ADVERTISEMENT
Friday, November 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹಾಲಿನ ದರ ಏರಿಸಿದರೂ ಹೈನುಗಾರರಿಗೆ ಪ್ರೋತ್ಸಾಹಧನ ನೀಡಿಲ್ಲ: ₹486 ಕೋಟಿ ಬಾಕಿ ಉಳಿಸಿಕೊಂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

admin by admin
November 27, 2026
in Newsbeat, State, ರಾಜ್ಯ
r-ashoka-slams-congress-govt-over-486-crore-pending-milk-incentive-to-dairy-farmers-karnataka

r-ashoka-slams-congress-govt-over-486-crore-pending-milk-incentive-to-dairy-farmers-karnataka

Share on FacebookShare on TwitterShare on WhatsappShare on Telegram

ಗ್ರಾಹಕರ ಜೇಬಿಗೆ ಕತ್ತರಿ, ಹೈನುಗಾರರಿಗೆ ಅನ್ಯಾಯ; 28.84 ಲಕ್ಷ ಹಾಲು ಉತ್ಪಾದಕರಿಗೆ ಕಳೆದ ಆಗಸ್ಟ್‌ನಿಂದ ಪ್ರೋತ್ಸಾಹಧನ ಬಿಡುಗಡೆ ಮಾಡದ ಸರ್ಕಾರ

ಬೆಂಗಳೂರು: ಹಾಲಿನ ಮಾರಾಟ ದರವನ್ನು ಹೆಚ್ಚಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿರುವ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ಹಗಲಿರುಳು ಶ್ರಮಿಸಿ ಹಾಲು ಉತ್ಪಾದಿಸುವ ರಾಜ್ಯದ 28.84 ಲಕ್ಷ ಹೈನುಗಾರರಿಗೆ ₹486 ಕೋಟಿ ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.

Related posts

bengaluru-tops-city-vitality-index-cvi-2026-q3-ahead-of-mumbai-delhi-economic-hub-india

ಮುಂಬೈ, ದೆಹಲಿಗಿಂತ ಮುಂದೆ: ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದ ಬೆಂಗಳೂರು

November 27, 2026
rohit-sharma-returns-as-mumbai-indians-captain-for-ipl-20th-season-nita-ambani-akash-ambani

ಮುಂಬೈ ಇಂಡಿಯನ್ಸ್ಗೆ ಮತ್ತೆ ರೋಹಿತ್ ಶರ್ಮಾ ನಾಯಕ

November 27, 2026

ಈ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ರೈತರಿಗೆ ಲೀಟರ್‌ಗೆ ₹7 ಹೆಚ್ಚುವರಿ ದರ ನೀಡುತ್ತಿದ್ದೇವೆ ಎಂದು ಹೇಳಿಕೊಂಡು ಹಾಲಿನ ಬೆಲೆ ಏರಿಕೆ ಮಾಡಿದ ಸರ್ಕಾರ, ಕಳೆದ ಆಗಸ್ಟ್‌ನಿಂದ ಹೈನುಗಾರರ ಖಾತೆಗೆ ಪ್ರೋತ್ಸಾಹಧನ ಜಮೆ ಮಾಡದೆ ವಂಚಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಪಶು ಆಹಾರ, ಹಸಿರು ಮೇವು ಹಾಗೂ ಪಶುಗಳ ಔಷಧಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಹೈನುಗಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ರಾಸುಗಳ ನಿರ್ವಹಣೆಯ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರ ನೀಡಬೇಕಾದ ಪ್ರೋತ್ಸಾಹಧನವೂ ಸಕಾಲಕ್ಕೆ ತಲುಪದಿರುವುದು ಹೈನುಗಾರರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ₹56.1 ಕೋಟಿ, ಹಾಸನದಲ್ಲಿ ₹54.3 ಕೋಟಿ, ತುಮಕೂರಿನಲ್ಲಿ ₹53 ಕೋಟಿ, ಮೈಸೂರಿನಲ್ಲಿ ₹49.1 ಕೋಟಿ ಹಾಗೂ ರಾಮನಗರದಲ್ಲಿ ₹44 ಕೋಟಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಹೈನುಗಾರರಿಗೆ ಕೋಟ್ಯಂತರ ರೂಪಾಯಿ ಪ್ರೋತ್ಸಾಹಧನ ಬಾಕಿ ಉಳಿದಿದೆ. ರೈತರ ಶ್ರಮದ ಹಣವನ್ನು ಬಿಡುಗಡೆ ಮಾಡದೆ ಸರ್ಕಾರ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ಸರಿದೂಗಿಸಲು ಹೈನುಗಾರರ ಪ್ರೋತ್ಸಾಹಧನವನ್ನು ತಡೆಹಿಡಿಯಲಾಗಿದೆಯೇ? ಅಥವಾ ಆಧಾರ್ ಜೋಡಣೆ ಮತ್ತು ಇ-ಕೆವೈಸಿ ಪ್ರಕ್ರಿಯೆಗಳ ನೆಪದಲ್ಲಿ ಹಣ ಬಿಡುಗಡೆ ವಿಳಂಬ ಮಾಡಲಾಗುತ್ತಿದೆಯೇ ಎಂಬುದಕ್ಕೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಹೈನುಗಾರರ ಹೆಸರಿನಲ್ಲಿ ಹಾಲಿನ ದರ ಏರಿಕೆ ಮಾಡಿದರೆ ಸಾಲದು. ದರ ಏರಿಕೆಯಿಂದ ಬಂದ ಹೆಚ್ಚುವರಿ ಆದಾಯದ ಲೆಕ್ಕವನ್ನು ಜನರ ಮುಂದಿಡಿ. ರಾಜ್ಯದ 28.84 ಲಕ್ಷ ಹೈನುಗಾರರಿಗೆ ಬಾಕಿ ಉಳಿಸಿಕೊಂಡಿರುವ ₹486 ಕೋಟಿ ಪ್ರೋತ್ಸಾಹಧನವನ್ನು ತಕ್ಷಣವೇ ಬಿಡುಗಡೆ ಮಾಡಿ ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.

ShareTweetSendShare
Join us on:

Related Posts

bengaluru-tops-city-vitality-index-cvi-2026-q3-ahead-of-mumbai-delhi-economic-hub-india

ಮುಂಬೈ, ದೆಹಲಿಗಿಂತ ಮುಂದೆ: ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದ ಬೆಂಗಳೂರು

by admin
November 27, 2026
0

ಬೆಂಗಳೂರು: ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಬೆಂಗಳೂರು ಮೊದಲ ಸ್ಥಾನದಲ್ಲೇ ಮುಂದುವರಿದಿದೆ ಎಂದು ಡನ್ ಆ್ಯಂಡ್ ಬ್ರಾಡ್‌ಸ್ಟ್ರೀಟ್ (ಡಿ&ಬಿ) ಮತ್ತು ಮಾಸ್ಟರ್‌ಕಾರ್ಡ್ ಜಂಟಿಯಾಗಿ ಬಿಡುಗಡೆ ಮಾಡಿರುವ 2026ರ...

rohit-sharma-returns-as-mumbai-indians-captain-for-ipl-20th-season-nita-ambani-akash-ambani

ಮುಂಬೈ ಇಂಡಿಯನ್ಸ್ಗೆ ಮತ್ತೆ ರೋಹಿತ್ ಶರ್ಮಾ ನಾಯಕ

by admin
November 27, 2026
0

ಮುಂಬೈ,: ಮುಂದಿನ ವರ್ಷದ ಐಪಿಎಲ್ (IPL) 20ನೇ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಮತ್ತೆ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಂಡ ಶುಕ್ರವಾರ ಘೋಷಿಸಿದೆ. ಫ್ರಾಂಚೈಸಿಯು ತನ್ನ...

gajakesari-yoga-guru-pushya-yoga-benefits-adhika-masa-born-personality-horoscope-kannada

ಗಜಕೇಸರಿ ಯೋಗ ಮತ್ತೆ ಪುಷ್ಕರ ಯೋಗ ಯಾವ ಯಾವ ರಾಶಿಗಳಿಗೆ  ಫಲಿಸಲಿದೆ? 

by admin
November 27, 2026
0

ಗಜಕೇಸರಿ ಯೋಗ ಮತ್ತೆ ಪುಷ್ಕರ ಯೋಗ ಯಾವ ಯಾವ ರಾಶಿಗಳಿಗೆ  ಫಲಿಸಲಿದೆ? ಖಂಡಿತ. ನೋಡಿ ಯಾವುದೇ ಒಂದು ಯೋಗಗಳು ಸೃಷ್ಟಿ ಆಗ್ಬೇಕಾದ್ರೆ ಒಂದು ಗ್ರಹದ ಜೊತೆ ಇನ್ನೊಂದು...

ಸಿಎಂ ರೇಸ್‌ನಲ್ಲಿ ಯೋಗಿ ಆದಿತ್ಯನಾಥ್ ಫೇವರಿಟ್: ಅಖಿಲೇಶ್ ಯಾದವ್‌ಗೆ ಎರಡನೇ ಸ್ಥಾನ, ಕೇವಲ 1 ಸೀಟಿಗೆ ಕುಸಿಯಲಿದೆಯೇ ಬಿಎಸ್‌ಪಿ?

ಸಿಎಂ ರೇಸ್‌ನಲ್ಲಿ ಯೋಗಿ ಆದಿತ್ಯನಾಥ್ ಫೇವರಿಟ್: ಅಖಿಲೇಶ್ ಯಾದವ್‌ಗೆ ಎರಡನೇ ಸ್ಥಾನ, ಕೇವಲ 1 ಸೀಟಿಗೆ ಕುಸಿಯಲಿದೆಯೇ ಬಿಎಸ್‌ಪಿ?

by Shwetha
November 27, 2026
0

ಲಕ್ನೋ: ದೇಶದ ರಾಜಕೀಯ ದಿಕ್ಸೂಚಿ ಎಂದೇ ಗುರುತಿಸಲ್ಪಡುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವಂತಹ ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೊರಬಿದ್ದಿದೆ....

ಸೌಜನ್ಯ ಪ್ರಕರಣ: SIT ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ

ಸೌಜನ್ಯ ಪ್ರಕರಣ: SIT ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ

by Shwetha
November 27, 2026
0

ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಇಂದು ಮಂಗಳೂರಿನ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸುವಂತೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram