ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸದಕ್ಕೆ ಬೆಂಗಳೂರಿನಲ್ಲಿ ಕೋಟಿ ದಾಟಿದ ದಂಡ ವಸೂಲಿ
ಬೆಂಗಳೂರು, ಜುಲೈ 21: ಸರ್ಕಾರ ಕೊರೋನ ಸಾಂಕ್ರಾಮಿಕ ರೋಗ ತಡೆಗೆ ಕೆಲವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಜೊತೆಗೆ ಫೇಸ್ ಮಾಸ್ಕ್ ಮತ್ತು ಸೋಶಿಯಲ್ ಡಿಸ್ಟೆನ್ಸ್ ಈ ರೋಗ ತಡೆಗೆ ಅತ್ಯಗತ್ಯ ಆದರೆ ನಾವು ಯಾಕೆ ಕೊರೊನಾ ಮುನ್ನೆಚ್ಚರಿಕೆ ನಿಯಮಗಳನ್ನು ಪಾಲಿಸಬೇಕು? ಬೇಕಿದ್ದರೆ ಸರಕಾರ ಮತ್ತು ಅಧಿಕಾರ ವರ್ಗ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರಲಿ ಎನ್ನುವ ಉಡಾಫೆ ಉತ್ತರ ಕೆಲವು ಜನ ಸಾಮಾನ್ಯರದು . ಎಲ್ಲದಕ್ಕೂ ಸರಕಾರವನ್ನು ದೂರುವ ಮಂದಿ ಪ್ರಜ್ಞಾವಂತ ನಾಗರಿಕರಾಗಿ ತಮ್ಮ ಕರ್ತವ್ಯವನ್ನು ಮರೆತಂತೆ ಕಾಣುತ್ತದೆ. ಇದಕ್ಕೆ ಪೂರಕ ಎನ್ನುವಂತೆ, ಇಂತಹವರನ್ನು ಗುರುತಿಸಿ ದಂಡ ವಿಧಿಸಿದ ಬೆಂಗಳೂರು ಪೊಲೀಸರು ಮತ್ತು ಬೃಹತ್ ಬೆಂಗಳೂರು ನಗರ ಪಾಲಿಕೆಯ ಜಂಟಿ ತಂಡ ಸುಮಾರು ಒಂದು ಕೋಟಿ ರೂ ಗಳಷ್ಟು ದಂಡ ವಸೂಲಿ ಮಾಡಿದೆ ಎಂದರೆ ನಂಬಲು ಸಾಧ್ಯವೇ ?

ಹೌದು ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ತಮ್ಮ ಟ್ಟಿಟರ್ ಖಾತೆಯಲ್ಲಿ ಈ ವಿಚಾರವಾಗಿ ಪೋಸ್ಟ್ ಮಾಡಿದ್ದು ಸುಮಾರು ಒಂದು ಕೋಟಿ ರೂ ಗಳಷ್ಟು ದಂಡ ವಸೂಲಿ ಆಗಿದೆ. ಮುಖ್ಯವಾಗಿ ಫೇಸ್ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಸಂಬಂಧಿಸಿದ ಪ್ರಕರಣಗಳು. ಆದರೆ ಇದರ ಬಗ್ಗೆ ನಮಗೆ ಹೆಮ್ಮೆ ಇಲ್ಲ ಅಥವಾ ಇದನ್ನು ನಮ್ಮ ಸಾಧನೆ ಅಂತ ಹೇಳಿಕೊಳ್ಳುವುದಕ್ಕೂ ಬೇಸರ ಆಗುತ್ತದೆ. ದಂಡ ವಸೂಲಿ ಮಾಡಿದಕ್ಕೆ ನಾವು ಹೆಮ್ಮೆ ಪಡುತ್ತಾ ಇಲ್ಲ, ಬದಲಾಗಿ ಮುಖಕ್ಕೆ ಮಾಸ್ಕ್ ಧರಿಸಿ ಮತ್ತು ಕನಿಷ್ಠ ವ್ಯಕ್ತಿ ಅಂತರ ಕಾಪಾಡಿಕೊಳ್ಳಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಕೊರೊನ ದಿನದಿಂದ ದಿನಕ್ಕೆ ಅತಿ ವೇಗದಲ್ಲಿ ಹರಡುತ್ತಿರುವ ಈ ಸಮಯದಲ್ಲೂ ಇಷ್ಟು ದಂಡ ವಸೂಲಿ ಮಾಡಿರುವುದು ಜನರಿಗೆ ರೋಗದ ಬಗ್ಗೆ ಇರುವ ನಿರ್ಲಕ್ಷವನ್ನು ಎದ್ದು ತೋರಿಸುತ್ತಿದೆ.








