ಲಖನೌ: ಪ್ರೇಯತಮೆಯ ಜೊತೆ ಇದ್ದಾಗಲೇ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಗ್ರಾಮದಲ್ಲಿ ಬೆತ್ತಲಾಗಿ ಮೆರವಣಿಗೆ ಮಾಡಿ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಬೆತ್ತಲೆ ಮೆರವಣಿಗೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದೆ.
ಅಂದ್ಹಾಗೆ ಹಲ್ಲೆಗೊಳಗಾದ ವ್ಯಕ್ತಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಆತನ ಪ್ರಿಯತಮೆಗೂ ಸಹ ಮದುವೆಯಾಗಿದೆ. ಆದೂ ಈ ಇಬ್ಬರ
ನಡುವೆ ಪ್ರೀತಿ ಚಿಗುರೊಡೆದಿದ್ದು, ವ್ಯಕ್ತಿ ತನ್ನ ಗೆಳತಿಯೊಂದಿಗೆ ಇದ್ದಾಗಲೇ ಪ್ರಿಯತಮೆಯ ಸೋದರ ಮಾವನ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಇದರಿಂದ ಕೋಪಗೊಂಡ ಆಕೆಯ ಮಾವ, ವ್ಯಕ್ತಿಯನ್ನು ಹಿಡಿದು ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆತನ ಸಹಚರರು ವ್ಯಕ್ತಿಯನ್ನು ಬೆತ್ತಲೆಯಾಗಿ ಹಳ್ಳಿಯ ಬೀದಿಗಳಲ್ಲಿ ಓಡಾಡುವಂತೆ ಕಿರುಕುಳ ನೀಡಿದ್ದಾರೆ. ಕೊನೆಗೆ ಆ ವ್ಯಕ್ತಿ ಬೆತ್ತಲಾಗಿ ಗ್ರಾಮದಲ್ಲಿ ಓಡಾಡಿದ್ದಾನೆ. ಆರೋಪಿಗಳು ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ
ಬೆಂಗಳೂರು: ರಾಜಧಾನಿಯ ಜನಸಾಮಾನ್ಯರ ಸಾರಿಗೆಯಾದ ಬಿಎಂಟಿಸಿ ಬಸ್ ಪ್ರಯಾಣ ಇನ್ನು ಮುಂದೆ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದ ಬಸ್ ಟಿಕೆಟ್ ದರ...








