ಬೆಂಗಳೂರು:.ಇತ್ತೀಚಿನ ದಿನಗಳಲ್ಲಿ ಫೇಕ್ ನ್ಯೂಸ್ ನ ಹಾವಳಿ ಮಿತಿಮೀರಿದ್ದು ಅನೇಕ ಸಂದರ್ಭದಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿ ಸಮಾಜದಲ್ಲಿ ಶಕ್ತಿ ಕದಡಲು ಮತ್ತು ಅಜಾಗರೂಕತೆ ಸೃಷ್ಟಿ ಮಾಡಲು ಯತ್ನಿಸುತ್ತಿದ್ದಾರೆ . ಇದೀಗ ಕೊರೋನ ಸಾಂಕ್ರಾಮಿಕ ರೋಗಕ್ಕೆ ಜನ ತತ್ತರಿಸಿದ್ದು, ಕಳೆದ ಕೆಲ ದಿನಗಳಿಂದ ರೋಗ ಲಕ್ಷಣ ಮಿತಿ ಮೀರಿ ಕಾಣಿಸಿಕೊಂಡಿದೆ . ಸರಕಾರಿ ಆಸ್ಪತ್ರೆಗಳ ಬೆಡ್ ಸಾಕಾಗದೆ ಖಾಸಗಿ ಆಸ್ಪತ್ರೆಗಳು ಕೈ ಜೋಡಿಸಿದ್ದು, ಕೆಲವೆಡೆ ರೋಗಿಗಳು ಪರಿತಪಿಸಿದ್ದು ಇದೆ.
ಏತನ್ಮಧ್ಯೆ ಸುಬ್ರಜಿತ್ ಬೆಹೆರೆ ಅನ್ನುವ ವ್ಯಕ್ತಿ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ 97% ಮೃತ ಪಟ್ಟಿದ್ದಾರೆ ಎಂದು ಮಾಧ್ಯಮದ ಮೂಲಕ ವರದಿಯಾಗಿದೆ ಎಂದು ಟ್ವೀಟ್ ಮಾಡಿದ್ದ . ಇದಕ್ಕೆ ಪ್ರತಿಕ್ರಿಯಿಸಿದ ಭಾಸ್ಕರ್ ರಾವ್ ನಿನ್ನ ಸ್ಥಳವನ್ನು ಪತ್ತೆ ಮಾಡಿ ವರದಿಯ ಬಗ್ಗೆ ಪರಿಶೀಲನೆ ಮಾಡಲಾಗುವುದು. ಒಂದು
ವೇಳೆ ನಿನ್ನ ವರದಿ ತಪ್ಪಾದಲ್ಲಿ ಶಿಕ್ಷೆಗೆ ತಯಾರಾಗು ಅಥವಾ ನಿಜವಾದಲ್ಲಿ ಸರಕಾರ ಆಸ್ಪತ್ರೆಯ ಮೇಲೆ ಕ್ರಮ ಕೈಗೊಳ್ಳುತ್ತದೆ ಎಂದು ರೀಟ್ವೀಟ್ ಮಾಡಿದರು .
ಜೊತೆಗೆ ಸಂದೀಪ್ ಪಾಟೀಲ್ ಅವರಿಗೆ ಟ್ವೀಟ್ ಮಾಡಿ ನಿಮ್ಮ ಸಿಟಿ ಕ್ರೈಂ ಬ್ರಾಂಚ್ ತಂಡದ ಮೂಲಕ ಈ ವ್ಯಕ್ತಿಯ ಲೊಕೇಶನ್ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು ಮತ್ತು ಸುಳ್ಳು ವರದಿ ಸೃಷ್ಟಿ ಮಾಡಿ ಸಮಾಜದಲ್ಲಿ ಅಶಾಂತಿ ಮೂಡಿಸುವವರಿಗೆ ಸ್ಪಷ್ಟ ಸಂದೇಶ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂದೀಪ್ ಪಾಟೀಲ್ ನಮ್ಮ ತಂಡ ಈಗಾಗಲೇ ಕಾರ್ಯ ಪ್ರವರ್ತವಾಗಿದೆ ಎಂದು ತಿಳಿಸಿದರು.
ಟ್ವೀಟ್ ನ ಮೂಲವನ್ನು ಹುಡುಕಿದ ಸಿಟಿ ಕ್ರೈಂ ಬ್ರಾಂಚ್ ತಕ್ಷಣವೇ ವ್ಯಕ್ತಿಯನ್ನು ಬಂಧಿಸಿದರು. ವೈದ್ಯಕೀಯ ತಂಡ ಗಳ ಕಾರ್ಯಕ್ಕೆ ಶ್ಲ್ಯಾಘಿಸಿದ ಭಾಸ್ಕರ್ ರಾವ್, ನಕಲಿ ವರದಿ ಮೂಲ ಹುಡುಕಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ .
ಇದರೊಂದಿಗೆ ನಕಲಿ ವರದಿ ಸೃಷ್ಟಿ ಮಾಡುತಿದ್ದ ಸಾಮಾಜಿಕ ಜಾಲತಾಣಗಳಿಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ








