ADVERTISEMENT
Wednesday, October 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಊರ್ವಶಿ ನಟನೆಯ ಸೈಕಲಾಜಿಕಲ್ ಥ್ರಿಲ್ಲರ್ ‘ಆಶಾ’ ಅಕ್ಟೋಬರ್ 16ರಿಂದ ಜೀ5ನಲ್ಲಿ ಪ್ರಸಾರ!

admin by admin
October 14, 2026
in Cinema, Newsbeat, ಮನರಂಜನೆ
urvashi-aasha-malayalam-psychological-thriller-zee5-release

urvashi-aasha-malayalam-psychological-thriller-zee5-release

Share on FacebookShare on TwitterShare on WhatsappShare on Telegram

ಬೆಂಗಳೂರು: ಹಿರಿಯ ನಟಿ ಊರ್ವಶಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಮಲಯಾಳಂ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ‘ಆಶಾ’ ಇದೀಗ ಡಿಜಿಟಲ್ ಪ್ರೀಮಿಯರ್‌ಗೆ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ಈ ಚಿತ್ರ, ಅಕ್ಟೋಬರ್ 16 ರಿಂದ ಪ್ರಮುಖ ಒಟಿಟಿ ವೇದಿಕೆಯಾದ ಜೀ5ನಲ್ಲಿ (Zee5) ಪ್ರಸಾರವಾಗಲಿದೆ. ವಿಶೇಷವೆಂದರೆ ಮಲಯಾಳಂ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿ ಈ ಸಿನಿಮಾ ಜೀ5 ವೇದಿಕೆಯಲ್ಲಿ ಪ್ರೇಕ್ಷಕರನ್ನು ತಲುಪಲಿದೆ.

ನಿರ್ದೇಶಕ ಸಫರ್ ಸನಲ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ವಿನಾಯಕ ಅಜಿತ್ ನಿರ್ಮಿಸಿದ್ದು, ಸೆಪ್ಟೆಂಬರ್ 11 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಸದ್ದು ಮಾಡಿತ್ತು. ಚಿತ್ರದಲ್ಲಿ ಊರ್ವಶಿ ಜೊತೆಗೆ ಜೋಜು ಜಾರ್ಜ್, ಐಶ್ವರ್ಯಾ ಲಕ್ಷ್ಮಿ, ವಿಜಯರಾಘವನ್, ಲಕ್ಷ್ಮಿ ಮೆನನ್, ಭಾಗ್ಯಲಕ್ಷ್ಮಿ ಹಾಗೂ ಅಜಯನ್ ಅದತ್ ಪ್ರಮುಖ ಪಾತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ತಾಯ್ತನ, ನೈತಿಕತೆ ಮತ್ತು ಸಣ್ಣ ನಿರ್ಧಾರಗಳಿಂದ ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ತಿರುವುಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.

Related posts

premada-oorali-rashmika-ram-appreciation-kannada-movie

ಪ್ರೇಮದ ಊರಲಿ’ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡುತ್ತಾ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.

October 14, 2026
rudhirvana-kannada-folk-horror-movie-release-november-27-2026

ಮೈಸೂರಿನ ಪ್ರತಿಭೆಗಳ ಸಿನಿ ಪ್ರಯತ್ನಕ್ಕೆ ರಾಜವಂಶದ ಪ್ರೋತ್ಸಾಹ; ನವೆಂಬರ್ 27ರಂದು ತೆರೆಗೆ ಬರಲಿದೆ ‘ರುಧಿರ್ವನ’

October 14, 2026

ಕಥೆಯು ಒಬ್ಬ ಸಾಮಾನ್ಯ ವಿಧವೆ ತಾಯಿ ‘ಆಶಾ’ಳ (ಊರ್ವಶಿ) ಸುತ್ತ ಸುತ್ತುತ್ತದೆ. ಹೆಣ್ಣುಮಕ್ಕಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಆಶಾಳ ಬದುಕಿನಲ್ಲಿ ರಸ್ತೆಯಲ್ಲಿ ನಡೆಯುವ ಸಣ್ಣ ಅಪಘಾತವೊಂದು ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತದೆ. ಜೋಜು ಜಾರ್ಜ್ ನಿರ್ವಹಿಸಿರುವ ‘ಜೀಮೋನ್’ ಪಾತ್ರದೊಂದಿಗೆ ಎದುರಾಗುವ ಸಣ್ಣ ಘರ್ಷಣೆಯು ನಿರೀಕ್ಷೆಗೂ ಮೀರಿದ ಘಟನಾವಳಿಗಳಿಗೆ ದಾರಿಯಾಗಿ, ಇಡೀ ಕುಟುಂಬದ ಬದುಕನ್ನೇ ಬುಡಮೇಲು ಮಾಡುತ್ತದೆ. ಕೇವಲ ನಾಯಕ-ಖಳನಾಯಕ ಎಂಬ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿದ ಚಿತ್ರಕಥೆ ಇದಾಗಿದ್ದು, ಭಯ, ಅಹಂ, ಸಿಟ್ಟು ಹಾಗೂ ರಕ್ಷಣೆಯ ಭಾವನೆಗಳು ಮುಖಾಮುಖಿಯಾದಾಗ ಪರಿಸ್ಥಿತಿಗಳು ವ್ಯಕ್ತಿಯ ನಡವಳಿಕೆಯನ್ನು ಹೇಗೆ ಬದಲಿಸುತ್ತವೆ ಎಂಬುದನ್ನು ‘ಬಟರ್‌ಫ್ಲೈ ಎಫೆಕ್ಟ್’ ಪರಿಕಲ್ಪನೆಯಡಿ ನಿರ್ದೇಶಕರು ಅತ್ಯಂತ ರೋಚಕವಾಗಿ ತೆರೆಮೇಲೆ ತಂದಿದ್ದಾರೆ.

ಚಿತ್ರದ ಒಟಿಟಿ ಬಿಡುಗಡೆ ಕುರಿತು ಹರ್ಷ ವ್ಯಕ್ತಪಡಿಸಿರುವ ಜೀ5ನ ದಕ್ಷಿಣ ಭಾರತ ವಿಭಾಗದ ಮುಖ್ಯಸ್ಥ ಲಾಯ್ಡ್ ಸಿ ಕ್ಸೇವಿಯರ್, “ಕೇವಲ ಕಮರ್ಷಿಯಲ್ ಚಿತ್ರಗಳಿಗಷ್ಟೇ ಸೀಮಿತವಾಗದೆ, ಕಲಾತ್ಮಕ ಆಳ ಮತ್ತು ಹೊಸತನವಿರುವ ಕಥೆಗಳಿಗೆ ಮನ್ನಣೆ ನೀಡುವುದು ನಮ್ಮ ಧ್ಯೇಯ. ‘ಆಶಾ’ ಸಿನಿಮಾದಲ್ಲಿ ಊರ್ವಶಿ ಅವರ ನಟನೆ ಅದ್ಭುತವಾಗಿದ್ದು, ಪಾತ್ರದ ಅಸಹಾಯಕತೆ ಮತ್ತು ಆಂತರಿಕ ಶಕ್ತಿಯನ್ನು ಅವರು ಜೀವಂತಗೊಳಿಸಿದ್ದಾರೆ. ಇಂಥ ಅತ್ಯುತ್ತಮ ಚಿತ್ರವನ್ನು ದೇಶಾದ್ಯಂತ ಇರುವ ಸಿನಿರಸಿಕರಿಗೆ ಬಹುಭಾಷೆಗಳಲ್ಲಿ ತಲುಪಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ,” ಎಂದಿದ್ದಾರೆ. ತನ್ನವರ ರಕ್ಷಣೆಗಾಗಿ ಒಬ್ಬ ತಾಯಿ ಎಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬಲ್ಲಳು ಎಂಬ ಕುತೂಹಲದ ಎಳೆಯೊಂದಿಗೆ ಮೂಡಿಬಂದಿರುವ ‘ಆಶಾ’, ಅಕ್ಟೋಬರ್ 16 ರಿಂದ ZEE5 ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

ShareTweetSendShare
Join us on:

Related Posts

premada-oorali-rashmika-ram-appreciation-kannada-movie

ಪ್ರೇಮದ ಊರಲಿ’ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡುತ್ತಾ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.

by admin
October 14, 2026
0

ಚಿತ್ರಮಂದಿರಗಳಲ್ಲಿ ಬ್ಲಾಕ್‌ಬಸ್ಟರ್ ಪ್ರದರ್ಶನ ಕಾಣುತ್ತಿರುವ 'ಪ್ರೇಮದ ಊರಲಿ' ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡುತ್ತಾ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಈ ಚಿತ್ರದ ಅಭೂತಪೂರ್ವ ಯಶಸ್ಸಿಗೆ ಖ್ಯಾತ...

rudhirvana-kannada-folk-horror-movie-release-november-27-2026

ಮೈಸೂರಿನ ಪ್ರತಿಭೆಗಳ ಸಿನಿ ಪ್ರಯತ್ನಕ್ಕೆ ರಾಜವಂಶದ ಪ್ರೋತ್ಸಾಹ; ನವೆಂಬರ್ 27ರಂದು ತೆರೆಗೆ ಬರಲಿದೆ ‘ರುಧಿರ್ವನ’

by admin
October 14, 2026
0

ಮೈಸೂರಿನ ಪ್ರತಿಭೆಗಳ ಸಿನಿ ಪ್ರಯತ್ನಕ್ಕೆ ರಾಜವಂಶದ ಪ್ರೋತ್ಸಾಹ; ನವೆಂಬರ್ 27ರಂದು ತೆರೆಗೆ ಬರಲಿದೆ ‘ರುಧಿರ್ವನ’ ಶ್ರೀಮಾನ್ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಚಿತ್ರದ ಬಿಡುಗಡೆ ದಿನಾಂಕದ...

premada-oorali-movie-eru-peru-hrudaya-song-release-saakshattv

‘ಪ್ರೇಮದ ಊರಲಿ’ ಚಿತ್ರ ಬಿಡುಗಡೆಯಾಗಿ 3ನೇ ವಾರಕ್ಕೆ ಕಾಲಿಟ್ಟಿದ್ದರೂ ಪ್ರೇಕ್ಷಕರ ಉತ್ಸಾಹ ಹಾಗೂ ಹೌಸ್‌ಫುಲ್ ಶೋಗಳ ಸಂಖ್ಯೆ ಕಿಂಚಿತ್ತೂ ಕಡಿಮೆಯಾಗಿಲ್ಲ.

by admin
October 14, 2026
0

'ಪ್ರೇಮದ ಊರಲಿ' ಚಿತ್ರ ಬಿಡುಗಡೆಯಾಗಿ 3ನೇ ವಾರಕ್ಕೆ ಕಾಲಿಟ್ಟಿದ್ದರೂ ಪ್ರೇಕ್ಷಕರ ಉತ್ಸಾಹ ಹಾಗೂ ಹೌಸ್‌ಫುಲ್ ಶೋಗಳ ಸಂಖ್ಯೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಬುಕ್‌ಮೈಶೋನಲ್ಲಿ ಟಿಕೆಟ್ ಸುನಾಮಿ ಆಗುತ್ತಿದ್ದು, ಪ್ರತಿ...

lambodara-2-0-hatti-kaapi-free-filter-coffee-promotion

ಲಂಬೋದರ 2.0’ ಸಿನಿಮಾ ಪ್ರಚಾರಕ್ಕೆ ಹಟ್ಟಿ ಕಾಪಿ ಸಾಥ್: ಪ್ರೇಕ್ಷಕರಿಗೆ ಉಚಿತ ಫಿಲ್ಟರ್ ಕಾಫಿ ಸಂಭ್ರಮ!

by admin
October 14, 2026
0

‘ಬೆಂಗಳೂರು: ರಾಜಧಾನಿಯ ಗಲ್ಲಿಗಲ್ಲಿಗಳಲ್ಲಿ ಹಾಸುಹೊಕ್ಕಾಗಿರುವ ಸಿನಿಮಾ ಪ್ರೀತಿ ಮತ್ತು ಸಾಂಪ್ರದಾಯಿಕ ಫಿಲ್ಟರ್ ಕಾಫಿ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಅಪರೂಪದ ಪ್ರಚಾರಾಂದೋಲನಕ್ಕೆ ಜನಪ್ರಿಯ ಕಾಫಿ ಬ್ರ್ಯಾಂಡ್ 'ಹಟ್ಟಿ...

a-for-anand-raveena-tandon-shivarajkumar-kannada-movie

ಮತ್ತೆ ಚಂದನವನಕ್ಕೆ ಬಂದ ರವೀನಾ ಟಂಡನ್: ಕರುನಾಡ ಚಕ್ರವರ್ತಿ ಶಿವಣ್ಣನ ಜೊತೆ ಬಾಲಿವುಡ್ ‘ಮಸ್ತ್ ಮಸ್ತ್’ ಬೆಡಗಿಯ ಹೊಸ ಜುಗಲ್‌ಬಂದಿ!

by admin
October 14, 2026
0

ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ಬಹುಭಾಷಾ ನಟಿ, ಬಾಲಿವುಡ್‌ನ ‘ಮಸ್ತ್ ಮಸ್ತ್’ ಬೆಡಗಿ ರವೀನಾ ಟಂಡನ್ ಮತ್ತೊಮ್ಮೆ ಕನ್ನಡ ಬೆಳ್ಳಿಪರದೆ ಮೇಲೆ ಮಿಂಚಲು ಭರ್ಜರಿಯಾಗಿ ಸಜ್ಜಾಗಿದ್ದಾರೆ. ‘ಕೆಜಿಎಫ್:...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram