ADVERTISEMENT
Monday, November 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

100 ಎಕರೆಯಲ್ಲಿ ತಲೆ ಎತ್ತಲಿದೆ `ನೀತಾ ಮುಕೇಶ್ ಅಂಬಾನಿ ಅನಂತ್ ಆಶ್ರಯ ಟೌನ್ ಶಿಪ್

admin by admin
November 1, 2026
in Newsbeat, National, ದೇಶ - ವಿದೇಶ
neeta-mukesh-ambani-anant-aashray-township-100-acres-karjat-5000-beneficiaries

neeta-mukesh-ambani-anant-aashray-township-100-acres-karjat-5000-beneficiaries

Share on FacebookShare on TwitterShare on WhatsappShare on Telegram

* ರಿಲಯನ್ಸ್ ಪ್ರತಿಷ್ಠಾನದ ವಿನೂತನ ಮಾನವೀಯ ಉಪಕ್ರಮ
* 5 ಸಾವಿರ ಅನಾಥರು, ವೃದ್ಧರು, ವಿಕಲಚೇತನರಿಗೆ ಶಾಶ್ವತ ಆಸರೆ
* ತಮ್ಮ ಹುಟ್ಟುಹಬ್ಬದ ಪ್ರಯುಕ್ತ ನೀತಾ ಅಂಬಾನಿ ಕೊಡುಗೆ

ಮುಂಬೈ: ಅನಾಥ ಮಕ್ಕಳು, ಹಿರಿಯ ನಾಗರಿಕರು ಮತ್ತು ವಿಕಲಚೇತನರು ಕೂಡ ಘನತೆಯಿಂದ ಕೂಡಿದ ಬದುಕನ್ನು ನಡೆಸಬೇಕೆಂಬ ಮಹದುದ್ದೇಶದೊಂದಿಗೆ ತಾವು 100 ಎಕರೆ ಪ್ರದೇಶದಲ್ಲಿ `ನೀತಾ ಮುಕೇಶ್ ಅಂಬಾನಿ ಅನಂತ್ ಆಶ್ರಯ’ ಎನ್ನುವ ಮಾನವೀಯ ಉಪಕ್ರಮವನ್ನು ಆರಂಭಿಸುತ್ತಿರುವುದಾಗಿ ರಿಲಯನ್ಸ್ ಪ್ರತಿಷ್ಠಾನದ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ತಿಳಿಸಿದ್ದಾರೆ.

Related posts

darshan-puttannaiah-solar-powered-organic-jaggery-unit-chikkabadaralli-pandavapura

ಪಾಂಡವಪುರದ ಆಲೆಮನೆಗಳಿಗೆ ಸೋಲಾರ್ ಬಲ ತುಂಬಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

November 2, 2026
sunkathonnur-solar-powered-jaggery-units-darshan-puttannaiah-pandavapura

ಸಾವಯವ ಕೃಷಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೊಂದು ಬಲವಾದ ಹೆಜ್ಜೆ

November 2, 2026

ಇಲ್ಲಿಗೆ ಸಮೀಪದ ಕರ್ಜತ್ ನಲ್ಲಿ ತಲೆ ಎತ್ತಲಿರುವ ಉದ್ದೇಶಿತ ಸೌಕರ್ಯ ಸಂಕೀರ್ಣಕ್ಕೆ ಅವರು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಹುಟ್ಟುಹಬ್ಬದಂದು ಘೋಷಿಸುತ್ತಿರುವ ಈ ಉಪಕ್ರಮವು ಸಂಪೂರ್ಣವಾಗಿ ಲಾಭರಹಿತವಾಗಿದ್ದು, ಸೇವೆಯ ಆಶಯವನ್ನು ಒಳಗೊಂಡಿದೆ. ನೂರು ಎಕರೆ ವಿಸ್ತೀರ್ಣದಲ್ಲಿ ಒಟ್ಟು 8 ಗ್ರಾಮಗಳನ್ನು ಅಭಿವೃದ್ಧಿ ಪಡಿಸಿ, 5 ಸಾವಿರಕ್ಕೂ ಹೆಚ್ಚು ಮಂದಿಗೆ ಶಾಶ್ವತ ಸೌಕರ್ಯದ ವ್ಯವಸ್ಥೆ ಮಾಡಲಾಗುವುದು. ಟೌನ್-ಶಿಪ್ ಮಾದರಿಯಲ್ಲಿ ಮೈದಾಳಲಿರುವ ಈ ಗ್ರಾಮಗಳಿಗೆ ದೇಶದ ಪವಿತ್ರ ನದಿಗಳ ಹೆಸರನ್ನಿಡಲಾಗುವುದು. ಇಲ್ಲಿ ಮನೆ, ಅತ್ಯುತ್ತಮ ರಸ್ತೆಗಳು, ದೇವಾಲಯ, ಆಸ್ಪತ್ರೆ, ಮೈದಾನಗಳು, ಉದ್ಯಾನಗಳು, ಕೃಷಿಯೋಗ್ಯ ಭೂಮಿ ಮತ್ತು ಕಾರ್ಯಾಗಾರಗಳು ಇರಲಿವೆ. ಒಂದೊಂದು ಟೌನ್-ಶಿಪ್ ಕೂಡ ಇಲ್ಲಿಗೆ ಬರುವ ನಿವಾಸಿಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಬಣ್ಣ, ಚಿಹ್ನೆ ಮತ್ತು ಉದ್ಯಾನ ಹೊಂದಿರಲಿವೆ’ ಎಂದು ಹೇಳಿದ್ದಾರೆ.

`ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ’ (ವಿ ಕೇರ್) ಎನ್ನುವ ಉದಾತ್ತ ಧ್ಯೇಯ ಈ ಉಪಕ್ರಮದ ಹಿಂದಿದ್ದು, ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಯೋಜನೆಯಾಗಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಆರೈಕೆ, ನೆಮ್ಮದಿ, ವೈದ್ಯಕೀಯ ಸೇವೆಗಳ ನೆರವು ಸಿಗಬೇಕೆನ್ನುವುದು ನನ್ನ ಕಳಕಳಿಯಾಗಿದೆ. ಜತೆಗೆ ಪರಸ್ಪರ ಸ್ನೇಹಸಂಬಂಧ ಮತ್ತು ಹಬ್ಬ-ಹರಿದಿನಗಳ ಆಚರಣೆಗೂ ಅವಕಾಶವಿರಲಿದೆ. ಹೀಗೆ ಆರೈಕೆದಾರರು, ವೈದ್ಯಕೀಯ ಸಿಬ್ಬಂದಿ ಮತ್ತು ನೆರವು ಸಿಬ್ಬಂದಿ ಸೇರಿ ಒಟ್ಟು 15 ಸಾವಿರ ಜನರ ಬೃಹತ್ ಸಮುದಾಯವು ಉದ್ದೇಶಿತ `ನೀತಾ ಮುಕೇಶ್ ಅಂಬಾನಿ ಅನಂತ್ ಆಶ್ರಯ’ದಲ್ಲಿ ಮುಂಬರುವ ದಿನಗಳಲ್ಲಿ ನೆಲೆಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಟೌನ್-ಶಿಪ್ ನಲ್ಲಿ ಒಬ್ಬ ಮುಖ್ಯ ಕಾರ್ಯಕರ್ತರು ಪ್ರತಿಯೊಬ್ಬರ ವೈಯಕ್ತಿಕ ಆರೈಕೆ ಮತ್ತು ಯೋಗಕ್ಷೇಮಕ್ಕೆ ಬೇಕಾದ ಕ್ರಮಗಳ ವ್ಯವಸ್ಥೆ ಮಾಡಲಿದ್ದಾರೆ. ಅಲ್ಲದೆ, ಪ್ರತೀ 6 ತಿಂಗಳಿಗೊಮ್ಮೆ ಇಲ್ಲಿನ ಕಾರ್ಯಕ್ರಮಗಳನ್ನು ಪರಾಮರ್ಶಿಸಿ, ಅಗತ್ಯವೆನಿಸಿದರೆ ಸೂಕ್ತ ಸುಧಾರಣೆಗಳನ್ನು ಅಳವಡಿಸಿಕೊಳ್ಳಲಾಗುವುದು. ಈ ಯೋಜನೆಯಿಂದ ಸ್ಥಳೀಯ ಪರಿಸರದ 1 ಸಾವಿರ ಜನರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶ ಕೂಡ ಲಭ್ಯವಾಗಲಿದೆ. ಇದಲ್ಲದೆ, ಉಳಿದವರಿಗೆ ವಿಶ್ರಾಂತಿ ಆರೈಕೆ, ಸಂಪರ್ಕ ಕಾರ್ಯಕ್ರಮಗಳು ಮತ್ತು ಸಮುದಾಯ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು ಎಂದು ನೀತಾ ಅಂಬಾನಿ ನುಡಿದಿದ್ದಾರೆ.

ಕೋಟ್…

ತಂದೆ-ತಾಯಿ ಇಲ್ಲದ ಅನಾಥ ಮಕ್ಕಳಿಗೆ ಯಾವುದೇ ಕೊರತೆಯ ಭಾವನೆ ಕಾಡದಂತೆ ನೆಮ್ಮದಿಯ ಜೀವನ ಸಾಧ್ಯವಾಗಬೇಕು ಎನ್ನುವುದು ನನ್ನ ಹೆಬ್ಬಯಕೆ. ಇದು ಈ ಯೋಜನೆಯ ಮೂಲಕ ನನಸಾಗಲಿದೆ.

– ನೀತಾ ಅಂಬಾನಿ, ಸಂಸ್ಥಾಪಕಿ ಮತ್ತು ಅಧ್ಯಕ್ಷೆ, ರಿಲಯನ್ಸ್ ಪ್ರತಿಷ್ಠಾನ

ShareTweetSendShare
Join us on:

Related Posts

darshan-puttannaiah-solar-powered-organic-jaggery-unit-chikkabadaralli-pandavapura

ಪಾಂಡವಪುರದ ಆಲೆಮನೆಗಳಿಗೆ ಸೋಲಾರ್ ಬಲ ತುಂಬಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

by admin
November 2, 2026
0

ಪರಿಸರ ಸ್ನೇಹಿ ಬೆಲ್ಲ ತಯಾರಿಕೆ ಮಂಡ್ಯ: ಕೃಷಿ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳು ಹಾಗೂ ರೈತರ ಪರ ಕಾಳಜಿಗೆ ಸದಾ ಮುಂದಿರುವ ಮೇಲುಕೋಟೆ ಕ್ಷೇತ್ರದ ಜನಪ್ರಿಯ ಶಾಸಕ ದರ್ಶನ್...

sunkathonnur-solar-powered-jaggery-units-darshan-puttannaiah-pandavapura

ಸಾವಯವ ಕೃಷಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೊಂದು ಬಲವಾದ ಹೆಜ್ಜೆ

by admin
November 2, 2026
0

ಸುಂಕಾತೊಣ್ಣೂರಿನ ಆಲೆಮನೆಗಳಿಗೂ ಸೋಲಾರ್ ಬಲ ಮಂಡ್ಯ: ಪಾಂಡವಪುರ ತಾಲೂಕಿನಲ್ಲಿ ಸಾವಯವ ಕೃಷಿ ಹಾಗೂ ಪರಿಸರ ಸ್ನೇಹಿ ಬೆಲ್ಲ ತಯಾರಿಕೆಯನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ...

instamart-kalyan-jewellers-diwali-dhanteras-gold-coins-10-minute-delivery-free-silver-coin-offers

ದೀಪಾವಳಿ, ಧನತ್ರಯೋದಶಿಗೆ ಬಂಪರ್‌ ಆಫರ್: ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ಚಿನ್ನ, ಜೊತೆಗೆ ಬೆಳ್ಳಿ ಫ್ರೀ!

by admin
November 2, 2026
0

ಬೆಂಗಳೂರು: ದೀಪಾವಳಿ ಹಾಗೂ ಧನತ್ರಯೋದಶಿ ಹಬ್ಬದ ಪ್ರಯುಕ್ತ ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸುವ ಗ್ರಾಹಕರಿಗೆ ಪ್ರಮುಖ ಕ್ವಿಕ್-ಕಾಮರ್ಸ್ ವೇದಿಕೆ ಇನ್‌ಸ್ಟಾಮಾರ್ಟ್ ಬಂಪರ್‌ ಆಫರ್‌ ಘೋಷಿಸಿದೆ. ಖ್ಯಾತ ಆಭರಣ ಮಳಿಗೆ...

divyasree-developers-hdfc-capital-1500-crore-residential-development-platform-india

ಎಚ್‌ಡಿಎಫ್‌ಸಿ ಕ್ಯಾಪಿಟಲ್‌ನ ಜೊತೆ ಕೈ ಜೋಡಿಸಿದ ಬೆಂಗಳೂರಿನ ದಿವ್ಯಶ್ರೀ ಡೆವಲಪರ್ಸ್‌, ₹1,500 ಕೋಟಿಯ ‘ವಸತಿ ಅಭಿವೃದ್ಧಿ ವೇದಿಕೆ’ ಸ್ಥಾಪನೆ

by admin
November 2, 2026
0

ಬೆಂಗಳೂರು: ಸಿಲಿಕಾನ್‌ ಸಿಟಿ ಮೂಲದ ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ 'ದಿವ್ಯಶ್ರೀ ಡೆವಲಪರ್ಸ್', ತನ್ನ ವಸತಿ ಯೋಜನೆಗಳನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಲು 'ಎಚ್‌ಡಿಎಫ್‌ಸಿ ಕ್ಯಾಪಿಟಲ್...

lord-of-the-western-sea-novel-trailer-release-november-15-kiccha-sudeep-dolly-dhananjaya

ನವೆಂಬರ್ 15ರಂದು ‘Lord of the Western Sea’ ಕಾದಂಬರಿಯ ಟ್ರೈಲರ್ ಬಿಡುಗಡೆ

by admin
November 2, 2026
0

ಇಂಗ್ಲಿಷ್‌ಗೆ ಕಿಚ್ಚ ಸುದೀಪ್, ಕನ್ನಡಕ್ಕೆ ಡಾಲಿ ಧನಂಜಯ ಧ್ವನಿ ಲೇಖಕ ಎಸ್. ಶ್ಯಾಮ್ ಪ್ರಸಾದ್ ಅವರ ಐತಿಹಾಸಿಕ ಕಾದಂಬರಿ Lord of the Western Sea (ಪಡುಗಡಲೊಡೆಯ)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram