ADVERTISEMENT
Thursday, November 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

ಪ್ರಮೋದ್ ಅಭಿನಯದ ಬಹುನಿರೀಕ್ಷಿತ ‘ಹಲ್ಕಾ ಡಾನ್’ ಚಿತ್ರದ ಮಾಸ್ ಫಸ್ಟ್ ಕಟ್ ಟೀಸರ್ ಬಿಡುಗಡೆ: ಕನ್ನಡ, ತುಳು ಮತ್ತು ತೆಲುಗಿನಲ್ಲಿ ಅಬ್ಬರಿಸಲು ಸಜ್ಜಾದ ಚಿತ್ರತಂಡ!

admin by admin
November 19, 2026
in Uncategorized
Share on FacebookShare on TwitterShare on WhatsappShare on Telegram

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಪ್ರಮೋದ್ ಅಭಿನಯದ ಬಹುನಿರೀಕ್ಷಿತ ‘ಹಲ್ಕಾ ಡಾನ್’ ಸಿನಿಮಾದ ‘ಫಸ್ಟ್ ಕಟ್ ಟೀಸರ್’ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈಗಾಗಲೇ ಪರಭಾಷೆಗಳಲ್ಲೂ ಗುರುತಿಸಿಕೊಂಡು ತೆಲುಗು ಪ್ರೇಕ್ಷಕರಿಗೂ ಚಿರಪರಿಚಿತರಾಗಿರುವ ಪ್ರಮೋದ್ ಅವರಿಗೆ ಆಂಧ್ರ ಮತ್ತು ತೆಲಂಗಾಣದಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ಈ ಹಿನ್ನೆಲೆಯಲ್ಲಿ ‘ಹಲ್ಕಾ ಡಾನ್’ ಸಿನಿಮಾದ ಮೇಲೆ ಕನ್ನಡದ ಜೊತೆಗೆ ತೆಲುಗು ಚಿತ್ರರಂಗದಲ್ಲೂ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ.

ಸದ್ಯ ಬಿಡುಗಡೆಯಾಗಿರುವ ಟೀಸರ್ ಸಂಪೂರ್ಣ ಮಾಸ್ ಅಂಶಗಳಿಂದ ಕೂಡಿದ್ದು, ಪ್ರೇಕ್ಷಕರಿಗೆ ಭರ್ಜರಿ ಆಕ್ಷನ್ ಮನರಂಜನೆಯ ಭರವಸೆ ನೀಡುತ್ತಿದೆ.
ಟೀಸರ್‌ನಲ್ಲಿ ನಟ ಪ್ರಮೋದ್ ಅವರ ಲುಕ್, ಬಾಡಿ ಲ್ಯಾಂಗ್ವೇಜ್ ಮತ್ತು ಮ್ಯಾನರಿಸಂ ಹಿಂದೆಂದಿಗಿಂತಲೂ ಸಖತ್ ಡಿಫರೆಂಟ್ ಆಗಿ ಮೂಡಿಬಂದಿದೆ. ಈ ಟೀಸರ್ ಪ್ರಮೋದ್ ಅವರನ್ನು ಹೊಸದೊಂದು ಮಾಸ್ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಪರಿಚಯಿಸಿದೆ. ಕೇವಲ ಸೀಮಿತ ಪ್ರೇಕ್ಷಕರಿಗೆ ಮಾತ್ರವಲ್ಲದೆ, ಬಹುಭಾಷಾ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಈ ಚಿತ್ರವನ್ನು ಏಕಕಾಲಕ್ಕೆ ಕನ್ನಡ, ತುಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ.

Related posts

‘ದ್ರೌಪದಿ’ ಸಿನಿಮಾಗೆ ಅದ್ಧೂರಿ ಮುಹೂರ್ತ: ಅನ್ಯಾಯ ಮತ್ತು ಪ್ರತೀಕಾರದ ರಕ್ತಸಿಕ್ತ ಕಥೆಗೆ ಚಾಲನೆ

November 19, 2026
time-100-next-india-list-2026-alia-bhatt-pawan-chandan-emerging-indian-leaders

ಮೊದಲ ಅಂತಾರಾಷ್ಟ್ರೀಯ ‘ಟೈಮ್ 100 ನೆಕ್ಸ್ಟ್’ ಪಟ್ಟಿಯಲ್ಲಿ 100 ಉದಯೋನ್ಮುಖ ಭಾರತೀಯರು: ಮಿಂಚಿದ ಆಲಿಯಾ ಭಟ್, ಸ್ಕೈರೂಟ್‌ನ ಪವನ್ ಚಂದನ

November 19, 2026

ಚಲಾ ಅವರ ಕಥೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ‘ವೀನಸ್ ಎಂಟರ್‌ಟೈನರ್ಸ್’ ಬ್ಯಾನರ್ ಅಡಿಯಲ್ಲಿ ಶ್ರೀಕಾಂತ್ ಕೆ.ಪಿ. ಬಂಡವಾಳ ಹೂಡಿದ್ದಾರೆ. ಇವರಿಗೆ ಮಾಧವ್ ಸಿರಾನ್ ಹಾಗೂ ಮ್ಯಾಸಿಸ್ ಪ್ರೊಡಕ್ಷನ್ಸ್ (Madhaw Ciran & Macis Productions) ಸಂಸ್ಥೆಗಳು ನಿರ್ಮಾಣದಲ್ಲಿ ಸಾಥ್ ನೀಡಿವೆ.

ಚಿತ್ರದಲ್ಲಿ ಪ್ರಮೋದ್ ಅವರಿಗೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದು, ಕರಾವಳಿಯ ಪ್ರತಿಭಾನ್ವಿತ ನಟ ರೂಪೇಶ್ ಶೆಟ್ಟಿ, ಮಲಯಾಳಂ ನಟಿ ದಿವ್ಯಾ ಪಿಳ್ಳೈ ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಪ್ರತಿಷ್ಠಿತ ‘ಡಿ ಬೀಟ್ಸ್’ (D Beats) ಆಡಿಯೋ ಸಂಸ್ಥೆಯ ಮೂಲಕ ಬಿಡುಗಡೆಯಾಗಿರುವ ‘ಹಲ್ಕಾ ಡಾನ್’ ಟೀಸರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭರ್ಜರಿ ಆಕ್ಷನ್, ಮಾಸ್ ಸಂಭಾಷಣೆ ಮತ್ತು ತಾರಾಗಣದ ಮೂಲಕ ಗಮನಸೆಳೆಯುತ್ತಿರುವ ಈ ಸಿನಿಮಾ ಸದ್ಯದಲ್ಲೇ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ.

ShareTweetSendShare
Join us on:

Related Posts

‘ದ್ರೌಪದಿ’ ಸಿನಿಮಾಗೆ ಅದ್ಧೂರಿ ಮುಹೂರ್ತ: ಅನ್ಯಾಯ ಮತ್ತು ಪ್ರತೀಕಾರದ ರಕ್ತಸಿಕ್ತ ಕಥೆಗೆ ಚಾಲನೆ

by admin
November 19, 2026
0

ಬೆಂಗಳೂರು: ಅನ್ಯಾಯ, ಆಕ್ರೋಶ ಹಾಗೂ ಪ್ರತೀಕಾರದ ರೋಚಕ ಕಥಾಹಂದರವನ್ನು ಒಳಗೊಂಡಿರುವ ನೂತನ ಕನ್ನಡ ಚಲನಚಿತ್ರ ‘ದ್ರೌಪದಿ’ (DRAUPADI) ಸಿನಿಮಾಗೆ ಶುಭ ಮುಹೂರ್ತ ನೆರವೇರಿದೆ. "ಒಂದು ಸೀರೆಯ ಸೆರಗು,...

time-100-next-india-list-2026-alia-bhatt-pawan-chandan-emerging-indian-leaders

ಮೊದಲ ಅಂತಾರಾಷ್ಟ್ರೀಯ ‘ಟೈಮ್ 100 ನೆಕ್ಸ್ಟ್’ ಪಟ್ಟಿಯಲ್ಲಿ 100 ಉದಯೋನ್ಮುಖ ಭಾರತೀಯರು: ಮಿಂಚಿದ ಆಲಿಯಾ ಭಟ್, ಸ್ಕೈರೂಟ್‌ನ ಪವನ್ ಚಂದನ

by admin
November 19, 2026
0

ಪ್ರತಿಷ್ಠಿತ 'ಟೈಮ್' ನಿಯತಕಾಲಿಕೆಯು ತನ್ನ ಮೊದಲ ಅಂತಾರಾಷ್ಟ್ರೀಯ 'ಟೈಮ್ 100 ನೆಕ್ಸ್ಟ್' (TIME100 Next) ಪಟ್ಟಿಯನ್ನು ಪ್ರಕಟಿಸಿದ್ದು, ವ್ಯಾಪಾರ, ವಿಜ್ಞಾನ, ಕ್ರೀಡೆ ಮತ್ತು ಕಲೆಯಂತಹ ವಿವಿಧ ಕ್ಷೇತ್ರಗಳಲ್ಲಿ...

ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

by admin
November 5, 2026
0

ಬೆಂಗಳೂರು: ಒಂದು ಕೈಯಲ್ಲಿ ಉಚಿತ ಯೋಜನೆಗಳ ಆಮಿಷ, ಮತ್ತೊಂದು ಕೈಯಲ್ಲಿ ಅಗತ್ಯ ಸೇವೆಗಳ ದರ ಏರಿಕೆ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ...

ram-charan-sukumar-rc17-movie-grand-launch-muhurtham-hyderabad-mytri-movie-makers

ರಾಮ್ ಚರಣ್ – ಸುಕುಮಾರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘#RC17’ ಚಿತ್ರಕ್ಕೆ ಅದ್ಧೂರಿ ಮುಹೂರ್ತ

by admin
November 1, 2026
0

ಹೈದರಾಬಾದ್: ಭಾರತೀಯ ಚಿತ್ರರಂಗದ ಮೋಸ್ಟ್ ಸಕ್ಸಸ್‌ಫುಲ್ ಜೋಡಿಗಳಲ್ಲಿ ಒಂದಾದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಕ್ರಿಯೇಟಿವ್ ನಿರ್ದೇಶಕ ಸುಕುಮಾರ್ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರಕ್ಕೆ...

ರೈತರಿಗೆ ₹2,500 ಪರಿಹಾರ ನೀಡಲು 17 ಕಠಿಣ ಷರತ್ತುಗಳು, ರೈತರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವ ಕಾಂಗ್ರೆಸ್‌ ಸರ್ಕಾರ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
October 30, 2026
0

"ರೈತರಿಗೆ ನೆರವು ನೀಡುವ ವಿಷಯದಲ್ಲಿ ಹೊಣೆಗೇಡಿತನ ಪ್ರದರ್ಶಿಸಿರುವ ಕಾಂಗ್ರೆಸ್‌ಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ" ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram