ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವರುಣನ ರೌದ್ರಾವತಾರ ಮುಂದುವರೆದಿದೆ. ಈಗಾಗಲೇ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇನ್ನೂ ತಡರಾತ್ರಿ ಸುರಿನ ಭಾರೀ ಮಳೆಗೆ ರಾತ್ರೋರಾತ್ರಿ 10ಕ್ಕೂ ಹೆಚು ಕುಟುಂಬಗಳು ಸೂರು ಕಳೆದುಕೊಂಡು ಬೀದಿಗೆ ಬಂದಿವೆ. ಮನೆಕಳೆದುಕೊಂಡು ನಿರಾಶ್ರಿತರಾಗಿದ್ದವರನ್ನು ಸ್ಥಳೀಯ ಅಧಿಕಾರಿಗಳು ತಾತ್ಕಾಲಿಕವಾಗಿ ನಿರ್ಮಿಸಿಕೊಟ್ಟಿದ್ದ ಗಂಜಿಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೆ ಸುರಿದ ದಾರಾಕಾರ ಮಳೆಗೆ ಗಂಜಿಕೇಂದ್ರಗಳೂ ಕುಸಿದು ಹೋಗಿದ್ದು, ಅಣ್ಣಾ ನಗರ ಕಾಲೋನಿಯ ನಿವಾಸಿಗಳು ಇರಲು ಜಾಗವಿಲ್ಲದೆ ಮೆಟ್ರೋ ಸ್ಟೇಷನ್ ಕೆಳಗೆ ಆಶ್ರಯ ಪಡೆದುಕೊಂಡಿದ್ದಾರೆ. ವರುಣನ ರೌದ್ರನರ್ತನಕ್ಕೆ ಜನರು ತಿನ್ನಲು ಆಹಾರವಿಲ್ಲದೆ, ಇರಲು ಜಾಗವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ. 
ಮತ್ತೊಂದೆಡೆ ಗಾಜಿಪುರ್ ಮಾರುಕಟ್ಟೆಯಲ್ಲೂ ಮಳೆಯಿಂದಾಗಿ ತರಕಾರಿ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ. ಮಳೆಯಿಂದಾಗಿ ತರಕಾರಿಗಳು ನಾಶವಾಗಿದೆ. ಹೀಗಿರುವಾಗ ತರಕಾರಿ ಬೆಲೆ ಕ್ರಮೇಣ ಕುಸಿದಿರುವುದು ವ್ಯಾಪಾರಸ್ಥರಿಗೆ ನುಂಗಲಾರಾದ ತುತ್ತಾಗಿ ಪರಿಣಮಿಸಿದೆ. ಕಿಲೋಗೆ 80ರೂಪಾಯಿ ಇದ್ದ ಟಮೊಟೋ ಬೆಲೆ 50ರೂ.ಗೆ ಇಳಿದಿದೆ. ಒಂದೆಡೆ ಮಳೆ, ಮತ್ತೊಂದೆಡೆ ಕೊರೊನಾ ಬಿಕ್ಕಟ್ಟಿನಿಂದಾಗಿ ಮಾರುಕಟ್ಟೆಗೆ ಬರುವ ಜನರ ಸಂಖ್ಯೆ ತೀರ ಕಡಿಮೆಯಾಗಿದ್ದು, ತರಕಾರಿಗಳಲೆಲ್ಲ ಕೊಳತು ಹಾಳಾಗಿದೆ ಎಂದು ತರಕಾರಿ ಮಾರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ರೈತರ ಹೊಟ್ಟೆ ಮೇಲೆ ಹೊಡೆದು ಬೆಂಗಳೂರು ಜಾತ್ರೆ ಮಾಡಬೇಕಾ? ರಸ್ತೆ ಗುಂಡಿಗಳ ನಡುವೆ ಮೋಜು ಮಸ್ತಿನ ಜಾತ್ರೆ: ಲೂಟಿ ಹೊಡೆಯಲು ಹೊಸ ಪ್ಲಾನ್ ಎಂದು ಜೆಡಿಎಸ್ ಕಿಡಿ
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಿರುವ ಬೆಂಗಳೂರು ಜಾತ್ರೆ ಈಗ ದೊಡ್ಡ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು...








