ಬೇಕಾಬಿಟ್ಟಿ ಓಡಾಟ : ಬೆಂಗಳೂರಿನಲ್ಲಿ ಇಂದು 70 ವಾಹನಗಳ ಜಪ್ತಿ
ಬೆಂಗಳೂರು : ನಗರದಲ್ಲಿ ಕೊರೊನಾ ವೈರಸ್ ಹರಡುವಿಕೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಒಂದು ವಾರದ ಲಾಕ್ ಡೌನ್ ಜಾರಿ ಮಾಡಿದೆ. ಈ ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ಸೇವೆಗೆ ಮಾತ್ರ ಓಡಾಡಲು ಅವಕಾಶ ನೀಡಲಾಗಿದೆ. ಅಗತ್ಯ ಇದ್ದವರು ಐಡಿ ಕಾರ್ಡ್ ತೋರಿಸಿ ಓಡಾಡಬಹುದು.
ಇದರ ಮಧ್ಯೆ ಕೆಲವರು ಲಾಕ್‌ಡೌನ್ ಗೆ ಕೇರ್ ಮಾಡದೇ ಬೇಕಾಬಿಟ್ಟಿ ನಗರದಲ್ಲಿ ಓಡಾಡುತ್ತಿದ್ದಾರೆ. ಅಂಥವರ ವಾಹನಗಳನ್ನು ಪೊಲೀಸರು ಜಪ್ತಿ ಮಾಡುತ್ತಿದ್ದಾರೆ. ಅದರಂತೆ ಇಂದು ಬೆಳಿಗ್ಗೆಯಿಂದ ಇಲ್ಲಿಯವರೆಗೂ 70 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಇನ್ನು ನಗರದಲ್ಲಿ ಲಾಕ್ ಡೌನ್ ಜಾರಿ ಮಾಡಿದಾಗಿನಿಂದಲೂ ಇಲ್ಲಿಯವರೆಗೆ ಪೊಲೀಸರು 800 ವಾಹನಗಳನ್ನು ಸೀಜ್ ಮಾಡಿದ್ದು, ಈ ವಾಹನಗಳನ್ನು ಲಾಕ್ ಡೌನ್ ಮುಗಿದ ನಂತ್ರ ಅವುಗಳ ಮಾಲೀಕರ ಕೈಗೆ ಹಸ್ತಾಂತರ ಮಾಡಲಿದ್ದಾರೆ.








