ರೋಗನಿರೋಧಕ ಶಕ್ತಿಯುಳ್ಳ ಈರುಳ್ಳಿಯಿಂದ ದೇಹಕ್ಕೆ ಸಿಗುವ ಪ್ರಯೋಜನಗಳು
ಮಂಗಳೂರು, ಜುಲೈ 22: ನಮ್ಮ ಆಹಾರ ಎಷ್ಟೋ ಸಲ ನಮಗರಿವಿಲ್ಲದಂತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮತ್ತು ನಮ್ಮ ದೇಹವನ್ನು ಕಟ್ಟು ಮಸ್ತಾಗಿ ಇಡಲು ಅನುಕೂಲ ಮಾಡುತ್ತವೆ. ನಾವು ದಿನ ನಿತ್ಯ ಉಪಯೋಗಿಸುವ ಈರುಳ್ಳಿ ನಮ್ಮ ದಿನ ನಿತ್ಯದ ಸಾಮಾನ್ಯ ಆಹಾರ. ಆದರೆ ಆದರಿಂದ ಆಗುವ ಅನುಕೂಲಗಳು ಬಹಳ.
ಈರುಳ್ಳಿಯಿಂದ ದೇಹಕ್ಕೆ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ .
ತೂಕ ಇಳಿಸಲು ಈರುಳ್ಳಿ ರಸ
ಈರುಳ್ಳಿ ಯಾವುದೇ ಕೊಬ್ಬನ್ನು ಹೊಂದಿರುವುದಿಲ್ಲ. ಆದರೆ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಅಧಿಕ ನಿರೋಧಕ ಫ್ಲೇವೊನೈಡ್‌ಗಳಿಂದ ತುಂಬಿರುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸ ಮತ್ತು ಜೇನನ್ನು ಬೆರೆಸಿ ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ. ಆದರೆ ಇದು ನಿಯಮಿತವಾಗಿರಲಿ. ಅರ್ಧ ಈರುಳ್ಳಿನ ರಸವನ್ನು ಜೇನಿನೊಂದಿಗೆ ಬೆರೆಸಿ ಬೆಳಗ್ಗಿನ ಜಾವಾ ಕುಡಿದರೆ ಉತ್ತಮ.

ರೋಗನಿರೋಧಕ ಶಕ್ತಿಗಾಗಿ ಈರುಳ್ಳಿ ರಸ
ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈರುಳ್ಳಿ ಸಹಾಯ ಮಾಡುತ್ತದೆ. ಈಗಾಗಲೇ ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈರುಳ್ಳಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಇದು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈರುಳ್ಳಿಯು ವಿಟಮಿನ್ ಸಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳಿಂದ ಕೂಡಿದೆ. ಶೀತ, ಕೆಮ್ಮು, ಜ್ವರ ಮತ್ತು ಇತರ ಕಾಯಿಲೆಗಳ ವಿರುದ್ಧ ನಮ್ಮ ದೇಹದ ರಕ್ಷಣಾ ಕಾರ್ಯವಿಧಾನವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ವಿಧಾನ
ಒಂದು ಈರುಳ್ಳಿ ಕತ್ತರಿಸಿ ರಾತ್ರಿಯಿಡೀ ಒಂದು ಲೋಟ ಕುಡಿಯುವ ನೀರಿನಲ್ಲಿ ನೆನೆಸಿ ಇಡಬೇಕು . ಬೆಳಿಗ್ಗೆ ಈ ನೀರಿನ್ನು ಒಂದೆರಡು ಗುಟುಕು ಕುಡಿಯಿರಿ, ಕೆಲ ಸಮಯದ ವಿರಾಮದ ನಂತರ ಪುನಃ ಕುಡಿಯಿರಿ. ದಿನವಿಡೀ ಹೀಗೆ ಕುಡಿಯುವುದನ್ನು ಮುಂದುವರಿಸಿ.
ಚರ್ಮ ಮತ್ತು ಕೂದಲಿಗೆ ಈರುಳ್ಳಿ ರಸ ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈರುಳ್ಳಿ ರಸ ಉತ್ತಮ ಪರಿಹಾರವಾಗಿದೆ. ಈರುಳ್ಳಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಕೂದಲು ಉದುರುವುದು ಮತ್ತು ಉರಿಯೂತ ಮತ್ತು ಮೊಡವೆಗಳಂತಹ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಈರುಳ್ಳಿಯ ಇತರ ಪ್ರಯೋಜನಗಳು :

ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡವಲ್ಲಿ ಸಹಕರಿಸುತ್ತದೆ .
ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಇದು ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಈರುಳ್ಳಿಯ ವಾಸನೆ ಅಥವಾ ರುಚಿ ಕಟು ಎನಿಸಿದರೆ , ಉಪ್ಪು ಅಥವಾ ನಿಂಬೆ ರಸವನ್ನು ಸೇರಿಸಬಹುದು. ಉತ್ತಮ ಚರ್ಮ ಮತ್ತು ಕೂದಲು ಅಥವಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ತೂಕ ನಷ್ಟಕ್ಕೆ ಸಹಾಯ ಮಾಡಲು ಈರುಳ್ಳಿ ರಸ ಸಹಾಯಕಾರಿ.








