ಸ್ವಿಗ್ಗಿ ಇನ್ಸ್ಟಾಮಾರ್ಟ್ನ ಸ್ವಂತ ಆಹಾರ ಬ್ರ್ಯಾಂಡ್ ನಾಯ್ಸ್ (NOICE) ತನ್ನ ವ್ಯಾಪಾರವನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಲು ಮುಂದಾಗಿದೆ. ಭಾರತದ ಸ್ಥಳೀಯ ಆಹಾರ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ತನ್ನ ಪಾಲುದಾರರ ಸಂಖ್ಯೆಯನ್ನು ದುಪ್ಪಟ್ಟು ಮಾಡಲು ಹಾಗೂ 500ಕ್ಕೂ ಹೆಚ್ಚು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಸ್ಥೆ ನಿರ್ಧರಿಸಿದೆ.
ಇತ್ತೀಚೆಗೆ 100ಕ್ಕೂ ಹೆಚ್ಚು ಆಹಾರ ಉದ್ಯಮಿಗಳೊಂದಿಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಸ್ವಿಗ್ಗಿ ಗ್ರೂಪ್ ಸಿಇಒ ಶ್ರೀಹರ್ಷ ಮಜೆಟಿ ಮತ್ತು ಇನ್ಸ್ಟಾಮಾರ್ಟ್ ಸಿಇಒ ನಂದಿತಾ ಸಿನ್ಹಾ ಈ ಮಹತ್ವದ ವಿಸ್ತರಣೆಯ ಘೋಷಣೆ ಮಾಡಿದ್ದಾರೆ.
ಹೊಸತಾಗಿ ಏನೇನು ಸಿಗಲಿದೆ?
ಹೊಸ ವಿಸ್ತರಣೆಯ ಭಾಗವಾಗಿ ನಾಯ್ಸ್ ಬ್ರ್ಯಾಂಡ್ ಅಡಿಯಲ್ಲಿ ಮಸಾಲೆ ಪುಡಿಗಳು, ದಿನಸಿ ವಸ್ತುಗಳು, ಸಿರಿಧಾನ್ಯಗಳು ಮತ್ತು ಡೈರಿ ಪರ್ಯಾಯ ಉತ್ಪನ್ನಗಳು ಹೊಸದಾಗಿ ಸೇರ್ಪಡೆಯಾಗಲಿವೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಸಿಗಲಿದ್ದು, ಸ್ಥಳೀಯ ಉತ್ಪಾದಕರಿಗೆ ಮಾರುಕಟ್ಟೆ ವಿಸ್ತರಿಸಲು ದೊಡ್ಡ ಅವಕಾಶ ಸಿಕ್ಕಂತಾಗಿದೆ.
ಉದ್ಯಮಿಗಳಿಗೆ 5 ಕೋಟಿ ರೂ. ಬೃಹತ್ ಆರ್ಥಿಕ ನೆರವು
ವ್ಯಾಪಾರವನ್ನು ದೊಡ್ಡ ಮಟ್ಟಕ್ಕೆ ಬೆಳೆಸಲು ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಉದ್ಯಮಿಗಳಿಗೆ ಬಂಡವಾಳದ ಅಗತ್ಯವಿರುತ್ತದೆ. ಇದನ್ನು ಅರಿತಿರುವ ಸಂಸ್ಥೆಯು, ಅರ್ಹ ಆಹಾರ ಉದ್ಯಮಿಗಳಿಗೆ ತಲಾ 5 ಕೋಟಿ ರೂ.ವರೆಗೆ ಸಾಲ ಸೌಲಭ್ಯ ಒದಗಿಸುವ ಹೊಸ ಯೋಜನೆಯನ್ನು ಪರಿಚಯಿಸಿದೆ.
ಸ್ವಿಗ್ಗಿ ಫೈನಾನ್ಷಿಯಲ್ ಸರ್ವಿಸಸ್ ಮೂಲಕ ಎಸ್ಐಡಿಬಿಐ, ಆಕ್ಸಿಸ್ ಬ್ಯಾಂಕ್ ಮತ್ತು ಇನ್ಕ್ರೆಡ್ ಫೈನಾನ್ಸ್ ಜೊತೆಗೂಡಿ ಈ ಸಾಲ ನೀಡಲಾಗುತ್ತಿದೆ.
ಕೇವಲ ಒಂದು ತಿಂಗಳೊಳಗೆ ಈಗಾಗಲೇ 2 ಕೋಟಿ ರೂ. ಸಾಲವನ್ನು ವಿತರಿಸಲಾಗಿದ್ದು, 2026ರ ಅಂತ್ಯದ ವೇಳೆಗೆ 100ಕ್ಕೂ ಹೆಚ್ಚು ಉದ್ಯಮಿಗಳಿಗೆ ನೆರವಾಗುವ ಗುರಿ ಹೊಂದಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟಕ್ಕೆ ಒತ್ತು
ಆಹಾರದ ರುಚಿ ಮತ್ತು ನೈರ್ಮಲ್ಯದಲ್ಲಿ ಯಾವುದೇ ರಾಜಿ ಇಲ್ಲ. ಹೀಗಾಗಿ ಅಂತಾರಾಷ್ಟ್ರೀಯ ‘ಎಫ್ಎಸ್ಎಸ್ಸಿ 22000’ ಗುಣಮಟ್ಟದ ಮಾನ್ಯತೆ ಹೊಂದಿರುವ ಉತ್ಪಾದಕರಿಗೆ ನಾಯ್ಸ್ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸಾಲ ಪಡೆದ
ಉದ್ಯಮಿಗಳು ತಮ್ಮ ಘಟಕಗಳಲ್ಲಿ ಈ ಮಟ್ಟದ ಗುಣಮಟ್ಟ ಕಾಯ್ದುಕೊಳ್ಳಲು ಹೂಡಿಕೆ ಮಾಡಬಹುದಾಗಿದೆ.
ಒಂದೇ ವರ್ಷದಲ್ಲಿ ಗ್ರಾಹಕರ ಫೇವರಿಟ್ ಆದ ನಾಯ್ಸ್
2025ರಲ್ಲಿ ಆರಂಭವಾದ ಕ್ಲೀನ್ ಲೇಬಲ್ ಬ್ರ್ಯಾಂಡ್ ನಾಯ್ಸ್ ರುಚಿ ಮತ್ತು ತಾಜಾತನಕ್ಕೆ ಹೆಸರುವಾಸಿಯಾಗಿದೆ. ಪ್ರಸ್ತುತ ದೇಶಾದ್ಯಂತ 75 ಆಹಾರ ಉದ್ಯಮಿಗಳೊಂದಿಗೆ ಕೈಜೋಡಿಸಿರುವ ಈ ಬ್ರ್ಯಾಂಡ್, ಕೇವಲ ಒಂದು ವರ್ಷದಲ್ಲಿ ಬರೋಬ್ಬರಿ 90 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ತಲುಪಿದೆ.
ತಾಜಾ ಬ್ರೆಡ್, ಪನೀರ್, ದೋಸೆ-ಇಡ್ಲಿ ಹಿಟ್ಟು, ಪ್ರಾದೇಶಿಕ ಸ್ನ್ಯಾಕ್ಸ್ ಮತ್ತು ಸಿಹಿತಿಂಡಿಗಳು ಸೇರಿದಂತೆ 46ಕ್ಕೂ ಹೆಚ್ಚು ವಿಭಾಗಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
ಇಂದು ಇನ್ಸ್ಟಾಮಾರ್ಟ್ನಲ್ಲಿ ಆರ್ಡರ್ ಆಗುವ ಪ್ರತಿ 10 ಬ್ಯಾಗ್ಗಳಲ್ಲಿ 1 ಬ್ಯಾಗ್ನಲ್ಲಿ ನಾಯ್ಸ್ ಉತ್ಪನ್ನ ಇದ್ದೇ ಇರುತ್ತದೆ. ಇತರ ಗ್ರಾಹಕರಿಗೆ ಹೋಲಿಸಿದರೆ ನಾಯ್ಸ್ ಗ್ರಾಹಕರು 1.5 ಪಟ್ಟು ಹೆಚ್ಚು ಬಾರಿ ಆರ್ಡರ್ ಮಾಡುತ್ತಾರೆ ಮತ್ತು ಹೆಚ್ಚಿನ ಗ್ರಾಹಕರು ಮರಳಿ ಇದೇ ಬ್ರ್ಯಾಂಡ್ ಖರೀದಿಸುತ್ತಿದ್ದಾರೆ ಎಂಬುದು ಇದರ ಜನಪ್ರಿಯತೆಗೆ ಸಾಕ್ಷಿ.
ಈ ಕುರಿತು ಮಾತನಾಡಿದ ಇನ್ಸ್ಟಾಮಾರ್ಟ್ ಸಿಇಒ ನಂದಿತಾ ಸಿನ್ಹಾ, “ಉತ್ತಮ ಗುಣಮಟ್ಟದ ಉತ್ಪನ್ನಗಳ ಮೂಲಕ ಗ್ರಾಹಕರ ನಂಬಿಕೆ ಗಳಿಸುವುದು ಮತ್ತು ಸ್ಥಳೀಯ ಬ್ರ್ಯಾಂಡ್ಗಳನ್ನು ಬೆಳೆಸುವುದು ನಮ್ಮ ಉದ್ದೇಶ. ಬಂಡವಾಳ, ಗುಣಮಟ್ಟ ಮತ್ತು ವೇದಿಕೆ ಒದಗಿಸುವ ಮೂಲಕ ಭಾರತದಲ್ಲಿ ಬಲಿಷ್ಠ ಆಹಾರ ಉದ್ಯಮದ ಇಕೋಸಿಸ್ಟಮ್ ನಿರ್ಮಿಸುತ್ತಿದ್ದೇವೆ. ಈ ಬೆಳವಣಿಗೆ ನಮಗೆ ಅತ್ಯಂತ ಖುಷಿ ತಂದಿದೆ,” ಎಂದಿದ್ದಾರೆ


![pandavapura-free-health-camp-darshan-puttannaiah-october-8]](https://saakshatv.com/wp-content/uploads/2026/10/darsan-120x86.png)
![pandavapura-free-health-camp-darshan-puttannaiah-october-8]](https://saakshatv.com/wp-content/uploads/2026/10/darsan-350x250.png)

![technologies-aerospace-defense-manufacturing-unit-devanahalli]](https://saakshatv.com/wp-content/uploads/2026/10/areo-350x247.png)

