‘ಪ್ರೇಮದ ಊರಲಿ’ ಚಿತ್ರ ಬಿಡುಗಡೆಯಾಗಿ 3ನೇ ವಾರಕ್ಕೆ ಕಾಲಿಟ್ಟಿದ್ದರೂ ಪ್ರೇಕ್ಷಕರ ಉತ್ಸಾಹ ಹಾಗೂ ಹೌಸ್ಫುಲ್ ಶೋಗಳ ಸಂಖ್ಯೆ ಕಿಂಚಿತ್ತೂ ಕಡಿಮೆಯಾಗಿಲ್ಲ.
ಬುಕ್ಮೈಶೋನಲ್ಲಿ ಟಿಕೆಟ್ ಸುನಾಮಿ ಆಗುತ್ತಿದ್ದು, ಪ್ರತಿ ಗಂಟೆಗೆ 15,000ಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗುತ್ತಿವೆ. ಆನ್ಲೈನ್ ಬುಕಿಂಗ್ನಲ್ಲಿ ಸಿನಿಮಾ ಹೊಸ ದಾಖಲೆ ಬರೆಯುತ್ತಿದೆ.
ವೀಕೆಂಡ್ನಲ್ಲಿ ಹೌಸ್ಫುಲ್ ಬೋರ್ಡ್ಗಳು ಬೀಳುತ್ತಿವೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ಗಳಲ್ಲಿ ವೀಕೆಂಡ್ ಪ್ರದರ್ಶನಗಳು ಕ್ಷಣಾರ್ಧದಲ್ಲಿ ಸೋಲ್ಡ್ ಔಟ್ ಆಗುತ್ತಿವೆ.
ಈ ಸಿನಿಮಾಕ್ಕೆ ಸಿಕ್ಕಿರುವ ಅತ್ಯುತ್ತಮ ‘ಮೌತ್ ಟಾಕ್’ (Word of mouth) ಫಲವಾಗಿ ಮೂರನೇ ವಾರದಲ್ಲೂ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಗಳತ್ತ ಲಗ್ಗೆ ಇಡುತ್ತಿದ್ದಾರೆ.
ಹೊಸ ಚಿತ್ರಗಳು ರಿಲೀಸ್ ಆಗುತ್ತಿದ್ದರೂ, ಜನರ ಮೊದಲ ಆಯ್ಕೆಯಾಗಿ ‘ಪ್ರೇಮದ ಊರಲಿ’ ತನ್ನ ಅಧಿಪತ್ಯವನ್ನು ಮುಂದುವರಿಸಿ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಕಾಣುತ್ತಿದೆ.








