ನಿರಂತರ ಆನೆ ದಾಳಿ: ಸ್ಥಳಕ್ಕೆ ಕಾಂಗ್ರೆಸ್ ಜನಪ್ರತಿನಿಧಿಗಳ ಭೇಟಿ
ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ನಿರಂತರವಾಗಿ ಕಾಡಾನೆ ದಾಳಿಯಿಂದ ತತ್ತರಿಸಿ ಹೋದ ಗ್ರಾಮಸ್ಥರನ್ನು ಕಾಂಗ್ರೆಸ್ ತಾಲೂಕು ಪಂಚಾಯತ್ ಸದಸ್ಯರಾದ ಕೆ.ಟಿ ವಲ್ಸಮ್ಮ ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ಸಂದರ್ಭ ಗ್ರಾಮಸ್ಥರು ಈ ಪರಿಸರಕ್ಕೆ ಬೀದಿದೀಪ ಹಾಕಲು ಆಗ್ರಹಿಸಿದ್ದು ಇದರ ಮನವಿಯನ್ನು ಕೂಡ ನೀಡಲಾಯಿತು.
ನಿರಂತರವಾಗಿ ವರದಿಯಾಗುತಿದ್ದರೂ ಯಾವೊಬ್ಬ ಜನಪ್ರತಿನಿಧಿಯೂ ಭೇಟಿ ಮಾಡದೆ, ಹಾಗೂ ಅರಣ್ಯ ಇಲಾಖೆ ಮೌನವಹಿಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಆನೆ ದಾಳಿಯಿಂದ ತೋಟಗಳು ಸಂಪೂರ್ಣವಾಗಿ ನಾಶವಾಗಿದ್ದು ಪರಿಹಾರಕ್ಕಾಗಿ ಮೊರೆ ಇಡುತಿದ್ದಾರೆ. ಮಣ್ಣಗುಂಡಿ ಪ್ರದೇಶದಲ್ಲಿ ಕಾಡಾನೆ ಪುಂಡಾಟ ನಡೆಸುತ್ತಿದ್ದು ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತಕ್ರಮಕ್ಕೆ ಕೂಡಲೇ ಮುಂದಾಗಬೇಕು.
ನೌಶಾದ್ ನೆಲ್ಯಾಡಿ








