ಇದು ಪಾಪರ್ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಎಫೆಕ್ಟ್!
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಜೀವರಕ್ಷಕ ಔಷಧಗಳು ಮತ್ತು ಉಪಕರಣಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪೂರೈಸಿದ ಔಷಧಗಳ ಬಿಲ್ಗಳಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿರುವುದರಿಂದ, ಸಮರ್ಥ ಔಷಧ ಕಂಪನಿಗಳೇ ಟೆಂಡರ್ಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿವೆ. ಖಜಾನೆ ಖಾಲಿ ಮಾಡಿಕೊಂಡು, ಬಿಲ್ ಬಾಕಿ ಉಳಿಸಿಕೊಂಡಿರುವ @INCKarnataka ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಕಂಪನಿಗಳು ರಾಜ್ಯದಿಂದ ದೂರ ಉಳಿಯುತ್ತಿರುವುದು ದುರದೃಷ್ಟಕರ.
ಕಮಿಷನ್ ದಂಧೆ, ಟೆಂಡರ್ಗಳಲ್ಲಿ ವಿಳಂಬ, ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಆಡಳಿತಾತ್ಮಕ ಲೋಪದೋಷಗಳಿಂದ ವೈದ್ಯಕೀಯ ಸರಬರಾಜು ನಿಗಮ ಸಂಪೂರ್ಣ ಹಳ್ಳ ಹಿಡಿದಿದೆ. ಸ್ವತಃ ಆರೋಗ್ಯ ಸಚಿವ @utkhader ಅವರೇ ನಿಗಮದ ಲೋಪದೋಷಗಳನ್ನು ಪಟ್ಟಿ ಮಾಡಿ ಆಯುಕ್ತರಿಗೆ ಪತ್ರ ಬರೆದಿರುವುದು, ಇಲಾಖೆಯ ಅವ್ಯವಸ್ಥೆಯನ್ನು ಬಯಲು ಮಾಡಿದೆ. ಕೇವಲ ಪತ್ರ ಬರೆದು, ವರದಿ ಕೇಳುವ ನಾಟಕವಾಡಿದರೆ ಬಡ ರೋಗಿಗಳ ಜೀವ ಉಳಿಯುತ್ತದೆಯೇ?
ಮುಖ್ಯಮಂತ್ರಿ @DKShivakumar ಅವರೇ, ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಿ! ಬಾಕಿ ಇರುವ ಬಿಲ್ಗಳನ್ನು ತಕ್ಷಣ ಪಾವತಿಸಿ, ಆಸ್ಪತ್ರೆಗಳಿಗೆ ಅಗತ್ಯ ಔಷಧ ಮತ್ತು ಉಪಕರಣಗಳ ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಿ.







