ಚೆನ್ನೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ನ ಎಫ್ಎಂಸಿಜಿ ವಿಭಾಗವಾದ ರಿಲಯನ್ಸ್ ಕನ್ಸ್ಯೂಮರ್ ಪ್ರೊಡಕ್ಟ್ಸ್ ಲಿಮಿಟೆಡ್ (ಆರ್ಸಿಪಿಎಲ್ ), ಜಾಯ್ ಲ್ಯಾಂಡ್ ಫ್ಲೇವರ್ಡ್ ಹಾಲಿನ ಉತ್ಪನ್ನವನ್ನು ಬಿಡುಗಡೆಗೊಳಿಸಿದೆ.
ಕುಡಿಯಲು ಸಿದ್ಧವಿರುವ ಹಾಲಿನ ( ರೆಡಿ-ಟು-ಡ್ರಿಂಕ್ ಡೇರಿ) ಮಾರುಕಟ್ಟೆಗೆ ಅಧಿಕೃತವಾಗಿ ಜಾಯ್ಲೆಂಡ್ ಕಾಲಿಟ್ಟಿದೆ. ಇದರ ಭಾಗವಾಗಿ ಕಂಪನಿಯು ‘ಜಾಯ್ಲ್ಯಾಂಡ್’ ಹೆಸರಿನಲ್ಲಿ ಫ್ಲೇವರ್ಡ್ ಹಾಲನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ತಮಿಳುನಾಡಿನಲ್ಲಿ ಜಾಯ್ಲ್ಯಾಂಡ್ಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರ ರಾಜ್ಯಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ಗ್ರಾಹಕರಿಗೆ ವಿಶ್ವದರ್ಜೆಯ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ತಲುಪಿಸುವ ‘ಗ್ಲೋಬಲ್ ಕ್ವಾಲಿಟಿ ಅಟ್ ಅಫೋರ್ಡಬಲ್ ಪ್ರೈಸ್’ ತತ್ವದಡಿ ಜಾಯ್ಲ್ಯಾಂಡ್ ಅನ್ನು ರೂಪಿಸಲಾಗಿದೆ. ಸಂಪೂರ್ಣ ನೈಸರ್ಗಿಕ ಡೇರಿ ಪದಾರ್ಥಗಳಿಂದ ಇದನ್ನು ತಯಾರಿಸಲಾಗಿದೆ. ಸದ್ಯಕ್ಕೆ ಇದು ಸ್ಟ್ರಾಬೆರಿ ಮತ್ತು ವೆನಿಲ್ಲಾ ಫ್ಲೇವರ್ಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಆರ್ಸಿಪಿಎಲ್ನ ಬಲವಾದ ವಿತರಣಾ ಜಾಲ ಮತ್ತು ಮಾರುಕಟ್ಟೆ ಅನುಭವದೊಂದಿಗೆ ಈ ಉತ್ಪನ್ನವನ್ನು ಗ್ರಾಹಕರಿಗೆ ತಲುಪಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಫ್ಲೇವರ್ಗಳು ಹಾಗೂ ವಿವಿಧ ಡೈರಿ ಪಾನೀಯಗಳನ್ನು ಮಾರುಕಟ್ಟೆಗೆ ತರಲು ಕಂಪನಿ ಯೋಜಿಸಿದೆ.
ಈ ವಿಸ್ತರಣೆಯು ತಮ್ಮ ಪಾನೀಯಗಳ ಪೋರ್ಟ್ಫೋಲಿಯೊವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಆರ್ಸಿಪಿಎಲ್ ನಿರ್ದೇಶಕ ಟಿ. ಕೃಷ್ಣಕುಮಾರ್ ತಿಳಿಸಿದ್ದಾರೆ.







