ಬೆಂಗಳೂರು: ಹೆಮ್ಮಾರಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕಳೆದ ಮಾರ್ಚ್ನಿಂದ ಇಲ್ಲಿಯವರೆಗಿನ ಲಾಕ್‌ಡೌನ್‌ನಿಂದಾಘಿ ಬಿಬಿಎಂಪಿ ಖಜಾನೆ ಬರಿದಾಗಿದ್ದು, ಸುಮಾರು 2000 ಕೋಟಿ ನಷ್ಟ ಅನುಭವಿಸುತ್ತಿದೆ.
ಮಾರ್ಚ್ 22ರಿಂದಲೇ ರಾಜ್ಯದಲ್ಲಿ ಲಾಕ್‌ಡೌನ್ ಮಾಡಲಾಗಿತ್ತು. ಮಾರ್ಚ್ 22ರಿಂದ ಮೇ.15ರವರೆಗೆ ಬೆಂಗಳೂರು ನಗರದಲ್ಲಿ ವಾಣಿಜ್ಯ ಚಟುವಟಿಕೆ ಬಹುತೇಕ ಸ್ಥಬ್ದವಾಗಿತ್ತು.
ಅಂಗಡಿ-ಮುAಗಟ್ಟುಗಳು, ಹೋಟೆಲ್, ಟ್ಯಾಕ್ಸಿ, ಬಾರ್ ಅಂಡ್ ರೆಸ್ಟೋರೆಂಟ್, ಚಿತ್ರಮಂದಿರ, ಮಾಲ್, ಕೈಗಾರಿಕೆಗಳು, ಗಾರ್ಮೆಂಟ್ಸ್ ..ಹೀಗೆ ಕರ್ನಾಟಕದ ಇಡೀ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು ಹೀಗಾಗಿ ಬಿಬಿಎಂಪಿಗೆ ಬರಬೇಕಾಗಿದ್ದ ಸಾವಿರಾರು ಕೋಟಿ ತೆರಿಗೆ ಖೋತಾ ಆಗಿದೆ.
ಬಿಬಿಎಂಪಿಯ ಪ್ರಮುಖ ತೆರಿಗೆ ಮೂಲಗಳಲ್ಲಿ ಒಂದಾಗ ವಾಣಿಜ್ಯ ಆಸ್ತಿ ತೆರಿಗೆ ಕಳೆದ ನಾಲ್ಕೆöÊದು ತಿಂಗಳಿAದ ಪಾವತಿಯಾಗಿಲ್ಲ. ವಾಣಿಜ್ಯ, ವ್ಯಾಪಾರ ವಹಿವಾಟು ಇಲ್ಲದ ಕಾರಣ ಉದ್ಯಮ ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು ಬಿಬಿಎಂಪಿಗೆ ಕಟ್ಟಬೇಕಾಗಿದ್ದ ವಾಣಿಜ್ಯ ಆಸ್ತಿತೆರಿಗೆ (ಕಮರ್ಷಿಯಲ್ ಪ್ರಾಪರ್ಟಿ ಟ್ಯಾಕ್ಸ್) ಕಟ್ಟಿಲ್ಲ. ಜತೆಗೆ ಹಲವು ವರ್ಷಗಳಿಂದ ಕೆಲ ಕೈಗಾರಿಕೆ ಹಾಗೂ ಸಂಸ್ಥೆಗಳೂ ಕೂಡ ವಾಣಿಜ್ಯ ಆಸ್ತಿ ತೆರಿಗೆಯನ್ನು ಸಕಾಲಕ್ಕೆ ಪಾವತಿ ಮಾಡಿಲ್ಲ. ಇದು ಬಿಬಿಎಂಪಿಯ ಖಜಾನೆ ಖಾಲಿಯಾಗುವಂತೆ ಮಾಡಿದೆ.
ಶೇ.70ರಷ್ಟು ವಾಣಿಜ್ಯ ತೆರಿಗೆ ಮನ್ನಾಗೆ ಆಗ್ರಹ..!
ಕಳೆದ ಮಾರ್ಚ್ ತಿಂಗಳಿAದ ಐಟಿ-ಬಿಟಿ, ವಾಣಿಜ್ಯ ಮಳಿಗೆಗಳು, ಸಣ್ಣ ಮತ್ತು ಬೃಹತ್ ಕೈಗಾರಿಕೆಗಳ ಚಟುವಟಿಕೆ ಸ್ಥಗಿತಗೊಂಡ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈಗಷ್ಟೇ ವಾಣಿಜ್ಯ ಚಟುವಟಿಕೆಗಳು ಪುನಾರಂಭಗೊAಡಿವೆ. ಹೀಗಾಗಿ ಐಟಿ-ಬಿಟಿ, ಕೈಗಾರಿಕೆಗಳು, ಗಾರ್ಮೆಂಟ್ಸ್, ಸಣ್ಣ ಕೈಗಾರಿಕೆಗಳು, ವಾಣಿಜ್ಯ ಮಳಿಗೆಗಳ ಮೇಲೆ ಬಿಬಿಎಂಪಿ ವಿಧಿಸುತ್ತಿರುವ ವಾಣಿಜ್ಯ ಆಸ್ತಿ ತೆರಿಗೆಯಲ್ಲಿ ಶೇ.70ರಷ್ಟನ್ನು ಮಾನ್ನಾ ಮಾಡುವಂತೆ ಎಫ್‌ಕೆಸಿಸಿಐ ಬಿಬಿಎಂಪಿ ಮೇಲೆ ಒತ್ತಡ ಹೇರುತ್ತಿದೆ.

ವಾಣಿಜ್ಯ ಚಟುವಟಿಕೆಯೇ ನಡೆಯದ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಎಲ್ಲಿಂದ ಕಟ್ಟಲು ಸಾಧ್ಯ. ನಾವು ಕರೆಂಟ್ ಬಿಲ್, ಕಟ್ಟಡಗಳ ಬಾಡಿಗೆ, ಸಾಲದ ಇಎಂಐ, ಬಡ್ಡಿ ಕಟ್ಟುವುದೇ ಕಷ್ಟವಾಗಿದೆ. ಹೀಗಾಗಿ ವಾಣಿಜ್ಯ ಆಸ್ತಿ ತೆರಿಗೆಯಲ್ಲಿ ಶೇ.70ರಷ್ಟನ್ನು ಮನ್ನಾ ಮಾಡಬೇಕು ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್ ಜನಾರ್ದನ ಬಿಬಿಎಂಪಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ನಾವು ವಾಣಿಜ್ಯ ತೆರಿಗೆ ಕೊಡುವುದಿಲ್ಲ ಎಂದು ಹೇಳುತ್ತಿಲ್ಲ. ಈ ಸಂಕಷ್ಟದ ಸಮಯದಲ್ಲಿ ತೆರಿಗೆ ಕಟ್ಟಲು ಕಷ್ಟ ಆಗುತ್ತಿದೆ. ಹೀಗಾಗಿ ಮುಂದಿನ ವರ್ಷದಿಂದ ತೆರಿಗೆ ಕಟ್ಟುತ್ತೇವೆ. ಅಲ್ಲಿಯವರೆಗೆ ಸಮಯ ಕೊಡಿ ಎಂದು ಪತ್ರದಲ್ಲಿ ಬಿಬಿಎಂಪಿಯನ್ನು ಆಗ್ರಹಿಸಿದ್ದಾರೆ.
ಕೆಲ ಸಂಸ್ಥೆಗಳು ಹಲವು ವರ್ಷಗಳಿಂದ ವಾಣಿಜ್ಯ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿವೆ. ಅವರಿಂದ ಬರಬೇಕಾದ ಬಾಕಿ ತೆರಿಗೆಯನ್ನು ಕಟ್ಟಿಸಿಕೊಳ್ಳಿ. ಪ್ರತಿತಿಂಗಳು ಕಟ್ಟುವ ಐಟಿ-ಬಿಟಿ, ವಾಣಿಜ್ಯ ಸಂಸ್ಥೆಗಳು ಹಾಗೂ ಕೈಗಾರಿಕೆಗಳಿಗೆ ರಿಯಾಯಿತಿ ನೀಡುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗುವುದು ಎಂದು ಜನಾರ್ದನ್ ತಿಳಿಸಿದ್ದಾರೆ.








