ಕೊರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿಯುವುದು ಇಡೀ ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲಾಗಿತ್ತು. ಇಡೀ ವಿಶ್ವದ ವೈದ್ಯಕೀಯ ತಂಡವೇ ಮದ್ದು ಕಂಡು
ಹಿಡಿಯುವುದರಲ್ಲಿ ನಿರತವಾಗಿದೆ ಆದರೇ ಈವರೆಗು ಯಾರು ಸಫಲವಾಗಿರಲಿಲ್ಲ. ಆದ್ರೇ ಇದೀಗ ಲಂಡನ್‌ನ ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯದ ಸಂಶೋಧÀಕರ ತಂಡ ಲಸಿಕೆ ಅಭಿವೃದ್ಧಿ ಪಡಿಸಿದ್ದು ಮಾನವ ಕ್ಲಿನಿಕಲ್ ಟೆಸ್ಟ್ನಲ್ಲಿ ಯಶಸ್ವಿಯಾಗಿದೆ ಅಲ್ದೇ ಈ ಲಸಿಕೆ ಎರಡು ಪಟ್ಟು ಹೆಚ್ಚು ಸುರಕ್ಷತೆ ನೀಡುತ್ತದೆ ಎನ್ನಲಾಗಿದೆ.
ಈಗಾಗಲೇ ಲಸಿಕೆ ಪ್ರಯೋಗಕ್ಕೆ ಬರ್ಕ್ ಶೈಯರ್ ರೀಸರ್ಚ್ ಅನುಮತಿ ನೀಡಿದೆ. ಸಮಿತಿಯ ಅಧ್ಯಕ್ಷರಾದ ಡೇವಿಡ್ ಕಾರ್ಪೆಂಟರ್ ಈ ಬಗ್ಗೆ ಮಾಹಿತಿ ನೀಡಿದ್ದು, ಸೆಪ್ಟಂಬರ್ ವೇಳೆಗೆ ಲಸಿಕೆ ಬಳಕೆಗೆ ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ವೈರಸ್ ಇರುವ ಕೋಶಗಳನ್ನು ನಾಶ ಮಾಡುವ ಬಿಳಿ ರಕ್ತ ಕಣದ ಒಂದು ಮಾದರಿಯನ್ನು ಹುಟ್ಟುಹಾಕುವ ಶಕ್ತಿಯನ್ನು ಈ ಲಸಿಕೆ ಹೋಂದಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.
ಬೆಂಗಳೂರಿನ ವಾಹನ ಸವಾರರೇ ಎಚ್ಚರ ಇಂದಿನಿಂದ ಮತ್ತೆ ಶುರುವಾಗಲಿದೆ ಟೋಯಿಂಗ್ ನೋ ಪಾರ್ಕಿಂಗ್ ಜಾಗದಲ್ಲಿ ಗಾಡಿ ನಿಲ್ಲಿಸಿದರೆ ಬೀಳಲಿದೆ 2000 ರೂಪಾಯಿ ದಂಡ ಗ್ಯಾರಂಟಿ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ಮುಂದೆ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಏಕೆಂದರೆ ನಗರದಲ್ಲಿ ಸಂಚಾರಿ ಪೊಲೀಸರು ಮತ್ತೆ ಟೋಯಿಂಗ್ ಅಸ್ತ್ರವನ್ನು ಕೈಗೆತ್ತಿಕೊಂಡಿದ್ದಾರೆ....








