ಸಾಧನೆಗೆ ಅವನು ಬಡವ ಶ್ರೀಮಂತ ಎಂಬ ಭೇದಭಾವವಿಲ್ಲ, ಸಾಧನೆ ಮಾಡಲು ಬೇಕಾಗಿರುವುದು ಶ್ರದ್ಧೆ ಹಾಗೂ ಶ್ರಮ ಮಾತ್ರ. ಹೀಗೆ ಈ ಎರಡನ್ನೂ ರೂಡಿಸಿಕೊಂಡ ಇಲ್ಲೊಬ್ಬ ಮಹಾನೀಯನೊಬ್ಬ ಇಂಡಿಯನ್ ಐಡಲ್ ಆಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರ ಕಂಡಿದ್ದ ಪ್ರಸಿದ್ಧ ರಿಯಾಲಿಟಿ ಶೋ ಇಂಡಿಯನ್ ಐಡಲ್ 11 ನಲ್ಲಿ ಸನ್ನಿ ಹಿಂದೂಸ್ತಾನಿ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ. ಶೂ ಪಾಲಿಶ್ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಪಂಜಾಬ್‍ನ ಭಟಿಂಡಾದ ನಿವಾಸಿಯಾದ ಸನ್ನಿ ಇದೀಗ ಇಂಡಿಯನ್ ಐಡಲ್ ಆಗಿ ಸಾಧನೆ ಶಿಖರವೇರಿ ಯುವಕರಿಗೆ ಸ್ಪೂರ್ತಿಯಾಗಿದ್ದಾನೆ.

ಸನ್ನಿ ಹಿಂದೂಸ್ತಾನಿ ಕಡುಬಡಕುಂಬದಲ್ಲಿ ಜನಿಸಿದ ಯುವಕ. ಬೇರೆಯವರ ಧನಸಹಾಯ ಪಡೆದು ಇಂಡಿಯನ್ ಐಡಲ್ ಕಾರ್ಯಕ್ರಮಕ್ಕೆ ಆಗಮಿಸಿದ್ದ. ಜೀವನದಲ್ಲಿ ಎಲ್ಲಾ ಭರವಸೆಗಳನ್ನು ಕಳೆದುಕೊಂಡ ಸನ್ನಿಗೆ ಇಂಡಿಯನ್ ಐಡಲ್11 ಕೈಹಿಡಿದಿದೆ. ನಾನಿಲ್ಲಿಗೆ ಬರುವುದಾಗಿ ಎಂದಿಗೂ ಯೋಚಿಸಿರಲಿಲ್ಲ ಎಂದು ಹೇಳಿಕೊಂಡಿರುವ ಸನ್ನಿ, ಎರಡೂ ಆಡಿಷನ್ ಸುತ್ತುಗಳಲ್ಲಿ ಗೋಲ್ಡನ್ ಮೈಕ್ಸ್ಸ್ವೀಕರಿಸಿದ್ದು ಅಚ್ಚರಿ ಹಾಗೂ ಹರ್ಷ ತಂದಿದೆ ಎಂದು ತಿಳಿಸಿದ್ದಾನೆ.

ಸನ್ನಿಗೆ ಎಲ್ಲಾ ವಿಚಾರದಲ್ಲೂ ಬೆಂಬಲವಾಗಿ ನಿಲ್ಲುತ್ತಿದ ಆತನ ತಾಯಿ, ಅವರ ಕನಸುಗಳ ಬಗ್ಗೆ ಹೆಚ್ಚಿನ ಭರವಸೆ ಇಟ್ಟುಕೊಂಡಿರಲಿಲ್ಲ. ಸನ್ನಿ ಇಂಡಿಯನ್ ಐಡಲ್ ಕಾರ್ಯಕ್ರಮಕ್ಕೆ ಬರುವಾಗಲೂ ತಾಯಿಯೊಡನೆ ತುಸು ವಾಗ್ವಾದ ಮಾಡಿಕೊಂಡಿದ್ದ ಸನ್ನಿ, ಇದಕ್ಕೆ ಕಾರಣ ಕುಟುಂಬದ ಆರ್ಥಿಕ ಪರಿಸ್ಥಿತಿ ಎಂದು ಹೇಳಿದ್ದಾರೆ. ಇಂಡಿಯನ್ ಐಡಲ್ 11 ರಲ್ಲಿ ತನಗೆ ಹೆಚ್ಚು ಸುತ್ತುಗಳನ್ನು ಮುಂದುವರಿಯಲು ಆಗಲ್ಲವೆಂದು ನನ್ನ ತಾಯಿ ಭಾವಿಸಿದ್ದಳು. ಏಕೆಂದರೆ ಆಕೆ ಈ ಎಲ್ಲವಕ್ಕೂ ಹಣದ ಅಗತ್ಯವಿದೆ ಎಂದು ಕಲ್ಪಿಸಿಕೊಂಡಿದ್ದಳು. ನನ್ನ ತಾಯಿಗೆ ನನ್ನ ಸಾಧನೆ ಬಗ್ಗೆ ನಂಬಿಕೆಯಿದ್ದರೂ ಆರ್ಥಿಕ ಬೆಂಬಲವಿಲ್ಲದ ಕಾರಣ ಅದು ನಂಬಿಕೆ ನಶಿಸಿಹೋಗಿತ್ತು ಎಂದು ಸನ್ನಿ ಭಾವುಕರಾದ್ರು.
ಒಟ್ಟಾರೆ ಈ ಯಾದಾವುಕ್ಕೂ ಕುಗ್ಗದೇ ಮನಸಿನಂತೆ ಮುನ್ನಡೆದ ಸನ್ನಿ ಹಿಂದೂಸ್ತಾನಿ ಬಹಳ ಪರಿಶ್ರಮದ ಮೂಲಕ ಇಂಡಿಯನ್ ಐಡಲ್ ಆಗಿ ಹೊರಹೊಮ್ಮಿದ್ದಾರೆ. ಆಡಿಷನ್ ಸುತ್ತಿನಲ್ಲೇ ಹೊರಹೋಗುತ್ತೇನೆ ಎಂದು ಭಾವಿಸಿದ್ದ ಸನ್ನಿ, ಇದೀಗಾ ಇಂಡಿಯನ್ ಐಡಲ್ 11 ರ ವಿಜೇತರಾಗಿ ನಗು ಬೀರಿದ್ದಾರೆ.








