ಕೃಷ್ಣನ ಮನದರಸಿ, ಕೃಷ್ಟನ ಬಾಲ್ಯದ ಗೆಳತಿ, ಬರಸಾನಾದ ರಾಧಾರಾಣಿ. ರಾಧೇ ಮತ್ತು ಕೃಷ್ಣನ ಪವಿತ್ರವಾದ ಪ್ರೀತಿ ಹಿಂದೆಯು ಈಗಲೂ ಮುಂದಿನ ಶತಮಾನಗಳಲ್ಲೂ ಮಾದರಿ. ದೈಹಿಕ ಅನುಬಂಧಕ್ಕಿಂತ ಪವಿತ್ರವಾದದ್ದು ಆತ್ಮಗಳ ಮಿಲನ ಎಂಬುದನ್ನ ಜಗತ್ತಿಗೆ ತೋರಿಸಿಕೊಟ್ಟ ರಾಧೆಕೃಷ್ಣನ ಪ್ರೇಮಗಾಥೆ ಗೊತ್ತಿರದವರೂ ಯಾರೂ ಇಲ್ಲ. ತುಂಟ ಕೃಷ್ಣನ ಸದಾ ಮನಸಲ್ಲಿಯೇ ಪೂಜಿಸಿ ಆರಾಧಿಸಿ ಪ್ರೀತಿಸಿ ಕೃಷ್ಣನ ರಾಧೆಯಾಗಿ ಪುರಾಣಗಳಲ್ಲಿ ಉಳಿದುಕೊಂಡ ರಾಧಾರಾಣಿಯನ್ನು ಈಗಲೂ ಎಲ್ಲಾ ಕೃಷ್ಣ ಮಂದಿರಗಳಲ್ಲೂ ಕೃಷ್ಣನ ಪಕ್ಕದಲ್ಲಿ ಕಾಣಬಹುದು. ಇದೀಗ ಖಾಸಗೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ಕೃಷ್ಣ ಪೌರಾಣಿಕ ಧಾರಾವಾಹಿಯಲ್ಲಿ ರಾಧೆಯಾಗಿ ಮಿಂಚುತ್ತಿರುವ ಇವರ ನಿಜವಾದ ಹೆಸರು ಮಲ್ಲಿಕಾ ಸಿಂಗ್.
ಮಲ್ಲಿಕಾ ಸಿಂಗ್ ಗೆ ರಾಧೆಯ ಪಾತ್ರ ಹೇಳಿ ಮಾಡಿಸಿತು. ರಾಧೆಯಾಗಿ ಮುದ್ದು ನಗುವಿನಿಂದಲೇ ಲಕ್ಷಾಂತರ ಜನರ ಮನಗೆದ್ದಿರುವ ಕೃಷ್ಣನ ಹೃದಯವಾಸಿ ಈಗ ಎಲ್ಲರ ಫೇವರೇಟ್ ಆಗಿದ್ದಾರೆ. ರಾಧೆಯಾಗಿ ಮನೆ ಮಾತಾಗಿರುವ ಮಲ್ಲಿಕಾ ಸಪ್ಟಂಬರ್ 15 2000 ದಲ್ಲಿ ಜಮ್ಮು ಕಾಶ್ಮೀರದಲ್ಲಿ ಜನಿಸಿದ್ರು. ಇವರ ತಾಯಿ ರೂಬಿ ಸಿಂಗ್ ವೃತ್ತಿಪರ ಕ್ಲಾಸಿಕಲ್ ಡ್ಯಾನ್ಸ್ ಕೊರಿಯಾಗ್ರಫರ್. ಇವರಿಗೆ ಓರ್ವ ತಂಗಿ ಸಹ ಇದ್ದಾರೆ. ಮುಂಬೈನ ಸ್ಕೆವೀರ್ ಅಕಾಡೆಮಿ ಶಾಲೆಯಲ್ಲಿ ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಮುಗಿಸಿಕೊಂಡಿದ್ದಾರೆ.
ಮಲ್ಲಿಕಾ ಮೂಲತಹ ಜಮ್ಮುವಿನವರಾಗಿದ್ದ ಕಾರಣ ಮುಂಬೈಗೆ ಸ್ಥಳಾಂತರಗೊಂಡ ಬಳಿಕ ಅಲ್ಲಿನ ಲೈಫ್ ಸ್ಟೈಲ್ಗೆ ಹೊಂದಿಕೊಳ್ಳಲು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ರು. ಕೆಲ ಬಾರಿ ಈ ವಿಚಾರವಾಗಿ ಮಲ್ಲಿಕಾ ಆತ್ತಿದ್ದು ಉಂಟು. ಆದರೇ ಅವರ ತಾಯಿ ಮಲ್ಲಿಕಾರನ್ನು ಕೆಲ ಡ್ಯಾನ್ಸ್ ಆಡಿಷನ್‌ಗಳಿಗಾಗಿ ತರಬೇತಿ ನೀಡಿ ಅವರನ್ನು ಸದಾ ಬ್ಯುಸಿಯಾಗಿರುವಂತೆ ಮಾಡಿದ್ರು ಕ್ರಮೇಣ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಮಲ್ಲಿಕಾಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ಆದರೇ ಅವರ ತಾಯಿಯ ಸಲಹೆ ಮೇರೆಗೆ ಮಲ್ಲಿಕಾ ರಾಧಾ ಕೃಷ್ಣ ಟಿವಿ ಶೋನಲ್ಲಿ ರಾಧೆಯ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಆಗ ಮಲ್ಲಿಕಾ ಇನ್ನೂ 10ನೇ ತರಗತಿಯಲ್ಲಿದ್ದರು. ಆಡಿಷನ್ ಆದ ಸತತ ಎರಡುವರೆ ವರ್ಷಗಳಾದ ಬಳಿಕ ರಾಧೆ ಪಾತ್ರಕ್ಕೆ ಮಲ್ಲಿಕಾ ಆಯ್ಕೆಯಾಗಿದ್ರು. ಮಲ್ಲಿಕಾಗೆ ಈ ಪಾತ್ರ ಅವರ ಮುಗ್ದತೆಯ ವ್ಯಕ್ತಿತ್ವಕ್ಕೆ ತಕ್ಕಂತೆ ಸಿಕ್ಕಿದೆ.
ಡೆಬ್ಯುಟ್ ಸೀರಿಲ್ ಆದ ರಾಧಾ ಕೃಷ್ಣದಲ್ಲೆ ಮಲ್ಲಿಕಾ ಸಿಕ್ಕಾಪಟ್ಟೆ ಸಕ್ಸಸ್ ಕಂಡಿದ್ದು ಜನರ ಅಚ್ಚು ಮೆಚ್ಚಾಗಿದ್ದಾರೆ. ಇನ್ನೂ ರಾಧಾ ಕೃಷ್ಣ ಧಾರಾವಾಹಿಯಲ್ಲಿ ಕೃಷ್ಣನ ಜೊತೆಗಿನ ಕೆಮಿಸ್ಟಿçಗೆ ಜನರು ಫಿದಾ ಆಗಿದ್ದಾರೆ. ಅಲ್ದೆ ಬೆಸ್ಟ್ ಜೋಡಿ, ಬೆಸ್ಟ್ ಆನ್ ಸ್ಕ್ರೀನ್ ಕಪಲ್, ಮೋಸ್ಟ್ ಪಾಪ್ಯುಲರ್ ಜೋಡಿ ಅವಾರ್ಡ್ ಸಿಕ್ಕಿದೆ.








