ADVERTISEMENT
Friday, October 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಜಿಯೋ ಐಪಿಒ ಬಗ್ಗೆ ವಿಶ್ಲೇಷಕರು ಪಾಸಿಟಿವ್; ಲಿಸ್ಟಿಂಗ್‌ನಲ್ಲಿ ಶೇ 15-20ರಷ್ಟು ಲಾಭದ ನಿರೀಕ್ಷೆ

admin by admin
October 16, 2026
in Newsbeat, National, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಮುಂಬೈ,: ಜಿಯೋ ಪ್ಲಾಟ್‌ಫಾರ್ಮ್ಸ್‌ನ ಪ್ರೈಸ್ ಬ್ಯಾಂಡ್ (ಬೆಲೆ ಶ್ರೇಣಿ) ಪ್ರಕಟವಾದ ನಂತರ ವಿಶ್ಲೇಷಕರ ಅಭಿಪ್ರಾಯಗಳು ಬಹುತೇಕ ಉತ್ಸಾಹದಿಂದ ಕೂಡಿದೆ. ಹಲವು ವರದಿಗಳು ಐಪಿಒಗೆ ಧನಾತ್ಮಕ ಮೌಲ್ಯಮಾಪನ ನೀಡಿವೆ. ಲಿಸ್ಟಿಂಗ್‌ನಲ್ಲಿ ಶೇ 15ರಿಂದ 20ರಷ್ಟು ಲಾಭದ ಸಾಧ್ಯತೆಯನ್ನು ಮಾರುಕಟ್ಟೆ ತಜ್ಞರು ಕಾಣುತ್ತಿದ್ದಾರೆ. ಆದರೆ ವಾಸ್ತವ ಬೆಲೆಯು ಮಾರುಕಟ್ಟೆ ಪರಿಸ್ಥಿತಿ ಮತ್ತು ಹೂಡಿಕೆದಾರರ ಬೇಡಿಕೆಯ ಮೇಲೆ ಅವಲಂಬಿತವಾಗಿರುತ್ತದೆ.

ಅಕ್ಟೋಬರ್ 16ರ ತನ್ನ ಐಪಿಒ ಟಿಪ್ಪಣಿಯಲ್ಲಿ ಎಮ್‌ಕೇ (Emkay) ರೀಸರ್ಚ್, ಜಿಯೋ ಐಪಿಒಗೆ ‘ಸಬ್‌ಸ್ಕ್ರೈಬ್’ ರೇಟಿಂಗ್ ನೀಡಿದೆ. ಜಿಯೋದ ಮಾರುಕಟ್ಟೆ ನಾಯಕತ್ವ, ದರ ನಿಗದಿ ಸಾಮರ್ಥ್ಯ, ಕಾರ್ಯಗತಗೊಳಿಸುವಿಕೆ ದಾಖಲೆ ಹಾಗೂ ಮುಂದಿರುವ ಹಲವು ಬೆಳವಣಿಗೆಯ ಅವಕಾಶಗಳನ್ನು ಪರಿಗಣಿಸಿದರೆ ಬೆಲೆ ಶ್ರೇಣಿ ಸಮಂಜಸವಾಗಿ ಕಾಣುತ್ತದೆ ಎಂದು ಬ್ರೋಕರೇಜ್ ಹೇಳಿದೆ.

Related posts

saakshatv-instamart-qim-sale-2026-beauty-products-festival-discounts

ಇನ್‌ಸ್ಟಾಮಾರ್ಟ್ QIM ಸೇಲ್ 2026: ಹಬ್ಬದ ಸೀಸನ್‌ಗೆ ಬ್ಯೂಟಿ ಪ್ರಾಡಕ್ಟ್‌ಗಳ ಮೇಲೆ ಬಂಪರ್‌ ರಿಯಾಯಿತಿ

October 16, 2026
saakshatv-bengaluru-vancouver-airports-sister-airport-agreement-direct-flights

ಕೆನಡಾದ ವ್ಯಾಂಕೋವರ್ – ಬೆಂಗಳೂರು ಏರ್‌ಪೋರ್ಟ್‌ಗಳ ನಡುವೆ ಐತಿಹಾಸಿಕ ಒಪ್ಪಂದ, ನೇರ ವಿಮಾನ ಸೇವೆಗೆ ಭದ್ರ ಬುನಾದಿ!

October 16, 2026

‘ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್’ ಕೂಡ ಜಿಯೋ ಐಪಿಒಗೆ ‘ಸಬ್‌ಸ್ಕ್ರೈಬ್’ ರೇಟಿಂಗ್ ನೀಡಿದೆ. ಅದರ ವರದಿಯ ಪ್ರಕಾರ, ಬೆಲೆ ಶ್ರೇಣಿಯ ಮೇಲಿನ ಮಿತಿಯಲ್ಲಿ ಜಿಯೋ ಹಣಕಾಸು ವರ್ಷ (FY) 26ರ ಗಳಿಕೆಯ ಸುಮಾರು 33.3 ಪಟ್ಟು ಮೌಲ್ಯದಲ್ಲಿದ್ದು, ಭಾರ್ತಿ ಏರ್‌ಟೆಲ್‌ನದು 40.7 ಪಟ್ಟು ಇದೆ. ಈ ಆಧಾರದ ಮೇಲೆ ಜಿಯೋ ಏರ್‌ಟೆಲ್‌ಗಿಂತ ಸುಮಾರು ಶೇ 18ರಷ್ಟು ರಿಯಾಯಿತಿಯಲ್ಲಿ ವಹಿವಾಟು ನಡೆಸುತ್ತಿದೆ ಎಂದು ಸ್ವಸ್ತಿಕ ಅಭಿಪ್ರಾಯಪಟ್ಟಿದೆ.

ಇನ್ನೊಂದು ಮೌಲ್ಯಮಾಪನ ಆಧಾರದಲ್ಲಿ, ಕೆಲವು ಮಾರುಕಟ್ಟೆ ತಜ್ಞರು ಜಿಯೋವನ್ನು ಗಳಿಕೆಯ ಸುಮಾರು 33.5 ಪಟ್ಟು ಎಂದು ಅಂದಾಜಿಸಿದ್ದಾರೆ; ಭಾರ್ತಿ ಏರ್‌ಟೆಲ್‌ಗೆ ಇದು ಸುಮಾರು 38.9 ಪಟ್ಟು, ಅಂದರೆ ಸುಮಾರು ಶೇ 14ರಷ್ಟು ರಿಯಾಯಿತಿ. ಆದರೆ ಜಿಯೋದ ಭವಿಷ್ಯದ ಬೆಳವಣಿಗೆಯ ಕೆಲವು ಭಾಗ ಈಗಿನ ಮೌಲ್ಯಮಾಪನದಲ್ಲೇ ಪ್ರತಿಫಲಿಸಿದೆ ಎಂದು ವಿಶ್ಲೇಷಕರು ಗಮನಿಸುತ್ತಾರೆ.

ಮತ್ತೊಂದು ಪ್ರಮುಖ ಪಾಸಿಟಿವ್ ಅಂಶವೆಂದರೆ, ಜಿಯೋ 5ಜಿ ಹೊರತರುವಿಕೆಯ ಕ್ಯಾಪಿಟಲ್ ಇಂಟೆನ್ಸಿವ್ ದಾಟುತ್ತಿರುವಂತೆ ಕಾಣುತ್ತಿದೆ. ಎಮ್‌ಕೇ ರೀಸರ್ಚ್ ಪ್ರಕಾರ, ಬಂಡವಾಳ ವೆಚ್ಚ (ಕ್ಯಾಪೆಕ್ಸ್) ಹಣಕಾಸು ವರ್ಷ (FY) 24ರಲ್ಲಿ ಆದಾಯದ ಶೇ 48.8ರಷ್ಟು ಇದ್ದದ್ದು ಹಣಕಾಸಿನ ವರ್ಷ (FY) 26ರಲ್ಲಿ ಶೇಕಡಾ 23.3ಕ್ಕೆ ಇಳಿದಿದೆ ಮತ್ತು ಹಾಣಕಾಸು ವರ್ಷ (FY) 26ರಲ್ಲಿ ಫ್ರೀ ಕ್ಯಾಶ್ ಫ್ಲೋ ಸುಮಾರು ₹32,500 ಕೋಟಿ ಆಗಿತ್ತು. ದೊಡ್ಡ ಪ್ರಮಾಣದ ನೆಟ್‌ವರ್ಕ್ ಹೂಡಿಕೆಯ ಅಗತ್ಯ ಕಡಿಮೆಯಾದಂತೆ ನಗದು ಸೃಷ್ಟಿ ಇನ್ನಷ್ಟು ಬಲಗೊಳ್ಳುತ್ತದೆ ಎಂದು ಬ್ರೋಕರೇಜ್ ನಿರೀಕ್ಷಿಸುತ್ತದೆ.

ದೀರ್ಘಾವಧಿಯಲ್ಲಿ ವಿಶ್ಲೇಷಕರು ಜಿಯೋದ ಮೂಲ ಮೊಬಿಲಿಟಿ ವ್ಯವಹಾರವನ್ನು ಮೀರಿ ನೋಡುತ್ತಿದ್ದಾರೆ. ಹೋಮ್ ಬ್ರಾಡ್‌ಬ್ಯಾಂಡ್, ಉದ್ಯಮ ಸೇವೆಗಳು, ಕ್ಲೌಡ್, ಎಐ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ತಂತ್ರಜ್ಞಾನ ಸ್ಟ್ಯಾಕ್‌ನ ಹಣಗಳಿಕೆಯನ್ನು ಮುಂದಿನ ಬೆಳವಣಿಗೆಯ ಚಾಲಕಗಳಾಗಿ ಪರಿಗಣಿಸಲಾಗಿದೆ. ಹೋಮ್ ಬ್ರಾಡ್‌ಬ್ಯಾಂಡ್ ಪ್ರಮುಖ ಬೆಳವಣಿಗೆಯ ಅವಕಾಶ ಎಂದು ಎಮ್‌ಕೇ ಗುರುತಿಸಿದ್ದು, ಜಿಯೋದ ಸ್ವಂತ ತಂತ್ರಜ್ಞಾನ ಸ್ಟ್ಯಾಕ್‌ಗೆ ವಿದೇಶಗಳಲ್ಲಿ ಸಾಮರ್ಥ್ಯವಿದೆ ಎಂದೂ ಹೇಳುತ್ತದೆ.

ಜಿಯೋದ ಸ್ವತಂತ್ರ ಲಿಸ್ಟಿಂಗ್ ರಿಲಯನ್ಸ್ ಇಂಡಸ್ಟ್ರೀಸ್‌ಗೂ ಪರಿಣಾಮ ಬೀರಬಹುದು. ಜಿಯೋ ತನ್ನ ಐಪಿಒ ಬೆಲೆ ಶ್ರೇಣಿಯನ್ನು ಪ್ರಕಟಿಸಿದ ನಂತರ ಅಕ್ಟೋಬರ್ 15ರಂದು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಸುಮಾರು ಶೇ 3.4ರಷ್ಟು ಏರಿಕೆ ಕಂಡವು. ರಿಲಯನ್ಸ್ ಷೇರುದಾರರಿಗೆ ಮತ್ತಷ್ಟು ಮೌಲ್ಯ ಅನಾವರಣಕ್ಕೆ ಈ ಲಿಸ್ಟಿಂಗ್ ಪೂರಕ ಆಗಬಹುದೇ ಎಂಬುದನ್ನೂ ಮಾರುಕಟ್ಟೆ ಗಮನಿಸುತ್ತಿದೆ.

ShareTweetSendShare
Join us on:

Related Posts

saakshatv-instamart-qim-sale-2026-beauty-products-festival-discounts

ಇನ್‌ಸ್ಟಾಮಾರ್ಟ್ QIM ಸೇಲ್ 2026: ಹಬ್ಬದ ಸೀಸನ್‌ಗೆ ಬ್ಯೂಟಿ ಪ್ರಾಡಕ್ಟ್‌ಗಳ ಮೇಲೆ ಬಂಪರ್‌ ರಿಯಾಯಿತಿ

by admin
October 16, 2026
0

ಬೆಂಗಳೂರು: ದಸರಾ ಸಂಭ್ರಮ, ದೀಪಾವಳಿ ಪಾರ್ಟಿ, ಹಬ್ಬದ ಭೋಜನ ಹಾಗೂ ಸಂಭ್ರಮಕ್ಕೆ ತಯಾರಾಗಲು ಇನ್‌ಸ್ಟಾಮಾರ್ಟ್ ತನ್ನ 'ಕ್ವಿಕ್ ಇಂಡಿಯಾ ಮೂವ್ಮೆಂಟ್' (ಕ್ಯೂಐಎಂ) ಸೇಲ್ 2026 ಅನ್ನು ಆರಂಭಿಸಿದೆ....

saakshatv-bengaluru-vancouver-airports-sister-airport-agreement-direct-flights

ಕೆನಡಾದ ವ್ಯಾಂಕೋವರ್ – ಬೆಂಗಳೂರು ಏರ್‌ಪೋರ್ಟ್‌ಗಳ ನಡುವೆ ಐತಿಹಾಸಿಕ ಒಪ್ಪಂದ, ನೇರ ವಿಮಾನ ಸೇವೆಗೆ ಭದ್ರ ಬುನಾದಿ!

by admin
October 16, 2026
0

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್‌ಆರ್‌) ಮತ್ತು ಕೆನಡಾದ ವ್ಯಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ವೈವಿಆರ್‌) ನಡುವೆ ಐತಿಹಾಸಿಕ 'ಸಿಸ್ಟರ್ ಏರ್‌ಪೋರ್ಟ್' ಒಪ್ಪಂದಕ್ಕೆ ಸಹಿ ಹಾಕಲಾಗಿದೆ....

saakshatv-bgmi-air-krafton-india-1-crore-pre-registrations

‘BGMI Air’ ಆಗಿ ಬದಲಾದ ‘BGMI Lite’: ಬಿಡುಗಡೆಗೂ ಮುನ್ನವೇ 1 ಕೋಟಿಗೂ ಅಧಿಕ ಪ್ರಿ-ರಿಜಿಸ್ಟ್ರೇಷನ್ ದಾಖಲೆ!

by admin
October 16, 2026
0

ಬೆಂಗಳೂರು: ಪ್ರಸಿದ್ಧ ಗೇಮಿಂಗ್ ಕಂಪನಿ ಕ್ರಾಫ್ಟನ್ ಇಂಡಿಯಾ ತನ್ನ ಮುಂಬರುವ ಮೊಬೈಲ್ ಗೇಮ್ 'ಬಿಜಿಎಂಐ ಲೈಟ್' ಹೆಸರನ್ನು 'ಬಿಜಿಎಂಐ ಏರ್' ಎಂದು ಅಧಿಕೃತವಾಗಿ ಬದಲಾಯಿಸಿದೆ. ಭಾರತದಲ್ಲಿ ಈ...

ಚುನಾವಣಾ ಆಯುಕ್ತರ ವಿರುದ್ಧದ ಹೋರಾಟವೇ ಮುಳುವಾಯಿತೇ? ರಾಜಕೀಯ ಪ್ರತಿಭಟನೆಯಲ್ಲಿ ಭಾಗಿಯಾದ ಅಮೆರಿಕ ಪ್ರಜೆ:ಅಕ್ಟೋಬರ್ 28ರ ಒಳಗೆ ಭಾರತ ಬಿಟ್ಟು ತೊಲಗಿ ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಮುಂಬೈ ಪೊಲೀಸರ ಖಡಕ್ ಡೆಡ್‌ಲೈನ್

ಚುನಾವಣಾ ಆಯುಕ್ತರ ವಿರುದ್ಧದ ಹೋರಾಟವೇ ಮುಳುವಾಯಿತೇ? ರಾಜಕೀಯ ಪ್ರತಿಭಟನೆಯಲ್ಲಿ ಭಾಗಿಯಾದ ಅಮೆರಿಕ ಪ್ರಜೆ:ಅಕ್ಟೋಬರ್ 28ರ ಒಳಗೆ ಭಾರತ ಬಿಟ್ಟು ತೊಲಗಿ ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಮುಂಬೈ ಪೊಲೀಸರ ಖಡಕ್ ಡೆಡ್‌ಲೈನ್

by Shwetha
October 16, 2026
0

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಸೂಪರ್ ಸ್ಟಾರ್ ಆಮಿರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್ ಅವರಿಗೆ ಮುಂಬೈ ಪೊಲೀಸರು ಗಡಿಪಾರು ನೋಟಿಸ್ ಜಾರಿ ಮಾಡಿದ್ದಾರೆ....

ಕನ್ನಡದ ಪ್ರೇಮದ ಊರಲಿ ಬಿಟ್ಟು ತೆಲುಗು ನಟರ ಬೆನ್ನತ್ತಿದ್ರಾ ಅನುಶ್ರೀ: ನಮ್ಮ ಸಿನಿಮಾಗಳು ನಿಮಗೆ ಕಾಣಿಸುವುದಿಲ್ಲವೇ?ರಶ್ಮಿಕಾ ವಿಜಯ್ ಸಂದರ್ಶನಕ್ಕೆ ನೆಟ್ಟಿಗರ ಕಿಡಿ

ಕನ್ನಡದ ಪ್ರೇಮದ ಊರಲಿ ಬಿಟ್ಟು ತೆಲುಗು ನಟರ ಬೆನ್ನತ್ತಿದ್ರಾ ಅನುಶ್ರೀ: ನಮ್ಮ ಸಿನಿಮಾಗಳು ನಿಮಗೆ ಕಾಣಿಸುವುದಿಲ್ಲವೇ?ರಶ್ಮಿಕಾ ವಿಜಯ್ ಸಂದರ್ಶನಕ್ಕೆ ನೆಟ್ಟಿಗರ ಕಿಡಿ

by Shwetha
October 16, 2026
0

ಕನ್ನಡದ ಜನಪ್ರಿಯ ನಿರೂಪಕಿ ಆಂಕರ್ ಅನುಶ್ರೀ ಅವರು ಸುದೀರ್ಘ ವಿರಾಮದ ನಂತರ ತಮ್ಮ ಯೂಟ್ಯೂಬ್ ಚಾನಲ್ ಗೆ ಮರಳಿದ್ದಾರೆ. ಆದರೆ ಈ ಪುನರಾಗಮನವು ಅವರಿಗೆ ಶುಭ ಸುದ್ದಿಗಿಂತ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram