ನವದೆಹಲಿ : ಕೊರೊನಾ ವೈರಸ್ ವಿಚಾರದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಸಮರ ಸಾರಿದ್ದಾರೆ. ಪ್ರತಿದಿನ ಕೇಂದ್ರದ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿಕಾರುತ್ತಿರುವ ರಾಹುಲ್ ಇಂದು ಕೊರೊನಾ ಕಾಲದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳಿವು ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಟ್ವೀಟ್ ನಲ್ಲಿ..
*’ಕೊರೊನಾ ಕಾಲದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳಿವು
*ಫೆಬ್ರವರಿಯಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜನೆ.
*ಮಾರ್ಚ್ ನಲ್ಲಿ ಮಧ್ಯ ಪ್ರದೇಶದ ಸರ್ಕಾರ ಬೀಳಿಸಲಾಯಿತು.
*ಏಪ್ರಿಲ್ ನಲ್ಲಿ ಕ್ಯಾಂಡಲ್ ಬರ್ನಿಂಗ್.
*ಮೇನಲ್ಲಿ ಬಿಜೆಪಿ ಸರ್ಕಾರದ 6ನೇ ವರ್ಷದ ಸಂಭ್ರಮಾಚರಣೆ.
*ಜೂನ್ ನಲ್ಲಿ ಬಿಹಾರ ಚುನಾವಣೆಗಾಗಿ ವರ್ಚೂವಲ್ ಸಮಾವೇಶ.
*ಜುಲೈನಲ್ಲಿ ರಾಜಸ್ಥಾನ ಸರ್ಕಾರ ಉರುಳಿಸುವ ಪ್ರಯತ್ನ .
ಹಾಗಾಗಿ ಈ ಎಲ್ಲ ಕಾರಣಗಳಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶ ಸ್ವಾವಲಂಭಿ (ಆತ್ಮನಿರ್ಭರ)ವಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.








