ADVERTISEMENT
Monday, November 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಎಚ್‌ಡಿಎಫ್‌ಸಿ ಕ್ಯಾಪಿಟಲ್‌ನ ಜೊತೆ ಕೈ ಜೋಡಿಸಿದ ಬೆಂಗಳೂರಿನ ದಿವ್ಯಶ್ರೀ ಡೆವಲಪರ್ಸ್‌, ₹1,500 ಕೋಟಿಯ ‘ವಸತಿ ಅಭಿವೃದ್ಧಿ ವೇದಿಕೆ’ ಸ್ಥಾಪನೆ

admin by admin
November 2, 2026
in Newsbeat, National, ದೇಶ - ವಿದೇಶ
divyasree-developers-hdfc-capital-1500-crore-residential-development-platform-india

divyasree-developers-hdfc-capital-1500-crore-residential-development-platform-india

Share on FacebookShare on TwitterShare on WhatsappShare on Telegram

ಬೆಂಗಳೂರು: ಸಿಲಿಕಾನ್‌ ಸಿಟಿ ಮೂಲದ ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ‘ದಿವ್ಯಶ್ರೀ ಡೆವಲಪರ್ಸ್’, ತನ್ನ ವಸತಿ ಯೋಜನೆಗಳನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಲು ‘ಎಚ್‌ಡಿಎಫ್‌ಸಿ ಕ್ಯಾಪಿಟಲ್ ಅಡ್ವೈಸರ್ಸ್ ಲಿಮಿಟೆಡ್’ (ಎಚ್‌ಡಿಎಫ್‌ಸಿ ಸಮೂಹದ ರಿಯಲ್ ಎಸ್ಟೇಟ್ ಖಾಸಗಿ ಇಕ್ವಿಟಿ ವಿಭಾಗ) ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಈ ಕಾರ್ಯತಂತ್ರದ ಸಹಭಾಗಿತ್ವದಡಿ ಭಾರತದಲ್ಲಿ 1,500 ಕೋಟಿ ರೂ. ಮೊತ್ತದ ‘ವಸತಿ ಅಭಿವೃದ್ಧಿ ವೇದಿಕೆ’ಯನ್ನು ಸ್ಥಾಪಿಸಲಾಗುತ್ತಿದೆ. ದಿವ್ಯಶ್ರೀ ಡೆವಲಪರ್ಸ್‌ನ ಮಾರುಕಟ್ಟೆ ಜ್ಞಾನ ಮತ್ತು ಎಚ್‌ಡಿಎಫ್‌ಸಿ ಕ್ಯಾಪಿಟಲ್‌ನ ಹೂಡಿಕೆ ಪರಿಣತಿಯನ್ನು ಒಳಗೊಂಡಿರುವ ಈ ವೇದಿಕೆಯು, ಮುಂದಿನ 3-4 ವರ್ಷಗಳಲ್ಲಿ ಹೊಸ ವಸತಿ ಯೋಜನೆಗಳ ಖರೀದಿ ಮತ್ತು ಅಭಿವೃದ್ಧಿಗೆ ಬಂಡವಾಳ ಒದಗಿಸಲಿದೆ. ಇದರಿಂದ ಅಂದಾಜು 6,750 ಕೋಟಿ ರೂ. ಒಟ್ಟು ಅಭಿವೃದ್ಧಿ ಮೌಲ್ಯದ (ಜಿಡಿವಿ) ಯೋಜನೆಗಳು ರೂಪುಗೊಳ್ಳಲಿವೆ.

Related posts

instamart-kalyan-jewellers-diwali-dhanteras-gold-coins-10-minute-delivery-free-silver-coin-offers

ದೀಪಾವಳಿ, ಧನತ್ರಯೋದಶಿಗೆ ಬಂಪರ್‌ ಆಫರ್: ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ಚಿನ್ನ, ಜೊತೆಗೆ ಬೆಳ್ಳಿ ಫ್ರೀ!

November 2, 2026
lord-of-the-western-sea-novel-trailer-release-november-15-kiccha-sudeep-dolly-dhananjaya

ನವೆಂಬರ್ 15ರಂದು ‘Lord of the Western Sea’ ಕಾದಂಬರಿಯ ಟ್ರೈಲರ್ ಬಿಡುಗಡೆ

November 2, 2026

ಈಗಾಗಲೇ ಎರಡು ಪ್ರತ್ಯೇಕ ವಸತಿ ಯೋಜನೆಗಳ ಕುರಿತ ಪ್ರಾಥಮಿಕ ಕರಡು ಒಪ್ಪಂದಗಳು ಸಿದ್ಧವಾಗಿದ್ದು, ಮುಂದಿನ 2-3 ತಿಂಗಳುಗಳಲ್ಲಿ ಇದು ಅಂತಿಮಗೊಂಡು ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ.

ಈ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿರುವ ದಿವ್ಯಶ್ರೀ ಡೆವಲಪರ್ಸ್ ಅಧ್ಯಕ್ಷ ಹಾಗೂ ಸಿಇಒ ಭಾಸ್ಕರ್ ಎನ್. ರಾಜು, “ನಮ್ಮ ವಸತಿ ವ್ಯವಹಾರದ ಪ್ರತಿಯೊಂದು ವಿಭಾಗವೂ ಈಗ ಮುಂದಿನ ಹಂತದ ಬೆಳವಣಿಗೆಗೆ ಸಜ್ಜಾಗಿದೆ. ಮುಂಬರುವ ವರ್ಷಗಳಲ್ಲಿ ದಿವ್ಯಶ್ರೀ ಸಾಧಿಸಲಿರುವ ಬೃಹತ್ ಬೆಳವಣಿಗೆಯ ವಿಶ್ವಾಸವನ್ನು ಎಚ್‌ಡಿಎಫ್‌ಸಿ ಜೊತೆಗಿನ ಈ ಒಪ್ಪಂದ ಪ್ರತಿಬಿಂಬಿಸುತ್ತದೆ,” ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಉತ್ತಮ ಗುಣಮಟ್ಟದ ವಸತಿಗಳಿಗೆ ನಿರಂತರ ಬೇಡಿಕೆಯಿದ್ದು, “ದಿವ್ಯಶ್ರೀ ಡೆವಲಪರ್ಸ್ ಹೊಂದಿರುವ ಬಲವಾದ ಟ್ರ್ಯಾಕ್ ರೆಕಾರ್ಡ್‌ನೊಂದಿಗೆ ಕೈಜೋಡಿಸಿ ಗ್ರಾಹಕರಿಗೆ ದೀರ್ಘಕಾಲೀನ ಮೌಲ್ಯ ಒದಗಿಸುವುದು ನಮ್ಮ ಗುರಿ,” ಎಂದು ಎಚ್‌ಡಿಎಫ್‌ಸಿ ಕ್ಯಾಪಿಟಲ್‌ನ ಎಂಡಿ ಮತ್ತು ಸಿಇಒ ವಿಪುಲ್ ರುಂಗ್ಟಾ ವಿವರಿಸಿದ್ದಾರೆ.

ದಿವ್ಯಶ್ರೀ ಡೆವಲಪರ್ಸ್‌ನ ಮಾರುಕಟ್ಟೆ ಜ್ಞಾನ ಮತ್ತು ಎಚ್‌ಡಿಎಫ್‌ಸಿ ಕ್ಯಾಪಿಟಲ್‌ನ ಹೂಡಿಕೆ ಪರಿಣತಿಯೊಂದಿಗೆ ನಿರ್ಮಾಣವಾಗಲಿರುವ ಈ ವಸತಿ ಯೋಜನೆಗಳು, ಅತ್ಯುತ್ತಮ ವಿನ್ಯಾಸ ಮತ್ತು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲಿವೆ.

“ಈಗಾಗಲೇ ನಮ್ಮ ವಸತಿ ವ್ಯವಹಾರ ಮಹತ್ವದ ಘಟ್ಟದಲ್ಲಿದ್ದು, ಈ ಹೊಸ ಬಂಡವಾಳವು ನಮ್ಮ ಯೋಜನೆಗಳನ್ನು ಇನ್ನಷ್ಟು ವೇಗಗೊಳಿಸಲಿದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಿಂದ ಪ್ರಾರಂಭಿಸಿ ವೇಗವಾಗಿ ಬೆಳೆಯುತ್ತಿರುವ ಇತರ ಪ್ರಮುಖ ನಗರಗಳಿಗೂ ನಮ್ಮ ಯೋಜನೆಗಳನ್ನು ವಿಸ್ತರಿಸಲಿದ್ದೇವೆ,” ಎಂದು ದಿವ್ಯಶ್ರೀ ವಸತಿ ವಿಭಾಗದ ಸಿಇಒ ಅವಿನಾಶ್ ಸುರೇಶ್ ಹೇಳಿದ್ದಾರೆ.

ಇದಕ್ಕೆ ಧ್ವನಿಗೂಡಿಸಿರುವ ಎಚ್‌ಡಿಎಫ್‌ಸಿ ಕ್ಯಾಪಿಟಲ್‌ನ ಪಾಲುದಾರ ಕುನಾಲ್ ವಾಧ್ವಾನಿ, “ಭಾರತದಲ್ಲಿ ಮಧ್ಯಮ ಆದಾಯದ ಮನೆಗಳಿಗಾಗಿ ಇರುವ ಬೃಹತ್ ಬೇಡಿಕೆಯನ್ನು ಪೂರೈಸಲು ಈ ಒಪ್ಪಂದ ನೆರವಾಗಲಿದೆ,” ಎಂದು ಅಭಿಪ್ರಾಯಪಟ್ಟದ್ದಾರೆ.

1975ರಲ್ಲಿ ಸ್ಥಾಪಿತವಾದ ‘ದಿವ್ಯಶ್ರೀ ಡೆವಲಪರ್ಸ್’ 5 ದಶಕಗಳ ಇತಿಹಾಸ ಹೊಂದಿರುವ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾಗಿದ್ದು, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಐಟಿ ಕಾರಿಡಾರ್‌ಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದುವರೆಗೆ 3 ಕೋಟಿ ಚದರ ಅಡಿಯಷ್ಟು ಪ್ರೀಮಿಯಂ ಯೋಜನೆಗಳನ್ನು ಪೂರ್ಣಗೊಳಿಸಿರುವ ಸಂಸ್ಥೆ, ಮುಂದಿನ ದಿನಗಳಲ್ಲಿ ಇದನ್ನು 5.6 ಕೋಟಿ ಚದರ ಅಡಿಗೆ ವಿಸ್ತರಿಸುವ ಗುರಿ ಹೊಂದಿದೆ.

ಇನ್ನು, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಂಗಸಂಸ್ಥೆಯಾಗಿರುವ ‘ಎಚ್‌ಡಿಎಫ್‌ಸಿ ಕ್ಯಾಪಿಟಲ್’, ಕೈಗೆಟುಕುವ ಮತ್ತು ಮಧ್ಯಮ ವರ್ಗದ ಮನೆಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವ ಪ್ರೈವೇಟ್ ಇಕ್ವಿಟಿ ವಿಭಾಗವಾಗಿದೆ. ಇದು ಒಟ್ಟು 50,000 ಕೋಟಿ ರೂ. ಮೌಲ್ಯದ ಬೃಹತ್ ಹೂಡಿಕೆ ವೇದಿಕೆಯನ್ನು ನಿರ್ವಹಿಸುತ್ತಿದೆ.

ShareTweetSendShare
Join us on:

Related Posts

instamart-kalyan-jewellers-diwali-dhanteras-gold-coins-10-minute-delivery-free-silver-coin-offers

ದೀಪಾವಳಿ, ಧನತ್ರಯೋದಶಿಗೆ ಬಂಪರ್‌ ಆಫರ್: ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ಚಿನ್ನ, ಜೊತೆಗೆ ಬೆಳ್ಳಿ ಫ್ರೀ!

by admin
November 2, 2026
0

ಬೆಂಗಳೂರು: ದೀಪಾವಳಿ ಹಾಗೂ ಧನತ್ರಯೋದಶಿ ಹಬ್ಬದ ಪ್ರಯುಕ್ತ ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸುವ ಗ್ರಾಹಕರಿಗೆ ಪ್ರಮುಖ ಕ್ವಿಕ್-ಕಾಮರ್ಸ್ ವೇದಿಕೆ ಇನ್‌ಸ್ಟಾಮಾರ್ಟ್ ಬಂಪರ್‌ ಆಫರ್‌ ಘೋಷಿಸಿದೆ. ಖ್ಯಾತ ಆಭರಣ ಮಳಿಗೆ...

lord-of-the-western-sea-novel-trailer-release-november-15-kiccha-sudeep-dolly-dhananjaya

ನವೆಂಬರ್ 15ರಂದು ‘Lord of the Western Sea’ ಕಾದಂಬರಿಯ ಟ್ರೈಲರ್ ಬಿಡುಗಡೆ

by admin
November 2, 2026
0

ಇಂಗ್ಲಿಷ್‌ಗೆ ಕಿಚ್ಚ ಸುದೀಪ್, ಕನ್ನಡಕ್ಕೆ ಡಾಲಿ ಧನಂಜಯ ಧ್ವನಿ ಲೇಖಕ ಎಸ್. ಶ್ಯಾಮ್ ಪ್ರಸಾದ್ ಅವರ ಐತಿಹಾಸಿಕ ಕಾದಂಬರಿ Lord of the Western Sea (ಪಡುಗಡಲೊಡೆಯ)...

ayyana-mane-2-zee5-100-million-viewing-minutes-kannada-web-series-success

ಡಿಜಿಟಲ್ ಜಗತ್ತಿನಲ್ಲಿ ಹೊಸ ದಾಖಲೆ: Zee5 ನಲ್ಲಿ 10 ಕೋಟಿ ವೀಕ್ಷಣೆ ನಿಮಿಷಗಳನ್ನು ದಾಟಿ ಮುನ್ನುಗ್ಗುತ್ತಿರುವ ‘ಅಯ್ಯನ ಮನೆ 2’

by admin
November 2, 2026
0

ಬೆಂಗಳೂರು: ಕನ್ನಡ ಒಟಿಟಿ ಲೋಕದಲ್ಲಿ ಥ್ರಿಲ್ಲರ್ ಸರಣಿಯೊಂದು ಅಭೂತಪೂರ್ವ ದಾಖಲೆ ಬರೆದಿದೆ. ಜೀ5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಬ್ಲಾಕ್‌ಬಸ್ಟರ್ ವೆಬ್ ಸರಣಿ 'ಅಯ್ಯನ ಮನೆ 2', ಡಿಜಿಟಲ್...

shah-rukh-khan-king-movie-tu-mil-jaye-song-deepika-padukone-arijit-singh-ed-sheeran

ಶಾರುಖ್ ಖಾನ್‌ ಹುಟ್ಟುಹಬ್ಬಕ್ಕೆ ‘ಕಿಂಗ್’ ಚಿತ್ರದ ‘ತು ಮಿಲ್ ಜಾಯೆ’ ಹಾಡು ರಿಲೀಸ್; ದೀಪಿಕಾ ಜೊತೆ ರೊಮ್ಯಾನ್ಸ್, ಅರಿಜಿತ್-ಎಡ್ ಶೀರನ್ ಜುಗಲ್‌ಬಂದಿ

by admin
November 2, 2026
0

ಮುಂಬೈ: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ವಿಶೇಷ ದಿನದಂದು ಅಭಿಮಾನಿಗಳಿಗೆ ಅದ್ಭುತ ಉಡುಗೊರೆ ನೀಡಿದ್ದಾರೆ. ಅವರ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ 'ಕಿಂಗ್'...

kannada-rajyotsava-kichchas-kings-bengaluru-indian-racing-league-champions-priya-sudeep

ಕರ್ನಾಟಕ ರಾಜ್ಯೋತ್ಸವದಂದು ಕ್ರೀಡಾಂಗಣದಲ್ಲಿ ರಾರಾಜಿಸಿದ ಕನ್ನಡ ಧ್ವಜ: ವಿಜೇತರಿಗೆ ಹಳದಿ-ಕೆಂಪು ಶಾಲು ಹೊದಿಸಿ ಕನ್ನಡದ ಹೆಮ್ಮೆ ಮೆರೆದ ಪ್ರಿಯಾ ಸುದೀಪ್

by admin
November 2, 2026
0

ಬೆಂಗಳೂರು/ನೋಯ್ಡಾ: ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ರಾಜಧಾನಿ ಬೆಂಗಳೂರಿನ ಕೀರ್ತಿಗೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಯಾಗಿದೆ. ಇಂಡಿಯನ್ ರೇಸಿಂಗ್ ಲೀಗ್ (ಐಆರ್‌ಎಲ್) ಸ್ಪರ್ಧೆಯಲ್ಲಿ ಭರ್ಜರಿ ಪ್ರದರ್ಶನ ನೀಡಿದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram