ADVERTISEMENT
Wednesday, October 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪದ್ಮಶ್ರೀ ಪುರಸ್ಕೃತ ಡಾ. ಡಿಬಿಯಾ ಸಾರಥ್ಯದಲ್ಲಿ ಸಿಲಿಕಾನ್ ಸಿಟಿಯಲ್ಲಿ ಗರಿಗೆದರಲಿದೆ ಇಂಡೋನೇಷ್ಯಾದ ಬಾಲಿ ಸಂಸ್ಕೃತಿ

admin by admin
October 14, 2026
in Newsbeat, State, ರಾಜ್ಯ
bali-in-bengaluru-2026-cultural-festival-kecak-yakshagana

bali-in-bengaluru-2026-cultural-festival-kecak-yakshagana

Share on FacebookShare on TwitterShare on WhatsappShare on Telegram

ಬೆಂಗಳೂರು: ಬೆಂಗಳೂರು ಎಂದರೆ ಕೇವಲ ಟೆಕ್ ಸಿಟಿ ಮಾತ್ರವಲ್ಲ, ವಿಭಿನ್ನ ಸಂಸ್ಕೃತಿಗಳು, ಕಲೆಗಳು ಮತ್ತು ಪರಂಪರೆಗಳು ಒಂದೆಡೆ ಮೇಳೈಸುವ ಜೀವಂತ ತಾಣ. ಇದೀಗ ಇದೇ ಬೆಂಗಳೂರಿನ ಅಂಗಳದಲ್ಲಿ ಇಂಡೋನೇಷ್ಯಾದ ಬಾಲಿ ದ್ವೀಪದ ಶ್ರೀಮಂತ ಸಾಂಸ್ಕೃತಿಕ ಲೋಕ ತೆರೆದುಕೊಳ್ಳಲಿದೆ. ಬಾಲಿಯ ನೃತ್ಯ, ಸಂಗೀತ, ತೊಗಲುಗೊಂಬೆಯಾಟ, ಮುಖವಾಡ ತಯಾರಿ ಸೇರಿದಂತೆ ಅಲ್ಲಿನ ಜೀವಂತ ಕಲಾ ಪರಂಪರೆಗಳನ್ನು ಬೆಂಗಳೂರಿಗರು ನೇರವಾಗಿ ಅನುಭವಿಸುವ ಅಪರೂಪದ ಅವಕಾಶ ಇದೀಗ ಒದಗಿಬಂದಿದೆ.

ಪರಮ್‌ ಫೌಂಡೇಷನ್‌ ವತಿಯಿಂದ ಆಯೋಜಿಸಲಾಗಿರುವ ‘ಬಾಲಿ ಇನ್‌ ಬೆಂಗಳೂರು’ (BALI IN BENGALURU) ಸಾಂಸ್ಕೃತಿಕ ಉತ್ಸವ ಅಕ್ಟೋಬರ್‌ 3ರಿಂದ 18ರವರೆಗೆ ನಡೆಯಲಿದೆ. ಒಟ್ಟು 16 ದಿನಗಳ ಕಾಲ ನಗರದ 14 ಪ್ರಮುಖ ಸ್ಥಳಗಳಲ್ಲಿ 16 ಕಾರ್ಯಕ್ರಮಗಳು ನಡೆಯಲಿದ್ದು, ಕಲಾ ಪ್ರದರ್ಶನಗಳ ಜತೆಗೆ ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಸಂವಾದ ಮತ್ತು ಕಲಾವಿದರೊಂದಿಗಿನ ನೇರ ಸಂವಹನಕ್ಕೂ ವೇದಿಕೆ ಕಲ್ಪಿಸಲಾಗಿದೆ. ವಿಶೇಷವೆಂದರೆ, ಅಕ್ಟೋಬರ್ 3ರಂದು ಬೆಂಗಳೂರಿನ ಒರಾಯನ್‌ ಮಾಲ್‌ನಲ್ಲಿ ನಡೆಯಲಿರುವ ಉದ್ಘಾಟನಾ ದಿನದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶವಿದೆ.

Related posts

reliance-joyland-flavoured-milk-launch-rs-20

ರಿಲಯನ್ಸ್‌ನಿಂದ 20 ರುಪಾಯಿಗೆ ಜಾಯ್‌ಲೆಂಡ್‌ ಫ್ಲೇವರ್ಡ್‌ ಹಾಲು ಬಿಡುಗಡೆ

October 14, 2026
bali-in-bengaluru-yakshagana-kecak-cultural-event

ಮೀನಾಕ್ಷಿ ರಂಗಮಂಚದಲ್ಲಿ ಬಾಲಿಯ ಲಯ-ನೃತ್ಯ ವೈಭವ: ಯಕ್ಷಗಾನ-ಕೆಚಕ್ ಸಾಂಸ್ಕೃತಿಕ ಸಂಗಮ!

October 14, 2026

ಇದು ಕೇವಲ ಬಾಲಿಯ ಸಂಸ್ಕೃತಿಯನ್ನು ಬೆಂಗಳೂರಿಗೆ ಪರಿಚಯಿಸುವ ಉತ್ಸವವಷ್ಟೇ ಅಲ್ಲ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ಪ್ರಾಚೀನ ಸಾಂಸ್ಕೃತಿಕ ಸಾಮ್ಯತೆ, ರಾಮಾಯಣ ಆಧಾರಿತ ಪುರಾಣ ಕಥನಗಳು ಹಾಗೂ ಉಭಯ ದೇಶಗಳ ಕಲಾ ಸಂಬಂಧಗಳನ್ನು ಮರುಶೋಧಿಸುವ ಸೃಜನಶೀಲ ವಿನಿಮಯವೂ ಆಗಿದೆ.

ಬಾಲಿಯಿಂದ ಬೆಂಗಳೂರಿಗೆ ಕಲೆಯ ಪಯಣ:

ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಬಾಲಿಯ ಪ್ರಸಿದ್ಧ ‘ಕೆಚಕ್’ (Kecak) ಪ್ರದರ್ಶನವೂ ಒಂದು. ರಾಮಾಯಣದ ಪ್ರಸಂಗಗಳಿಂದ ಪ್ರೇರಣೆ ಪಡೆದಿರುವ ಕೆಚಕ್‌ನಲ್ಲಿ ವಿಶಿಷ್ಟ ಕಂಠಧ್ವನಿ, ಲಯಬದ್ಧ ಚಲನೆ ಮತ್ತು ಸಮೂಹ ಗಾಯನ-ನೃತ್ಯದ ಮೂಲಕ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಡಲಾಗುತ್ತದೆ.

ಪದ್ಮಶ್ರೀ ಪುರಸ್ಕೃತ ಡಾ. ಐ. ವಯಾನ್ ಡಿಬಿಯಾ ಹಾಗೂ ಅವರ ಪರಿಣಿತ ಕಲಾವಿದರ ತಂಡವೇ ನಗರಕ್ಕೆ ಆಗಮಿಸುತ್ತಿದ್ದು, ಬಾಲಿಯ ಪ್ರದರ್ಶನ ಕಲೆಗಳ ಕುರಿತ ತಮ್ಮ ದಶಕಗಳ ಅನುಭವ ಮತ್ತು ಜ್ಞಾನವನ್ನು ಬೆಂಗಳೂರಿನ ಕಲಾಸಕ್ತರೊಂದಿಗೆ ಹಂಚಿಕೊಳ್ಳಲಿದ್ದಾರೆ. ಬಾಲಿ ನೃತ್ಯದ ಸೂಕ್ಷ್ಮ ಹಾವಭಾವಗಳು, ಹೆಜ್ಜೆಗಳ ಲಯ ಮತ್ತು ಕಥನ ಶೈಲಿಯನ್ನು ಕೇವಲ ವೀಕ್ಷಿಸುವುದಷ್ಟೇ ಅಲ್ಲದೆ, ಕಾರ್ಯಾಗಾರಗಳ ಮೂಲಕ ಆ ಕಲೆಯ ಆಂತರ್ಯವನ್ನು ಅರ್ಥೈಸಿಕೊಳ್ಳುವ ಅವಕಾಶವೂ ಇರಲಿದೆ.

ಕೆಚಕ್‌ನಿಂದ ಗಮೆಲಾನ್‌ವರೆಗೆ…

ಬಾಲಿಯ ಸಾಂಪ್ರದಾಯಿಕ ‘ಗಮೆಲಾನ್‌’ ಸಂಗೀತ ಪರಿಚಯಿಸುವ ಕಾರ್ಯಾಗಾರ, ಮುಖವಾಡ ತಯಾರಿಕೆ ಕಮ್ಮಟ, ನೃತ್ಯ ಚಲನೆಯ ತರಬೇತಿ ಹಾಗೂ ಇಂಡೋನೇಷ್ಯಾದ ಸಾಂಪ್ರದಾಯಿಕ ‘ವಾಯಾಂಗ್’ ತೊಗಲುಗೊಂಬೆಯಾಟದ ಪ್ರಾತ್ಯಕ್ಷಿಕೆಗಳು ಉತ್ಸವದ ಮೆರುಗನ್ನು ಹೆಚ್ಚಿಸಲಿವೆ.

ವಿಶೇಷವೆಂದರೆ, ಇಂಡೋನೇಷ್ಯಾ ಮತ್ತು ಭಾರತದ ತೊಗಲುಗೊಂಬೆಯಾಟ ಪರಂಪರೆಗಳನ್ನು ಪರಸ್ಪರ ಮುಖಾಮುಖಿಯಾಗಿಸುವ ಜಂಟಿ ಪ್ರದರ್ಶನವೂ ನಡೆಯಲಿದೆ. ಹಾಗೆಯೇ ಬಾಲಿಯ ಸಾಂಸ್ಕೃತಿಕ ಪ್ರದರ್ಶನ ಕಲೆಯನ್ನು ನಮ್ಮ ನೆಲದ ಹೆಮ್ಮೆಯ ಯಕ್ಷಗಾನದೊಂದಿಗೆ ಬೆಸೆಯುವ ಅಪೂರ್ವ ಸಹಯೋಗವೂ ಈ ಮಹೋತ್ಸವದ ಕೇಂದ್ರಬಿಂದು. ಹೀಗಾಗಿ ಒಂದೆಡೆ ಬಾಲಿಯ ಕೆಚಕ್‌ನ ಲಯ ಕೇಳಿಬಂದರೆ, ಮತ್ತೊಂದೆಡೆ ಕರ್ನಾಟಕದ ಯಕ್ಷಗಾನದ ಹೆಜ್ಜೆ ಮತ್ತು ಪ್ರಸಂಗಗಳ ಕಥಾವಸ್ತುವಿನೊಂದಿಗೆ ಅದರ ಕಲಾತ್ಮಕ ಸಂವಾದ ನಡೆಯಲಿದೆ.

ಪ್ರದರ್ಶನಕ್ಕಷ್ಟೇ ಸೀಮಿತವಲ್ಲ:

‘ಬಾಲಿ ಇನ್‌ ಬೆಂಗಳೂರು’ ಉತ್ಸವದ ಮೂಲ ಆಶಯವೆಂದರೆ ಸಂಸ್ಕೃತಿಯನ್ನು ಕೇವಲ ಪ್ರದರ್ಶನದ ಚೌಕಟ್ಟಿನಲ್ಲಿಡದೆ, ಕಲಿಕೆ, ಸಹಯೋಗ ಮತ್ತು ಸಂವಾದದ ಮೂಲಕ ಜನರ ನಡುವೆ ತರುವುದು. ಬಾಲಿಯ ಕಲಾವಿದರು, ಭಾರತೀಯ ರಂಗಕರ್ಮಿಗಳು, ವಿದ್ಯಾರ್ಥಿಗಳು, ಕಲಾ ಸಂಶೋಧಕರು, ಶಿಕ್ಷಣ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿವೆ. ಜೊತೆಗೆ ಉಪನ್ಯಾಸಗಳು, ಪ್ರಾತ್ಯಕ್ಷಿಕೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಇಂಡೋನೇಷ್ಯಾ-ಭಾರತೀಯ ಆಹಾರ-ಸಮುದಾಯ ಆಧಾರಿತ ತೊಡಗಿಸಿಕೊಳ್ಳುವಿಕೆಗಳ ಮೂಲಕ ಈ ಸಹಭಾಗಿತ್ವವು ಇನ್ನಷ್ಟು ವಿಸ್ತರಿಸಲಿದೆ. ಒಟ್ಟಿನಲ್ಲಿ, ಬಾಲಿಯ ನೃತ್ಯ, ಸಂಗೀತ ಮತ್ತು ಕಥನ ಪರಂಪರೆಗಳೊಂದಿಗೆ ಕರುನಾಡಿನ ಕಲಾ ಮನಸ್ಸುಗಳು ಬೆರೆಯಲಿರುವ ಈ 16 ದಿನಗಳು ಬೆಂಗಳೂರಿನ ಸಾಂಸ್ಕೃತಿಕ ಕ್ಯಾಲೆಂಡರ್‌ನಲ್ಲಿ ಹೊಸ ಮೈಲಿಗಲ್ಲಾಗಲಿವೆ.

ಮೊದಲ ದಿನದ ವಿಶೇಷ: ಅ. 3ರ ಸಂಜೆ ‘ಕೆಚಕ್’ ನೃತ್ಯ ವೈಭವ

ಉತ್ಸವದ ಉದ್ಘಾಟನಾ ದಿನವಾದ ಅಕ್ಟೋಬರ್ 3ರ ಸಂಜೆ 6ಕ್ಕೆ ಒರಾಯನ್‌ ಮಾಲ್‌ನಲ್ಲಿ ಬಾಲಿಯ ವಿಶ್ವವಿಖ್ಯಾತ ಕಲಾಪ್ರಕಾರವಾದ ‘ಕೆಚಕ್’ (Kecak) ನೃತ್ಯ ಪ್ರದರ್ಶನ ನಡೆಯಲಿದ್ದು, ಪ್ರಮುಖ ಆಕರ್ಷಣೆಯಾಗಲಿದೆ.

* ರಾಮಾಯಣದ ಕಥಾನಕ: ಜನಪ್ರಿಯವಾಗಿ ‘ರಾಮಾಯಣ ಮಂಕಿ ಚಾಂಟ್’ ಎಂದೇ ಕರೆಯಲಾಗುವ ಕೆಚಕ್, ರಾಮಾಯಣದ ಪ್ರಮುಖ ಪ್ರಸಂಗವನ್ನು ಆಧರಿಸಿದೆ. ಸೀತಾದೇವಿಯನ್ನು ರಕ್ಷಿಸಲು ಶ್ರೀರಾಮ, ಹನುಮಂತ ಮತ್ತು ವಾನರ ಸೇನೆ ನಡೆಸುವ ಸಾಹಸಮಯ ಹೋರಾಟವನ್ನು ರಂಗದ ಮೇಲೆ ಅದ್ಭುತವಾಗಿ ಪ್ರದರ್ಶಿಸಲಾಗುತ್ತದೆ.

• ವಾದ್ಯಗಳಿಲ್ಲದ ಕಂಠಧ್ವನಿ ಲಯ: 20ನೇ ಶತಮಾನದ ಆರಂಭದಲ್ಲಿ ಪ್ರಾಚೀನ ಆಚರಣೆಗಳಿಂದ ರೂಪತಳೆದ ಈ ಕಲೆಯ ವೈಶಿಷ್ಟ್ಯವೆಂದರೆ ಇಲ್ಲಿ ಯಾವುದೇ ವಾದ್ಯ ಪರಿಕರಗಳನ್ನು ಬಳಸುವುದಿಲ್ಲ. ಬದಲಿಗೆ, ವೃತ್ತಾಕಾರದಲ್ಲಿ ಕುಳಿತ ಪುರುಷ ಕಲಾವಿದರು ತಮ್ಮ ಕಂಠದಿಂದಲೇ ಏಕಕಾಲದಲ್ಲಿ ಹೊರಡಿಸುವ “ಚಕ್, ಚಕ್, ಚಕ್” (cak, cak, cak) ಸಮೂಹ ಧ್ವನಿಯೇ ಇಡೀ ಪ್ರದರ್ಶನಕ್ಕೆ ಲಯ ಮತ್ತು ರೋಮಾಂಚಕ ವಾತಾವರಣವನ್ನು ಸೃಷ್ಟಿಸುತ್ತದೆ.

• ಶಾಸ್ತ್ರೀಯ ಶೈಲಿಯ ನೃತ್ಯ: ಈ ಹಿನ್ನೆಲೆ ಧ್ವನಿಯ ಲಯಕ್ಕೆ ತಕ್ಕಂತೆ ಬಾಲಿಯ ಶಾಸ್ತ್ರೀಯ ನೃತ್ಯ ಶೈಲಿಯಲ್ಲಿ ಪಾತ್ರಧಾರಿಗಳು ಪ್ರದರ್ಶನ ನೀಡಲಿದ್ದು, ಬಾಲಿಯ ನುರಿತ ತಜ್ಞ ಕಲಾವಿದರು ಅಕ್ಟೋಬರ್ 3ರಂದು ಬೆಂಗಳೂರಿನ ಪ್ರೇಕ್ಷಕರಿಗೆ ಈ ಅಪರೂಪದ ರಸದೌತಣವನ್ನು ಉಣಬಡಿಸಲಿದ್ದಾರೆ. ಒಟ್ಟು 16 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಹಬ್ಬದ ಕುರಿತು ಹೆಚ್ಚಿನ ಮಾಹಿತಿಗಾಗಿ https://bali-in-blr.paramfoundation.org/ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ShareTweetSendShare
Join us on:

Related Posts

reliance-joyland-flavoured-milk-launch-rs-20

ರಿಲಯನ್ಸ್‌ನಿಂದ 20 ರುಪಾಯಿಗೆ ಜಾಯ್‌ಲೆಂಡ್‌ ಫ್ಲೇವರ್ಡ್‌ ಹಾಲು ಬಿಡುಗಡೆ

by admin
October 14, 2026
0

ಚೆನ್ನೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನ ಎಫ್‌ಎಂಸಿಜಿ ವಿಭಾಗವಾದ ರಿಲಯನ್ಸ್ ಕನ್ಸ್ಯೂಮರ್ ಪ್ರೊಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್ ), ಜಾಯ್‌ ಲ್ಯಾಂಡ್ ಫ್ಲೇವರ್ಡ್‌ ಹಾಲಿನ ಉತ್ಪನ್ನವನ್ನು ಬಿಡುಗಡೆಗೊಳಿಸಿದೆ....

bali-in-bengaluru-yakshagana-kecak-cultural-event

ಮೀನಾಕ್ಷಿ ರಂಗಮಂಚದಲ್ಲಿ ಬಾಲಿಯ ಲಯ-ನೃತ್ಯ ವೈಭವ: ಯಕ್ಷಗಾನ-ಕೆಚಕ್ ಸಾಂಸ್ಕೃತಿಕ ಸಂಗಮ!

by admin
October 14, 2026
0

• ಮೀನಾಕ್ಷಿ ರಂಗಮಂಚದಲ್ಲಿ ಅ.9ಕ್ಕೆ ಕಲಾ ಸಂಜೆ • ಕರಾವಳಿ ಯಕ್ಷಗಾನ–ಬಾಲಿ ನೃತ್ಯ ಜುಗಲ್‌ಬಂದಿ • ಗ್ಯಾಮೆಲನ್ ಸಂಗೀತ, ಕೆಚಕ್ ನಾದದ ರಂಗು ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ...

yuva-dasara-wayang-kulit-puppet-show-bengaluru

ಯುವದಸರಾ ಸಂಭ್ರಮ: ಯುವಕ ಸಂಘದಲ್ಲಿ ಅ.15ಕ್ಕೆ ಬಾಲಿಯ ತೊಗಲುಗೊಂಬೆಯಾಟದ ರಂಗು!

by admin
October 14, 2026
0

• ಯುವದಸರಾ ಪ್ರಯುಕ್ತ ವಿಶೇಷ ಗೊಂಬೆಯಾಟ • ಮಹಾಭಾರತ ಕಥನದಲ್ಲಿ ಬಾಲಿಯ ಕಲೆ • ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಉಷಾ ಜೆ ಪವಾರ್ ಉಪಸ್ಥಿತಿ ಬೆಂಗಳೂರು :...

digital-dasara-shakti-utsav-jayanagar-bengaluru-2026

ಜಯನಗರದಲ್ಲಿ ಅ. 11ರಿಂದ ‘ಶಕ್ತಿ ಉತ್ಸವ’: ರಾಜಕುಮಾರಿ ಕಾಮಾಕ್ಷಿ ದೇವಿ ಭಾಗಿ, ಉಚಿತ ಪ್ರವೇಶದೊಂದಿಗೆ ಡಿಜಿಟಲ್ ದಸರಾ ವೈಭವ!

by admin
October 14, 2026
0

• ಜಯನಗರ ಯುವಪಥದಲ್ಲಿ ಡಿಜಿಟಲ್ ದಸರಾ ಸಡಗರ • ಶಕ್ತಿ ಉತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ • ಅ.11ರಿಂದ 21ರವರೆಗೆ  ಪರಮ್‌ನ ಡಿಜಿಟಲ್ ದಸರಾ ಅನುಭವ ಬೆಂಗಳೂರು: ದಸರಾ ಮಹೋತ್ಸವದ ಅಂಗವಾಗಿ...

instamart-sale-2026-iphone-17-pro-macbook-samsung-offers

ಇನ್‌ಸ್ಟಾಮಾರ್ಟ್‌ನಿಂದ ಭರ್ಜರಿ ಆಫರ್: ಐಫೋನ್ 17 ಪ್ರೊ, ಮ್ಯಾಕ್‌ಬುಕ್, ಸ್ಯಾಮ್ಸಂಗ್‌ ಸೇರಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ!

by admin
October 14, 2026
0

ಹಬ್ಬದ ಸೀಸನ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಇಯರ್‌ಬಡ್ಸ್ ಖರೀದಿಸುವ ಪ್ಲಾನ್‌ನಲ್ಲಿದ್ದೀರಾ? ಹಾಗಾದರೆ ನಿಮಗೊಂದು ಸಿಹಿಸುದ್ದಿ. ಪ್ರಸಿದ್ಧ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ 'ಇನ್‌ಸ್ಟಾಮಾರ್ಟ್' ತನ್ನ ವರ್ಷದ ಅತಿದೊಡ್ಡ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram