ADVERTISEMENT
Monday, October 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಅಮ್ಮನ ಹಾಡು ಬಿಡುಗಡೆ: ವೇದಿಕೆ ಮೇಲೆ ಭಾವುಕರಾದ ಹಿರಿಯ ನಟಿ ತಾರಾ

admin by admin
October 5, 2026
in Cinema, Newsbeat, ನ್ಯೂಸ್ ಬೀಟ್, ಮನರಂಜನೆ
Share on FacebookShare on TwitterShare on WhatsappShare on Telegram
lakshmiputra-chikkanna-amman-song-tara-emotional-november-27-release
lakshmiputra-chikkanna-amman-song-tara-emotional-november-27-release

ಬೆಂಗಳೂರು: ನಟ ಚಿಕ್ಕಣ್ಣ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ‘ಲಕ್ಷ್ಮೀಪುತ್ರ’ ಚಿತ್ರದ ವಿಶೇಷ ‘ಅಮ್ಮನ ಹಾಡು’ ಹಾಗೂ ಹೊಸ ಪೋಸ್ಟರ್ ಇತ್ತೀಚೆಗೆ ನಗರದಲ್ಲಿ ಅನಾವರಣಗೊಂಡಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿತ್ರತಂಡ ಸಿನಿಮಾದ ಹುಟ್ಟು, ಶೀರ್ಷಿಕೆಯ ಹಿನ್ನೆಲೆ ಹಾಗೂ ತಾಯಿಯ ಮಹತ್ವದ ಬಗ್ಗೆ ಮನಬಿಚ್ಚಿ ಮಾತನಾಡಿತು.

Related posts

my-baby-preetham-gubbi-sumukha-eesha-new-kannada-movie

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ

October 5, 2026
devi-mahatme-social-drama-rangayana-raghu-december-4-release

‘ದೇವಿ ಮಹಾತ್ಮೆ’ ಭಕ್ತಿ ಪ್ರಧಾನ ಚಿತ್ರವಲ್ಲ, ಇದೊಂದು ವಿಶಿಷ್ಟ ಸೋಷಿಯಲ್ ಡ್ರಾಮಾ: ಚಿತ್ರದ ಗುಟ್ಟು ಬಿಚ್ಚಿಟ್ಟ ನಿರ್ದೇಶಕ ನಾಗರಾಜ್ ಸೋಮಾಯಾಜಿ, ಡಿಸೆಂಬರ್‌ 4ರಂದು ರಿಲೀಸ್

October 5, 2026

‘ಲಕ್ಷ್ಮೀಪುತ್ರ’ ಶೀರ್ಷಿಕೆ ಬಂದಿದ್ದು ಹೇಗೆ?
ಚಿತ್ರದ ಶೀರ್ಷಿಕೆಯ ಬಗ್ಗೆ ಮಾತನಾಡಿದ ಚಿತ್ರಕ್ಕೆ ಸ್ಕ್ರಿಪ್ಟ್ ಜೊತೆಗೆ ಹಾಡುಗಳಿಗೆ ಸಾಹಿತ್ಯ ಬರೆದ ಎ.ಪಿ. ಅರ್ಜುನ್, “ಹಳ್ಳಿಗಾಡಿನಲ್ಲಿ ಸಾಮಾನ್ಯವಾಗಿ ‘ಅವನೊಬ್ಬ ಲಕ್ಷ್ಮೀಪುತ್ರ ಕಣ್ರೋ’ ಎಂದು ಕರೆಯುವುದನ್ನು ಕೇಳಿದ್ದೆವು. ಕಥೆ ರೆಡಿಯಾದಾಗ ಮೊದಲು ‘ಗೌರಿಪುತ್ರ’ ಎಂಬ ಹೆಸರು ಚರ್ಚೆಗೆ ಬಂತು. ಆದರೆ ಗೌರಿಪುತ್ರ ಎಂದರೆ ಗಣೇಶನಾಗುತ್ತಾನೆ ಎಂಬ ಕಾರಣಕ್ಕೆ ಕೊನೆಗೆ ‘ಲಕ್ಷ್ಮೀಪುತ್ರ’ ಎಂದು ಅಂತಿಮಗೊಳಿಸಿದೆವು. ಇಲ್ಲಿ ಲಕ್ಷ್ಮಿ ಎಂದರೆ ದುಡ್ಡಲ್ಲ, ಸಿನಿಮಾದಲ್ಲಿ ತಾಯಿಯ ಹೆಸರು ಲಕ್ಷ್ಮಿ. ಆ ಪಾತ್ರವನ್ನು ನಟಿ ತಾರಾ ಅವರೇ ನಿರ್ವಹಿಸಿದ್ದಾರೆ. ಅವರು ಒಪ್ಪದಿದ್ದರೆ ಈ ಪ್ರಾಜೆಕ್ಟ್ ಮಾಡುತ್ತಲೇ ಇರಲಿಲ್ಲ. ಕೊರೊನಾ ಸಮಯದಲ್ಲಿ ಚಿಕ್ಕಣ್ಣ ಜೊತೆ ಊಟಕ್ಕೆ ಕುಳಿತಾಗ ಹುಟ್ಟಿಕೊಂಡ ಲೈನ್ ಇದು. ‘ಉಪಾಧ್ಯಕ್ಷ’ ಚಿತ್ರದ ನಂತರ ಚಿಕ್ಕಣ್ಣ ಕರೆ ಮಾಡಿ ನೆನಪಿಸಿದಾಗ ಈ ಸಿನಿಮಾ ಸೆಟ್ಟೇರಿತು” ಎಂದು ತಿಳಿಸಿದರು.

ತಾರಮ್ಮನ ಎದುರು ನಟಿಸಲು ಹೆದರಿಸಿದ್ದರು: ಚಿಕ್ಕಣ್ಣ
ನಂತರ ಮಾತನಾಡಿದ ನಟ ಚಿಕ್ಕಣ್ಣ, “ಉಪಾಧ್ಯಕ್ಷ ನಂತರ ಸುಮಾರು 20-30 ಕಥೆಗಳನ್ನು ಕೇಳಿದ್ದೆ. ಆದರೆ ಅರ್ಜುನ್ ಹೇಳಿದ ಈ ಹಳ್ಳಿ ಸೊಗಡಿನ ಅಮ್ಮ-ಮಗನ ಕಥೆ ನನಗೆ ತೃಪ್ತಿ ಕೊಟ್ಟಿತ್ತು. ‘ಕಿರಾತಕ’ ಚಿತ್ರದ ಬಳಿಕ ನಾನು ತಾರಮ್ಮ ಜೊತೆ ನಟಿಸಿರಲಿಲ್ಲ. ರಾಷ್ಟ್ರ ಪ್ರಶಸ್ತಿ ವಿಜೇತ ತಾರಮ್ಮನ ಮುಂದೆ ನಟಿಸುತ್ತಿದ್ದೀಯಾ, ಅವರು ನಿನ್ನನ್ನು ಆಕ್ಟಿಂಗ್‌ನಲ್ಲಿ ತಿಂದು ಹಾಕಿಬಿಡುತ್ತಾರೆ ಎಂದು ಹಲವರು ಹೆದರಿಸಿದ್ದರು. ಆದರೆ ಅವರು ತೆರೆಮೇಲೆ ಪ್ರತಿಯೊಬ್ಬ ಕಲಾವಿದನಿಗೂ ಸಮಾನ ಜಾಗ ಕೊಡುತ್ತಾರೆ. ನಮ್ಮಿಬ್ಬರ ಕಾಂಬಿನೇಷನ್ ತಾಯಿ-ಮಗನಂತೆ ಅದ್ಭುತವಾಗಿ ಮೂಡಿಬಂದಿದೆ” ಎಂದರು.
ಇದೇ ವೇಳೆ ಎ.ಪಿ. ಅರ್ಜುನ್ ಅವರ ಸಾಹಿತ್ಯವನ್ನು ಕೊಂಡಾಡಿದ ಚಿಕ್ಕಣ್ಣ, “ಅರ್ಜುನ್ ಅವರಿಗೆ ಅಮ್ಮ ಎಂದರೆ ಪ್ರಾಣ. ಆ ಅಪಾರ ಪ್ರೀತಿಯೇ ಈ ಹಾಡಿನ ಸಾಲುಗಳಾಗಿ ಹೊರಹೊಮ್ಮಿವೆ” ಎಂದರು. ಚಿತ್ರದ ಮೂಲಕ ವಂದಿತಾ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದು, ಪಾತ್ರಕ್ಕೆ ಹೇಳಿಮಾಡಿಸಿದಂತೆ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸ ಬಾಳಿನ ಬಗ್ಗೆ ಚಿಕ್ಕಣ್ಣ ಕಾಲೆಳೆದ ತಾರಾ
ಇತ್ತೀಚೆಗಷ್ಟೇ ಹಸೆಮಣೆ ಏರಿರುವ ಚಿಕ್ಕಣ್ಣ ಅವರ ಕಾಲೆಳೆದ ನಟಿ ತಾರಾ, “ಸಿನಿಮಾ ಹೀರೋಯಿನ್ ಬಗ್ಗೆ ಚೆನ್ನಾಗಿ ಹೇಳ್ತೀಯಾ, ನಿನ್ನ ನಿಜ ಜೀವನದ ಹೀರೋಯಿನ್ ಪಾವನಾ ಬಗ್ಗೆ ಹೇಳು” ಎಂದು ಪೀಡಿಸಿದರು. ಇದಕ್ಕೆ ನಾಚಿ ನಕ್ಕ ಚಿಕ್ಕಣ್ಣ, “ಪಾವನಾ ನನ್ನ ಜೀವನಕ್ಕೆ ಬಂದ್ಮೇಲೆ ಸಿನಿಮಾ ರಿಲೀಸ್ ಆಗುತ್ತಿದೆ, ಆಕೆ ನನಗೆ ನಿಜವಾಗಿಯೂ ಲಕ್ಕಿ. ಸದ್ಯ ಅತ್ತೆಗೆ ಹುಷಾರಿಲ್ಲದ ಕಾರಣ ಆಕೆ ಕಾರ್ಯಕ್ರಮಕ್ಕೆ ಬಂದಿಲ್ಲ, ಮುಂದಿನ ಇವೆಂಟ್‌ಗೆ ಕರೆದುಕೊಂಡು ಬರುತ್ತೇನೆ” ಎಂದು ವೇದಿಕೆಯಲ್ಲೇ ಪತ್ನಿಗೆ ಪ್ರೀತಿಯಿಂದ ‘ಐ ಲವ್ ಯು’ ಹೇಳಿದರು.

ತಾಯಿಯ ನೆನೆದು ಕಣ್ಣೀರಾದ ತಾರಾ
ಕಾರ್ಯಕ್ರಮದಲ್ಲಿ ಅಮ್ಮನ ಹಾಡು ವೀಕ್ಷಿಸಿದ ಬಳಿಕ ಹಿರಿಯ ನಟಿ ತಾರಾ ಭಾವುಕರಾದರು. “ನನ್ನ ತಾಯಿ ಪುಷ್ಪಮ್ಮ ಹಾಗೂ ದೊಡ್ಡಮ್ಮ ಲೀಲಮ್ಮ ನನ್ನ ಬದುಕಿನ ಶಕ್ತಿ. ಎಷ್ಟೇ ವಯಸ್ಸಾದರೂ ತಾಯಿಗೆ ನಾವೆಲ್ಲ ಮಕ್ಕಳೇ. ಹೊರಗಡೆ ಎಷ್ಟೇ ನೋವು, ಕೋಪ, ಅವಮಾನಗಳಾದರೂ ನಾವು ಮನೆಗೆ ಬಂದು ಕೂಗಾಡುವುದು ಅಮ್ಮನ ಮೇಲೆಯೇ. ಆದರೆ ತಾಯಿ ಅದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಳ್ಳದೆ ಪ್ರೀತಿಯಿಂದ ಊಟ ಬಡಿಸುತ್ತಾಳೆ. ಆ ತಾಯಿಯ ಪ್ರೀತಿಗೆ ಯಾವುದೂ ಸಾಟಿಯಿಲ್ಲ” ಎಂದು ಸ್ಮರಿಸಿಕೊಂಡರು.
ಹಾಡಿನಲ್ಲಿ ಹಿರಿಯ ನಟರಾದ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಹಾಗೂ ಅನಂತ್ ನಾಗ್ ಅವರ ತಾಯಂದಿರ ಅಪರೂಪದ ಭಾವಚಿತ್ರಗಳನ್ನು ಬಳಸಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಪೋಸ್ಟರ್ ಅನಾವರಣಗೊಳಿಸಲಾಯಿತು. ಈ ಚಿತ್ರವನ್ನು ಅನ್ನಪೂರ್ಣ ಎ ಪಿ ಅರ್ಜುನ್ ನಿರ್ಮಾಣ ಮಾಡಿದ್ದಾರೆ ಮತ್ತು ರವಿಕಿರಣ್ ಎಂ. ಗೌಡ ಅವರು ಸಹ ನಿರ್ಮಾಪಕರಾಗಿದ್ದಾರೆ.
‘ಲಕ್ಷ್ಮೀಪುತ್ರ’
ಚಿತ್ರವು ನವೆಂಬರ್ 27ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

Tags: #ಲಕ್ಷ್ಮೀಪುತ್ರ #ಚಿಕ್ಕಣ್ಣ #ಅಮ್ಮನಹಾಡು #ತಾರಾ #ಎಪಿಅರ್ಜುನ್ #ವಂದಿತಾ #ಕನ್ನಡಸಿನಿಮಾ #ನವೆಂಬರ್27 #Lakshmiputra #Chikkanna #AmmanSong #Tara #APArjun #Vanditha #KannadaCinema
ShareTweetSendShare
Join us on:

Related Posts

my-baby-preetham-gubbi-sumukha-eesha-new-kannada-movie

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ

by admin
October 5, 2026
0

ಹೊಸ ತಲೆಮಾರಿನ ಪ್ರೀತಿ, ಅವರದೇ ಆದ ಬದುಕಿನ ಆಯ್ಕೆಗಳು ಮತ್ತು ಒಟ್ಟಿಗೆ ಸಾಗುವ ಪಯಣದ ಕಥೆ ಬೆಂಗಳೂರು: ಸಂಬಂಧಗಳ ಸೂಕ್ಷ್ಮತೆ, ಮಾನವೀಯ ಭಾವನೆಗಳು ಮತ್ತು ಬದಲಾಗುತ್ತಿರುವ ಬದುಕಿನ...

devi-mahatme-social-drama-rangayana-raghu-december-4-release

‘ದೇವಿ ಮಹಾತ್ಮೆ’ ಭಕ್ತಿ ಪ್ರಧಾನ ಚಿತ್ರವಲ್ಲ, ಇದೊಂದು ವಿಶಿಷ್ಟ ಸೋಷಿಯಲ್ ಡ್ರಾಮಾ: ಚಿತ್ರದ ಗುಟ್ಟು ಬಿಚ್ಚಿಟ್ಟ ನಿರ್ದೇಶಕ ನಾಗರಾಜ್ ಸೋಮಾಯಾಜಿ, ಡಿಸೆಂಬರ್‌ 4ರಂದು ರಿಲೀಸ್

by admin
October 5, 2026
0

ಬೆಂಗಳೂರು: ಶೀರ್ಷಿಕೆಯಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ದೇವಿ ಮಹಾತ್ಮೆ’ ಚಿತ್ರದ ಬಗ್ಗೆ ನಿರ್ದೇಶಕ ನಾಗರಾಜ್ ಸೋಮಾಯಾಜಿ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಟೀಸರ್ ಮೂಲಕ ಪ್ರೇಕ್ಷಕರ ಗಮನ...

sanvi-sudeep-sulochana-song-sigma-jason-sanjay-thaman

ಮಸ್ತ್‌ ಮಲೈಕಾ’ ಯಶಸ್ಸಿನ ಬಳಿಕ ಗಾಯಕಿ ಸಾನ್ವಿ ಸುದೀಪ್‌ ಅವರು ‘ಸುಲೋಚನ’ ಎಂಬ ಹೊಸ ಗೀತೆಗೆ ಧ್ವನಿಯಾಗಿದ್ದಾರೆ.

by admin
October 5, 2026
0

ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನ ಮಾಡುತ್ತಿರುವ 'ಸಿಗ್ಮಾ' ಚಿತ್ರದಲ್ಲಿ ಈ ಹಾಡು ಮೂಡಿಬಂದಿದೆ. 'ಸಿಗ್ಮಾ' ಸಿನಿಮಾದಲ್ಲಿ ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ...

puttamalli-song-anna-from-mexico-dhananjaya-5-million-views

ಸೋಶಿಯಲ್‌ ಮೀಡಿಯಾದಲ್ಲಿ ‘ಪುಟ್ಟಮಲ್ಲಿ’ ಧಮಾಕ: ʻಡಾಲಿʼ ಧನಂಜಯ್ ನಟನೆಯ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ಹಾಡಿಗೆ ಭರ್ಜರಿ ರೆಸ್ಪಾನ್ಸ್!

by admin
October 5, 2026
0

ಬೆಂಗಳೂರು: ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಅಣ್ಣ ಫ್ರಮ್ ಮೆಕ್ಸಿಕೋ’ ಬಿಡುಗಡೆಗೂ ಮುನ್ನವೇ ಹಾಡುಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚಿತ್ರದ ‘ಓ ಪುಟ್ಟಮಲ್ಲಿ...

slum-dog-33-temple-road-vijay-sethupathi-zareena-wahab-jubeida-glimpse

ಪೂರಿ ಜಗನ್ನಾಥ್–ವಿಜಯ್ ಸೇತುಪತಿ ಕಾಂಬಿನೇಷನ್‌ನ ‘ಸ್ಲಮ್ ಡಾಗ್’ ಚಿತ್ರದಿಂದ ಎಮೋಷನಲ್ ಗ್ಲಿಂಪ್ಸ್ ರಿಲೀಸ್: ‘ಜುಬೇದಾ’ ಪಾತ್ರದಲ್ಲಿ ಹಿರಿಯ ನಟಿ ಝರೀನಾ ವಹಾಬ್!

by admin
October 5, 2026
0

ಹೈದರಾಬಾದ್: ಡೈನಾಮಿಕ್ ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ವಿಶಿಷ್ಟ ನಟ ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram