲಿರಿಕಲ್ ಹಾಡು ರಿಲೀಸ್‌! ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಶೀರ್ಷಿಕೆಯ ಮೂಲಕ ಪ್ರೇಕ್ಷಕರಲ್ಲಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram