ನವದೆಹಲಿ : ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯನ್ನು ನಿರ್ವಹಿಸಲಿದ್ದಾರೆ. ಏತನ್ಮಧ್ಯೆ ಅಖಿಲ ಭಾರತ ಕ್ಷತ್ರಿಯ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ರಾಜ ರಾಜೇಂದ್ರ ಸಿಂಗ್ ಅವರು, ರಾಮ ಮಂದಿರ ಭೂಮಿ ಪೂಜೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ ರಾಜೇಂದ್ರ ಸಿಂಗ್ ಮೋದಿಯನ್ನು ಔರಂಗಜೇಬ್ ಗೆ ಹೋಲಿಸಿ ಔರಂಗಜೇಬ್ ಕ್ಷತ್ರಿಯರನ್ನು ನಿರ್ಲಕ್ಷಿಸಿದಂತೆ ಮೋದಿ ಸರ್ಕಾರವೂ ಕ್ಷತ್ರಿಯರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಮಂದಿರ ಭೂಮಿ ಪೂಜೆಗೆ ಕ್ಷತ್ರಿಯರ ಆಕ್ಷೇಪವಿದೆ ಎಂದಿದ್ದಾರೆ.
ಕೊರೊನಾ ಕಾರಣದಿಂದ ಎರಡು ತಿಂಗಳು ತಡವಾಗಿದ್ದ ಶಿಲಾನ್ಯಾಸ ಕಾರ್ಯಕ್ರಮದ ಸಿದ್ಧತೆಗಳು ಅಯೋಧ್ಯೆಯಲ್ಲಿ ಈಗಾಗಲೇ ಶುರುವಾಗಿದೆ. ಆಗಸ್ಟ್ 3ರಿಂದಲೇ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಗಳು ಆರಂಭವಾಗಲಿದೆ.








