ADVERTISEMENT
Friday, October 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಂದು ಮರ್ಕಟ ಮನಸ್ಸು.. ಇಂದು ನಿಖರ ಗುರಿಗೆ ಎರಡು ಬೆಳ್ಳಿ ಪದಕಗಳು.. ಮಗನ ಬದುಕು ರೂಪಿಸಿದ್ದ ಅಪ್ಪಟ ರೈತ..!

admin by admin
September 21, 2026
in Newsbeat, Sports, ಕ್ರೀಡೆ
himanshu-dhillon-asian-games-shooting-silver-medal-inspiring-story-kannada

himanshu-dhillon-asian-games-shooting-silver-medal-inspiring-story-kannada

Share on FacebookShare on TwitterShare on WhatsappShare on Telegram

ಈ ಹುಡುಗನಿಗೆ ಶಾಲೆಗೆ ಹೋಗುವುದು ಅಂದ್ರೆ ಅಷ್ಟಕ್ಕಷ್ಟೇ…ಅಂದ ಮೇಲೆ ಪಾಠದ ವಿಷ್ಯಗಳಲ್ಲಿ ಒಂಚೂರು ಆಸಕ್ತಿಯೂ ಇರಲಿಲ್ಲ. ಆಟದಲ್ಲಿ ಅದು ಬೇಕು.. ಇದು ಬೇಕು.. ಗೊತ್ತು ಗುರಿ ಇಲ್ಲ. ಹೀಗಾಗಿ ಅಪ್ಪನಿಗೆ ಮಗನ ಭವಿಷ್ಯದ ಬಗ್ಗೆ ಚಿಂತೆ.. ಇವನದ್ದು ಮರ್ಕಟ ಮನಸ್ಸು..!

ಹಾಗೇ ನೋಡಿದ್ರೆ, ಈ ಹುಡುಗ ವಂಶ ಪರಂಪರೆಯ ಪ್ರಕಾರ ಕುಸ್ತಿ ಪಟುವಾಗಬೇಕಿತ್ತು. ಆದ್ರೆ ಆತ ಕುಸ್ತಿಪಟು ಆಗಲಿಲ್ಲ. ಕುಟುಂಬದ ಕಾಯಕದ ಪ್ರಕಾರ ಆತ ರೈತನಾಗಬೇಕಿತ್ತು. ಅದು ಕೂಡ ಆಗಲಿಲ್ಲ.

Related posts

ದಸರಾ ಜಂಬೂ ಸವಾರಿಯಲ್ಲಿ ಹೈಡ್ರಾಮಾ: ಸಚಿವರ ಮೈ ಮುಟ್ಟಿದ ಪೊಲೀಸರಿಗೆ ಸಿಎಂ ತನಿಖೆಯ ಬಿಸಿ- ದಲಿತ ಸಚಿವರಿಗೆ ಅಪಮಾನ ಎಂದು ಗುಡುಗಿದ ಬಿಜೆಪಿ ನಾಯಕರು

ದಸರಾ ಜಂಬೂ ಸವಾರಿಯಲ್ಲಿ ಹೈಡ್ರಾಮಾ: ಸಚಿವರ ಮೈ ಮುಟ್ಟಿದ ಪೊಲೀಸರಿಗೆ ಸಿಎಂ ತನಿಖೆಯ ಬಿಸಿ- ದಲಿತ ಸಚಿವರಿಗೆ ಅಪಮಾನ ಎಂದು ಗುಡುಗಿದ ಬಿಜೆಪಿ ನಾಯಕರು

October 23, 2026
ಭಾವನಾತ್ಮಕ ರಾಜಕಾರಣಕ್ಕೆ ಬೇಸತ್ತ ಕರಾವಳಿ ಮಂದಿಯಿಂದ ಕುಮಾರಸ್ವಾಮಿ ಪರ ಬ್ಯಾಟಿಂಗ್: ಖರ್ಗೆ ಪುತ್ರನಿಗೆ ನಿಮ್ಮ ತಾಕತ್ತಿದ್ದರೆ ಇಲ್ಲಿ ಬಂದು ಸ್ಪರ್ಧಿಸಿ ಎಂದು ಓಪನ್ ಚಾಲೆಂಜ್ ನೀಡಿದ ಸಮುದ್ರ ತೀರದ ಜನತೆ

ಭಾವನಾತ್ಮಕ ರಾಜಕಾರಣಕ್ಕೆ ಬೇಸತ್ತ ಕರಾವಳಿ ಮಂದಿಯಿಂದ ಕುಮಾರಸ್ವಾಮಿ ಪರ ಬ್ಯಾಟಿಂಗ್: ಖರ್ಗೆ ಪುತ್ರನಿಗೆ ನಿಮ್ಮ ತಾಕತ್ತಿದ್ದರೆ ಇಲ್ಲಿ ಬಂದು ಸ್ಪರ್ಧಿಸಿ ಎಂದು ಓಪನ್ ಚಾಲೆಂಜ್ ನೀಡಿದ ಸಮುದ್ರ ತೀರದ ಜನತೆ

October 23, 2026

ಆದ್ರೆ ಆಗಿದ್ದೇನು..?

ಅದೇನೋ ಮಕ್ಕಳಾಟಿಕೆ ಅಂತರಲ್ಲ.. ಹಾಗೇ ಇವನ ಕಥೆ ಕೂಡ. ಅದೊಂದು ದಿನ ಗೆಳೆಯರ ಜೊತೆ ತಮಾಷೆಗಾಗಿ ಶೂಟಿಂಗ್ ರೇಂಜ್‍ನಲ್ಲಿ ಗನ್ ಹಿಡಿದು ಶೂಟ್ ಮಾಡಿದ್ದ. ಆದ್ರೆ ಗುರಿ ವಕ್ರವಾಗಿತ್ತು. ಟಾರ್ಗೆಟ್‍ಗೆ ಹೊಡೆದ ಶಾಟ್‍ಗೆ ಸಿಕ್ಕಿದ್ದು ಖಾಲಿ ಒಂದು ಅಂಕ. ಆದ್ರೂ ತಲೆಕೆಡಿಸಿಕೊಳ್ಳಲಿಲ್ಲ. ಅಚ್ಚರಿ ಅಂದ್ರೆ ಅಂದು ತಪ್ಪಿದ ಗುರಿಯೇ ಅವನ ಬದುಕಿಗೆ ನಿಖರವಾದ ಗುರಿಯನ್ನು ತೋರಿಸಿತ್ತು.

ಆ ಕ್ಷಣವೇ ಅಂದುಕೊಂಡ ನಾನು ಶೂಟರ್ ಆಗಬೇಕು ಅಂತ. ಹಿಂದೆ ಮುಂದೆ ಯೋಚನೆ ಮಾಡದೇ ಮನಸ್ಸಿನಲ್ಲೇ ಗಟ್ಟಿ ನಿರ್ಧಾರ ಕೂಡ ಮಾಡಿಬಿಟ್ಟಿದ್ದ. ನಂತರ ಹಿಂತಿರುಗಿ ನೋಡಲೇ ಇಲ್ಲ.

ಅಂದಿನ ಆ ಒಂದು ನಿರ್ಧಾರ ಇಂದು ಜಪಾನ್‍ನ ನಗೋಯಾದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ತನ್ನ ಹೆಗಲ ಮೇಲೆ ಹಾಕೊಂಡು ಎರಡು ಬೆಳ್ಳಿಯ ಪದಕದೊಂದಿಗೆ ನಗುವಂತೆ ಮಾಡಿದೆ. 10 ಮೀಟರ್ ಏರ್ ರೈಫಲ್ ವೈಯಕ್ತಿಕ ಹಾಗೂ ಟೀಮ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾನೆ.

ಯಾರು ಈ ಹುಡುಗ..!

ಅಂದ ಹಾಗೇ ಈ ಹುಡುಗ ಹರಿಯಾಣ ಜಿಂದ್ ಜಿಲ್ಲೆಯವನು. ಹರಿಯಾಣದ ಹೃದಯ ಭಾಗದಲ್ಲಿರುವ ಈ ಜಿಲ್ಲೆಯನ್ನು ಜೈಂತಪುರಿ ಎಂದು ಕರೆಯಲಾಗುತ್ತಿದೆ. ಮಹಾಭಾರತದ ಕಾಲದಲ್ಲಿ ಪಾಂಡವರು, ಕೌರವರ ವಿರುದ್ಧ ಯುದ್ಧ ಗೆಲ್ಲಲು ಇದೇ ಜೈಂತಪುರಿಯಲ್ಲಿ ವಿಜಯದ ದೇವತೆಯಾದ ಜಯಂತಿ ದೇವಿಗೆ ದೇಗುಲ ನಿರ್ಮಿಸಿದ್ದರು ಎಂಬ ಉಲ್ಲೇಖವಿದೆ.

ಇಂತಹ ಐತಿಹಾಸಿಕ ಜಿಲ್ಲೆಯ ಹುಡುಗನೇ ಹಿಮಾಂಶು ಧಿಲ್ಲೋನ್..!

ಕ್ರೀಡೆ ಅನ್ನೋದು ಹಿಮಾಂಶು ರಕ್ತದಲ್ಲೇ ಹರಿಯುತ್ತಿದೆ. ಅಪ್ಪ ಶಂಶೇರ್ ಸಿಂಗ್ ಧಿಲ್ಲೋನ್ ಅಪ್ಪಟ ರೈತ ಜೊತೆಗೆ ಖಾಸಗಿ ಕಂಪೆನಿಯ ಉದ್ಯೋಗಿ. ಆದ್ರೆ ಕುಸ್ತಿ ಇವರ ಕುಟುಂಬದ ಪರಂಪರೆ. ಹಿಮಾಂಶ್ ಚಿಕ್ಕಪ್ಪ ಹರ್ಧೀಪ್ ಸಿಂಗ್ ಧಿಲ್ಲೋನ್ ದೈತ ಕುಸ್ತಿಪಟು. 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕುಸ್ತಿಪಟು.

ತನ್ನ ತಮ್ಮನಂತೆ ಮಗನೂ ಕುಸ್ತಿಪಟು ಆಗಬೇಕು ಎಂದು ಶಂಶೇರ್ ಅವರ ಮಹಾದಾಸೆಯಾಗಿತ್ತು. ಅದಕ್ಕೆ ತಕ್ಕಂತೆ ಆರಂಭದಲ್ಲಿ ಹಿಮಾಂಶು ಬಹಳ ಉಮೇದಿನಿಂದಲೇ ಕುಸ್ತಿ ಅಖಾಡಕ್ಕಿಳಿದಿದ್ದ. ಆದ್ರೆ ಕಠಿಣ ಅಭ್ಯಾಸ, ಸ್ನಾಯು ಸೆಳೆತ.. ದೇಹವನ್ನು ದಂಡಿಸಿಕೊಂಡ ನೋವು, ಕಿವಿಗೆ ಸಣ್ಣ ಗಾಯವಾದ ಕಾರಣ ಹಿಮಾಂಶು ಕುಸ್ತಿ ಅಖಾಡದಿಂದ ಹೊರನಡೆದಿದ್ದ.

ಕುಸ್ತಿಯ ಸಹವಾಸವೇ ಬೇಡ ಅಂತ ಹೊರ ನಡೆದಿರುವ ದಿನವನ್ನು ನೆನೆದು ಹಿಮಾಂಶು ಈಗ ನÀಗುತ್ತಾ ಹೇಳುವುದು ಹೀಗೆ.. ಕುಸ್ತಿ ನನಗೆ ಸೂಕ್ತವಲ್ಲ ಎಂದು ಅನ್ನಿಸಿತ್ತು. ಯಾಕಂದ್ರೆ ಅದು ನನಗೆ ತುಂಬಾ ಕಷ್ಟವಾಗುತ್ತಿತ್ತು. ಈ ಸ್ಪರ್ಧೆ ನನಗೆ ಆಗಲ್ಲ. ಹಾಗಾಗಿ ಬಿಟ್ಟು ಬಿಟ್ಟೆ..!

ಆದ್ರೆ ಹಿಮಾಂಶು ತಂದೆ ಶಂಶೇರ್ ಸುಮ್ಮನೆ ಕೂರಲಿಲ್ಲ. ಮಗನ ಭವಿಷ್ಯ ರೂಪಿಸಲು ಇನ್ನೊಂದು ರೀತಿಯ ಪರೀಕ್ಷೆ ನಡೆಸಿದ್ರು. ಅದು ಕೋವಿಡ್ ಸಮಯ. ಮಗನಿಗೆ ಬದುಕಿನ ಪಾಠ ಕಲಿಸಲು ಮುಂದಾದ್ರು. ಕುಸ್ತಿಯಲ್ಲೂ ಆಸಕ್ತಿ ಇಲ್ಲ. ಓದಿನಲ್ಲೂ ಅಸಡ್ಡೆ… ಹೀಗಾಗಿ ಮಗನಿಗೆ ಬುದ್ಧಿ ಕಲಿಸಲು ಲಾಕ್ ಡೌನ್ ಸಮಯದಲ್ಲಿ ಶಂಶೇರ್ ಕೃಷಿ ಕೆಲಸ ಮಾಡಲು ಕರೆದೊಯ್ಯುತ್ತಿದ್ದರು. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ಹಿಮಾಂಶುಗೆ ಇದು ಕೂಡ ನನ್ನ ಕೈಯಿಂದ ಸಾಧ್ಯವಿಲ್ಲ ಎಂಬ ಸುಮ್ಮನಾಗಿಬಿಟ್ಟಿದ್ದ.

ಹಾಗಾದ್ರೆ ಮುಂದಿನ ಗುರಿ ಏನು..?

ಏರೆಗಾವುಯೇ ಈ ಕಿರಿಕಿರಿಯೇ.. (ಯಾರಿಗೆ ಬೇಕು ಈ ಕಿರಿಕಿರಿ) ಕುಸ್ತಿಪಟು ಆಗಬೇಕಾದ್ರೆ ದೇಹವನ್ನು ದಂಡಿಸಬೇಕು.. ರೈತನಾಗಬೇಕಾದ್ರೆ ಸುಡುಬಿಸಿಲಿನಲ್ಲಿ ಕೆಲಸ ಮಾಡಬೇಕು.. ವಿದ್ಯಾವಂತನಾಗಬೇಕಾದ್ರೆ ಚೆನ್ನಾಗಿ ಓದಬೇಕು.. ಇದೆಲ್ಲವೂ ಹಿಮಾಂಶುಗೆ ಕಿರಿಕಿರಿಯಾಗುತ್ತಿತ್ತು.

ಆಗಲೇ ಹಿಮಾಂಶು ಕಣ್ಣಿಗೆ ಬಿದ್ದಿದ್ದು ಶೂಟಿಂಗ್ ರೇಂಜ್. ಕೈಯಲ್ಲಿ ಗನ್ ಹಿಡಿಯುವುದು.. ಶೂಟ್ ಮಾಡೋದು.. ಅಷ್ಟೇ.. ಇಲ್ಲಿ ಯಾವ ಕಿರಿಕಿರಿಯೂ ಇರಲ್ಲ. ಯಾವ ರಗಳೆಯೂ ಇರಲ್ಲ.. ಹಾಗೇ ಅಂದುಕೊಂಡೇ ಗನ್ ಹಿಡಿದ “ಕೈ” ಇಂದು ಇತಿಹಾಸ ಬರೆದಿದೆ.

ಹೌದು, ಹಿಮಾಂಶು ಶೂಟಿಂಗ್ ಪಯಣ ತೀರಾ ಆಕಸ್ಮಿಕವಾಗಿತ್ತು. ತಮಾಷೆಗಾಗಿ ಟಾರ್ಗೆಟ್‍ಗೆ ಹೊಡೆದ ಶಾಟ್ ಅವನ ಬದುಕಿನ ಚಿತ್ರಣವನ್ನೇ ಬದಲಾಯಿಸಿಬಿಟ್ಟಿತ್ತು. ಕುಂದ್ರಿಯ ಗುರುಕುಲದ ಶೂಟಿಂಗ್ ರೇಂಜ್‍ನಲ್ಲಿ ಅಭ್ಯಾಸ ನಡೆಸುತ್ತಿದ್ದ ಹಿಮಾಂಶು, ಐದಾರು ತಿಂಗಳಲ್ಲಿ ಪರಿಣತಿಯನ್ನು ಪಡೆದುಕೊಂಡಿದ್ದ. ಹಿಮಾಂಶುವಿನ ಪ್ರತಿಭೆಯನ್ನು ಕೋಚ್ ಕುಲದೀಪ್ ನೆಹ್ರಾ ಗುರುತಿಸಿದ್ದರು.

ಅಲ್ಲದೆ ಹಿಮಾಂಶು ತಂದೆ ಶಂಶೇರ್‍ಗೆ ಕರೆ ಮಾಡಿ ಮೂರು ಲಕ್ಷ ಮೌಲ್ಯದ ರೈಫಲ್ ಖರೀದಿಸುವಂತೆ ಸಲಹೆ ನೀಡಿದ್ದರು. ಆದ್ರೆ ಶಂಶೇರ್ ಅಷ್ಟೊಂದು ಸಿರಿವಂತನಾಗಿರಲಿಲ್ಲ. ಕೃಷಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಶಂಶೇರ್‍ಗೆ ಆ ಕ್ಷಣದಲ್ಲಿ ಹಣ ಹೊಂದಿಸುವುದು ಕಷ್ಟವಾಗಿತ್ತು. ಆದ್ರೆ ಅವರಿಗೆ ಮಗನ ಭವಿಷ್ಯವೇ ಮುಖ್ಯವಾಗಿತ್ತು. ಹಾಗಾಗಿ ಸಾಲ ಮಾಡಿ ಮಗನಿಗೆ ರೈಫಲ್ ಖರೀದಿಸಿದ್ದರು. ನಂತರ ಸುಗ್ಗಿ ಬೆಳೆ ಬಂದ ನಂತರ ಸಾಲವನ್ನು ತೀರಿಸಿದ್ದರು.

ಆದ್ರೆ ಶೂಟಿಂಗ್ ವೆಚ್ಚ ಜಾಸ್ತಿಯಾಗುತ್ತಿದ್ದಂತೆ, ನಾನು ನನ್ನ ಮಗನಿಗೆ ಇನ್ನೆಷ್ಟು ದಿನ ಹೂಡಿಕೆ ಮಾಡಬೇಕು ಎಂಬ ಯೋಚನೆ ಬಂದಾಗಲೂ ಶಂಶೇರ್ ಎದೆಗುಂದಲಿಲ್ಲ. ಮಗನಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದರು. ಹೆಚ್ಚಿನ ತರಬೇತಿಗಾಗಿ ಕೈಥಾಲ್‍ಗೆ ತೆರಳಿ ಬಾಡಿಗೆ ಮನೆಯಲ್ಲೂ ವಾಸ ಮಾಡಿದ್ದರು. ಈ ನಡುವೆ, ಹಿಮಾಂಶು ಹಂತ ಹಂತವಾಗಿ ಶೂಟಿಂಗ್‍ನಲ್ಲಿ ಕರಗತ ಮಾಡಿಕೊಂಡು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದ. ಹೀಗಾಗಿ ಐದಾರು ವರ್ಷಗಳಿಂದ ನಿರಂತರವಾಗಿ ಖರ್ಚು ಮಾಡುತ್ತಿದ್ದರೂ ಮಗ ಒಂದಲ್ಲ ಒಂದು ದಿನ ಅದ್ಭುತ ಸಾಧನೆ ಮಾಡುತ್ತಾನೆ ಅನ್ನೋ ನಂಬಿಕೆ ಶಂಶೇರ್‍ನವರಲ್ಲಿತ್ತು.

ಈ ನಡುವೆ ಹಿಮಾಂಶು ತರಬೇತಿ ವೆಚ್ಚ, ಕುಟುಂಬದ ನಿರ್ವಹಣೆ ಮಾಡೋದು ತುಂಬಾ ಕಷ್ಟಕರವಾಗಿತ್ತು. ಹೀಗಾಗಿ ಮಗನಿಗೆ ಕೆಲಸಕ್ಕೆ ಸೇರುವಂತೆ ಸಲಹೆ ಕೂಡ ನೀಡಿದ್ದರು. ಆದ್ರೆ ಅದೃಷ್ಟವೋ ಏನೋ ಸಂಸದ ನವೀನ್ ಜಿಂದಾಲ್ ಅವರಿಂದ ಹಿಮಾಂಶ್‍ಗೆ ನೆರವು ಸಿಕ್ಕಿತ್ತು. 14 ತಿಂಗಳ ಸ್ಕಾಲರ್‍ಶಿಪ್ ನೀಡಿದ್ದಲ್ಲದೆ, ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಸಂಸ್ಥೆಯಿಂದ ಬೆಂಬಲ ನೀಡುವಂತೆ ಮಾಡಿದ್ದರು.

ಹೌದು, ನನ್ನ ಗುರಿ ಏಷ್ಯನ್ ಗೇಮ್ಸ್‍ನಲ್ಲಿ ಪದಕ ಗೆಲ್ಲುವುದು ಆಗಿತ್ತು. ದಿನವಿಡಿ ಏಷ್ಯನ್ ಗೇಮ್ಸ್ ಬಗ್ಗೆಯೇ ಯೋಚನೆ ಮಾಡುತ್ತಿದ್ದೆ. ನನಗೆ ಭಯ, ಅನುಮಾನಗಳು ಕಾಡುತ್ತಿದ್ದವು. ಈ ಹಂತದಲ್ಲಿ ಸ್ಪರ್ಧಿಸಲು ನಾನು ಸಮರ್ಥನಾಗಿದ್ದೇನೆಯೇ ಎಂಬ ಪ್ರಶ್ನೆ ಮೂಡುತ್ತಿತ್ತು. ಈ ಹಂತದಲ್ಲಿ ನನಗೆ ಧೈರ್ಯ ತುಂಬಿದ್ದು ಕೋಚ್ ನೇಹಾ ಚೌವ್ಹಾಣ್ ಮತ್ತು ಮನಶಾಸ್ತ್ರಜ್ಞ ಶಿವಂ ದ್ವಿವೇಧಿ. ಯಾಕಂದ್ರೆ ನನಗೆ ನನ್ನ ಮೇಲೆಯೇ ನಂಬಿಕೆ ಇರಲಿಲ್ಲ. ಆದ್ರೆ ಅವರಿಗೆ ನನ್ನ ಸಾಮಥ್ರ್ಯದ ಮೇಲೆ ವಿಶ್ವಾಸವಿತ್ತು. ನೀವೇ ಗೆಲ್ಲುತ್ತೀರಿ.. ಚಿಂತಿಸಬೇಡಿ ಎಂದು ಹೇಳುತ್ತಿದ್ದರು. ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಾಧ್ಯವಾಯ್ತು ಅಂತಾನೆ ಹಿಮಾಂಶ್ ಧಿಲ್ಲೋನ್.

ಇವತ್ತು ನಾನು ಏಷ್ಯನ್ ಪದಕ ಗೆದ್ದಿದ್ದೇನೆ ಅಂದ್ರೆ ಅದರ ಹಿಂದಿನ ಶಕ್ತಿ ನನ್ನ ಅಪ್ಪ ಶಂಶೇರ್ ಧಿಲ್ಲೋನ್. ನನ್ನ ಹುಡುಗಾಟವನ್ನು ಸಹಿಸಿಕೊಂಡು ನನ್ನ ಬದುಕನ್ನು ಹಸನಾಗಿಸಿದ್ದಾರೆ. ಕುಸ್ತಿ ಬೇಡ, ಓದು ಬೇಡ ಅಂದವನಿಗೆ ಗದ್ದೆಯಲ್ಲಿ ಕೆಲಸ ಮಾಡಿಸಿ ಜೀವನದ ಪಾಠ ಕಲಿಸಿದ್ದಾರೆ. ಬಹುಶಃ ಅಂದು ನಾನು ಸುಡು ಬಿಸಿಲಿನಲ್ಲಿ ಕೆಲಸ ಮಾಡಿದ್ದ ಕಾರಣ ಇಂದು ಶೂಟರ್ ಆಗಿದ್ದೇನೆ. ಇಲ್ಲ ಅಂದ್ರೆ ನನ್ನ ಬದುಕು ಏನು ಆಗುತ್ತಿತ್ತೋ ಅನ್ನೋದೇ ಗೊತ್ತಿಲ್ಲ ಅಂತಾನೆ ಹಿಮಾಂಶು.

ಅಷ್ಟೇ ಅಲ್ಲ, ಅಪ್ಪ ಪ್ರತಿ ದಿನ ಪ್ರೇರಣೆ ನೀಡುವಂತಹ ವಿಡಿಯೋಗಳನ್ನು ಕಳುಹಿಸುತ್ತಿದ್ದರು. ಸೆಪ್ಟಂಬರ್ 20ರಂದು ನನ್ನ ಹುಟ್ಟು ಹಬ್ಬವಿತ್ತು. ಆಗಲೂ ಜನ್ಮ ದಿನದ ಶುಭಾಶಯದೊಂದಿಗೆ ಒಂದು ಸಣ್ಣ ಆಸೆಯನ್ನು ವ್ಯಕ್ತಪಡಿಸಿದ್ದರು. ನೀನು ಯಾವುದಾದ್ರೂ ಒಂದು ಪದಕವನ್ನು ಗೆಲ್ಲು, ಪದಕದ ಬಣ್ಣದ ಬಗ್ಗೆ ಯೋಚನೆ ಮಾಡಬೇಡ ಎಂಬ ಸಂದೇಶವನ್ನು ಕಳುಹಿಸಿದ್ದರು. ಇದೀಗ ಅಪ್ಪನ ಆಸೆಯಂತೆ ನಾನು ಪದಕ ಗೆದ್ದಿದ್ದೇನೆ. ಅದು ಬೆಳ್ಳಿಯ ಪದಕಗಳು. ಆದ್ರೆ ನನ್ನ ಗುರಿ ಕೇವಲ ಪದಕಕ್ಕೆ ಸೀಮಿತವಾಗಿಲ್ಲ. ಮುಂದಿನ ಪೀಳಿಗೆ ನೆನಪಿಟ್ಟುಕೊಳ್ಳುವಂತಹ ಹೆಸರನ್ನು ಗಳಿಸಬೇಕು ಎಂಬುದು ಹಿಮಾಂಶ್ ಅವರ ಬಯಕೆಯಾಗಿದೆ.

ಅಷ್ಟಕ್ಕೂ ಹಿಮಾಂಶ್‍ಗೆ ಆಧುನಿಕ ಕ್ರಿಕೆಟ್ ಜಗತ್ತಿನ ದಂತಕತೆ ವಿರಾಟ್ ಕೊಹ್ಲಿಯೇ ಪ್ರೇರಣೆಯಂತೆ. ಒಮ್ಮೆ ವಿರಾಟ್ ಕೊಹ್ಲಿ, ಜನರು ನನ್ನನ್ನು ನೋಡಿ ನಾನು ಇವರಂತೆಯೇ ಆಟಗಾರನಾಗಬೇಕು ಎಂದು ಹೇಳುವಂತಹ ಮಟ್ಟಕ್ಕೆ ಬೆಳೆಯಬೇಕು ಎಂದು ಹೇಳಿದ್ದರು. ಕೊಹ್ಲಿಯ ಈ ಮಾತುಗಳು ಹಿಮಾಂಶುಗೆ ಸ್ಪೂರ್ತಿಯನ್ನು ನೀಡಿದ್ದವು. ಅದಕ್ಕಾಗಿಯೇ ಯಾರೋ ಹಿಮಾಂಶು ಎಂಬ ಆಟಗಾರ ಬಂದು ಹೋದ ಅಂತ ಹೇಳಬಾರದು. ಬದಲಾಗಿ ಜನರು, ನಾನು ಹಿಮಾಂಶುನಂತಹ ಶೂಟರ್ ಆಗಬೇಕು ಎಂದು ಹೇಳಬೇಕು ಎಂಬುದೇ ಹಿಮಾಂಶುವಿನ ಭವಿಷ್ಯದ ಕನಸು.

ಒಟ್ಟಿನಲ್ಲಿ ಒಬ್ಬ ರೈತ ತನ್ನ ಮಗನ ಭವಿಷ್ಯವನ್ನು ರೂಪಿಸಿದ್ದ ರೀತಿಯನ್ನು ಮೆಚ್ಚಲೇಬೇಕು. ಹಿಮಾಂಶ್ ಗೆದ್ದ ಪದಕದ ಮೇಲೆ ಅಪ್ಪನ ಬೆವರ ಹನಿಗಳು, ತ್ಯಾಗ, ಪರಿಶ್ರಮ, ಜೀವನ ಮೌಲ್ಯಗಳು ಹಾಗೂ ಕನಸುಗಳು ಹೊಳೆಯುತ್ತಿವೆ.

ಸನತ್ ರೈ
saakshatv.com

 

.

 

 

 

Tags: #HimanshuDhillon #AsianGames #Shooting #IndiaAtAsianGames #SilverMedal #InspiringStory #SportsKannada #SaakshaTV #Jind #10mAirRifle
ShareTweetSendShare
Join us on:

Related Posts

ದಸರಾ ಜಂಬೂ ಸವಾರಿಯಲ್ಲಿ ಹೈಡ್ರಾಮಾ: ಸಚಿವರ ಮೈ ಮುಟ್ಟಿದ ಪೊಲೀಸರಿಗೆ ಸಿಎಂ ತನಿಖೆಯ ಬಿಸಿ- ದಲಿತ ಸಚಿವರಿಗೆ ಅಪಮಾನ ಎಂದು ಗುಡುಗಿದ ಬಿಜೆಪಿ ನಾಯಕರು

ದಸರಾ ಜಂಬೂ ಸವಾರಿಯಲ್ಲಿ ಹೈಡ್ರಾಮಾ: ಸಚಿವರ ಮೈ ಮುಟ್ಟಿದ ಪೊಲೀಸರಿಗೆ ಸಿಎಂ ತನಿಖೆಯ ಬಿಸಿ- ದಲಿತ ಸಚಿವರಿಗೆ ಅಪಮಾನ ಎಂದು ಗುಡುಗಿದ ಬಿಜೆಪಿ ನಾಯಕರು

by Shwetha
October 23, 2026
0

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ಅಂಗಳದಲ್ಲಿ ಈ ಬಾರಿ ಭಕ್ತಿ ಮತ್ತು ಸಂಭ್ರಮದ ನಡುವೆಯೇ ಅನಿರೀಕ್ಷಿತ ಹೈಡ್ರಾಮಾ ನಡೆದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ...

ಭಾವನಾತ್ಮಕ ರಾಜಕಾರಣಕ್ಕೆ ಬೇಸತ್ತ ಕರಾವಳಿ ಮಂದಿಯಿಂದ ಕುಮಾರಸ್ವಾಮಿ ಪರ ಬ್ಯಾಟಿಂಗ್: ಖರ್ಗೆ ಪುತ್ರನಿಗೆ ನಿಮ್ಮ ತಾಕತ್ತಿದ್ದರೆ ಇಲ್ಲಿ ಬಂದು ಸ್ಪರ್ಧಿಸಿ ಎಂದು ಓಪನ್ ಚಾಲೆಂಜ್ ನೀಡಿದ ಸಮುದ್ರ ತೀರದ ಜನತೆ

ಭಾವನಾತ್ಮಕ ರಾಜಕಾರಣಕ್ಕೆ ಬೇಸತ್ತ ಕರಾವಳಿ ಮಂದಿಯಿಂದ ಕುಮಾರಸ್ವಾಮಿ ಪರ ಬ್ಯಾಟಿಂಗ್: ಖರ್ಗೆ ಪುತ್ರನಿಗೆ ನಿಮ್ಮ ತಾಕತ್ತಿದ್ದರೆ ಇಲ್ಲಿ ಬಂದು ಸ್ಪರ್ಧಿಸಿ ಎಂದು ಓಪನ್ ಚಾಲೆಂಜ್ ನೀಡಿದ ಸಮುದ್ರ ತೀರದ ಜನತೆ

by Shwetha
October 23, 2026
0

ಮಂಗಳೂರು: ರಾಜ್ಯ ರಾಜಕಾರಣದ ಇಬ್ಬರು ಪ್ರಮುಖ ನಾಯಕರುಗಳಾದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವಿನ ಸ್ಟಿಂಗ್ ಆಪರೇಷನ್ ಸಮರ ಈಗ...

ಮೈಸೂರು ಜಂಬೂ ಸವಾರಿಯಲ್ಲಿ ಸಿದ್ದರಾಮಯ್ಯ ಗೈರು: ಸಿದ್ದರಾಮಯ್ಯ ವರ್ಚಸ್ಸು ಕುಗ್ಗಿಸಲು ಸುಳ್ಳು ಸ್ಟಿಂಗ್ ಅಸ್ತ್ರ- ತಂದೆಯ ಪರವಾಗಿ ಬ್ಯಾಟಿಂಗ್ ಮಾಡಿದ ಸಚಿವ ಯತೀಂದ್ರ

ಮೈಸೂರು ಜಂಬೂ ಸವಾರಿಯಲ್ಲಿ ಸಿದ್ದರಾಮಯ್ಯ ಗೈರು: ಸಿದ್ದರಾಮಯ್ಯ ವರ್ಚಸ್ಸು ಕುಗ್ಗಿಸಲು ಸುಳ್ಳು ಸ್ಟಿಂಗ್ ಅಸ್ತ್ರ- ತಂದೆಯ ಪರವಾಗಿ ಬ್ಯಾಟಿಂಗ್ ಮಾಡಿದ ಸಚಿವ ಯತೀಂದ್ರ

by Shwetha
October 23, 2026
0

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವೈಭವದ ಜಂಬೂ ಸವಾರಿ ಅದ್ಧೂರಿಯಾಗಿ ಸಾಗುತ್ತಿದ್ದರೂ, ಅರಮನೆ ನಗರಿಯ ಅಂಗಳದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು....

ಪ್ರತಿಯೊಂದಕ್ಕೂ ದೇಶವಿರೋಧಿ ಹಣೆಪಟ್ಟಿ ಬೇಡ: ಬಿಜೆಪಿ ತನ್ನ ಅಸ್ತಿತ್ವಕ್ಕಾಗಿ ಶತ್ರುಗಳನ್ನು ಸೃಷ್ಟಿಸುತ್ತಿದೆಯೇ? ಮೋದಿ ಸರ್ಕಾರದ ವಿರುದ್ಧ ಅಣ್ಣಾಮಲೈ ವಾಗ್ದಾಳಿ

ಪ್ರತಿಯೊಂದಕ್ಕೂ ದೇಶವಿರೋಧಿ ಹಣೆಪಟ್ಟಿ ಬೇಡ: ಬಿಜೆಪಿ ತನ್ನ ಅಸ್ತಿತ್ವಕ್ಕಾಗಿ ಶತ್ರುಗಳನ್ನು ಸೃಷ್ಟಿಸುತ್ತಿದೆಯೇ? ಮೋದಿ ಸರ್ಕಾರದ ವಿರುದ್ಧ ಅಣ್ಣಾಮಲೈ ವಾಗ್ದಾಳಿ

by Shwetha
October 23, 2026
0

ಚೆನ್ನೈ: ಭಾರತೀಯ ಜನತಾ ಪಾರ್ಟಿಯ ಪ್ರಭಾವಿ ನಾಯಕ ಹಾಗೂ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ...

ಅಸ್ಪೃಶ್ಯತೆಯ ಕಳಂಕ ತೊಡೆಯದಿದ್ದರೆ ಹಿಂದೂ ಧರ್ಮಕ್ಕಿಲ್ಲ ಭವಿಷ್ಯ: ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ

ಅಸ್ಪೃಶ್ಯತೆಯ ಕಳಂಕ ತೊಡೆಯದಿದ್ದರೆ ಹಿಂದೂ ಧರ್ಮಕ್ಕಿಲ್ಲ ಭವಿಷ್ಯ: ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ

by Shwetha
October 23, 2026
0

ಕಲಬುರಗಿ: ಸಮಾಜದಲ್ಲಿ ಹೆಮ್ಮಾರಿಯಂತೆ ಹರಡಿರುವ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಕಳಂಕ ಹೀಗೆಯೇ ಮುಂದುವರಿದರೆ ಹಿಂದೂ ಧರ್ಮವು ಅಳಿವಿನ ಹಾದಿ ಹಿಡಿಯುವುದು ಖಚಿತ ಎಂದು ಎಐಸಿಸಿ ಅಧ್ಯಕ್ಷ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram